ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಯುಗದ ಪ್ರಾರಂಭ: ಜಪಾನ್‌ನ E10 ಶಿಂಕನ್ಸೆನ್ ಭಾರತಕ್ಕೆ ರವಾನೆ
ದೀರ್ಘಕಾಲದಿಂದಲೂ ಭಾರತದ ತ್ವರಿತ ಸಾರಿಗೆ ವ್ಯವಸ್ಥೆಯನ್ನು (Transportation system) ವಿಶ್ವಮಟ್ಟದ ಮಟ್ಟಕ್ಕೆ ತೆಗೆದುಕೊಳ್ಳುವ ಕನಸು ನಡೆಸುತ್ತಿದ್ದ ಭಾರತ ಈಗ ಆ ಕನಸು ನನಸು ಆಗುವ ಹಂತ ತಲುಪಿದೆ. ಪ್ರಪಂಚದ ಅಗ್ರಗಣ್ಯ ಬುಲೆಟ್ ರೈಲು ತಂತ್ರಜ್ಞಾನ (Bullet train technology) ಹೊಂದಿರುವ ಜಪಾನ್‌ನೊಂದಿಗೆ ಭಾರತ ಕೈಜೋಡಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ಚಾಲನೆಗೊಳ್ಳಲಿರುವ ಬುಲೆಟ್ ರೈಲು ಯೋಜನೆಗೆ ಈಗ ಹೊಸ ಮೆರುಗು ಬಂದಿದ್ದು, ಇಡೀ ದೇಶದ ಜೊತೆಜೊತೆಯಲ್ಲಿ ವಿಶ್ವದ ಗಮನವನ್ನು ಸೆಳೆಯುತ್ತಿದೆ. ಹೌದು, ಇದೀಗ ಭಾರತ–ಜಪಾನ್ ಸಂಬಂಧಗಳು(India and japan relationships) ತಂತ್ರಜ್ಞಾನ, ನಿರ್ವಹಣೆ ಮತ್ತು ಭವಿಷ್ಯದ ಸಂವಹನ ವ್ಯವಸ್ಥೆಯ ಹೊಸ ಯುಗವನ್ನು ಪ್ರವೇಶಿಸುತ್ತಿವೆ. ಭಾರತದ ಮಹತ್ವಾಕಾಂಕ್ಷೆಯಾದ ಬುಲೆಟ್ ಟ್ರೈನ್ ಯೋಜನೆಗೆ ಈಗ ಅಂತಾರಾಷ್ಟ್ರೀಯ ಮಟ್ಟದ ಹೊಸ ಬಲ ದೊರೆತಿದೆ. ಜಪಾನ್‌ನ ಅತ್ಯಾಧುನಿಕ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ಮುಂಬೈ–ಅಹಮದಾಬಾದ್ ನಡುವಿನ ಬೃಹತ್ ವೇಗದ ರೈಲು ಮಾರ್ಗದಲ್ಲಿ ಈಗ ಜಪಾನ್‌ನ ನೆಕ್ಸ್ಟ್ ಜನರೇಶನ್ ಬುಲೆಟ್ ಟ್ರೈನ್ (Japan next generation bullet train), E10 ಶಿಂಕನ್ಸೆನ್ ತನ್ನ ಪ್ರವೇಶ ಘೋಷಿಸಿದೆ. ಹಾಗಿದ್ದರೆ E10 ಶಿಂಕನ್ಸೆನ್ ಬುಲೆಟ್ ಟ್ರೈನ್ ವಿಶೇಷ ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇತಿಹಾಸಾತ್ಮಕ ಕ್ರಮ:
ಭಾರತ-ಜಪಾನ್ ನಡುವಿನ ಸ್ನೇಹಪೂರ್ಣ ಬಾಂಧವ್ಯಕ್ಕೆ ಈ ಯೋಜನೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಲಿದೆ. ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಯೋಜನೆಯಡಿ (Mumbai -Ahamadbad High speed train Corridor scheme) ಈಗಾಗಲೇ ಕಾಮಗಾರಿಗಳು ಚುರುಕುಗೊಂಡಿರುವ ನಡುವೆಯೇ, ಜಪಾನ್ ತನ್ನ ಮುಂದಿನ ಪೀಳಿಗೆಯ ಶಿಂಕನ್ಸೆನ್ ಮಾದರಿ ‘E10’ ರೈಲುಗಳನ್ನು ಭಾರತಕ್ಕೆ ನೀಡಲು ಸಮ್ಮತಿಸಿದೆ.
ಭಾರತ–ಜಪಾನ್ ಸಂಬಂಧಕ್ಕೆ ಹೊಸ ಬಲ:
ಈ ಒಪ್ಪಂದವು ಭಾರತ–ಜಪಾನ್ ನಡುವೆ ದಶಕಗಳಿಂದ ಉಂಟಾದ ತಾಂತ್ರಿಕ ಸಹಕಾರಕ್ಕೆ ಮತ್ತೊಂದು ನಿದರ್ಶನವಾಗಿದೆ. ಭಾರತದಲ್ಲಿ ಈ ರೈಲುಗಳ ಪರಿಚಯವು ನಗದುರಹಿತ ಒಪ್ಪಂದ, ತಂತ್ರಜ್ಞಾನ ಹಸ್ತಾಂತರ, ತರಬೇತಿ, ನಿರ್ವಹಣೆ ಸೇರಿದಂತೆ ಅನೇಕ ಆಯಾಮಗಳನ್ನು ಒಳಗೊಂಡಿದೆ.
ಜಪಾನ್‌ನಲ್ಲಿ ಕೂಡ ಬಿಡುಗಡೆಯಾಗದ ಹೊಸ ಮಾದರಿ ಭಾರತಕ್ಕೆ:
ಇದುವರೆಗೆ ಜಪಾನ್‌ನಲ್ಲಿ ಕೂಡ ಸರ್ವಜನಿಕ ಬಳಕೆಗೆ ಬಂದಿರದ ಅತ್ಯಾಧುನಿಕ ‘E10 ಶಿಂಕನ್ಸೆನ್’ ರೈಲುಗಳು (‘E10 Shinkansen’ trains) ಭಾರತದಲ್ಲಿ ಜಾರಿಯಾಗಲಿವೆ ಎಂಬುದು ಅತ್ಯಂತ ವಿಶೇಷ ಸಂಗತಿ. ಜಪಾನ್‌ನಲ್ಲಿ ಕೂಡ ಇದೇ ವರ್ಷದಲ್ಲಿ ಈ ರೈಲುಗಳನ್ನು ಲೋಕಾರ್ಪಣೆ ಮಾಡುವ ಯೋಜನೆ ಇದ್ದು, ಭಾರತ ಮತ್ತು ಜಪಾನ್ ಎರಡೂ ದೇಶಗಳಲ್ಲಿ ಈ ರೈಲುಗಳು ಒಂದೇ ವೇಳೆ ಸಂಚರಿಸಲು ಸಿದ್ಧತೆ ನಡೆಯುತ್ತಿದೆ.
ಈ ಯೋಜನೆಯ ತಾತ್ಪರ್ಯವೇನು?:
ಇದು ಕೇವಲ ತಂತ್ರಜ್ಞಾನ ಪ್ರಸರಣವಲ್ಲ. ಭಾರತದ ರೈಲ್ವೆ ಬದಲಾವಣೆಗೆ (Indian railway changes) ನೂತನ ಆಯಾಮ ನೀಡುವ ಪ್ರಯತ್ನ. ಈ ಮೂಲಕ ಭಾರತವು ಜಪಾನ್ ನಂತಹ ತಂತ್ರಜ್ಞಾನ ದೈತ್ಯರೊಂದಿಗೆ ನಡೆಯುವ ಸಾಮರ್ಥ್ಯವನ್ನೂ ತೋರಿಸುತ್ತಿದೆ. ಇಡೀ ಪ್ರಾಜೆಕ್ಟ್ 2030 ರ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಇದರಲ್ಲಿ ಜಪಾನ್ ಭಾರತಕ್ಕೆ ತಂತ್ರಜ್ಞಾನ, ತರಬೇತಿ, ಯಂತ್ರೋಪಕರಣಗಳ ಪೂರೈಕೆ ಮೊದಲಾದ ಸಹಾಯ ಮಾಡುತ್ತಿದೆ.
E10 ಶಿಂಕನ್ಸೆನ್ ರೈಲಿನ ವಿಶೇಷತೆಗಳು (Characteristi cs) :
ನವೀಕೃತ ಶಿಂಕನ್ಸೆನ್ E10 ಮಾದರಿಯು ಈಗಿನ E5 ಮಾದರಿಗಿಂತ ನೂರಾರು ವಿಷಯಗಳಲ್ಲಿ ಮೇಲ್ಮಟ್ಟದಲ್ಲಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಇಂತಿವೆ:
ಅತ್ಯಾಧುನಿಕ ಡೆಸ್ಕ್ ಸೌಲಭ್ಯ (New desk facility) : ಪ್ರತಿ ಸೀಟ್‌ಗೆ ವಿಶಾಲವಾಗಿ ಮಡಚಬಹುದಾದ ಡೆಸ್ಕ್ ಸೌಲಭ್ಯ, ಉದ್ಯೋಗಸ್ಥರಿಗೆ ಲ್ಯಾಪ್‌ಟಾಪ್ ಬಳಕೆಗೆ ಅನುಕೂಲ.
ವೈ-ಫೈ ಹಾಗೂ ಡಿಜಿಟಲ್ ಸಂಪರ್ಕ (Wifi and digital network) : ಟ್ರೈನ್‌ನೊಳಗೆ ಉಚಿತ ವೈ-ಫೈ, ಪವರ್ ಔಟ್ಲೆಟ್, ಯುಎಸ್‌ಬಿ ಪೋರ್ಟ್ ಗಳ ವ್ಯವಸ್ಥೆ.
ಸುತ್ತುವಂತೆ ರಚಿಸಿದ ಸೀಟ್ ವಿನ್ಯಾಸ: ಎರಡು ಪ್ಲಸ್ ಎರಡು ಸೀಟಿಂಗ್ ವಿನ್ಯಾಸ, ಎಲ್ಲ ಸೀಟ್‌ಗಳ ನಡುವೆ ಡಿವೈಡರ್ ಹಾಗೂ ಹೆಚ್ಚುವರಿ ಲೆಗ್‌ರೂಂ ವ್ಯವಸ್ಥೆ (Legroom system) ಮಾಡಲಾಗಿದೆ.
ಕಾರ್ಯಕ್ಷಮ ವೇಗ: ಗಂಟೆಗೆ 320 ರಿಂದ 360 ಕಿಲೋ ಮೀಟರ್ ವೇಗದಲ್ಲಿಯೇ ನಯವಾಗಿ ಸಂಚರಿಸುವ ಸಾಮರ್ಥ್ಯ.
ಶಬ್ದ ನಿಯಂತ್ರಿತ ತಂತ್ರಜ್ಞಾನ(Noise control technology) : ಕಡಿಮೆ ಶಬ್ದದಲ್ಲಿ ಉನ್ನತ ವೇಗದ ಸಂಚಾರಕ್ಕಾಗಿ ನವೀಕೃತ ಎಯರೋಡೈನಾಮಿಕ್ ವಿನ್ಯಾಸ.
ಹೈ ಸೆಫ್ಟಿ ಫೀಚರ್ಸ್ (High safety features) : ಭೂಕಂಪ, ತುರ್ತು ಸ್ಥಿತಿಗಳಲ್ಲಿಯೂ ರೈಲು ಸುರಕ್ಷಿತವಾಗಿ ನಿಲ್ಲುವ ಸ್ಮಾರ್ಟ್ ಬ್ರೇಕಿಂಗ್ ಸಿಸ್ಟಮ್.
ಭಾರತಕ್ಕೆ ಇದರ ಪ್ರಭಾವ ಏನು?:
ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಮಟ್ಟದ ಸೂಪರ್ ಹೈಸ್ಪೀಡ್ ಪ್ಯಾಸೆಂಜರ್ ರೈಲು (Super high speed passenger train) ಸಂಚರಿಸಲಿದೆ. ಇದರಿಂದ,
ಮುಂಬೈ–ಅಹಮದಾಬಾದ್ ನಡುವೆ ಕೇವಲ 2 ಗಂಟೆ 30 ನಿಮಿಷಗಳಲ್ಲಿ ಪ್ರಯಾಣ ಸಾಧ್ಯವಾಗಲಿದೆ.
ಉದ್ಯೋಗ, ಪ್ರವಾಸೋದ್ಯಮ, ವಾಣಿಜ್ಯಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ.
ಜಪಾನ್-ಭಾರತ ಸ್ನೇಹಕ್ಕೆ ಹೊಸ ಅರ್ಥ, ಹೊಸ ಬಾಂಧವ್ಯ ರೂಪುಗೊಳ್ಳಲಿದೆ.
ಒಟ್ಟಾರೆಯಾಗಿ, ಭಾರತದ ಬುಲೆಟ್ ಟ್ರೈನ್ ಕನಸು (Indian bullet train dream) ಈಗ ನೈಜಕ್ಕೆ ಇನ್ನೂ ಹತ್ತಿರವಾಗಿದೆ. ಜಪಾನ್‌ನ E10 ಶಿಂಕನ್ಸೆನ್ ರೈಲುಗಳು ಭಾರತದಲ್ಲಿ ಹೈ ಸ್ಪೀಡ್ ರೈಲ್ವೆ ಯುಗದ ನಾಂದಿಯಾಗಿ ಹೊರಹೊಮ್ಮಲಿವೆ. ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಭಾರತದ ಅಭಿವೃದ್ಧಿ ಕನಸಿಗೆ ಹೊಸ ಚೆರಕು ನೀಡಲಿದೆ ಈ ಯೋಜನೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.