ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪುರುಷರಿಗೆ ಸ್ಥಾಯಿ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (NSV – No Scalpel Vasectomy) ಅಭಿಯಾನವನ್ನು ತೀವ್ರಗೊಳಿಸಿದ್ದು ಆರೋಗ್ಯ ಇಲಾಖೆಯ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ರಾಜ್ಯದಲ್ಲಿ ಬಿರುಸಿನ ಚರ್ಚೆಗೆ ಇದೀಗ ಕಾರಣವಾಗಿವೆ. ಈ ಯೋಜನೆಗೆ ಒಂದೆಡೆ ಸ್ವಾಗತವಿದ್ದರೆ, ಮತ್ತೊಂದೆಡೆ ಕನ್ನಡಿಗರ ಜನಸಂಖ್ಯೆ ಈಗಾಗಲೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಅಭಿಯಾನಗಳು ತೀರಾ ಅನಗತ್ಯ ಎಂಬ ಆಕ್ರೋಶ ವ್ಯಕ್ತವಾಗುತ್ತಿದ ಎನ್ನಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……….
ಪುರುಷ ಸ್ಥಾಯಿ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಎಂದರೇನು?
ಇದು ಸಾಂಪ್ರದಾಯಿಕ ವ್ಯಾಸೆಕ್ಟಮಿಗಿಂತ ಹೆಚ್ಚು ಸುಧಾರಿತ ಮತ್ತು ಸುರಕ್ಷಿತ ವಿಧಾನವಾಗಿದೆ. ಚಾಕು ಬಳಸದೆ, ಹೊಲಿಗೆ ಇಲ್ಲದೆ, ಕೇವಲ ಸಣ್ಣ ರಂಧ್ರದ ಮೂಲಕ ಸಂತಾನೋತ್ಪತ್ತಿ ನಾಳವನ್ನು ಮುಚ್ಚುವ ಈ ಆಪರೇಷನ್‌ಗೆ 10-15 ನಿಮಿಷಗಳು ಬೇಕು. ರಕ್ತಸ್ರಾವ, ಸೋಂಕು, ತೀವ್ರ ನೋವು ಇಲ್ಲದೇನೆ, ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿಲ್ಲ, ಆಪರೇಷನ್‌ನ ನಂತರ 2-3 ದಿನಗಳಲ್ಲಿ ಸಾಮಾನ್ಯ ಕೆಲಸಕ್ಕೆ ಮರಳಬಹುದು. ಆರೋಗ್ಯ ಇಲಾಖೆ ಇದನ್ನು “ಸುರಕ್ಷಿತ, ಸರಳ, ಶಾಶ್ವತ” ಎಂದು ಪ್ರಚಾರ ಮಾಡುತ್ತಿದೆ.
ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮುಖ್ಯ ಕಾರಣಗಳು ಇವು:
- ಕರ್ನಾಟಕದಲ್ಲಿ ಈಗಾಗಲೇ ಫಲವತ್ತತೆ ದರ ತಗ್ಗಿದೆ: ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ (NFHS-5) ಪ್ರಕಾರ ಕರ್ನಾಟಕದ Total Fertility Rate (TFR) ಕೇವಲ 1.7 ಆಗಿದೆ. ಬದಲಾವಣೆಗೆ ಬೇಕಾದ 2.1ಕ್ಕಿಂತ ಇದು ಬಹಳ ಕಡಿಮೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಜನಸಂಖ್ಯೆಯ ಸ್ಥಿತಿ ಹೆಚ್ಚಾಗಿದೆಯೇ ಹೊರತು ಕನ್ನಡಿಗರ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿದೆ.
- ಉತ್ತರ ಭಾರತದಲ್ಲಿ ಯೋಜನೆ ಯಶಸ್ವಿಯಾಗಿಲ್ಲ : ಉತ್ತರ ಪ್ರದೇಶ (TFR 2.4), ಬಿಹಾರ (TFR 3.0), ಜಾರ್ಖಂಡ್, ಮಧ್ಯಪ್ರದೇಶಗಳಲ್ಲಿ ಜನಸಂಖ್ಯಾ ಸ್ಫೋಟ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. “ಅಲ್ಲಿ ಮೊದಲು ಕ್ಯಾಂಪ್ ಹಾಕಿ, ಕರ್ನಾಟಕದಲ್ಲಿ ಯಾಕೆ ಇಷ್ಟೊಂದು ಉತ್ಸಾಹ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
- “ಕನ್ನಡಿಗರ ಸಂಖ್ಯೆ ಕಡಿಮೆ ಮಾಡುವ ಷಡ್ಯಂತ್ರ” ಎಂಬ ಆರೋಪ : ಕೆಲವರು ಇದನ್ನು “ದೆಹಲಿ ಕೇಂದ್ರಿತ ರಾಷ್ಟ್ರೀಯ ಪಕ್ಷಗಳ ತಂತ್ರ” ಎಂದು ಕರೆಯುತ್ತಿದ್ದಾರೆ. “ಕನ್ನಡಿಗರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವ ಯೋಜನೆಯೇ?” ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. “ನಮ್ಮಲ್ಲಿ ಜನಸಂಖ್ಯೆ ಕಡಿಮೆ ಮಾಡುವ ಅಗತ್ಯವಿಲ್ಲ, ಬದಲಿಗೆ ಇರುವ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಹಣ ಖರ್ಚು ಮಾಡಿ” ಎಂಬ ಅಭಿಪ್ರಾಯವೂ ಬಲವಾಗಿ ಕೇಳಿಬರುತ್ತಿದೆ.
- ಒಂಟಿ ಮಗು / ಚಿಕ್ಕ ಕುಟುಂಬದ ಮಾನಸಿಕ ದುಷ್ಪರಿಣಾಮ : “ಅತೀ ಚಿಕ್ಕ ಕುಟುಂಬ ಖಿನ್ನತೆ, ಏಕಾಂತ, ಮಾನಸಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಕನಿಷ್ಠ ಎರಡು ಮಕ್ಕಳು ಕುಟುಂಬಕ್ಕೆ ಕಡ್ಡಾಯವಾಗಿರಬೇಕು” ಎಂಬ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಕೆಲವರು ಸರ್ಕಾರದ ಉದ್ದೇಶವನ್ನು ಸಮರ್ಥಿಸುತ್ತಾರೆ. “ಕುಟುಂಬ ಯೋಜನೆ ಎಂದರೆ ಕೇವಲ ಮಹಿಳೆಯರ ಹೊಣೆ ಅಲ್ಲ, ಪುರುಷರೂ ಜವಾಬ್ದಾರಿ ಹೊಂದಬೇಕು. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮ” ಎಂದು ವಾದಿಸುತ್ತಾರೆ. ಆದರೆ ಈ ಧ್ವನಿ ಬಹುಮಂದಿ ಕನ್ನಡಿಗರ ಆಕ್ರೋಶದ ಮುಂದೆ ಮಂಕಾಗುತ್ತಿದೆ.
ಕೊನೆಗೆ, ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಿಂತ ಗುಣಮಟ್ಟದ ಜೀವನ, ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದೇ ಈಗಿನ ಆದ್ಯತೆ ಎಂಬ ಅಭಿಪ್ರಾಯಕ್ಕೆ ಬಲವಾದ ಬೆಂಬಲ ವ್ಯಕ್ತವಾಗುತ್ತಿದೆ.

ಈ ಮಾಹಿತಿಗಳನ್ನು ಓದಿ
- ಅತಂತ್ರ ಸ್ಥಿತಿಯಲ್ಲಿ ಸಿಲುಕಿದ ಗೃಹಲಕ್ಷ್ಮೀ ಯೋಜನೆಯ ಮಹಿಳೆಯರು : ಗ್ಯಾರಂಟಿ ಹಣ ಈ ವರ್ಷ ಬಂದಿರೋದು ಕೇವಲ 5 ತಿಂಗಳು ಮಾತ್ರ.!
- BIG NEWS : ರಾಜ್ಯ ಸರ್ಕಾರದಿಂದ ಸರ್ಕಾರಿ ಇಲಾಖೆಗಳಲ್ಲಿನ ‘ಹೊರಗುತ್ತಿಗೆ ನೇಮಕಾತಿ’ ರದ್ದು ಮಾಡಿ ಮಹತ್ವದ ನಿರ್ಧಾರ
- BREAKING : ರಾಜ್ಯದ ರೈತರಿಗೆ ಸಿಹಿಸುದ್ದಿ: 3.50 ಲಕ್ಷ ಕೃಷಿ ಪಂಪ್ ಸೆಟ್ಗಳು ಸಕ್ರಮ – ಸಚಿವ ಕೆ.ಜೆ.ಜಾರ್ಜ್ ಘೋಷಣೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




