ಉಚಿತ ಅಕ್ಕಿ ಜೊತೆ ₹ 170 ರೂ ಹಣ ಪಡೆಯಲು ಕಡ್ಡಾಯವಾಗಿ ಕೆಲಸ ಮಾಡಬೇಕು. ತಪ್ಪದೇ ಓದಿ

Picsart 23 07 04 07 52 16 648 scaled

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸಿಗುವ 5 kg ಅಕ್ಕಿಯ ಬದಲು ಬರುವ 170/- ರೂ ಗಳನ್ನು ನಿಮ್ಮ ಬ್ಯಾಂಕ್ ಗೆ ಜಮಾ ಆಗಬೇಕೆಂದರೆ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅನ್ನಭಾಗ್ಯ ಯೋಜನೆಯ 170 ರೂಗಳು ಖಾತೆಗೆ ಬರಲು ಹೀಗೆ ಮಾಡಿ :

ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ , ರೇಷನ್ ಕಾರ್ಡ್ ಹೊಂದಿದವರಿಗೆ ಸರ್ಕಾರವು ಪ್ರತಿಯೊಬ್ಬರಿಗೂ 10 kg ಅಕ್ಕಿಯನ್ನು ಉಚಿತವಾಗಿ ಕೊಡಲಾಗುತ್ತದೆ ಎಂದು ಘೋಷಣೆಯನ್ನು ಮಾಡಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಸರ್ಕಾರವು 10 kg ಅಕ್ಕಿಯ ಬದಲು 5 kg ಅಕ್ಕಿಯನ್ನು ನೀಡಲಾಗುವುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ, ಇನ್ನು ಉಳಿದ 5kg ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಹಣವು ನೇರವಾಗಿ ಜನರ ಬ್ಯಾಂಕ್ ಗೆ ಜಮಾ ಮಾಡಲಾಗುವುದು. ಪ್ರತಿ ಕೇಜಿಗೆ 34 ರೂ ನಂತೆ 170 ರೂಪಾಯಿಯನ್ನು ಸರ್ಕಾರವು  ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರ ಬ್ಯಾಂಕ್ ಗೆ ಹಾಕಲಾಗುವುದು. ಪ್ರತಿ ತಿಂಗಳಿಗೂ 170/- ಜಮಾ ಮಾಡಲಾಗುವುದು.

Untitled 1 scaled

ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲು ಕೆಳಗಿನ ವಿಷಯಗಳನ್ನು ಕಡ್ಡಾಯವಾಗಿ ಮಾಡಬೇಕು:

ಮೊದಲನೇಯದಾಗಿ, ನಿಮ್ಮ ಪಡೆತರ ಚೀಟಿ ( ರೇಷನ್ ಕಾರ್ಡ್) ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆಯೇ ಅನ್ನುವುದನ್ನು ಪರಿಶೀಲಿಸಿ, ಇಲ್ಲವಾದಲ್ಲಿ ಶೀಘ್ರದಲ್ಲೆ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿ.

ಎರಡೇನೇಯದಾಗಿ, ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಸೀಡಿಂಗ್ ಆಗಿಬೇಕು, ಅಂದರೆ NPC Maping ಆಗಿರ್ಬೇಕು ನಿಮ್ಮ ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಸರ್ಕಾರವು ಡಿಬಿಟಿ ಮುಖಾಂತರ ಹಣವನ್ನು ಜಮಾಯಿಸುತ್ತದೆ, ಹಾಗಾಗಿ ಪಡೆತದಾರರ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಸೀಡಿಂಗ್ ಮಾಡಬೇಕಾಗುತ್ತದೆ ಮತ್ತು NPC ಸರ್ವರ್ ಗೆ ಮ್ಯಾಚಿಂಗ್ ಆಗಬೇಕಾಗುತ್ತದೆ.

telee

ಇನ್ನು ಮೂರನೇಯದಾಗಿ, ನಿಮ್ಮ ಹತ್ತಿರವಿರುವ ರೇಷನ್ ಕಾರ್ಡ್ ಹಂಚುವ ಅಂಗಡಿಗಳಲ್ಲಿ ನಿಮ್ಮ ಕೆಲವೊಂದು ದಾಖಾಲೆಗಳನ್ನು ಸಲ್ಲಿಸಬೇಕಾಗುತ್ತದೆ. ರೇಷನ್ ಕಾರ್ಡ್ ನಕಲು ಪ್ರತಿ, ಆಧಾರ್ ಕಾರ್ಡ್ ನ ನಕಲು ಪ್ರತಿ, ಬ್ಯಾಂಕ್ ಅಕೌಂಟ್ ನಕಲು ಪ್ರತಿ. ಈ ಮೂರು ದಾಖಲೆಗಳನ್ನು ರೇಷನ್ ಕಾರ್ಡ್ ಅಂಗಡಿಯಲ್ಲಿ ಸಲ್ಲಿಸಬೇಕು.

ನೀವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ಪಡೆಯಬೇಕಾದರೆ ಈ ಮೇಲಿನ ಮೂರು ವಿಷಯಗಳನ್ನು ಗಮನದಲಿಟ್ಟುಕೊಂಡು ಕಡ್ಡಾಯವಾಗಿ ಪಾಲಿಸಬೇಕು. ಈ ವಿಷಯವನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯವಾಗಿದೆ. ಆದ್ದರಿಂದ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಬಂಧುಗಳಿಗೂ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

One thought on “ಉಚಿತ ಅಕ್ಕಿ ಜೊತೆ ₹ 170 ರೂ ಹಣ ಪಡೆಯಲು ಕಡ್ಡಾಯವಾಗಿ ಕೆಲಸ ಮಾಡಬೇಕು. ತಪ್ಪದೇ ಓದಿ

Leave a Reply

Your email address will not be published. Required fields are marked *

error: Content is protected !!