iPhone 15 Series : ಹೊಸ ಐಫೋನ್ 15 ಸೀರೀಸ್ ಕೊನೆಗೂ ಬಿಡುಗಡೆ ..! ಬೆಲೆ ಎಷ್ಟು ಗೊತ್ತಾ.? ಲುಕ್ ಮಾತ್ರ ಬೆಂಕಿ ಗುರು | Iphone 15 Series in Kannada

WhatsApp Image 2023 09 13 at 6.51.42 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಆಪಲ್‌ನ ಬಹುನಿರೀಕ್ಷಿತ ಐಫೋನ್ 15(iPhone 15 ) ಸರಣಿಯು ಬಿಡುಗಡೆಯಾಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮಂಗಳವಾರ ಆಪಲ್‌ನ “ವಂಡರ್‌ಲಸ್ಟ್” ಈವೆಂಟ್‌ನ ಮುಖ್ಯಾಂಶ ಪ್ರಕಟಣೆಗಳಲ್ಲಿ ಐಫೋನ್ 15 ಸಾಲಿನ ಚೊಚ್ಚಲ ಪ್ರವೇಶವಾಗಿದೆ. ಈ ಫೋನಿನ ಬೆಲೆ, ವೈಶಿಷ್ಟಗಳು, ಲಭ್ಯತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಐಫೋನ್ 15 ಸರಣಿಯ ಬಿಡುಗಡೆಯಾಗಿದೆ :

WhatsApp Image 2023 09 13 at 6.44.15 AM

ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೋ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್‌ ಬಿಡುಗಡೆಯಾಗಿವೆ. ಐಫೋನ್‌ 15 ಪ್ರೊ ಏರೋಸ್ಪೇಸ್-ಗ್ರೇಡ್ ಟೈಟಾನಿಯಂ ವಿನ್ಯಾಸವನ್ನು ಹೊಂದಿದೆ. ಇದು A17 ಪ್ರೊ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಐಫೋನ್‌ 15 ಪ್ರೊನಲ್ಲಿ ಹೊಸ ‘ಆಕ್ಷನ್’ ಬಟನ್‌ ನೀಡಲಾಗಿದ್ದು, ಐಕಾನಿಕ್‌ ಮ್ಯೂಟ್‌ ಸ್ವಿಚ್ ಅನ್ನು ತೆಗೆದುಹಾಕಲಾಗಿದೆ. ಜೊತೆಗೆ ಸೂಪರ್‌ಫಾಸ್ಟ್ ವರ್ಗಾವಣೆ ವೇಗಕ್ಕಾಗಿ USB 3 ಜೊತೆಗೆ USB-C ಅನ್ನು ಒಳಗೊಂಡಿದೆ. ಈ ಬಾರಿ ಸ್ಯಾಟಲೈಟ್ ಕನೆಕ್ಟಿವಿಟಿ ಫೀಚರ್ ಅನ್ನು ಹೊಸ ಐಫೋನ್ ಗಳೊಂದಿಗೆ ನೀಡಲಾಗುತ್ತಿದ್ದು, ಇದನ್ನು 2 ವರ್ಷಗಳ ಕಾಲ ಉಚಿತವಾಗಿ ಬಳಸಬಹುದು.

whatss

ರಚನೆ ಹಾಗೂ ವಿನ್ಯಾಸದ ವಿವರ :

WhatsApp Image 2023 09 13 at 6.44.05 AM

ಡಿಸ್‌ಪ್ಲೇ ಬಗ್ಗೆ ಹೇಳುವುದಾದರೆ ಐಫೋನ್ 15 6.1-ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಐಫೋನ್ 15 ಪ್ಲಸ್ 6.7-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಹೊಸ ಐಫೋನ್‌ಗಳು ಕಳೆದ ವರ್ಷ ಬಿಡುಗಡೆಯಾದ ಎ16 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದ್ದು, ಹೆಚ್ಚಿನ ಕಾರ್ಯಕ್ಷಮತೆ ಮತ್ತು ಶಕ್ತಿಯ ದಕ್ಷತೆಯನ್ನು ಭರವಸೆ ನೀಡುತ್ತವೆ. ಈ ಐಫೋನ್ 15 ಒಎಲ್‌ಇಡಿ ಸೂಪರ್ ರೆಟಿನಾ ಡಿಸ್‌ಪ್ಲೇಯೊಂದಿಗೆ ಲಭ್ಯವಿದೆ. ಇದು ಗಟ್ಟಿಮುಟ್ಟಾದ ಗ್ಲಾಸ್ ಹೊಂದಿದ್ದು, ಜಲ ಮತ್ತು ಧೂಳು ಪ್ರತಿರೋಧವನ್ನೂ ಒಳಗೊಂಡಿದೆ. ಐಫೋನ್ 15 ಪ್ರೋ(iPhone 15 pro) ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್‌ (iPhone 15 pro max)
ಫ್ಲಾಟ್ ಎಡ್ಜ್ ವಿನ್ಯಾಸವನ್ನು ಹೊಂದಿವೆ. ಹಿಂದಿನ ಫೋನ್ ಗಳಿಗಿಂತ ಇನ್ನೂ ಹಗುರವಾಗಿದೆ.

ಐಫೋನ್‌ 15 ಪ್ರೊ A17 ಪ್ರೊ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಪ್ರತಿ ಸೆಕೆಂಡಿಗೆ 35 ಟ್ರಿಲಿಯನ್ ಕಾರ್ಯಾಚರಣೆಗಳಿಗೆ ಬೆಂಬಲಿಸುವ ಹೊಸ ಆರ್ಕಿಟೆಕ್ಚರ್‌ನೊಂದಿಗೆ ಹೊರಹೊಮ್ಮಿದೆ. ಅಲ್ಲದೆ ರೇ ಟ್ರೇಸಿಂಗ್‌ಗೆ ಬೆಂಬಲದೊಂದಿಗೆ ಸುಧಾರಿತ GPU ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.

ಐಫೋನ್ 15 ಪ್ರೋ ಕ್ಯಾಮರಾದ ವಿವರ :

ಇದು 48 ಎಂಪಿ ಪ್ರಾಥಮಿಕ ಸೆನ್ಸರ್, ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. 12MP ಸೆಕೆಂಡರಿ ಕ್ಯಾಮೆರಾವನ್ನು ಒಳಗೊಂಡಿದೆ.  ಪ್ರೊ ಮ್ಯಾಕ್ಸ್ ಮಾದರಿಯು 5X ಆಪ್ಟಿಕಲ್ ಝೂಮಿಂಗ್ ವೈಶಿಷ್ಟ್ಯವನ್ನು ಹೊಂದಿರುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

iPhone 15 ಬ್ಯಾಟರಿ :

ಈ ಹೊಸ ಐಫೋನ್ ಗಳ ಬ್ಯಾಟರಿ ಪವರ್ ಉತ್ತಮವಾಗಿರುತ್ತದೆ. ಇದರ ಬ್ಯಾಟರಿಯನ್ನು USB ಟೈಪ್ C ಚಾರ್ಜರ್ ಸಹಾಯದಿಂದ ಚಾರ್ಜ್ ಮಾಡಬಹುದು. ಇದನ್ನು 15W MagSafe ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಅಲ್ಲದೆ 7.5W Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಹೊಸ ಐಫೋನ್ ಸರಣಿಯನ್ನು 128 GB, 256 GB ಮತ್ತು 512 GB ಸಂಗ್ರಹಣೆ ಆಯ್ಕೆಗಳೊಂದಿಗೆ ಖರೀದಿಸಬಹುದು.

ಬಣ್ಣ ಮತ್ತು ಬೆಲೆ :

Apple iPhone 15 ಬೆಲೆ – 128 GB ಸ್ಟೋರೇಜ್ ಮಾದರಿಗೆ $799, ಭಾರತದಲ್ಲಿ ಬೆಲೆ 79,900 ರೂ.

Apple iPhone 15 Plus ಬೆಲೆ – 128 GB ಸ್ಟೋರೇಜ್ ಮಾದರಿಗೆ $899, ಭಾರತದಲ್ಲಿ ಬೆಲೆ 89,900 ರೂ.

Apple iPhone 15 Pro ಬೆಲೆ – 128 GB ಸ್ಟೋರೇಜ್ ಮಾದರಿಗೆ $999, ಭಾರತದಲ್ಲಿ ಬೆಲೆ 1,34,900 ರೂ.

Apple iPhone 15 Pro Max ಬೆಲೆ – 256 GB ಸ್ಟೋರೇಜ್ ಮಾದರಿಗೆ $1199, ಭಾರತದಲ್ಲಿ ಬೆಲೆ 1,59,900 ರೂ.

iPhone 15 ಮತ್ತು 15 Plus ಬಣ್ಣಗಳು:
ಕಪ್ಪು
ಹಸಿರು
ಹಳದಿ
ಗುಲಾಬಿ
ನೀಲಿ

Picsart 23 07 16 14 24 41 584 transformed 1

iPhone 15 Pro ಮತ್ತು Pro Max ಬಣ್ಣಗಳು:
ನೀಲಿ ಟೈಟಾನಿಯಂ
ನೈಸರ್ಗಿಕ ಟೈಟಾನಿಯಂ
ಕಪ್ಪು ಟೈಟಾನಿಯಂ
ಬಿಳಿ ಟೈಟಾನಿಯಂ

ಇನ್ನು ಐಫೋನ್‌ 15 ಪ್ರೊ ಪ್ರಿ ಬುಕಿಂಗ್‌ ಸೆಪ್ಟೆಂಬರ್ 15 ರಂದು ಸಂಜೆ 05:30 ಕ್ಕೆ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 22 ರಿಂದ ಶಿಪ್ಪಿಂಗ್ ಪ್ರಾರಂಭವಾಗುತ್ತದೆ. ಐಫೋನ್ 15 ನ ಬಿಡುಗಡೆ ಮತ್ತು ಇದರ ಕುರಿತಾದ ಎಲ್ಲಾ ವಿಷಯಗಳನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!