Picsart 25 11 15 23 42 57 606 scaled

ಮಲಗುವಾಗ ಮೊಬೈಲ್ ಹತ್ತಿರ ಇಡುವುದು ಎಷ್ಟು ಅಪಾಯಕಾರಿ? WHO ಎಚ್ಚರಿಕೆ ಏನು ಹೇಳುತ್ತದೆ?

Categories:
WhatsApp Group Telegram Group

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿ ಬೆಳೆದುಬಿಟ್ಟಿದೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ನಾವು ಅದರ ಜೊತೆಯಲ್ಲೇ ದಿನವಿಡೀ ಕಾಲ ಕಳೆಯುತ್ತೇವೆ. ಆದರೆ ಹೆಚ್ಚಿನವರು ಇದರಿಂದ ಆಗುವ ಅಪಾಯದ ಬಗ್ಗೆ ಗಮನಕೊಡುವುದಿಲ್ಲ. ಅದರಲ್ಲೂ ಮಲಗುವಾಗ ಮೊಬೈಲ್ ಫೋನ್ ಹತ್ತಿರ ಇಟ್ಟುಕೊಳ್ಳುವ ಅಭ್ಯಾಸದಿಂದ ದೊಡ್ಡ ಪ್ರಮಾಣದ ಅಪಾಯ ಬರಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆದ್ದರಿಂದ ಮೊಬೈಲ್ ಬಳಕೆಯ ಸುರಕ್ಷತೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಈಗಾಗಲೇ ಎಚ್ಚರಿಕೆ ನೀಡಿವೆ. RF (Radio Frequency) ವಿಕಿರಣ, ಬ್ಲೂ ಲೈಟ್, ಮತ್ತು ಬ್ಯಾಟರಿ ಹೀಟ್ ನಿಂದ ಉಂಟಾಗುವ ಅಪಾಯಗಳು ಆರೋಗ್ಯಕ್ಕೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ತಲೆಯ ಹತ್ತಿರ ಫೋನ್ ಇಟ್ಟುಕೊಳ್ಳುವುದರಿಂದ ಕ್ಯಾನ್ಸರ್ ಬರಬಹುದು? ಮಾನಸಿಕ ಆರೋಗ್ಯ ಹಾಳಾಗುವ ಸಾಧ್ಯತೆ ಹೆಚ್ಚು? ಹಾಗಾಗಿ ಮಲಗುವಾಗ ಫೋನ್ ಎಷ್ಟು ದೂರ ಇಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮಲಗುವಾಗ ಮೊಬೈಲ್ ಫೋನ್ ಎಷ್ಟು ದೂರ ಇಡಬೇಕು?:

ಮಲಗುವ ಕೋಣೆಯಲ್ಲಿ ಮೊಬೈಲ್‌ ಇಡಬಾರದು, ಒಂದು ವೇಳೆ ಇಟ್ಟರೆ, ಕನಿಷ್ಠ 3 ಅಡಿ (1 ಮೀಟರ್) ದೂರ ಇರಿಸುವುದು ಉತ್ತಮ. ಇಷ್ಟು ದೂರ ಇಟ್ಟರೆ RF ವಿಕಿರಣದ ತೀವ್ರತೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ.
ಯಾವತ್ತೂ ತಲೆಯ ಕೆಳಗೆ ಅಥವಾ ತಲೆಯ ಬಳಿ ಇಡಬಾರದು. ಒಂದು ವೇಳೆ ಈ ರೀತಿ ಇಟ್ಟರೆ ವಿಕಿರಣದ ಜೊತೆಗೆ ಬ್ಯಾಟರಿ ಹೀಟಿಂಗ್ ಹಾಗೂ ಸ್ಫೋಟದ ಅಪಾಯವೂ ಹೆಚ್ಚಾಗಿ ಇರುತ್ತದೆ. ಅಲಾರಂ ಬೇಕಿದ್ದರೆ ಏರ್‌ಪ್ಲೇನ್ ಮೋಡ್ ಬಳಸಿ, ಅದರ ಜತೆಗೆ WiFi/ Bluetooth ಆಫ್ ಮಾಡುವುದು ಉತ್ತಮ.

ಮೊಬೈಲ್ ವಿಕಿರಣದ ದೇಹದ ಮೇಲೆ ಪರಿಣಾಮ, WHO ಎಚ್ಚರಿಕೆ:

WHO ಹಾಗೂ ಅನೇಕ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು RF ವಿಕಿರಣದ ದೀರ್ಘಕಾಲದ ಪರಿಣಾಮಗಳನ್ನು ಸಂಶೋಧಿಸುತ್ತಿವೆ. WHO ಕೆಲವು ಪರಿಣಾಮಗಳ ಬಗ್ಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ,

ನರಕೋಶಗಳ ಮೇಲೆ ಪರಿಣಾಮ:
ತಲೆನೋವು
ನಿದ್ರಾಹೀನತೆ
ಗಮನಕ್ಷಯ
ಸ್ಮರಣಶಕ್ತಿ ಕುಂದುವುದು

ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ:
ಮೊಬೈಲ್‌ನ ಬ್ಲೂ ಲೈಟ್ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ.
ನಿದ್ರೆ ವಿಳಂಬ
ನಿದ್ರೆಯ ಗುಣಮಟ್ಟ ಕುಸಿತ
ಜೈವಿಕ ಗಡಿಯಾರ ಅಸ್ಥಿರ

ಮಾನಸಿಕ ಆರೋಗ್ಯದ ಮೇಲೆ ಒತ್ತಡ:
ಅಧಿಸೂಚನೆಗಳು, ಸದ್ದುಗಳು, ಕಂಪನ ಇವೆಲ್ಲವೂ ಕೂಡ micro-awakenings ಗೆ ಕಾರಣವಾಗಬಹುದು.
ಮೆದುಳು ವಿಶ್ರಾಂತಿ ಪಡೆಯುವುದಿಲ್ಲ.
ದಿನದ ವೇಳೆಯಲ್ಲಿ ಆಯಾಸ, ಒತ್ತಡ ಕೂಡ ಹೆಚ್ಚಾಗುತ್ತದೆ.

ಮೊಬೈಲ್ ವಿಕಿರಣದಿಂದ ಕ್ಯಾನ್ಸರ್ ಬರುತ್ತದೆಯೇ? :

WHO RF ವಿಕಿರಣವನ್ನು Possibly Carcinogenic (ಕ್ಯಾನ್ಸರ್‌ ಸೃಷ್ಟಿಸುವ ಸಾಧ್ಯತೆ ಇರುವ ವಸ್ತು) ಎಂದು ವರ್ಗೀಕರಿಸಿದೆ.
ಗ್ಲಿಯೋಮಾ (ಮೆದುಳು ಕ್ಯಾನ್ಸರ್) ಅಪಾಯ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ.
ದೀರ್ಘಕಾಲ ತಲೆಯ ಹತ್ತಿರ ಫೋನ್ ಬಳಕೆ ಮಾಡಿದವರಲ್ಲಿ ಈ ಅಪಾಯದ ಸಾಧ್ಯತೆಯನ್ನು ವರದಿಗಳು ಸೂಚಿಸುತ್ತವೆ.

ತಲೆಯ ಕೆಳಗೆ ಫೋನ್ ಇಟ್ಟುಕೊಂಡು ಮಲಗಿದರೆ ಏನಾಗುತ್ತದೆ?:

ತಜ್ಞರು ಹೇಳುವ ಪ್ರಕಾರ, ಇದು ಅತ್ಯಂತ ಅಪಾಯಕಾರಿ ಅಭ್ಯಾಸ,
RF ವಿಕಿರಣದಿಂದ ನರಕೋಶ ಹಾನಿ.
ತೀವ್ರ ತಲೆನೋವು ಮತ್ತು ನಿದ್ರೆ ವ್ಯತ್ಯಯ.
ಬ್ಲೂ ಲೈಟ್‌ನಿಂದ ನಿದ್ರಾಹೀನತೆ.
ಬ್ಯಾಟರಿ ಬಿಸಿ–ಸ್ಫೋಟದ ಅಪಾಯ.
ಹೀಟಿಂಗ್‌ನಿಂದ ಬೆಂಕಿ ಸಂಭವಿಸುವ ಸಂಭವವೂ ಹೆಚ್ಚಾಗಿ ಇರುತ್ತದೆ 

ಸುರಕ್ಷಿತ ರೀತಿಯಲ್ಲಿ ಫೋನ್ ಇಡುವ ವಿಧಾನಗಳು:

ಮಲಗುವ ಕೋಣೆಯಿಂದ ದೂರವಿಡಿ (ಸಾಧ್ಯವಿದ್ದರೆ).
ಕನಿಷ್ಠ 1–3 ಅಡಿ ದೂರದಲ್ಲಿ ಇಡಿ.
ಏರ್‌ಪ್ಲೇನ್ ಮೋಡ್ ಬಳಸಿರಿ.
WiFi, Bluetooth ಆಫ್ ಮಾಡಿ.
ಚಾರ್ಜ್ ಹಾಕಿ ಮಲಗಬೇಡಿ.
ಫೋನ್ ಅನ್ನು ದಿಂಬಿನ ಕೆಳಗೆ ಎಂದಿಗೂ ಇಟ್ಟುಕೊಳ್ಳಬೇಡಿ.

ಡಾ. ಪಿ.ಎನ್. ರೆಂಜೆನ್ ಹೇಳುವಂತೆ,  ದಿಂಬಿನ ಬಳಿ ಫೋನ್ ಇಟ್ಟುಕೊಂಡು ಮಲಗುವುದರಿಂದ ಕ್ಯಾನ್ಸರ್ ನೇರವಾಗಿ ಬರುವುದಿಲ್ಲ. ಆದರೆ ಅದರ ಪರಿಣಾಮಗಳು ನಿದ್ರೆ ಸಮಸ್ಯೆಗಳು, ಮಾನಸಿಕ ಒತ್ತಡ ಹಾಗೂ ನರ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಮೊಬೈಲ್ ಫೋನ್ ಸಣ್ಣ ಸಾಧನವಲ್ಲ, ಇದರಿಂದ ಹಲವು ಅಪಾಯಗಳು ಎದುರಾಗಬಹುದು. ಆದರೆ, ವಿಕಿರಣದ ಪರಿಣಾಮಗಳು ತಕ್ಷಣ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ದೀರ್ಘಕಾಲದ ತಪ್ಪು ಅಭ್ಯಾಸಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories