ರಾಜ್ಯ ಸರ್ಕಾರದವರು(state government ) ಸ್ವಂತ ಆಸ್ತಿಗಳನ್ನ ಮಾರಾಟ (property selling )ಮಾಡುವುದಕ್ಕಾಗಿ ಅಥವಾ ಖರೀದಿ ಮಾಡುವುದಕ್ಕಾಗಿ ಒಂದಿಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಏನಿದು ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
ಆಸ್ತಿ ನೋಂದಣಿಯ ನಿಯಮದಲ್ಲಿ ದೊಡ್ಡ ಬದಲಾವಣೆ :
Land Registration Rate increased : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಸಾಕಷ್ಟು ನಿಯಮಗಳನ್ನು ಕೂಡ ತರುತ್ತಿದೆ. ರಾಜ್ಯದಲ್ಲಿನ ಶಿಕ್ಷಣ ನೀತಿಯನ್ನು ಬದಲಾಯಿಸುವುದರಿಂದ ಹಿಡಿದು ಆಸ್ತಿ ನೋಂದಣಿಯ ನಿಯಮದಲ್ಲಿ ಕೂಡ ಸರ್ಕಾರ ನಿಯಮವನ್ನು ಬದಲಿಸುತ್ತಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress government)ದ ಉಚಿತ ಯೋಜನೆ(Garantee schemes)ಗಳ ಜಾರಿಯಿಂದ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.
ಬೆಲೆ ಏರಿಕೆಯ ನಡುವೆಯೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿದೆ:
ಈಗಾಗಲೇ ರಾಜ್ಯದ ಜನತೆ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳು. ಹಾಲು, ಮೊಸಲು ತರಕಾರಿ, ಗ್ಯಾಸ್ ಬೆಲೆ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಯ ಏರಿಕೆ ಜನಸಮಾನ್ಯರಿಗೆ ಒಂದು ವಿಧದದಲ್ಲಿ ಹೆಚ್ಚಿನ ಆರ್ಥಿಕ ನಷ್ಟವನ್ನು ನೀಡುತ್ತಿದೆ. ಈ ಬೆಲೆಯ ಏರಿಕೆಯ ಬಿಸಿ ರಾಜ್ಯದ ಜನತೆಯನ್ನು ಸುಡುತ್ತಿರುವಾಗಲೇ ಇದೀಗ ರಾಜ್ಯ ಸರ್ಕಾರ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ.
ರಾಜ್ಯದಲ್ಲಿ ಆಸ್ತಿ ಖರೀದಿ ಮತ್ತು ಆಸ್ತಿ ಮಾರಾಟದ ನಿಯಮಗಳು ಬದಲಾಗುತ್ತಿದೆ. ಕೆಲವೊಮ್ಮೆ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇಲ್ಲದವರು ಆಸ್ತಿಯನ್ನು ಮಾರಾಟ ಮಾಡಿರುವ ಉದಾಹರಣೆಗಳು ಇವೆ. ಆಸ್ತಿ ಖರೀದಿಯಲ್ಲಿ ಮೋಸ ಹೋಗಿರುವ ಸಾಕಷ್ಟು ಪ್ರಕರಣಗಳಿವೆ. ಹೀಗಾಗಿ ಆಸ್ತಿಯ ಮಾರಾಟ ಮತ್ತು ಖರೀದಿಯ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವ ದೃಷ್ಟಿಯಿಂದ ಆಸ್ತಿಯ ಖರೀದಿ ಮತ್ತು ಮಾರಾಟದಲ್ಲಿ ನಿಯಮವನ್ನು ಅಳವಡಿಸಲಾಗಿದೆ.
ಅಧಿಕಾರ ಇಲ್ಲದವರು ಯಾವುದೇ ಆಸ್ತಿಯನ್ನು ಮಾರಾಟ ಮಾಡಬಾರದು, ಹಾಗೆಯೆ ಆಸ್ತಿ ಖರೀದಿಯಲ್ಲಿ ಆಗುತ್ತಿರುವ ವಂಚನೆಯನ್ನು ತಡೆಯುವ ಉದ್ದೇಶದಿಂದ ವಿವಿಧ ರೀತಿಯ ಆಸ್ತಿಯ ಕಾನೂನನ್ನು ಜಾರಿಗೊಳಿಸಲಾಗಿದೆ.
ಆಸ್ತಿ ನೋಂದಣಿಯ ದರ(Property registration rate) ಹೆಚ್ಚಳ :
ಆಸ್ತಿ ನಿಯಮಗಳ ಬದಲಾವಣೆಯ ಜೊತೆಗೆ ಆಸ್ತಿ ನೋಂದಣಿ ದರ ಕೂಡ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರತಿ ವರ್ಷ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎನ್ನುವ ನಿಯಮವಿದೆ. ಈ ನಿಟ್ಟಿನಲ್ಲಿ October 1 ರಿಂದ Land Registration Rate ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಆಸ್ತಿ ನೋಂದಣಿ ದರ ಶೇ. 30 ರಷ್ಟು ಏರಿಕೆ:
ರಾಜ್ಯ ಸರ್ಕಾರ ಈಗಾಗಲೇ ಆಸ್ತಿ ಖರೀದಿಯ ನಿಯಮವನ್ನು ಜಾರಿಗೊಳಿಸಿದೆ. ಇದೀಗ ಮತ್ತೆ ಆಸ್ತಿ ಖರೀದಿಯ ನಿಯಮದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ರಾಜ್ಯದಲ್ಲಿ ಮುದ್ರಾಣಾಂಕ ಶುಲ್ಕ ಜಾಸ್ತಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಆಸ್ತಿ ಖರೀದಿ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಲಿದೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅಕ್ಟೊಬರ್ ನಲ್ಲಿ ಏರಿಕೆಯಾಗಲಿದೆ. ಮುದ್ರಾಣಾಂಕ ಶುಲ್ಕದ ಹೆಚ್ಚಳವು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಈ ವರ್ಷಾಂತ್ಯದಲ್ಲಿ ಆಸ್ತಿ ಖರೀದಿಯ ಬೆಲೆ ಶೇ. 30 ರಿಂದ 40 ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಭೂಮಿ, ನಿವೇಶನ, ಕಟ್ಟಡ ಸೇರಿದಂತೆ ಸ್ಥಿರಾಸ್ತಿಗಳ ದರ ಪರಿಷ್ಕರಣೆಯ ಬಗ್ಗೆ ಸರ್ಕಾರ ನಿರ್ಧರಿಸಿದೆ.
ತುಂಬಾ ಸಮಸ್ಯೆಗಳು ಉಂಟಾಗುತ್ತದೆ ಆದರೂ ಕೂಡ ಆಸ್ತಿಯನ್ನು ಖರೀದಿ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತ ಇದೆ ಜಮೀನ್ ಆಗಿರಬಹುದು ಮನೆ ಆಗಿರಬಹುದು ಫ್ಲಾಟ್ ಗಳಾಗಿರಬಹುದು ಬೇರೆ ಬೇರೆ ರೀತಿಯ ನಿವೇಶನಗಳನ್ನ ಜನರು ಕೊಳ್ಳಲು ಮುಂದಾಗುತ್ತಾರೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








