ಐಟಿ ಕಂಪೆನಿಗಳಲ್ಲಿ (IT Companies) ಪ್ರೇಷರ್ಸ್ ನೇಮಕಾತಿ ಶುರು, 88,000 ಪ್ರೇಷರ್ಸ್ ನೇಮಕಾತಿ ಘೋಷಿಸಿದ ಕಂಪನಿಗಳು!
ಇಂದಿನ ಕಾಲದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಬಹಳ ಇದೆ, ಇದೀಗ ತಾನೇ ವಿದ್ಯಾಭ್ಯಾಸ ಮುಗಿಸಿಕೊಂಡ ಯುವಕ ಯುವತಿಯರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇಂದು ಸರ್ಕಾರದ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಹಾಗೆಯೇ ಇಂದು ಹೆಚ್ಚಿನ ಜನರು ಐಟಿ ಕಂಪನಿಗಳಂತಹ (IT Companies) ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸವನ್ನು ಪಡೆಯಲು ಇಚ್ಛಿಸುತ್ತಾರೆ. ಅದಕ್ಕಾಗಿ ಹಲವಾರು ವರ್ಷಗಳಿಂದ ಕಾಯುತ್ತಿರುತ್ತಾರೆ. ಇಂಥವರಿಗೆ ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಐಟಿ ಕಂಪನಿಗಳಲ್ಲಿ ಇದೀಗ ಪ್ರೇಷರ್ಸ್ ನೇಮಕಾತಿ ಶುರುವಾಗಿದ್ದು, 88,000 ನೇಮಕಾತಿ(Recruitment) ಯನ್ನು ಕಂಪನಿಗಳು ಘೋಷಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಐಟಿ ಕಂಪನಿಗಳಲ್ಲಿ ಪ್ರೇಷರ್ಸ್ (freshers) ನೇಮಕಾತಿ ಶುರು :
ಐಟಿ ಕಂಪನಿಗಳು ಇದೀಗ ಕೆಲಸ ಹುಡುಕುತ್ತಿರುವವರಿಗೆ ಕೆಲಸ ನೀಡಲು ಬಯಸುತ್ತಿದ್ದು, ಪ್ರೇಷರ್ಸ್ ಗಾಗಿ ಐಟಿ ಕಂಪನಿಗಳಲ್ಲಿ ನೇಮಕಾತಿ ಶುರು ಮಾಡಿದೆ. ಹೊಸ ಅಭ್ಯರ್ಥಿಗಳಿಗೆ ಕೆಲಸ ಒದಗಿಸಲು ನಿರ್ಧರಿಸಿವೆ. ದೇಶದ ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್(infosys), ಎಚ್‌ಸಿಎಲ್ ಟೆಕ್(HCL tech), ವಿಪ್ರೋ(wipro) ಹಾಗೂ ಟೆಕ್ ಮಹೀಂದ್ರಾ ಮತ್ತೆ ಕಾಲೇಜು ಕ್ಯಾಂಪಸ್‌ಗಳಿಗೆ ಕಾಲಿಡಲು ಸಜ್ಜಾಗಿವೆ. ತಮ್ಮ ಕಂಪನಿಗಳಿಗೆ ಬೇಕಾದ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ.
ಐದು ಐಟಿ ಕಂಪನಿಗಳಿಂದ 88,000 ದಷ್ಟು ಪ್ರೇಷರ್ಸ್ ಗಳ ನೇಮಕಾತಿ :
ಐಟಿ ಕಂಪನಿಗಳ ಘೋಷಣೆ ಪ್ರಕಾರ ಪ್ರಮುಖ ಐದು ಐಟಿ ಕಂಪನಿಗಳು ಈ ವರ್ಷ 81,000 ದಿಂದ 88,000ದಷ್ಟು ಹೊಸಬರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಫ್ರೆಷರ್ಸ್‌ನ್ನು ಟಿಸಿಎಸ್ ಕಂಪನಿಯೊಂದೇ ನೇಮಕ ಮಾಡಿಕೊಳ್ಳಲಿದೆ.
ಟಿಸಿಎಸ್ (TCS) ಕಂಪನಿಯಿಂದ 40,000 ಪ್ರೇಷರ್ಸ್ ನೇಮಕಾತಿ :
ಟಾಟಾ ಒಡೆತನದ ದೇಶದ ಅತಿ ದೊಡ್ಡ ಐಟಿ ಸೇವಾ ರಫ್ತು ಸಂಸ್ಥೆ ಟಿಸಿಎಸ್ ಈ ವರ್ಷ ಸುಮಾರು 40,000 ಪ್ರೇಷರ್ಸ್ ಅನ್ನು ನೇಮಕ ಮಾಡಿಕೊಳ್ಳಲಿದೆ. 2024ನೇ ಆರ್ಥಿಕ ವರ್ಷದಲ್ಲೂ ಸರಿ ಸುಮಾರು ಇಷ್ಟೇ ಮಂದಿಯನ್ನು ಟಿಸಿಎಸ್ ನೇಮಕ ಮಾಡಿಕೊಂಡಿತ್ತು. 2023ರಲ್ಲಿ 44,000 ಪ್ರೇಷರ್ಸ್ ಗಳಿಗೆ ಕಂಪನಿ ಉದ್ಯೋಗ ನೀಡಿತ್ತು. ಇನ್ನೂ ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಈಗಾಗಲೇ ಕಂಪನಿ 11,000 ಪ್ರೇಷರ್ಸ್ ಅನ್ನು ನೇಮಕ ಮಾಡಿಕೊಂಡಿದೆ.
ಪ್ರತಿಷ್ಠಿತ ಇನ್ಫೋಸಿಸ್ (Infosys) ಕಂಪನಿ ಕೂಡ ಪ್ರೇಷರ್ಸ್ ನೇಮಕಕ್ಕೆ ಮುಂದಾಗಿದೆ :
2024ನೇ ಆರ್ಥಿಕ ವರ್ಷದಲ್ಲಿ ಕನಿಷ್ಠ ಮೂರು ತ್ರೈಮಾಸಿಕಗಳ ಕಾಲ ಪ್ರೇಷರ್ಸ್ ಗಳ ನೇಮಕವನ್ನು ರದ್ದುಗೊಳಿಸಿದ್ದ ಇನ್ಫೋಸಿಸ್ ಕೂಡ ಫ್ರೆಷರ್ ನೇಮಕಕ್ಕೆ ಮುಂದಾಗಿದೆ. ಈ ವರ್ಷ 15,000 – 20,000 ಪ್ರೇಷರ್ಸ್ ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. 2024ರಲ್ಲಿ ಕಂಪನಿ 11,900 ಫ್ರೆಷರ್ಸ್‌ಗೆ ಮಾತ್ರ ಉದ್ಯೋಗ ನೀಡಿತ್ತು. 2023ರ 50,000 ಮಂದಿಯ ನೇಮಕಕ್ಕೆ ಹೋಲಿಸಿದರೆ 2022ರಲ್ಲಿ ನೇಮಕಾತಿ ಶೇ. 76ರಷ್ಟು ಕುಸಿತ ಕಂಡಿತ್ತು.
ಎಚ್‌ಸಿಎಲ್ ಟೆಕ್ (HCL Tech) ಕಂಪನಿಯಿಂದ ಹೊಸ ಅಭ್ಯರ್ಥಿಗಳ ನೇಮಕಕ್ಕೆ ಕರೆ :
ಎಚ್‌ಸಿಎಲ್ ಟೆಕ್ 2024ರಲ್ಲಿ 12,141 ಹೊಸ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಂಡಿತ್ತು. 2023ರ 26,734 ನೇಮಕಕ್ಕೆ ಹೋಲಿಸಿದರೆ ಕಂಪನಿಯ ನೇಮಕದಲ್ಲಿ ಅರ್ಧದಷ್ಟು ಕಡಿಮೆಯಾಗಿತ್ತು. ಇದೀಗ ಈ ವರ್ಷ 10,000 ದಿಂದ 12,000 ಮಂದಿಯನ್ನು ಕ್ಯಾಂಪಸ್‌ಗಳಿಂದ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಿದೆ. ಈಗಾಗಲೇ ಮೊದಲ ತ್ರೈಮಾಸಿಕದಲ್ಲಿ 1,078 ಹೊಸ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ.
ಹೆಸರಾಂತ ಕಂಪನಿಯಾದ ವಿಪ್ರೋದಲ್ಲಿ ಕೆಲಸಕ್ಕಾಗಿ ಪ್ರೇಷರ್ಸ್ ಗಳ ಹುಡುಕಾಟ :
ವಿಪ್ರೋ ನೇಮಕದ ಬಗ್ಗೆ ಯಾವುದೇ ವಿವರ ನೀಡಿಲ್ಲ. 2024ರಲ್ಲಿ ಬಾಕಿ ಉಳಿದಿರುವ ನೇಮಕವನ್ನು ಪೂರ್ಣಗೊಳಿಸಲು ಕಂಪನಿ ಬಯಸಿದೆ. 2022ರಲ್ಲಿ 22,000 ಫ್ರೆಷರ್ಸ್‌ನ್ನು ಕಂಪನಿ ಕೆಲಸಕ್ಕೆ ನೇಮಿಸಿಕೊಂಡಿತ್ತು. ನಂತರ ಸತತ 6 ತ್ರೈಮಾಸಿಕಗಳ ಕಾಲ ನೇಮಕದಿಂದ ಹಿಂದೆ ಸರಿದಿತ್ತು. ಇದೀಗ ಮತ್ತೆ ನೇಮಕ ಶುರು ಮಾಡಿದ್ದು ಜೂನ್ ತ್ರೈಮಾಸಿಕದಲ್ಲಿ 3,000 ಹೊಸಬರಿಗೆ ಉದ್ಯೋಗ ನೀಡಿದೆ. ಈ ವರ್ಷ 10,000-12,000 ಫ್ರೆಷರ್ಸ್‌ಗೆ ಉದ್ಯೋಗ ನೀಡಲು ಬಯಸಿದೆ.
ಟೆಕ್ ಮಹೀಂದ್ರಾ (Tech Mahindra) ಕಡೆಯಿಂದ ಪ್ರೇಷರ್ಸ್ ಗಳಿಗೆ ಉದ್ಯೋಗದ ಅವಕಾಶ :
ಟೆಕ್ ಮಹೀಂದ್ರಾ 6,000 ಉದ್ಯೋಗಿಗಳ ನೇಮಕಕ್ಕೆ ಉದ್ದೇಶಿಸಿದ್ದು, ಈಗಾಗಲೇ ಜೂನ್‌ನಲ್ಲಿ 1,000 ಫ್ರೆಷರ್ಸ್‌ನ್ನು ಕೆಲಸಕ್ಕೆ ತೆಗೆದುಕೊಂಡಿದೆ. ಹೀಗೆ ಒಟ್ಟಾರೆ ಈ ವರ್ಷ 81,000 ದಿಂದ 88,000ದಷ್ಟು ಇಂಜಿನಿಯರಿಂಗ್ ಪದವೀಧರರು ಟೆಕ್ಕಿಗಳಾಗಿ ಐಟಿ ಕಂಪನಿ ಸೇರಲಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




