ರೈತರಿಗೆ ಸಿಹಿ ಸುದ್ದಿ: ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಕೇವಲ 4% ಬಡ್ಡಿ ದರದಲ್ಲಿ ₹3 ಲಕ್ಷದವರೆಗೆ ಸಾಲ ಲಭ್ಯ.
ಭಾರತದ ಕೃಷಿ (Agriculture) ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ರೈತರು ಪ್ರಮುಖ ಶಕ್ತಿಯಾಗಿದ್ದಾರೆ. ಆದಾಗ್ಯೂ, ಅವಸ್ಥಿತ ಹವಾಮಾನ, ಬೆಳೆಯ ಬದಲಾವಣೆ, ಕೃಷಿ ಸಲಕರಣೆಗಳ ದುಬಾರಿ ಬೆಲೆ ಮತ್ತು ಆರ್ಥಿಕ ಸಂಪತ್ತಿನ ಕೊರತೆ ಇಂತಹ ಅನೇಕ ಅಡಚಣೆಗಳು ರೈತರ ಜೀವನಶೈಲಿಯ(Farmer’s Lifestyle) ಮೇಲೆ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ, ಕೃಷಿಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಪೈಕಿ ಅತ್ಯಂತ ಜನಪ್ರಿಯವಾದ ಮತ್ತು ಸಹಾಯಕ ಯೋಜನೆಯೆಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card – KCC). ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತದ ಕೃಷಿ (Agriculture) ಆರ್ಥಿಕತೆಯಲ್ಲಿ ರೈತ ಪ್ರಮುಖ ಪಾತ್ರವಹಿಸುತ್ತಾನೆ. ಆಹಾರ ಉತ್ಪಾದನೆ ಮತ್ತು ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಮೂಲಕ ದೇಶದ ಆರ್ಥಿಕತೆಗೆ ರೈತ ನೀಡುವ ಸಹಾಯ ಬಹಳ ದೊಡ್ಡದು. ಆದಾಗ್ಯೂ, ಕೃಷಿ ಚಟುವಟಿಕೆಗಳು ಹವಾಮಾನ, ಮಾರುಕಟ್ಟೆ ಬದಲಾವಣೆಗಳು ಮತ್ತು ಹಣಕಾಸು (Finance) ಲಭ್ಯತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ, 1998ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯು ರೈತರಿಗೆ (Farmers) ತ್ವರಿತ ಮತ್ತು ಕಡಿಮೆ ಬಡ್ಡಿದರದ ಸಾಲ ಒದಗಿಸಲು ಹಾಗೂ ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಸಹಾಯ ಮಾಡುತ್ತಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (KCC) ದೇಶದ ರೈತರಿಗಾಗಿ ಪರಿಚಯಿಸಲಾದ ಒಂದು ಕ್ರಾಂತಿಕಾರಿ ಬ್ಯಾಂಕಿಂಗ್ ಸೌಲಭ್ಯವಾಗಿದೆ. ಇದರ ಅಡಿಯಲ್ಲಿ ರೈತರು ಕೃಷಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗಾಗಿ ಸಾಲ (Loan) ಪಡೆಯಬಹುದಾಗಿದೆ. ಪ್ರಮುಖ ಅಂಶವೆಂದರೆ, ಈ ಯೋಜನೆಯಡಿಯಲ್ಲಿ ರೈತರಿಗೆ ಅತ್ಯಂತ ಕಡಿಮೆ ಬಡ್ಡಿದರವಾದ ಕೇವಲ 4% ರಲ್ಲಿ ₹3 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ.
ಈ ಸಾಲವನ್ನು ರೈತರು ತಮ್ಮ ಕೃಷಿ ಕಾರ್ಯಗಳಾದ ರಸಗೊಬ್ಬರ ಖರೀದಿ, ಬೀಜಗಳ ಖರೀದಿ, ಕೀಟನಾಶಕ ಬಳಸುವುದು, ಕೃಷಿ ಉಪಕರಣಗಳು ಖರೀದಿಸುವುದು, ಪಂಪ್ ಸೆಟ್ಗಳ ಸ್ಥಾಪನೆ ಮುಂತಾದ ಕಾರ್ಯಗಳಿಗೆ ಬಳಸಬಹುದಾಗಿದೆ.
ಸಾಲದ ಮಿತಿಯ ಹೆಚ್ಚಳದ ನಿರೀಕ್ಷೆ:
ಪ್ರಸ್ತುತ ₹3 ಲಕ್ಷದವರೆಗೆ ಲಭ್ಯವಿರುವ ಸಾಲ ಮಿತಿಯನ್ನು ಮುಂದಿನ ದಿನಗಳಲ್ಲಿ ₹5 ಲಕ್ಷದವರೆಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ (Central government) ಯೋಚನೆ ಮಾಡುತ್ತಿದೆ. ಈ ಕ್ರಮ ಜಾರಿಗೆ ಬಂದರೆ, ರೈತರಿಗೆ ಇನ್ನಷ್ಟು ನೆರವು ಸಿಗಬಹುದಾಗಿದೆ. ಆದರೆ ಈ ಬೆಳವಣಿಗೆ ಇನ್ನೂ ಅಧಿಕೃತವಾಗಿ ಜಾರಿಗೆ ಬಂದಿಲ್ಲ.
ಕಿಸಾನ್ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ಗಾಗಿ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು,
1. ಆಫ್ಲೈನ್ (Offline) ವಿಧಾನ:
ರೈತರು ತಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬಹುದು.
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
2. ಆನ್ಲೈನ್ (Online) ವಿಧಾನ:
ರೈತರು ತಮ್ಮ ಮೊಬೈಲ್ನಲ್ಲಿ SBI YONO App ಡೌನ್ಲೋಡ್ ಮಾಡಿ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಆಪ್ನಲ್ಲಿರುವ ‘Kisan Credit Card’ ವಿಭಾಗವನ್ನು ಆಯ್ಕೆಮಾಡಿ ಕ್ರಮಗಳನ್ನು ಅನುಸರಿಸಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು(Important documents) :
ಭೂಮಿ ದಾಖಲೆ.
ಬ್ಯಾಂಕ್ ಪಾಸ್ಬುಕ್.
ಪ್ಯಾನ್ ಕಾರ್ಡ್.
ಆಧಾರ್ ಕಾರ್ಡ್.
ಭೂಮಿಯ ಮೌಲ್ಯ ಹಾಗೂ ಚಟುವಟಿಕೆಗಳ ವಿವರ.
ಸಾಲ ಮರುಪಾವತಿ ವಿಧಾನ ಹೇಗೆ:
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಲಭ್ಯವಾಗುವ ಹಣವನ್ನು ನೇರವಾಗಿ ಖಾತೆಗೆ (Bank account) ಜಮಾ ಮಾಡುವುದಿಲ್ಲ. ಬದಲಾಗಿ, ಅದು ಕ್ರೆಡಿಟ್ ರೂಪದಲ್ಲಿ ಲಭ್ಯವಾಗುತ್ತದೆ. ಇದರಲ್ಲಿ ರೈತರು ಖರ್ಚು ಮಾಡಿದ ಮೊತ್ತವನ್ನು ಮಾತ್ರ ಬಡ್ಡಿ (Interest) ಸಹಿತವಾಗಿ ನಿಯಮಿತ ಅವಧಿಯಲ್ಲಿ ಮರುಪಾವತಿಸಬೇಕು. ಬಡ್ಡಿದರ ಕೇವಲ 4% ಇರುತ್ತದೆ, ಇದು ಇತರ ಸಾಲದ ಆಯ್ಕೆಗಳಿಗಿಂತ ಬಹಳ ಕಡಿಮೆ.
ಒಟ್ಟಾರೆಯಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ರೈತರಿಗೆ ಆರ್ಥಿಕ ಸಹಾಯ(Economic help) ನೀಡುವ ಅತ್ಯಂತ ಪ್ರಭಾವಶಾಲಿ ಉಪಕ್ರಮವಾಗಿದೆ. ಇದು ನಿಜವಾಗಿಯೂ ಕೃಷಿ ಉತ್ಪಾದನೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಹಾಯಕವಾಗಬಹುದು. ಸರಳ ಅರ್ಜಿ ವಿಧಾನ, ಕಡಿಮೆ ಬಡ್ಡಿದರ (Low interest) ಹಾಗೂ ಹೆಚ್ಚು ಹಣದ ಲಭ್ಯತೆ ಇವೆಲ್ಲವೂ ಈ ಯೋಜನೆಯನ್ನು ರೈತರ ಆರ್ಥಿಕ ಶಕ್ತಿಯಾಗಿ ರೂಪಿಸುತ್ತಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




