ಕರ್ನಾಟಕ ರಾಜ್ಯದ ಮೇಲೆ ಕೊನೆಗೂ ಚಂಡಮಾರುತ ‘ಪೆಂಗಲ್’ (Cyclone Fenga) ಪ್ರಭಾವ ಶುರುವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಶನಿವಾರದವರೆಗೂ ಚಂಡಮಾರುತದ ಪ್ರಭಾವ ಇಲ್ಲ ಎನ್ನಲಾಗಿತ್ತು. ಆದರೆ ಗುರುವಾರ ಇಂದು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ವರದಿ ಪ್ರಕಾರ, ಎರಡು ದಿನ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಇನ್ನಿಲ್ಲದಂತೆ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಕೊಡಲಾಗಿದೆ ಎಂದು IMD ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ದಾವಣಗೆರೆ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಮೇಲೆ ಚಂಡಮಾರುತದ ಪ್ರಭಾವ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ವರದಿ ದೃಢಪಡಿಸಿದೆ. ಈ ಜಿಲ್ಲೆಗಳಲ್ಲಿ ಸುಮಾರು 60 ಮಿಲಿ ಮೀಟರ್ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಗುರುವಾರ ಇಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

. ಈಗಾಗಲೇ ರಾಜ್ಯದಲ್ಲಿ ವಿಪರೀತ ಮಳೆ ವಾತಾವರಣ ಉಂಟಾಗಿದೆ. ಗುಡುಗು ಸಿಡಿಲಿಗೆ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ.ಈಗಗಲೇ ರಾಜ್ಯದಲ್ಲಿ ಸುಮಾರು 20ಕ್ಕು ಹೆಚ್ಚು ಜನ ಸಿಡಿಲಿನ ಹೊಡೆತಕ್ಕೆ ಸಾವಿಗೀಡಾಗಿದ್ದಾರೆ, ಇದರ ಬೆನ್ನಲ್ಲೆ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ತೀವ್ರಗೊಂಡು ‘ಫೆಂಗಲ್’ ಚಂಡಮಾರುತವಾಗಿ ಬದಲಾಗಿರುವುದನ್ನು ಹವಾಮಾನ ತಜ್ಞರು ಖಚಿತ ಪಡಿಸಿದ್ದಾರೆ. ಈ ಹಿಂದೆ ‘ಆಸ್ನಾ’ ಮತ್ತು ‘ಡಾನಾ’ ಚಂಡಮಾರುತದಿಂದ ಕಂಗೆಟ್ಟಿದ್ದ ಕರಾವಳಿ ರಾಜ್ಯಗಳಿಗೆ ಇದೀಗ ಮತ್ತೆ ಮಳೆ ಭೀತಿ ಶುರುವಾಗಿದೆ.

ಎಲ್ಲೆಡೆ ಮಳೆ ಹೆಚ್ಚಳ ರಾಜ್ಯದ ಉತ್ತರ ಒಳನಾಡಿನ ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಕೊಪ್ಪಳ, ಬೀದರ್, ಯಾದಗಿರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶುಷ್ಕ ಮಳೆ ವಾತಾವರಣ ಮುಂದುವರಿಯಲಿದೆ. ಸಂಜೆಯಿಂದ ರಾತ್ರಿವರೆಗೆ ಗುಡುಗು,ಸಿಡಿಲಿನ ಭಾರಿ ಮಳೆ ಕಂಡು ಬರಲಿದೆ. ಇಲ್ಲಿ ಭಾರೀ ಮಳೆ ಆಗುವುದು ಎನ್ನಲಾಗಿದೆ. ಮೇ ಮೂರನೇ ಮೊದಲ ವಾರವೇ ರಾಜ್ಯಕ್ಕೆ ಭಾರೀ ಮಳೆಯ ಆಗಮನವಾಗಲಿದೆ. ಇದು ಒಂದು ರೀತಿಯಲ್ಲಿ ಮುಂಗಾರು ಬಿತ್ತನೆ ಮಾಡುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜನ ಜೀವನ ಅಸ್ತವ್ಯಸ್ತ ಮಾಡುವಷ್ಟರ ಮಟ್ಟಿಗೆ ಮಳೆ ಸುರಿದರೆ ವ್ಯಾಪಾರ, ಜನರು, ಮಕ್ಕಳ ಆರೋಗ್ಯ ಮೇಲೆ ಪ್ರಭಾವ ಬೀರುತ್ತದೆ. ದೈನಂದಿನ ಕಾರ್ಯ ಚಟುವಟಿಕೆಗಳಿಗೆ ತೊಂದರೆ ಆಗಲಿದೆ.
⚠️ ಗಮನಿಸಿ: ಹವಾಮಾನ ಪರಿಸ್ಥಿತಿ ಬದಲಾಗಬಹುದು, ನಿಯಮಿತವಾಗಿ ಅಪ್ಡೇಟ್ಗಳಿಗಾಗಿ ಹವಾಮಾನ ಇಲಾಖೆ ಅಥವಾ ಸ್ಥಳೀಯ ಸುದ್ದಿ ಮೂಲಗಳನ್ನು ಪರಿಶೀಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.