📝 SSLC ಫಲಿತಾಂಶದ ಲೇಟೆಸ್ಟ್ ಅಪ್ಡೇಟ್:
- ✅ ಮೌಲ್ಯಮಾಪನ: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಚುರುಕಿನಿಂದ ಸಾಗಿದೆ.
- ✅ ನಿರೀಕ್ಷಿತ ದಿನಾಂಕ: ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
- ✅ ವೆಬ್ಸೈಟ್: ಅಧಿಕೃತ ವೆಬ್ಸೈಟ್ karresults.nic.in ಮೂಲಕ ಮಾತ್ರ ಫಲಿತಾಂಶ ವೀಕ್ಷಿಸಿ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (KSEAB) ನಡೆಸಿದ 2026ರ ಎಸ್ಎಸ್ಎಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿದ್ದು, ಈಗ ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು “ರಿಸಲ್ಟ್ ಯಾವಾಗ?” ಎಂದು ಗೂಗಲ್ನಲ್ಲಿ ಹುಡುಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫಲಿತಾಂಶದ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದಾರೆ. ನಿಮ್ಮ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಅಧಿಕೃತ ಮಾಹಿತಿ.
ಮೌಲ್ಯಮಾಪನ ಪ್ರಕ್ರಿಯೆ ಎಲ್ಲಿಯವರೆಗೆ ಬಂದಿದೆ?
ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಜಿಲ್ಲಾವಾರು ಕೇಂದ್ರಗಳಲ್ಲಿ ಶಿಕ್ಷಕರು ಪತ್ರಿಕೆಗಳನ್ನು ತಿದ್ದುತ್ತಿದ್ದು, ಈ ಪ್ರಕ್ರಿಯೆಯು ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೌಲ್ಯಮಾಪನ ಮುಗಿದ ನಂತರ ಅಂಕಗಳನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡುವ ಕೆಲಸ ನಡೆಯಲಿದೆ.
ಫಲಿತಾಂಶದ ದಿನಾಂಕ ಮತ್ತು ಹೊಸ ನಿಯಮ:
ಶಿಕ್ಷಣ ಇಲಾಖೆಯ ಮಾಹಿತಿಯಂತೆ, ಏಪ್ರಿಲ್ 8ರಿಂದಲೇ ಮೌಲ್ಯಮಾಪನ ಆರಂಭವಾಗಿದ್ದು, ಏಪ್ರಿಲ್ 24ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಬಾರಿಯ ವಿಶೇಷವೇನೆಂದರೆ, ತೃತೀಯ ಭಾಷೆಯಲ್ಲಿ (Third Language) ವಿದ್ಯಾರ್ಥಿಗಳು ಫೇಲ್ ಆಗುವ ಭಯ ಪಡಬೇಕಿಲ್ಲ. ಕನಿಷ್ಠ ಅಂಕ ಪಡೆದರೂ ಅವರಿಗೆ ‘C’ ಗ್ರೇಡ್ ನೀಡಿ ಪಾಸ್ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಈ ಹಿಂದೆಯೇ ತಿಳಿಸಿದ್ದರು.
📊 ತೃತೀಯ ಭಾಷೆಯ ಹೊಸ ಗ್ರೇಡಿಂಗ್ ನಿಯಮ:
| ಪಡೆದ ಅಂಕಗಳು | ಸಿಗುವ ಗ್ರೇಡ್ |
|---|---|
| 80 ರಿಂದ 100 ಅಂಕ | A Grade |
| 50 ರಿಂದ 79 ಅಂಕ | B Grade |
| 0 ರಿಂದ 49 ಅಂಕ | C Grade (PASS) |
*ಗಮನಿಸಿ: ತೃತೀಯ ಭಾಷೆಯಲ್ಲಿ 1 ಅಂಕ ಬಂದರೂ ವಿದ್ಯಾರ್ಥಿಗಳನ್ನು ‘ಪಾಸ್’ ಎಂದು ಪರಿಗಣಿಸಲಾಗುತ್ತದೆ.
🎬 ಈ ಹೊಸ ಗ್ರೇಡಿಂಗ್ ಸಿಸ್ಟಮ್ ಬಗ್ಗೆ ಸಂಪೂರ್ಣವಾಗಿ ವೀಡಿಯೊ ಮೂಲಕ ತಿಳಿಯಲು ಇಲ್ಲಿ ನೋಡಿ:
🎬 ಮಾಹಿತಿ ಕೃಪೆ: ಈ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ EDUcare Karnataka ಯೂಟ್ಯೂಬ್ ಚಾನೆಲ್ ವೀಕ್ಷಿಸಿ.
ರಿಸಲ್ಟ್ ಚೆಕ್ ಮಾಡುವುದು ಹೇಗೆ? (Step-by-Step Guide)
ಫಲಿತಾಂಶ ಪ್ರಕಟವಾದ ದಿನ ಸರ್ವರ್ ಬ್ಯುಸಿ ಇರುತ್ತದೆ. ಆಗ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ರಿಸಲ್ಟ್ ನೋಡಬಹುದು:
- ಮೊದಲು ಅಧಿಕೃತ ವೆಬ್ಸೈಟ್ karresults.nic.in ಗೆ ಭೇಟಿ ನೀಡಿ.
- ಹೋಮ್ ಪೇಜ್ನಲ್ಲಿ ‘SSLC Examination Results 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ‘Registration Number’ ಮತ್ತು ‘Date of Birth’ (ಹುಟ್ಟಿದ ದಿನಾಂಕ) ನಮೂದಿಸಿ.
- ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ರಿಸಲ್ಟ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
- ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
4. “ನೀಡ್ಸ್ ಆಫ್ ಪಬ್ಲಿಕ್ ಸಲಹೆ
ವಿದ್ಯಾರ್ಥಿಗಳಿಗೆ ಒಂದು ಮಾತು: ರಿಸಲ್ಟ್ ಬಗ್ಗೆ ಅನಗತ್ಯವಾಗಿ ಟೆನ್ಷನ್ ಮಾಡಿಕೊಳ್ಳಬೇಡಿ. ಈ ಬಾರಿ ಪಶ್ನೆಪತ್ರಿಕೆಗಳು ಸುಲಭವಾಗಿದ್ದರಿಂದ ಪಾಸಾಗುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಫಲಿತಾಂಶದಲ್ಲಿ ಕಡಿಮೆ ಅಂಕ ಬಂದರೂ ಚಿಂತೆ ಬೇಡ, ‘ಗ್ರೇಸ್ ಮಾರ್ಕ್ಸ್’ ಮತ್ತು ‘ಮರುಮೌಲ್ಯಮಾಪನ’ಕ್ಕೆ ಸುವರ್ಣ ಅವಕಾಶಗಳಿರುತ್ತವೆ. ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡುತ್ತಿರಿ, ರಿಸಲ್ಟ್ ಬಂದ ಕ್ಷಣವೇ ನಾವು ಲಿಂಕ್ ನೀಡುತ್ತೇವೆ.
🤔 SSLC ರಿಸಲ್ಟ್ ಬಗ್ಗೆ ನಿಮ್ಮ ಪ್ರಶ್ನೆಗಳು:
1. ಎಸ್ಸೆಸ್ಸೆಲ್ಸಿ ರಿಸಲ್ಟ್ ನೋಡಲು ರಿಜಿಸ್ಟ್ರೇಶನ್ ನಂಬರ್ ಕಳೆದುಹೋಗಿದ್ದರೆ ಏನು ಮಾಡಬೇಕು?
ಉತ್ತರ: ತಕ್ಷಣ ನಿಮ್ಮ ಕಾಲೇಜು ಅಥವಾ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಿ. ಅವರ ಬಳಿ ಇರುವ ನಾಮಿನಲ್ ರೋಲ್ನಲ್ಲಿ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಲಭ್ಯವಿರುತ್ತದೆ.
2. ಈ ಬಾರಿ ಗ್ರೇಸ್ ಮಾರ್ಕ್ಸ್ (Grace Marks) ನೀಡಲಾಗುತ್ತದೆಯೇ?
ಉತ್ತರ: ಶಿಕ್ಷಣ ಇಲಾಖೆಯು ಪ್ರತಿ ವರ್ಷದಂತೆ ಈ ಬಾರಿಯೂ ತಾಂತ್ರಿಕ ದೋಷ ಅಥವಾ ಕಠಿಣ ಪ್ರಶ್ನೆಗಳಿದ್ದಲ್ಲಿ ನಿಯಮಾನುಸಾರ ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ ಬಿತ್ತರಿಸುವುದಿಲ್ಲ

“ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ 6 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ವಿಶ್ಲೇಷಿಸಿ, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದರ ಪ್ರಯೋಜನಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು, ಪರೀಕ್ಷಾ ಫಲಿತಾಂಶಗಳು ಮತ್ತು ವಿಶ್ವಾಸಾರ್ಹ ದೈನಂದಿನ ಹವಾಮಾನ ವರದಿಯನ್ನು ಒದಗಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಇವರ ಮುಖ್ಯ ಗುರಿಯಾಗಿದೆ.”


WhatsApp Group




