ಜಾಂಟಿ ಐ ಪ್ರೋ (Jaunty i Pro):
ಭಾರತದ ಮಾರುಕಟ್ಟೆಯಲ್ಲಿ ಹೊಸ ವಿದ್ಯುತ್ ಸ್ಕೂಟರ್(New Electric Scooter): ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ ಓಡಬಹುದು. ಹೌದು, ಎಲೆಕ್ಟ್ರಿಕ್ ಸ್ಕೂಟರ್‌ಗಳ ರೇಸ್‌ನಲ್ಲಿ ಮತ್ತೊಂದು ಹೊಚ್ಚ ಹೊಸ ಸ್ಕೂಟರ್ ಸೇರ್ಪಡೆಯಾಗಿದೆ. ಜಾಂಟಿ ಐ ಪ್ರೋ( Jaunty i Pro). ಭಾರತದಲ್ಲಿ ಲಭ್ಯವಿರುವ ಹಲವಾರು ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್(High speed Electric scooter)ಗಳಲ್ಲಿ ಒಂದಾಗಿದೆ. ಈ ಸ್ಕೂಟರ್ ಉತ್ತಮ ವ್ಯಾಪ್ತಿ, ಉತ್ತಮ ವೇಗ ಮತ್ತು ಹಲವಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಖರ್ಚಿಲ್ಲದೆ ದಿನಕ್ಕೆ 200 ಕಿ.ಮೀ ಓಡಾಡಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಬನ್ನಿ ಹಾಗಿದ್ರೆ, ಈ ಸ್ಕೂಟರ್ ನ ವೈಶಿಷ್ಟ್ಯತೆ ಗಳ ಕುರಿತು ಸಂಪೂರ್ಣ ಮಾಹಿತಿಯನ್ನೂ ತಿಳಿದುಕೊಳ್ಳೋಣ. ವರದಿಯನ್ನು ತಪ್ಪದೆ ಕೊನೆಯವರೆಗು ಓದಿ. ಇದೇ ರೀತಿಯ ಎಲ್ಲಾ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ ಏರುತ್ತಲೇ ಇದೆ. ಈಗ ತಿಂಗಳಿಗೆ ಮೂರು-ನಾಲ್ಕು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಓಲಾ(Ola) ಮತ್ತು ಅಥರ್(Ather), ಭಾರತೀಯ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ಈ ಕಂಪನಿಗಳು ಉತ್ತಮ ಗುಣಮಟ್ಟದ ವಾಹನಗಳನ್ನು ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿವೆ. ಆದರೆ, ಜಾಂಟಿ ಐ ಪ್ರೋ ಈ ಸ್ಥಾಪಿತ ಕಂಪನಿಗಳಿಗೆ ಗಂಭೀರ ಸವಾಲು ಒಡ್ಡುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಉಳಿದ ಎಲ್ಲಾ ಸ್ಕೂಟರ್‌ಗಳಿಗಿಂತ ಉತ್ತಮ ಕಾರ್ಯಕ್ಷಮತೆ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಭಾರತೀಯ ವಿದ್ಯುತ್ ವಾಹನ ಮಾರುಕಟ್ಟೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸುವ ಉದ್ದೇಶದಿಂದ, ಅಮೋ ಮೊಬಿಲಿಟಿ(Amo Mobility)’ಜಾಂಟಿ ಐ ಪ್ರೋ(Jaunty i Pro)’ ಎಂಬ ಹೊಚ್ಚ ಹೊಸ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ 2.52 kWh ಬ್ಯಾಟರಿ ಪ್ಯಾಕ್‌ನಿಂದ 200 ಕಿ.ಮೀ. ದೂರ ಪ್ರಯಾಣಿಸಲು ಸಾಧ್ಯವಾಗುತ್ತದೆ. ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್(Smart battery Management) ಸಿಸ್ಟಮ್ ಉತ್ತಮ ಬ್ಯಾಟರಿ ಆರೋಗ್ಯವನ್ನು ಖಾತ್ರಿಪಡಿಸುತ್ತದೆ ಮತ್ತು 3.5 ಗಂಟೆಗಳಲ್ಲಿ ತ್ವರಿತ ಚಾರ್ಜ್‌ಗೆ ಅವಕಾಶ ನೀಡುತ್ತದೆ. ಈ ಸ್ಕೂಟರ್ ನ ಹೆಚ್ಚಿನ ವೈಶಿಷ್ಟತೆಗಳು ಈ ಕೆಳಗಿನಂತಿವೆ:

Jaunty i Pro: ಗಾಳಿಯ ವೇಗದಲ್ಲಿ ಚಲಿಸುವ ವಿದ್ಯುತ್ ಚಾಲಿತ ಸ್ಕೂಟರ್
Jaunty i Pro, ಒಂದು ಅದ್ಭುತವಾದ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್. Amo Mobility ಯಿಂದ ನಿಮ್ಮ ಮುಂದೆ ಬಂದಿರುವ ಈ ಸ್ಕೂಟರ್, 151 ಕೆ.ಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯದೊಂದಿಗೆ, ಗಂಟೆಗೆ 60 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಈ ಸ್ಕೂಟರ್ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬರಲಿದೆ.
ಎಕನಾಮಿಕ್ ಮೋಡ್(Economic Mode): ಉಳಿತಾಯದ ಚಲನೆಗೆ
ಸಿಟಿ ರೈಡ್ ಮೋಡ್(City ride mode): ನಗರದಲ್ಲಿ ಸುಲಭವಾಗಿ ಚಲಿಸಲು
ಪವರ್ ಮೋಡ್(Power ride mode): ಗಾಳಿಯ ವೇಗದಲ್ಲಿ ಚಲಿಸಲು
Jaunty i Pro , ನಿಮ್ಮ ಚಾಲನೆಗೆ ಒಂದು ರೋಮಾಂಚಕರ ಅನುಭವ ನೀಡುತ್ತಿದೆ. ಇದು 3.95 bhp ಶಕ್ತಿಯ BLDC ಹಬ್ ಮೋಟಾರ್ 143 Nm ಟಾರ್ಕ್ ಉತ್ಪಾದಿಸಿ, ನಿಮ್ಮ ಪ್ರಯಾಣವನ್ನು ತ್ವರಿತ ಮತ್ತು ಸುಗಮಗೊಳಿಸುತ್ತದೆ. ಸುರಕ್ಷತೆಗಾಗಿ ಸಂಯೋಜನೆಯ ಬ್ರೇಕಿಂಗ್ ವ್ಯವಸ್ಥೆಯು ಒಂದು ಬ್ರೇಕ್ ಅನ್ನು ಒತ್ತಿದಾಗ ಸ್ವಯಂಚಾಲಿತವಾಗಿ ಎರಡನ್ನೂ ಒತ್ತಿ, ನಿಮ್ಮ ಚಾಲನೆಯನ್ನು ಭದ್ರವಾಗಿಸುತ್ತದೆ. ಬ್ಯಾಟರಿ ತಾಪಮಾನದ ಎಚ್ಚರಿಕೆ ವ್ಯವಸ್ಥೆಯು ಯಾವುದೇ ಅಪಾಯಗಳನ್ನು ತಪ್ಪಿಸಲು ನಿಮ್ಮನ್ನು ಎಚ್ಚರಿಸುತ್ತದೆ.
AMO ಮೊಬಿಲಿಟಿಯ ಸಂಸ್ಥಾಪಕರಾದ(CEO) ಸುಶಾಂತ್ ಕುಮಾರ್ ಅವರ ತಮ್ಮ Jaunty i Pro ಸ್ಕೂಟರ್ ಕುರಿತು ಪ್ರಕಟಣೆಯನ್ನು ನೀಡಿದ್ದಾರೆ.
“ನಮ್ಮ ಬಹು ನಿರೀಕ್ಷಿತ ಮಾದರಿ Jaunty i Pro EV ತಂತ್ರಜ್ಞಾನದಲ್ಲಿನ ನಾವೀನ್ಯತೆಯಲ್ಲಿನ ನಮ್ಮ ದಾಪುಗಾಲುಗಳ ಪ್ರದರ್ಶನವಾಗಿದೆ. ಮಾದರಿಯ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಸುಧಾರಿತ BMS ಇದು ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸುವ ಸ್ಮಾರ್ಟ್ ವಾಹನವಾಗಿದೆ. ಇದರ ಜೊತೆಗೆ, 2.52 kWh ಬ್ಯಾಟರಿ ಸಾಮರ್ಥ್ಯ ಮತ್ತು ಸಾಟಿಯಿಲ್ಲದ ಮೈಲೇಜ್ ನಂಬಲಾಗದ ಸಂಯೋಜನೆಯನ್ನು ಮಾಡುತ್ತವೆ, ಇದು ಆಧುನಿಕ ಸವಾರರೊಂದಿಗೆ ಹೆಚ್ಚು ಸಂಪರ್ಕ ಸಾಧಿಸುತ್ತದೆ ಮತ್ತು ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಅಳವಡಿಕೆ ದರವನ್ನು ಸುಗಮಗೊಳಿಸುತ್ತದೆ ಎಂದು ನಾನು ನಂಬುತ್ತೇನೆ. ಅದರ ಎಲ್ಲಾ ಭಾಗಗಳನ್ನು ಭಾರತದಲ್ಲಿ ತಯಾರಿಸುವುದರಿಂದ, ನಮ್ಮ ದೇಶದ ಹೊರಸೂಸುವಿಕೆಯ ವಿರುದ್ಧದ ಹೋರಾಟವನ್ನು ಬೆಂಬಲಿಸುವ ಸಂದರ್ಭದಲ್ಲಿ Jaunty i Pro ಪೂರೈಕೆದಾರರ ಮಟ್ಟದಲ್ಲಿ 90% ಕ್ಕಿಂತ ಹೆಚ್ಚು ದೇಶೀಯ ಮೌಲ್ಯವನ್ನು ಸೇರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಮಾತನಾಡಿದ್ದಾರೆ.
Jaunty i Pro ಬೆಲೆ ಮತ್ತು ಲಭ್ಯತೆ:
ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆಯು ರೂ. 1.15 ಲಕ್ಷ ಎಕ್ಸ್ ಶೋರೂಂ ಆಗಿದೆ. ಹೊಸ ಜಾಂಟಿ ಐ ಪ್ರೊ ಲೆಟಿಕ್ ಸ್ಕೂಟರ್ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ: ಬಿಳಿ, ನೀಲಿ ಮತ್ತು ಬೂದು. ಗ್ರಾಹಕರು ತಮ್ಮ ಆಯ್ಕೆಗೆ ಸೂಕ್ತವಾದ ಆಯ್ಕೆಯನ್ನು ಸ್ವಾತಂತ್ರ್ಯವಾಗಿ ಅಯ್ಕೆಯನ್ನು ಮಾಡಬಹುದು. 200 ಕ್ಕೂ ಹೆಚ್ಚು ಪ್ರಬಲ ಡೀಲರ್‌ಶಿಪ್ ನೆಟ್‌ವರ್ಕ್ ಜೊತೆಗೆ, Jaunty i Pro ಭಾರತದ ಇಲಿಟಿಕ್ ವಾಹನ (EV) ಗುಣಮಟ್ಟದ ಭರ್ಜರಿ ಉದಯ ಕಂಡಿದೆ. Hero Vida V1 Plus, TVS iQube ಮತ್ತು Ather 450 Plus ನಂತಹ ಪ್ರಬಲ ಸ್ಪರ್ಧಿಗಳಿಗೆ ಗಂಭೀರ ಸವಾಲು ನೀಡುತ್ತಿದೆ.
ಒಟ್ಟಾರೆ, ಜಾಂಟಿ ಐ ಪ್ರೊ ಒಂದು ಉನ್ನತ-ಗುಣಮಟ್ಟದ, ಕೈಗೆಟಕುವ ವಿದ್ಯುತ್ ಸ್ಕೂಟರ್ ಆಗಿದ್ದು, ನಿಮ್ಮ ದೈನಂದಿನ ಓಡಾಟಗಳಿಗೆ ಒಂದು ಸ್ಮಾರ್ಟ್ ಮತ್ತು ಸುರಕ್ಷಿತ ಆಯ್ಕೆಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ಯಮಹಾದ ಮತ್ತೊಂದು ಹೊಸ ಸ್ಕೂಟಿ.!
- ಬರೋಬ್ಬರಿ 165 ಕಿ.ಮೀ ಮೈಲೇಜ್ ಕೊಡುವ ಹೀರೋ ಸ್ಕೂಟರ್ ಮೇಲೆ ಭರ್ಜರಿ ಆಫರ್..!
- ಓಲಾ ಎಸ್1 ಸರಣಿ ಇ- ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಣೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ಬರೋಬ್ಬರಿ 126 KM ಮೈಲೇಜ್ ಕೊಡುವ ಚೇತಕ್ ಸ್ಕೂಟಿ, ಖರೀದಿಗೆ ಮುಗಿಬಿದ್ದ ಜನ
- ಕೇವಲ 50 ಸಾವಿರಕ್ಕೆ 2 ಆಕರ್ಷಕ ಸ್ಕೂಟರ್‌ಗಳ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ
- ಮರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ ಮತ್ತೊಂದು ಇ -ಸ್ಕೂಟಿ, ಖರೀದಿಗೆ ಮುಗಿಬಿದ್ದ ಜನ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






