ಆಧಾರ್ ಕಾರ್ಡ್ ಹೊಂದಿರುವ 99% ಜನರಿಗೆ ಈ ಮಾಹಿತಿ ಗೊತ್ತಿಲ್ಲ..! ಗೊತ್ತಿದ್ರೆ ನಿಮಗೆ ಒಳ್ಳೆಯದು

Picsart 23 06 18 14 08 46 605 scaled

ಎಲ್ಲರಿಗೂ ನಮಸ್ಕಾರ, ಈ ಪ್ರಸ್ತುತ ಲೇಖನದಲ್ಲಿಆಧಾರ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಜನ್ಮದಿನಾಂಕ, ವಿಳಾಸ, ಇತ್ಯಾದಿಯನ್ನು ಎಷ್ಟು ಬಾರಿ ನವೀಕರಿಸಬಹುದು? ಅಥವಾ ಆಧಾರ್ ನವೀಕರಣಗಳ ಮೀತಿಯ ಬಗ್ಗೆ ನಿಮಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಧಾರ್ ಕಾರ್ಡಿನ ನವೀಕರಣವನ್ನು ಎಷ್ಟು ಬಾರಿ ಮಾಡಬಹುದು?:

image 170 1024x683 1

How many times Aadhaar card can be renewed?: ಆಧಾರ್ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಭಾರತದ ನಾಗರಿಕರ ಗುರುತಿನ ದಾಖಲೆಯಾಗಿದೆ, ಇದನ್ನು ನಾಗರಿಕರು ಸ್ವಯಂಪ್ರೇರಣೆಯಿಂದ ಪಡೆಯಬಹುದು. ಆಧಾರ್ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವುದು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಂತಹ ವಿವಿಧ ಉದ್ದೇಶಗಳಲ್ಲಿ ಅತ್ಯಂತ ಮಹತ್ವದ ಪತ್ರವನ್ನು ವಹಿಸುತ್ತದೆ. ಹೀಗಿರುವಾಗ ಆಧಾರ್ ನಲ್ಲಿರುವ ಡೇಟಾವನ್ನು ಸರಿಯಾಗಿರಿಸುವುದು ಅತ್ಯಂತ ಮುಖ್ಯವಾಗಿದೆ. ನಿಮ್ಮ ಆಧಾರ್ ಡೇಟಾಗಳಾದ ಹೆಸರು, ಜನ್ಮದಿನ, ವಿಳಾಸ, ಮೊಬೈಲ್ ನಂಬರ್, ಇವುಗಳನ್ನು ನವೀಕರಿಸಲು ಅವಕಾಶವಿದೆ. ಆದರೆ ಪ್ರತಿ ಬಾರಿಯೂ ಈ ವಿವರಗಳನ್ನು ನವೀಕರಿಸಲು ಸಾಧ್ಯವಿಲ್ಲ. ಆಧಾರ್ ನವೀಕರೀಸಲು ಕೆಲವೊಂದು ಮಿತಿಗಳು ಕೂಡ ಇವೆ. ಭಾರತದ ವಿಶಿಷ್ಟ ಗುರುತು (UIDAI) ಇದನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬಹುದು ಎಂಬುದರ ಕುರಿತು ಕೆಲವು ಮಿತಿಗಳನ್ನು ಹೊಂದಿದೆ. ಈ ಲಿಮಿಟ್ಸ್ ಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ.

Untitled 1 scaled

ಹೆಸರನ್ನು ಎಷ್ಟು ಬಾರಿ ನವೀಕರಿಸಬಹುದು :

ಆಧಾರ್ ಡೇಟಾದಲ್ಲಿ ಹೆಸರನ್ನು ಎರಡು ಬಾರಿ ತಿದ್ದುಪಡೆ ಮಾಡಲು ಅವಕಾಶವಿರುತ್ತದೆ.
ಮೂರನೇ ಬದಲಾವಣೆಯ ಸಂದರ್ಭದಲ್ಲಿ ವಿಶೇಷ ವಿನಂತಿಯ ಮೇರೆಗೆ UIDAI ನ ಪ್ರಾದೇಶಿಕ ಶಾಖೆಯಿಂದ ಅಸಾಧಾರಣ ಪ್ರಕರಣಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಇನ್ನು ಸಣ್ಣಪುಟ್ಟ ಸ್ಪೆಲ್ಲಿಂಗ್ ತಿದ್ದುಪಡಿಮಾಡಲು ಅವಕಾಶವಿರುತ್ತದೆ, ಆದರೇ ಮದುವೆಯ ನಂತರ ಮಾತ್ರ ಈ ತಿದ್ದುಪಡೆಯನ್ನು ಮಾಡಲು ಅವಕಾಶವಿದೆ ಮತ್ತು ಈ ಬದಲಾವಣೆಗೆ ರೂ.50 ಶುಲ್ಕ ಅನ್ವಯಿಸುತ್ತದೆ.

ಜನ್ಮದಿನಾಂಕ(DOB) ವನ್ನು ಎಷ್ಟು ಬಾರಿ ನವೀಕರಿಸಬಹುದು?:

ನಾಗರಿಕರು ಆಧಾರ್ ನಲ್ಲಿ ತಮ್ಮ ಜನ್ಮದಿನಂಕವನ್ನು ಒಂದೇ ಸಾರಿ ಬದಲಾವಣೆ ಮಾಡಲು ಅವಕಾಶವಿರುತ್ತದೆ. ಅವರು ಮತ್ತೆ DoB ಅನ್ನು ಬದಲಾವಣೆ  ಮಾಡಲು ನಿಜವಾದ ಅಗತ್ಯವನ್ನು ಹೊಂದಿದ್ದರೆ, UIDAI ನಿಯಮದ ಪ್ರಕಾರ ಮಾನ್ಯವಾದ ಪುರಾವೆ ದಾಖಲೆಯೊಂದಿಗೆ ಯಾವುದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅವರಲ್ಲಿ ವಿನಂತಿ ಮಾಡುವ ಮೂಲಕ ಪ್ರಕ್ರಿಯೆಯನ್ನು ಅನುಸರಿಸಬಹುದು. ಈ ವಿನಂತಿಯನ್ನು ತಿರಸ್ಕಾರಿಸಿದ್ದೆಯಾದಲ್ಲಿ ಬಳಕೆದಾರರು 1947 ಗೆ ಕರೆ ಮಾಡಬಹುದು ಅಥವಾ [email protected] ಗೆ ಭೇಟಿನೀಡಬಹುದು.

ಛಾಯಾಚಿತ್ರ (ಫೋಟೋ) ವನ್ನು ಎಷ್ಟು ಸಾರಿ ಬದಲಾಯಿಸಬಹುದು?:

ಆಧಾರ್ ನಲ್ಲಿ ಫೋಟೋವನ್ನು ಬದಲಾವಣೆ ಮಾಡಲು ಯಾವುದೇ ಮಿತಿಯು ಇರುವುದಿಲ್ಲ. ಅದನ್ನು ಬದಲಾಯಿಸಲು, ಬಳಕೆದಾರರು ಕಡ್ಡಾಯವಾಗಿ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು. ಏಕೆಂದರೆ ಫೋಟೋ ಹಾಗೂ ಫಿಂಗರ್‌ಪ್ರಿಂಟ್‌ಗಳಂತಹ ಬಯೋಮೆಟ್ರಿಕ್ ನವೀಕರಣಗಳನ್ನು ಆನ್‌ಲೈನ್‌ನಲ್ಲಿ ಬದಲಾಯಿಸಲಾಗುವುದಿಲ್ಲ.

telee

 ವಿಳಾಸವನ್ನು ನೀವು ಎಷ್ಟು ಸಾರಿ ಬದಲಾಯಿಸಬಹುದು?:

ಆಧಾರ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಯಾವದೇ ಮಿತಿ ಇರುವುದಿಲ್ಲ.
UIDAI ತನ್ನ ‘ಸ್ವಯಂ-ಸೇವಾ’ ಪೋರ್ಟಲ್ – ssup.uidai.gov.in ಮೂಲಕ ತಮ್ಮ ಆಧಾರ್ ಡೇಟಾಬೇಸ್‌ಗೆ ನೀಡಲಾದ  ವಿಳಾಸದ ವಿವರಗಳಲ್ಲಿ ಬದಲಾವಣೆಗಳನ್ನು ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ.

ನೀವೇನಾದರೂ ನಿಮ್ಮ ಆಧಾರ್ ಕಾರ್ಡಿನಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ ಹೀಗೆ ಏನಾದರೂ ಬದಲಾವಣೆ ಮಾಡಬೇಕಾಗಿದ್ದರೆ, ಎಷ್ಟು ಸಾರಿ ಬದಲಾಯಿಸಬಹುದು ಎಂಬುದನ್ನು ಪರಿಶೀಲಿಸಲು ಈ ಲೇಖನವೂ ಉಪಯುಕ್ತವಾಗಿದೆ. ಹಾಗಾಗಿ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

 ಗೃಹಜ್ಯೊತಿ ಯೋಜನೆಯಡಿ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಕೆ ಆರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

Leave a Reply

Your email address will not be published. Required fields are marked *