ಕರ್ನಾಟಕ ಸರ್ಕಾರವು ರಾಜ್ಯದ ನಿರುದ್ಯೋಗಿ ಯುವಕರಿಗೆ ಭರವಸೆಯ ಮೋಡವನ್ನು ತಂದಿದೆ. ಡಿಸೆಂಬರ್ 26 ರಂದು ಪ್ರಾರಂಭವಾಗಿರುವ ಯುವ ನಿಧಿ ಯೋಜನೆ (Yuva Nidhi Scheme)ಯಡಿ, ಪದವಿಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ಯುವಕರಿಗೆ ಮಾಸಿಕ ₹ 1500- ₹ 3,000 ಭತ್ಯೆ ನೀಡಲಾಗುತ್ತದೆ. ಈ ಯೋಜನೆಗೆ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಗಳು ಈ ವರದಿದಲ್ಲಿ ನೀಡಲಾಗಿದೆ, ವರದಿಯನ್ನು ಕೊನೆಯ ವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯುವ ನಿಧಿ ಯೋಜನೆ (Yuva Nidhi Scheme) ಗೆ ಚಾಲನೆ :
ಡಿಸೆಂಬರ್ 26, ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಗೆ (Yuva Nidhi Scheme) ಅನುಷ್ಠಾನಕ್ಕೆ ಚಾಲನೆ ನೀಡಿದರು. ಈ ಯೋಜನೆಯಡಿ, ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿ(Swami Vivekananda Jayanti) ಯಂದು ಫಲಾನುಭವಿಗಳಿಗೆ ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ಹಣವನ್ನು ಠೇವಣಿ ಮಾಡಲಾಗುತ್ತದೆ. ಪದವೀಧರ ಮತ್ತು ಡಿಪ್ಲೊಮಾಪಡೆದ ನಿರುದ್ಯೋಗಿ ಯುವಕರು ಫಲಾನುಭವಿಗಳಾಗಲು ಬಯಸುವವರು ಡಿಸೆಂಬರ್ 26,2023 ರಿಂದ ಅರ್ಜಿಯನ್ನು ಸಲ್ಲಿಬಹುದು.
ಯುವ ನಿಧಿ ಯೋಜನೆಯು ಕರ್ನಾಟಕದ ಯುವ ಜನರಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವ ನಿರ್ಣಾಯಕ ಹೆಜ್ಜೆಯಾಗಿದೆ. ಈ ಯೋಜನೆಯು ರಾಜ್ಯದ ಯುವ ಜನಸಂಖ್ಯೆಯಲ್ಲಿ ಭಾರಿ ಉತ್ಸಾಹವನ್ನುಂಟುಮಾಡಿದೆ. ಹೀಗಿರುವಾಗ ಈ ಯೋಜನೆಗೆ ಸೇರಿದಂತೆ ಅರ್ಹತಾ ಮಾನದಂಡಗಳು , ಅರ್ಜಿ ಸಲ್ಲಿಸುವ ಪ್ರಕಾರ, ಬೇಕಾಗಿರುವ ದಾಖಲೆಗಳು ಮತ್ತು ಇನ್ನಿತರೇ ಮಾಹಿತಿಗಳು ಈ ಕೆಳಗಿನಂತಿವೆ :
ಯುವ ನಿಧಿ ಯೋಜನೆಗೆ ಅರ್ಜಿ ಹಾಕಲು ಅರ್ಹತೆಗಳು(Eligibility):
2023 ರಲ್ಲಿ ಪದವಿ ಅಥವಾ ಡಿಪ್ಲೊಮ ಪಡೆದಿರಬೇಕು.
ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಪದವಿ ಅಥವಾ ಡಿಪ್ಲೊಮ ಪಡೆದ ದಿನಾಂಕದಿಂದ 180 ದಿನಗಳವರೆಗೆ ಉದ್ಯೋಗ ಹೊಂದಿರಬಾರದು.
ಸ್ವಯಂ ಘೋಷಣೆ ಮತ್ತು ಪ್ರಮಾಣ ಪತ್ರದ ಮೂಲಕ ನಿರುದ್ಯೋಗಿಯಾಗಿದ್ದಾಗಿ ದೃಢಪಡಿಸಬೇಕು.
ಉತ್ತೀರ್ಣರಾದ ದಿನಾಂಕದಿಂದ 6 ತಿಂಗಳವರೆಗೆ ತಮ್ಮ ಅಧಿಕೃತ ಬ್ಯಾಂಕ್ ಖಾತೆಗಳ ವಹಿವಾಟು ಸ್ಟೇಟ್‌ಮೆಂಟ್ ಪ್ರತಿ ಸಲ್ಲಿಸಬೇಕು.
ಹಾಗೆಯೇ ಅರ್ಜಿ ಸಲ್ಲಿಸಲು ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಖಡ್ಡಾಯವಾಗಿ ಲಿಂಕ್ ಮಾಡಿರಬೇಕು.
ನಿರುದ್ಯೋಗ ಸ್ಥಿತಿಯ ಪರಿಶೀಲನೆ
ಈ ಪರಿಶೀಲನೆಯು ನಿಯಮಿತವಾಗಿ ನಡೆಯುತ್ತದೆ ಮತ್ತು ಇದರಲ್ಲಿ ವಿವಿಧ ಮಾನದಂಡಗಳು ಒಳಗೊಂಡಿರುತ್ತದೆ. ಯುವನಿಧಿ ಯೋಜನೆಯಡಿ ಭತ್ಯೆ ಪಡೆಯುತ್ತಿರುವ ನಿರುದ್ಯೋಗಿಗಳ ನಿರುದ್ಯೋಗ ಸ್ಥಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಲಾಗುತ್ತದೆ. ಉದ್ಯೋಗ ಪಡೆದ ನಂತರ ಈ ಬಗ್ಗೆ ತಪ್ಪು ಘೋಷಣೆ ಮಾಡಿದರೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.
ಯುವ ನಿಧಿ ಧನಸಹಾಯ ವಿವರ:
ಪದವೀಧರ ನಿರುದ್ಯೋಗಿಗಳಿಗೆ: ಪ್ರತಿ ತಿಂಗಳು ರೂ.3000.
ಡಿಪ್ಲೊಮ ಪಾಸ್ ನಿರುದ್ಯೋಗಿಗಳಿಗೆ: ಪ್ರತಿ ತಿಂಗಳು ರೂ.1500.
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸಬೇಕು. ಹಲವು ಸರ್ಕಾರಿ ಯೋಜನೆಗಳ ಸವಲತ್ತು ಪಡೆಯುವ ತಾಣ ಇದು. ಇದರಲ್ಲಿ ಈಗ ಯುವ ನಿಧಿ ಕೂಡಾ ಸೇರ್ಪಡೆಯಾಗಿದೆ.
ಯುವನಿಧಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://sevasindhu.karnataka.gov.in
ಅಗತ್ಯವಿರುವ ದಾಖಲೆಗಳು(Documents):
ಪದವೀಧರರಿಗೆ:
ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ.
ಎಸ್ಸೆಸ್ಸೆಲ್ಸಿ ಅಂಕಪಟ್ಟಿ,
ಪಿಯುಸಿ ಅಂಕಪಟ್ಟಿ,
ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ (ಪಿಡಿಸಿ),
ಡಿಪ್ಲೊಮಾ ಅಭ್ಯರ್ಥಿಗಳಿಗೆ :
ಕರ್ನಾಟಕ ರಾಜ್ಯದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ.
ಎಸ್ಸೆಸ್ಸೆಲ್ಸಿ ಅಂಕಪಟ್ಟಿ,
ಪಿಯುಸಿ ಅಂಕಪಟ್ಟಿ,
ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ.
ನೀವು ಕೂಡ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೋಳಿಸಿದ್ದೇಯಾದಲ್ಲಿ, ಯುವ ನಿಧಿ ಯೋಜನೆಗೆ ಅರ್ಹರಾಗಿದ್ದರೆ ತಪ್ಪದೆ ಈ ಯೋಜನೆಯ ಪ್ರಯೋಜನಯನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಿ. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಿ ಮತ್ತು ಅವರೊಂದಿಗೆ ಈ ಯೋಜನೆಯ ಮಾಹಿತಿಯನ್ನು ಹಂಚಿಕೊಳ್ಳಿ. ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಜನವರಿ 1 ರಿಂದ ಹೊಸ ರೂಲ್ಸ್.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಸಿಮ್ ಕಾರ್ಡ್, ಇದ್ದವರು ತಪ್ಪದೆ ತಿಳಿದುಕೊಳ್ಳಿ
- ಗೃಹಲಕ್ಷಿ ಹಣ ಸಿಗದೇ ಇದ್ದೋರಿಗೆ ಸ್ಥಳದಲ್ಲಿಯೇ ಪರಿಹಾರ, ಇಲ್ಲಿ ಭೇಟಿ ಮಾಡಿ ಹಣ ಪಡೆಯಿರಿ.
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಭರ್ಜರಿ ಆಫರ್, ತಪ್ಪದೇ ತಿಳಿದುಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






