- 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹9,450 ಕುಸಿತ!
- 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲಿ ಬರೋಬ್ಬರಿ ₹10,320 ಇಳಿಕೆ.
- ಮದುವೆ ಸೀಸನ್‌ನಲ್ಲಿ ಆಭರಣ ಖರೀದಿಸುವವರಿಗೆ ಇದುವೇ ಸುವರ್ಣಾವಕಾಶ.
ಮನೆಯಲ್ಲಿ ಮದುವೆ, ಮುಂಜಿ ಇಟ್ಟುಕೊಂಡು ಬಂಗಾರ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ‘ಚಿನ್ನದ ರೇಟ್ ಕೇಳಿದ್ರೆ ತಲೆ ತಿರುಗುತ್ತೆ, ಕಮ್ಮಿ ಆದಾಗ ತಗೊಳ್ಳೋಣ’ ಅಂತ ಕಾಯ್ತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿ ಒಂದು ಭರ್ಜರಿ ಗುಡ್ ನ್ಯೂಸ್ ಇದೆ!
ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಅಂತ ಪಾತಾಳಕ್ಕೆ ಕುಸಿದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದಿನ (ಮಾರ್ಚ್ 23) ಚಿನ್ನದ ದರವನ್ನು ನೋಡಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳಿಂದಾಗಿ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡಿದೆ.
10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 10 ಸಾವಿರ ರೂ. ಇಳಿಕೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ನಿನ್ನೆ ಮೊನ್ನೆಯವರೆಗೂ ಆಕಾಶ ನೋಡುತ್ತಿದ್ದ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಇಂದು ಪ್ರತಿ 10 ಗ್ರಾಂಗೆ ಬರೋಬ್ಬರಿ ₹10,320 ರಷ್ಟು ಇಳಿಕೆಯಾಗಿದೆ. ಅಂದರೆ, ನೀವು 10 ಗ್ರಾಂ (ಒಂದು ತೊಲ) ಆಭರಣ ಚಿನ್ನ (22 ಕ್ಯಾರೆಟ್) ಖರೀದಿಸಿದರೆ ನಿಮ್ಮ ಜೇಬಿನಲ್ಲಿ ನೇರವಾಗಿ ₹9,450 ಉಳಿತಾಯವಾಗಲಿದೆ. ಇಷ್ಟು ದೊಡ್ಡ ಮಟ್ಟದ ಕುಸಿತ ಇತ್ತೀಚಿನ ದಿನಗಳಲ್ಲಿ ಇದೇ ಮೊದಲು!
ಚಿನ್ನ-ಬೆಳ್ಳಿ ಬೆಲೆ ಇಂದು, ಮಾರ್ಚ್ 24, 2026: Gold Price Today
ಇಂದು ಬೆಳಿಗ್ಗೆ 7:00AM ಗಂಟೆಗೆ ನಾವು ಚಿನ್ನದ ಮಾರುಕಟ್ಟೆ ದರ ಪರಿಶೀಲಿಸಿದ ಪ್ರಕಾರ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ:₹1,35,640 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ₹1,24,340 ರೂ. ಬೆಳ್ಳಿ ಬೆಲೆ 1 ಕೆಜಿ: ₹2,29,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,173
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹12,434
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹13,564
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹81,384
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹99,472
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,08,512
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,01,730
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹1,24,340
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹1,35,640
ನೂರು ಗ್ರಾಂ ಚಿನ್ನ (100GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹10,17,300
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ₹12,43,400
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ₹13,56,400
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ
| ನಗರ | ಇಂದು 22K |
|---|---|
| ಚೆನ್ನೈ | ₹12,759 |
| ಮುಂಬೈ | ₹12,434 |
| ದೆಹಲಿ | ₹12,434 |
| ಕೋಲ್ಕತ್ತಾ | ₹12,434 |
| ಬೆಂಗಳೂರು | ₹12,434 |
| ಹೈದರಾಬಾದ್ | ₹12,434 |
| ಕೇರಳ | ₹12,434 |
| ಪುಣೆ | ₹12,434 |
| ವಡೋದರಾ | ₹12,439 |
| ಅಹಮದಾಬಾದ್ | ₹12,439 |
ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ)
| ನಗರ | 1 ಕೆಜಿ |
|---|---|
| ಚೆನ್ನೈ | ₹2,34,900 |
| ಮುಂಬೈ | ₹2,29,900 |
| ದೆಹಲಿ | ₹2,29,900 |
| ಕೋಲ್ಕತ್ತಾ | ₹2,29,900 |
| ಬೆಂಗಳೂರು | ₹2,29,900 |
| ಹೈದರಾಬಾದ್ | ₹2,29,900 |
| ಕೇರಳ | ₹2,29,900 |
| ಪುಣೆ | ₹2,29,900 |
| ವಡೋದರಾ | ₹2,29,900 |
| ಅಹಮದಾಬಾದ್ | ₹2,29,900 |
⚠️ ಪ್ರಮುಖ ಎಚ್ಚರಿಕೆ: ಮೇಲೆ ನೀಡಲಾದ ಬೆಲೆಗಳು ಇಂದಿನ ಆರಂಭಿಕ ಮಾರುಕಟ್ಟೆ ಬೆಲೆಗಳಾಗಿವೆ (Indicative Prices). ನೀವು ಆಭರಣ ಅಂಗಡಿಗೆ ಹೋದಾಗ, ಈ ಬೆಲೆಯ ಜೊತೆಗೆ 3% ಜಿಎಸ್‌ಟಿ (GST) ಮತ್ತು ಅಂಗಡಿಯವರ ಮೇಕಿಂಗ್ ಚಾರ್ಜ್ (ತಯಾರಿಕಾ ವೆಚ್ಚ) ಸೇರ್ಪಡೆಯಾಗುತ್ತದೆ. ಹಾಗಾಗಿ ಬಿಲ್ ಮಾಡುವ ಮುನ್ನ ಒಮ್ಮೆ ವಿಚಾರಿಸಿ.
ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕುಸಿತ ಆಗಿರುವುದು ತೀರಾ ಅಪರೂಪ. ನಿಮಗೆ ಮದುವೆ ಅಥವಾ ಶುಭಕಾರ್ಯಗಳಿಗೆ ಬಂಗಾರ ಬೇಕಿದ್ದರೆ, ಇದೇ ಬೆಸ್ಟ್ ಟೈಮ್. ತಕ್ಷಣವೇ ನಿಮ್ಮ ನೆಚ್ಚಿನ ಜ್ಯುವೆಲ್ಲರಿಗೆ ಹೋಗಿ, ಇಂದಿನ ಕಮ್ಮಿ ರೇಟ್ ಅನ್ನು ‘ಫಿಕ್ಸ್’ ಮಾಡಿಕೊಂಡು ಅಡ್ವಾನ್ಸ್ ಕೊಟ್ಟು ಬನ್ನಿ. ಏಕೆಂದರೆ ಮಾರುಕಟ್ಟೆಯ ಏರಿಳಿತಗಳಿಂದಾಗಿ ನಾಳೆಯೇ ರೇಟ್ ಮತ್ತೆ ದಿಢೀರ್ ಏರಿಕೆಯಾಗುವ ಸಾಧ್ಯತೆಯೂ ಇರುತ್ತದೆ.
🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!
ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.
ಇಂದು ಆಭರಣ ಮಾಡಿಸಲು ಯಾವ ಚಿನ್ನ ಖರೀದಿಸುವುದು ಉತ್ತಮ?
ಬೆಂಗಳೂರಿನ ದರಕ್ಕೂ ನಮ್ಮ ಊರಿನ ದರಕ್ಕೂ ವ್ಯತ್ಯಾಸವಿರುತ್ತದೆಯೇ?
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

NeedsOfPublic.in ನ ಸಂಸ್ಥಾಪಕರಾಗಿರುವ ಲಿಂಗರಾಜ್ ರಾಮಾಪುರ ಅವರು, ಸೈಟ್ನ ಸಂಪಾದಕೀಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಐಟಿ (BCA, MCA) ಹಿನ್ನೆಲೆ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು, 2017ರಲ್ಲಿ ಡಿಜಿಟಲ್ ಮಾಧ್ಯಮ ಕ್ಷೇತ್ರ ಪ್ರವೇಶಿಸಿದರು. 9 ವರ್ಷಗಳ ಡಿಜಿಟಲ್ ಪತ್ರಿಕೋದ್ಯಮದ ಅನುಭವ ಹೊಂದಿರುವ ಇವರು, ಡೇಟಾ-ಆಧಾರಿತ ವರದಿಗಾರಿಕೆ ಮತ್ತು ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.


WhatsApp Group




