ನಿಮಗೊಂದು ಅಚ್ಚರಿಯ ಸಂಗತಿ ತಿಳಿದು ಬಂದಿದೆ. ಹೌದು ಅದೇನೆಂದರೆ ಕಾಶ್ಮೀರದಲ್ಲಿ ( Kashmir )ಬೆಳೆಯುವ ಕೇಸರಿಯನ್ನು ನಾವು ಈಗ ನಮ್ಮ ನೆಲ ಅಥವಾ ನಮ್ಮ ಮನೆಯಲ್ಲಿಯೇ ಬೆಳೆಯಬಹುದು. ಅದಕ್ಕಾಗಿ ಹಲವು ರೀತಿ ನಿಯಮಗಳನ್ನು ಪಾಲಿಸಬೇಕು.ಅದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದಾವಣಗೆರೆಯಲ್ಲಿ ( Davanagere ) ಬೆಳೆದ ಕೇಸರಿ :
ದಾವಣಗೆರೆಯ ಯುವಕನೊಬ್ಬ ಕಾಶ್ಮೀರದ ಕೇಸರಿ ( Kashmir Kesari ) ಬೆಳೆಗಾರರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ಅವರು ಕೇಸರಿ ಬೆಳೆಯುವ ಪ್ರತಿ ಹಂತವನ್ನು ತಿಳಿದುಕೊಂಡು ಈಗ ತನ್ನ ಮನೆಯ ರೂಮ್ ನಲ್ಲಿಯೇ ಕೇಸರಿ ಬೆಳೆದು ತೋರಿಸಿದ್ದಾನೆ.
ಹೌದು , ಇದರಿಂದ ಏನು ತಿಳಿದು ಬರುತ್ತದೆ ಎಂದರೆ ನಾವು ಛಲ ಪಟ್ಟು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೇವೆ. ಈ ಯುವಕ ಕೂಡ ಹಾಗೆ, ನಾವು ಯಾಕೆ ಕೇಸರಿ ಬೆಳೆಯ ಬಾರದು ಎಂದು ಅದರ ಬಗ್ಗೆ ತಿಳಿದುಕೊಂಡು ತನ್ನ ಮನೆಯ ಒಂದು ರೂಮ್ ನಲ್ಲಿ ಸಾವಯವ ಗೊಬ್ಬರ ಬಳಿಸಿ, ಎಸಿ ಹಾಕಿಸಿ ಆ ಬೆಳೆಗೆ ಬಿಸಿ ಗಾಳಿ ತಾಗದಂತೆ ವ್ಯವಸ್ಥೆ ಮಾಡಿ ಕೇಸರಿ ಯನ್ನು ಬೆಳೆಯುತ್ತಿದ್ದಾನೆ. ಕೇಸರಿ ಬೆಳೆ ಫಲವತ್ತಾಗಿ ಬೆಳೆದಿದೆ.
ಇನ್ನು ನೋಡುವುದಾದರೆ , ಕಾಶ್ಮೀರ (Kashmir) ಅದೆಷ್ಟೋ ದೂರದಲ್ಲಿದೆ ಹಾಗೆಯೇ , ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವಂತ ಬೆಳೆ ಕೇಸರಿಯನ್ನು ನಾವು ಇಂದು ನಮ್ಮ ನೆಲದಲ್ಲಿ ಕೂಡ ಬೆಳೆಯಬಹುದು ಎಂದು ಯಾರಿಗೂ ಗೊತ್ತಿಲ್ಲ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹೌದು ಅಲ್ಲಿನ ವಾತಾವರಣದಲ್ಲಿ ( Environment ) ಬೆಳೆಯನ್ನು ನಾವು ಇಲ್ಲಿ ಬೆಳಯಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ವಾತವರಣಕ್ಕೆ ಅವು ಹೊಂದಿಕೊಳ್ಳುವುದಿಲ್ಲ. ನಮ್ಮ ನೆಲದ ಜಮೀನಿನಲ್ಲಿ ಕಡಲೆ, ಸಜ್ಜಿ, ಮೆಕ್ಕೆಜೋಳ ಹಾಗೂ ಮುಂತಾದ ಬೆಳೆಗಳನ್ನ ಬೆಳೆದಂತೆ ಕಾಶ್ಮೀರದಲ್ಲಿ ಕೇಸರಿ (Kashmir saffron) ಸಹ ಅವರ ಜಮೀನಿನಲ್ಲಿ ಬೆಳೆಯಿತ್ತಾರೆ. ಆದರೆ ಅಲ್ಲಿ ಬೆಳೆಯುವಂತ ಬೆಳೆ ಕೇಸರಿಯನ್ನ ದಾವಣಗೆರೆ ಹುಡುಗನೊಬ್ಬ ಮನೆಯಲ್ಲಿ ಬೆಳೆದಿದ್ದಾನೆ.
ಎಲ್ಲರಿಗೂ ಸಾಮಾನ್ಯವಾಗಿ ಕಾಶ್ಮೀರ ಅಂದರೆ ಪಕ್ಕನೆ ನೆನಪಿಗೆ ಬರುವುದು ಆಪಲ್ ಮತ್ತು ಕೇಸರಿ. ಹೌದು ದೇಶ ವಿದೇಶಗಳಲ್ಲಿ ಕಾಶ್ಮೀರಿ ಕೇಸರಿ ಪ್ರಸಿದ್ದಿಯನ್ನು ಹೊಂದಿದೆ.
ಇನ್ನು ಕಾಶ್ಮೀರಿ ಕೇಸರಿಗಳ ಬೆಲೆಯ ( Price ) ಬಗ್ಗೆ ಮತನಾಡುವುದಾದರೆ ಹೇಳೋದೇ ಬೇಡ, ಒಂದು ಗ್ರಾಂ ಕೇಸರಿಗೆ 350 ರಿಂದ 500 ರೂಪಾಯಿ ವರೆಗೂ ಭಾರತದಲ್ಲಿ ಇದ್ರೆ. ವಿದೇಶದಲ್ಲಿ ಅದಕ್ಕಿಂತ ಹೆಚ್ಚು ಇರುತ್ತದೆ. ಕಾಶ್ಮೀರದಿಂದ ಕೇಸರಿಯನ್ನು ಬೆಳೆದು ಬೇರೆ ಬೇರೆ ದೇಶಗಳಿಗೆ ಮಾರಾಟ ಮಾಡುತ್ತಾರೆ.
ಮನೆಯ ಒಂದು ಕೋಣೆಯಲ್ಲಿ ಕೇಸರಿ ಬೆಳೆದಿದ್ದಾರೆ :
ದಾವಣಗೆರೆ ಬಳಿಯ ದೊಡ್ಡ ಬಾತಿ ( Dodda Bathi ) ಗ್ರಾಮದ ಯುವಕ ಜಾಕೋಬ್ ಸತ್ಯರಾಜ್ ಛಲ ತೊಟ್ಟು ನಾವು ಯಾಕೆ ಕೇಸರಿ ಬೆಳೆಯಬಾರದು ಎಂದು ಅದರ ಬಗ್ಗೆ ತಿಳಿದು ಕೊಳ್ಳಲು ಉರ್ದು ಮಾತನಾಡಲು ಬರುವ ಸ್ನೇಹಿತರನ್ನ ಕರೆದುಕೊಂಡು ಕಾಶ್ಮೀರಕ್ಕೂ ಹೋಗಿ ಕೆಲ ದಿನ ಇದ್ದು ಅದರ ಬಗ್ಗೆ ತಿಳಿದು ಕೊಂಡು ಬಂದಿದ್ದಾನೆ.
ಹಾಗೆಯೇ ಅಲ್ಲಿನ ಕೇಸರಿ ಬೆಳೆಗಾರರಿಂದ ವಿಡಿಯೋ ಕಾಲ್ ಮೂಲಕ ತರಬೇತಿ ಮತ್ತು ಸಲಹೆ ಪಡೆದು ಕೇಸರಿ ಬೆಳೆ ಬೆಳೆಯುತ್ತಿದ್ದಾರೆ. ಕಾಶ್ಮೀರ ರೈತರಿಗೆ ಪ್ರತಿ ಕೆಜಿಗೆ 600 ರೂಪಾಯಿ ಕೊಟ್ಟು ಕೇಸರಿ ಬೀಜ ( Kesar Seeds )ತಂದಿದ್ದಾನೆ. ಅವರ ಮನೆಯ ಒಂದು ರೂಮ್ ನಲ್ಲಿ ಸಾವಯವ ಗೊಬ್ಬರ ಬಳಸಿ, ಎಸಿ ಹಾಕಿಸಿ ಬಿಸಿ ಗಾಳಿ ಅದಕ್ಕೆ ತಾಗದಂತೆ ವ್ಯವಸ್ಥೆ ಮಾಡಿ ಕೇಸರಿ ಬೆಳೆಯುತ್ತಿದ್ದಾನೆ. ಹಾಗೆಯೇ ಬೀದರ್ ಜಿಲ್ಲೆಯಲ್ಲಿ ಓರ್ವ ರೈತ ಮಹಿಳೆ ಸಹ ಇಂತಹ ಕೇಸರಿ ಬೆಳೆ ಬೆಳೆಯುತ್ತಿದ್ದಾರೆ. ಅವರು ಸಹ ಜಾಕೋಬ್ ಗೆ ಮಾರ್ಗದರ್ಶಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








