ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರ ಇದೀಗ ಮಹತ್ವದ ಆದೇಶವೊಂದನ್ನು ಹೊರಡಿಸಿದೆ ಈ ಕೆಳಗಂಡಂತೆ
ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ನಿಗಮಗಳು, ಮಂಡಳಿಗಳು, ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು, ಶಾಲೆಗಳು, ಸ್ಥಳೀಯ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಸೊಸೈಟಿಗಳು, ಪರಿಷತ್ತುಗಳು, ಯಾವುದೇ ರೀತಿಯ ರಾಜ್ಯ ಸರ್ಕಾರದ ಅಧೀನ / ಸ್ವಾಯತ್ತ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪಾವತಿಸಬೇಕಾದ ಕನಿಷ್ಠ ವೇತನ, ದುಡಿಮೆಯ ಗಂಟೆಗಳು, ರಜಾ ದಿನಗಳು, ಇ.ಎಸ್.ಐ/ ಪಿ.ಎಫ್ ಕಟಾವಣೆ ಬಗ್ಗೆ ಹಾಗೂ ಮಾನವ ಸಂಪನ್ಮೂಲ ಪೂರೈಸುವ ಗುತ್ತಿಗೆದಾರರು ನಿರ್ವಹಿಸುವ ಅಂಶಗಳ ಬಗ್ಗೆ ಸೂಕ್ತ ಮಾರ್ಗದರ್ಶನವನ್ನು ಉಲ್ಲೇಖಿತ ಸುತ್ತೋಲೆಯಲ್ಲಿ ನೀಡಲಾಗಿತ್ತು.
ಸದರಿ ಸುತ್ತೋಲೆಯ ಕ್ರಸಂ. 1, 2 ಹಾಗೂ 3 ರಲ್ಲಿ ಕ್ರಮವಾಗಿ “ಭದ್ರತಾ ವಿಜೆನ್ಸಿಗಳಲ್ಲಿ ಉದ್ಯೋಗ (ಕಛೇರಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಏಜೆನ್ಸಿಯ ಮೂಲಕ ನಿಯೋಜಸಿಕೊಳ್ಳುವ ಎಲ್ಲಾ ಸಂಸ್ಥೆಗಳು ಹಾಗೂ ಉದ್ದಿಮೆಗಳ ಸಹಿತ)”, “ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಉದ್ಯೋಗ”, ಶೌಚಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ (Scavenging) ಕೆಲಸಗಳಲ್ಲಿ ಉದ್ಯೋಗ (ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೊರತುಪಡಿಸಿ)” ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದಂತೆ 2016ನೇ ಸಾಲಿನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಗಳಲ್ಲಿನ ದರಗಳನ್ನು ಅನ್ವಯಿಸಿಕೊಂಡು ಕನಿಷ್ಠ ವೇತನ ಪಾವತಿಸುವಂತೆ ತಿಳಿಸಲಾಗಿರುತ್ತದೆ.
ಸದರಿ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಅಧಿಸೂಚನೆಗಳನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿರುವ ಒಬ್ಬಂದಿಗಳಿಗೆ ಈ ಕೆಳಕಂಡಂತೆ ಕನಿಷ್ಠ ವೇತನ ದರಗಳನ್ನು ಅನ್ವಯಿಸಿಕೊಳ್ಳಲು ಸುತ್ತೋಲೆಯನ್ನು ಹೊರಡಿಸಲಾಗಿದೆ. ಅಧಿಕೃತ ಪ್ರತಿಯ ಲೇಖನಗಳು ಸ್ಪಷ್ಟವಾಗಿ ಕಾಣದಿದ್ದಲ್ಲಿ ಪ್ರತಿಗಳ ಕೆಳಗಡೆ ಲೇಖನವಿದೆ ಓದಿಕೊಳ್ಳಬಹುದು




1) ಹೊರಗುತ್ತಿಗೆ ಸಿಬ್ಬಂದಿಗಳನ್ನು ಭದ್ರತಾ ಏಜೆನ್ಸಿ ಮುಖಾಂತರ ನೇಮಿಸಿಕೊಂಡಿದ್ದಲ್ಲಿ, “ಭದ್ರತಾ ಏಜೆನ್ಸಿಗಳಲ್ಲಿ ಉದ್ಯೋಗ (ಕಛೇರಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಏಜೆನ್ಸಿಯ
ಮೂಲಕ ನಿಯೋಜಿಸಿಕೊಳ್ಳುವ ಎಲ್ಲಾ ಸಂಸ್ಥೆಗಳು ಹಾಗೂ ಉದ್ದಿಮೆಗಳ ಸಹಿತ)”, ಅನುಸೂಚಿತ ಉದ್ದಿಮೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 18 ಎಲ್‌ಡಬ್ಲ್ಯೂಎ 2022, ದಿನಾಂಕ: 28.07.2022ರಲ್ಲಿ ನಿಗದಿಪಡಿಸಿರುವ ಕನಿಷ್ಠ ವೇತನ ದರಗಳನ್ನು ಪಾವತಿಸತಕ್ಕದ್ದು.
2) ಇತರೆ ಮಾನವ ಸಂಪನ್ಮೂಲ ಏಜೆನ್ಸಿಗಳಿಂದ ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಿಸಿಕೊಂಡಲ್ಲಿ, ದಿನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು” ಅನುಸೂಚಿತ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 106 ಎಲ್‌ಡಬ್ಲ್ಯೂಎ 2021, ದಿನಾಂಕ: 28.07.2022ರಲ್ಲಿ ನಿಗದಿಪಡಿಸಿರುವ ಕನಿಷ್ಠ ದರಗಳನ್ನು ಪಾವತಿಸತಕ್ಕದ್ದು.
3) ಶೌಚಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ (Scavenging ಕೆಲಸಗಳಲ್ಲಿ ಉದ್ಯೋಗ (ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೊರತುಪಡಿಸಿ)” ಅನುಸೂಚಿತ ಉದ್ದಿಮೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 105 ಎಲ್‌ಡಬ್ಲ್ಯೂಎ 2021, ದಿನಾಂಕ: 28.07.2022 ನಿಗದಿಪಡಿಸಿರುವ ಕನಿಷ್ಠ ವೇತನ ದರಗಳನ್ನು ಪಾವತಿಸತಕ್ಕದ್ದು.
4) ಕಾರ್ಮಿಕರ ಕೆಲಸದ ಸ್ವರೂಪದ ಬಗ್ಗೆ ಸ್ಪಷ್ಟತೆ ಇರದಿದ್ದಲ್ಲಿ, ಈ ಬಗ್ಗೆ ಸ್ಪಷ್ಟವಾಗಿ ನಿರ್ಣಯಕ್ಕೆ ಬರಲು ಆಯಾ ಇಲಾಖೆಗಳ ಹಂತದಲ್ಲಿ ಅಧಿಸೂಚನೆಯಲ್ಲಿ ನಮೂದಾಗಿರುವ ಕೆಲಸದ ಸ್ವರೂಪಗಳಿಗೆ ಸಮಾನವಾಗಿವೆಯೇ ಎಂಬುದನ್ನು ಅಧ್ಯಯನ ಮಾಡಿ, ನಿರ್ಣಯಕ್ಕೆ ಬಂದು ಅಯಾ ಸ್ವರೂಪದ ಕೆಲಸಗಳಿಗೆ ವೇತನ ಅನ್ವಯಿಸಿಕೊಳ್ಳಬಹುದಾಗಿರುತ್ತದೆ.
5) ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಏರಿಕೆಯಾಗುವ ವ್ಯತ್ಯಸ್ಥ ತುಟ್ಟಿಭತ್ಯೆ ದರಗಳನ್ನು ಸೇರಿಸಿ ಪಾವತಿಸತಕ್ಕದ್ದು.
6) ವಿರಾಮವು ಒಳಗೊಂಡಂತೆ ಒಂದು ದಿನಕ್ಕೆ ಎಂಟು ಘಂಟೆಗಳ ಕೆಲಸಕ್ಕಾಗಿ ಕನಿಷ್ಠ ವೇತನವಿದ್ದು, ಎಂಟು ತಾಸಿಗಿಂತಲೂ ಹೆಚ್ಚಿನ ಕೆಲಸಕ್ಕಾಗಿ ಹೆಚ್ಚುವರಿ ಭತ್ಯೆಯನ್ನು ಘಂಟೆಯು ಹೆಚ್ಚಾದಂತೆ ದ್ವಿಗುಣ ದರದಲ್ಲಿ ನೀಡುವುದು. ವೇತನವನ್ನು ಲೆಕ್ಕ ಹಾಕುವಾಗ, ಮಾಹೆಯ 4 ರಜಾದಿನಗಳನ್ನೂ ಕೂಡ ಪರಿಗಣಿಸತಕ್ಕದ್ದು.
ತಿಂಗಳ ವೇತನ = ದಿನದ ವೇತನ = ಘಂಟೆಯ ವೇತನ
26ದಿನ 8 ತಾಸು
7) ಒಂದು ದಿನದ ಕೆಲಸ ಎಂದರೆ ಎಂಟು (8) ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು, ಕಾರ್ಮಿಕರನ್ನು ಎಂಟು (8) ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ಅಥವಾ ಕಾರ್ಮಿಕರು ಕೆಲಸ ನಿರ್ವಹಿಸಿದ್ದಲ್ಲಿ, ಅಂತಹ ಕಡಿಮೆ ಅವಧಿಯ ಪ್ರಮಾಣಕ್ಕನುಗುಣವಾಗಿ ಕನಿಷ್ಠ ವೇತನವನ್ನು ಕರ್ನಾಟಕ ಕನಿಷ್ಠ ವೇತನ ನಿಯಮಗಳು, 1958ರ ನಿಯಮ 27 ರನ್ವಯ ಆ ಕೆಲಸದ ವರ್ಗಕ್ಕೆ ನಿಗದಿಪಡಿಸಿರುವ ದಿನವೊಂದರ ಕನಿಷ್ಠ ವೇತನವನ್ನು ಗಂಟೆಗಳ ಕನಿಷ್ಠ ವೇತನವನ್ನಾಗಿ ಲೆಕ್ಕ ಹಾಕಿ, ಸಂಬಂಧಿಸಿದ ಕಾರ್ಮಿಕರಿಗೆ ಉದ್ಯೋಗದಾತರು ಪಾವತಿಸತಕ್ಕದ್ದು,
8) ಒಂದು ತಿಂಗಳಿನ ನಾಲ್ಕು ರಣಾ ದಿವಸಗಳಲ್ಲಿ ಕಾರ್ಮಿಕನು ಕೆಲಸ ಮಾಡಲು ಇಚ್ಛಿಸಿದಲ್ಲಿ ದ್ವಿಗುಣ ದಿನಭತ್ಯೆ ದರವನ್ನು ಹೆಚ್ಚಿನ ಭತ್ಯೆಯನ್ನಾಗಿ ಪ್ರತಿ ದಿನಕ್ಕೆ ಅವನು/ಅವಳು ಪಡೆಯುತ್ತಾರೆ.
9.) ಮಾಲೀಕರ ಭಾಗದ ಇ.ಎಸ್.ಐ./ಪಿ.ಎಫ್. ವಂತಿಗೆ ಹಣವನ್ನು ನೌಕರರ ಭಾಗದ ಇ.ಎಸ್.ಐ/ಪಿ.ಎಫ್ ವಂತಿಗೆಗೆ ಸೇರಿಸಿ, ಮಾಲೀಕರು ನೌಕರರ ಇ.ಎಸ್.ಐ / ಪಿ.ಎಫ್ ಖಾತೆಗೆ ಜಮಾ ಮಾಡತಕ್ಕದ್ದು
10) ಮಾನವ ಸಂಪನ್ಮೂಲ ಪೂರೈಸುವ ಗುತ್ತಿಗೆದಾರ ಸಂಸ್ಥೆಗಳ ಮೇಲೆ ಮೂಲ ಗುತ್ತಿಗೆದಾರರು ಈ ಕೆಳಕಂಡ ಅಂಶಗಳ ಬಗ್ಗೆ ನಿಗಾ ವಹಿಸತಕ್ಕದ್ದು.:-
ಅ) ಮೇಲಿನ ನಿಯಮಗಳಂತೆ, ವೇತನವನ್ನು ಪಾವತಿಸತಕ್ಕದ್ದು.
ಆ) ಪ್ರತಿ ತಿಂಗಳು 5ನೇ ದಿನಾಂಕದೊಳಗೆ ನೌಕರರ ಬ್ಯಾಂಕ್ ಖಾತೆಗೆ ವೇತನದ ಹಣವನ್ನು ಜಮಾ ಮಾಡತಕ್ಕದ್ದು.
ಇ) ಕ್ರಮಬದ್ಧವಲ್ಲದ ಯಾವುದೇ ಕಟಾವಣೆಗಳನ್ನು ಮಾಡಕೂಡದು.
ಈ) ನೌಕರರ ಇ.ಎಸ್.ಐ /ಪಿ.ಎಫ್ ನೊಂದಾಯಿಸಿದ ನೋಂದಾವಣೆ ಸಂಖ್ಯೆಗಳಿಗೆ ಅನುಗುಣವಾಗಿ ಇ.ಎಸ್.ಐ / ಪಿ.ಎಫ್ ವಂತಿಗೆ ಹಣವನ್ನು ಗುತ್ತಿಗೆದಾರ ಕಟಾಯಿಸಿ, ನಿರ್ವಹಿಸಿರುವ ದಾಖಲೆ ಪ್ರಸ್ತುತ ಅವಧಿಗಳಿಗೆ ಸಂಬಂಧಿಸಿರುವುದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
11) ನೌಕರರ ಹಾಜರಾತಿಯನ್ನು ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ (AEBAS)ಯ ಮುಖಾಂತರ ನಿರ್ವಹಿಸತಕ್ಕದ್ದು ಹಾಗೂ (AEBAS) ವ್ಯವಸ್ಥೆಯ ಮೂಲಕ ಹಾಜರಾತಿಯನ್ನು ನಿರ್ವಹಿಸಲಾಗದ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಹಾಜರಾತಿಯನ್ನು ಸೂಕ್ತ ವ್ಯವಸ್ಥೆಯ ಮೂಲಕ ನಿರ್ವಹಿಸತಕ್ಕದ್ದು.
12) ಕನಿಷ್ಠ ವೇತನ ದರಗಳು ಶಾಸನಬದ್ಧ ಪರಿಮಿತಿಯಾಗಿರುವುದರಿಂದ, ಕನಿಷ್ಠ ವೇತನ ದರಗಳನ್ನು ನಮೂದಿಸದೆ ಟೆಂಡರ್ ದಾಖಲೆಯಲ್ಲಿ ಕೇವಲ ಸೇವಾ ಶುಲ್ಕವನ್ನು” ಮಾತ್ರ ನಮೂದಿಸುವ ಅವಕಾಶವನ್ನು ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆಗಳಿಗೆ ಕಲ್ಪಿಸುವ ಷರತ್ತಿನೊಂದಿಗೆ ಟೆಂಡರನ್ನು ಪ್ರಕಟಿಸತಕ್ಕದ್ದು.
ಟೆಂಡರ್‌ನಲ್ಲಿ ಭಾಗವಹಿಸುವ ಎಲ್ಲಾ ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆಗಳ ಪೂರ್ವಾಪರಗಳನ್ನು ಪರಿಶೀಲಿಸಿ,
(ಅ) ಸದರಿ ಸಂಸ್ಥೆಗಳು ಈ ಹಿಂದೆ ನೌಕರರ ಇ.ಎಸ್.ಐ ಮತ್ತು ಪಿ.ಎಫ್ ವಂತಿಗೆಯನ್ನು ಸರಿಯಾಗಿ ಪಾವತಿಸಿರುವ ಕುರಿತು ಹಿಂದಿನ ಕೆಲವು ವರ್ಷಗಳ ದಾಖಲೆಗಳನ್ನು ಪರಿಶೀಲಿಸಬೇಕು
(ಆ) ಇತರೆ ಅನ್ವಯವಾಗುವ ಕಾರ್ಮಿಕ ಕಾನೂನುಗಳನ್ನು ಪಾಲಿಸಿವೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
(ಇ) ಸದರಿ ಗುತ್ತಿಗೆದಾರರು ಈ ಹಿಂದೆ ಯಾವುದೇ ಸಕ್ಷಮ ನ್ಯಾಯಾಲಯದಿಂದ ಕಾರ್ಮಿಕ ಕಾನೂನಿನ ಉಲ್ಲಂಘನೆಗಾಗಿ ದಂಡನೆಗೊಳಗಾಗಿಲ್ಲದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಟೆಂಡರ್ ದಾಖಲೆಗಳಲ್ಲಿ ಮೇಲ್ಕಂಡ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಟೆಂಡರ್ ದಾಖಲೆಯನ್ನು ಪ್ರಕಟಿಸತಕ್ಕದ್ದು.
ಆದಾಗ್ಯೂ ಸಹ ಅನೇಕ ಸರ್ಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಅಂಗ-ಸಂಸ್ಥೆಗಳು ಈ ಸುತ್ತೋಲೆಯಲ್ಲಿನ ಅಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದು, ನಿಗದಿಪಡಿಸಿರುವ ಕನಿಷ್ಠ ವೇತನಗಳನ್ನು ಪ್ರತಿ ತಿಂಗಳು ಪಾವತಿಸುತ್ತಿಲ್ಲದೆ ಇರುವುದು ಹಾಗೂ ನೌಕರರ ವೇತನದಿಂದ ಕಟಾಯಿಸಿದ ಪಿ.ಎಫ್, ಇ.ಎಸ್.ಐ ವಂತಿಗೆಗೆ ಮಾಲೀಕರ ಭಾಗದ ವಂತಿಗೆಯನ್ನು ಸೇರಿಸಿ ಇ.ಎಸ್.ಐ. ಪಿ.ಎಫ್ ಖಾತೆಗೆ ಜಮಾ ಮಾಡುತ್ತಿಲ್ಲದೆ ಇರುವುದು ಸರ್ಕಾರದ ಗಮನಕ್ಕೆ ಬಂದಲ್ಲಿ, ಸರ್ಕಾರವು ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದೆಂದು ಈ ಮೂಲಕ ತಿಳಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




