ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಜನರಿಗೆ ಬೇಗ ಶ್ರೀಮಂತರಾಗಬೇಕೆಂಬ ಆಸೆ ಹೆಚ್ಚಾಗಿದೆ. ಷೇರು ಮಾರುಕಟ್ಟೆ ಇದರಲ್ಲಿ ಪ್ರಮುಖ ಪಾತ್ರವಹಿಸಿಕೊಂಡರೂ, ಇಲ್ಲಿ ಯಶಸ್ಸು ಎಲ್ಲರಿಗೂ ಸಿಕ್ಕುವುದಿಲ್ಲ. ಆದರೆ ಕೆಲವರು ಸರಿಯಾದ ಷೇರುಗಳನ್ನು ಆಯ್ಕೆ ಮಾಡಿ, ದೀರ್ಘಕಾಲ ಹೂಡಿಕೆಮಾಡಿ ಸಂಪತ್ತು ಗಳಿಸಿದ್ದಾರೆ. ಹೂಡಿಕೆ ಜಗತ್ತಿನಲ್ಲಿ ತಾಳ್ಮೆ, ನಂಬಿಕೆ ಮತ್ತು ಸರಿಯಾದ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂಬುದಕ್ಕೆ ಭಾರತವೇ ಸಾಕ್ಷಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಾಗತಿಕ ಪ್ರೋಕರೇಜ್ ಸಂಸ್ಥೆ CLSA, 28 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಪ್ರಕಟವಾದ ವರದಿಯ ಆಧಾರದ ಮೇಲೆ ಭಾರತದ ಅತ್ಯುತ್ತಮ ಸಂಪತ್ತು ಸೃಷ್ಟಿಕರ್ತ ಕಂಪನಿಗಳ ಪಟ್ಟಿಯನ್ನು ಹೊರತಂದಿದೆ. ಈ ಪಟ್ಟಿಯಲ್ಲಿರುವ ಕಂಪನಿಗಳು, ತಮ್ಮ ಹೂಡಿಕೆದಾರರನ್ನು ನಿಜವಾದ ಕೋಟ್ಯಧಿಪತಿಗಳನ್ನಾಗಿ ಮಾಡಿವೆ. ಆಶ್ಚರ್ಯವೆಂದರೆ, ₹10,000 ಹೂಡಿಕೆ 28 ವರ್ಷಗಳಲ್ಲಿ ₹19 ಕೋಟಿಗಳಿಗೂ ಹೆಚ್ಚು ಆಗಿ ಪರಿವರ್ತನೆಯಾಗಿದೆ!
10 ಸಾವಿರದ ಹೂಡಿಕೆ!
CLSA ಪ್ರಕಟಿಸಿರುವ ವರದಿ ಪ್ರಕಾರ, 10,000 ರೂಪಾಯಿ ಹೂಡಿಕೆ ಮಾಡಿದರೆ 28 ವರ್ಷಗಳಲ್ಲಿ ₹1.35 ಕೋಟಿಯಿಂದ ₹19.17 ಕೋಟಿಯವರೆಗೆ ಬೆಳೆದಿರುವ 10 ಪ್ರಮುಖ ಕಂಪನಿಗಳು ಭಾರತದಲ್ಲಿವೆ. ಈ ಕಂಪನಿಗಳ ಸಾಮರ್ಥ್ಯ ಅದ್ಭುತ. ಷೇರು ಮಾರುಕಟ್ಟೆಯಲ್ಲಿ ದೊಡ್ಡ ಲಾಭ ಪಡೆಯಲು, ಸರಿಯಾದ ಕಂಪನಿಯನ್ನು ಆಯ್ಕೆ ಮಾಡಿ ಅದಕ್ಕೆ ದೀರ್ಘಕಾಲ ಹೂಡಿಕೆ ಮಾಡುವುದು. ತ್ವರಿತ ಶ್ರೀಮಂತಿಕೆಯ ಕನಸಿನಿಂದ ಅಸ್ಥಿರವಾಗಿ ವರ್ತಿಸಿದರೆ, ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ.
ಕೋಟ್ಯಧಿಪತಿ ಮಾಡಿದ ಕಂಪನಿಗಳು ಯಾವುವು?:
ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ವೆಸ್ಟ್‌ಲೈಫ್ ಫುಡ್‌ವರ್ಕ್ಸ್ – ಮ್ಯಾಕ್‌ಡೊನಾಲ್ಡ್ ಇಂಡಿಯಾ ಫ್ರಾಂಚೈಸಿಯನ್ನು ನಡೆಸುವ ಕಂಪನಿ.
ಈ ಕಂಪನಿಯಲ್ಲಿ 28 ವರ್ಷಗಳ ಹಿಂದೆ 10,000 ರೂ. ಹೂಡಿಕೆ ಮಾಡಿದ್ದರೆ ಇಂದು ಇದು ₹19.17 ಕೋಟಿ ಆಗುತ್ತಿತ್ತು. ಇದು ಸುಮಾರು 19,17,039% ಅಥವಾ 19,170 ಪಟ್ಟು ಲಾಭ.
ಇದಾದ ನಂತರದ ಸ್ಥಾನಗಳು ಸಹ ಗಮನಾರ್ಹ:
ಹ್ಯಾವೆಲ್ಸ್ ಇಂಡಿಯಾ
10,000 ರೂ. : ₹6.59 ಕೋಟಿ
ಐಷರ್ ಮೋಟಾರ್ಸ್
10,000 ರೂ. : ₹4.81 ಕೋಟಿ
ಹಣಕಾಸು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ ಕಂಪನಿಗಳೂ ಸೇರಿವೆ
ಬಜಾಜ್ ಫೈನಾನ್ಸ್
4,101 ಪಟ್ಟು ಲಾಭ
ಕೋಟಕ್ ಮಹೀಂದ್ರಾ ಬ್ಯಾಂಕ್
2,373 ಪಟ್ಟು ಲಾಭ
ಇತರ ಅಸಾಧಾರಣ ಮೌಲ್ಯ ನೀಡಿದ ಕಂಪನಿಗಳು:
ಸಂವರ್ಧನಾ ಮದರ್‍ಸನ್ ಇಂಟರ್‌ನ್ಯಾಷನಲ್, ಭಾರತ್ ಎಲೆಕ್ಟ್ರಾನಿಕ್ಸ್ (BEL), ಟೈಟಾನ್ ಕಂಪನಿ, ಶ್ರೀ ಸಿಮೆಂಟ್, ಮಣಪ್ಪುರಂ ಫೈನಾನ್ಸ್ ಈ ಹೆಸರುಗಳಲ್ಲಿ ಕೆಲವು ಇಂದು ನಿಮ್ಮ ಪೋರ್ಟ್‌ಫೋಲಿಯೊದಲ್ಲಿದ್ದರೂ, ಅವುಗಳನ್ನು ದೀರ್ಘಕಾಲ ಹಿಡಿದುಕೊಳ್ಳುವ ಸಂಯಮವಿಲ್ಲದಿದ್ದರೆ, ಆ ಲಾಭವನ್ನು ಕಳೆದುಕೊಂಡಂತೆ!
ಹೂಡಿಕೆ ಮಾಡುವ ಮೊದಲು ಯೋಚನೆ ಸಂಶೋಧನೆ ಮುಖ್ಯ!:
ದೀರ್ಘಾವಧಿ ಹೂಡಿಕೆ ಮಾಡುವುದರಿಂದ ದೊಡ್ಡ ಸಂಪತ್ತು ಘಳಿಸಿಕೊಳ್ಳಬಹುದು. ಆದರೂ, CLSA ಕೂಡ ಎಚ್ಚರಿಕೆ ನೀಡಿದೆ ಹಿಂದಿನ ಲಾಭಗಳು ಭವಿಷ್ಯದಲ್ಲೂ ಖಚಿತ ಎಂದು ಭಾವಿಸುವುದು ತಪ್ಪು. ಮಾರುಕಟ್ಟೆ ಚಲನಶೀಲತೆ ಸದಾ ಬದಲಾಗುತ್ತದೆ. ಹೀಗಾಗಿ, ವ್ಯವಹಾರ ಮಾದರಿಯ ಸಾಮರ್ಥ್ಯ, ನಿರಂತರ ಬೆಳವಣಿಗೆ, ಮೌಲ್ಯಗಳ ಸರಿಯಾದ ವಿಶ್ಲೇಷಣೆ, ತಾಂತ್ರಿಕ ಹಾಗೂ ಮೂಲಭೂತ ವಿಮರ್ಶೆ ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಾತ್ರ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೂಡಿಕೆ ಮಾಡುವ ಮೊದಲು ಪರಿಣಿತ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಅತ್ಯಗತ್ಯ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




