ಆದಷ್ಟು ಬೇಗ ಹಾನರ್ (Honor) ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಗಳಾದ ಹಾನರ್ 200 (Honor 200) ಮತ್ತು 200 ಪ್ರೊ (Honor 200 pro) ಸೀರೀಸ್‌ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿದೆ.
ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಸ್ಮಾರ್ಟ್ ಫೋನ್ ಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಇಂದು ಎಲ್ಲರ ಬಳಿ ಸ್ಮಾರ್ಟ್ ಫೋನ್ ಗಳು ಇದ್ದೇ ಇದೆ. ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಕಂಪನಿಗಳು ಟೆಕ್ನಾಲಜಿ (technology) ಬಳಸಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿವೆ. ನಮ್ಮ ಎಲ್ಲಾ ದಿನನಿತ್ಯದ ಕೆಲಸಗಳನ್ನು ನಾವು ಸ್ಮಾರ್ಟ್ ಫೋನ್ ನಲ್ಲಿ ಮಾಡಿ ಮುಗಿಸುತ್ತೇವೆ. ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿವೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಕಂಪನಿಗಳ ನಡುವೆ ಬಹಳಷ್ಟು ಪೈಪೋಟಿ (competition) ಇದ್ದು ಹೊಸ ಫೀಚರ್ ಗಳ ಸ್ಮಾರ್ಟ್ ಫೋನ್ ಗಳನ್ನು(smartphones) ಬಿಡುಗಡೆ ಮಾಡುತ್ತಲೇ ಇದ್ದಾರೆ. ಹಾಗೆ ಇದೀಗ ಹಾನರ್ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ವೈಶಿಷ್ಟ್ಯತೆಗಳು ಏನು?ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೊದಲು ಚೀನಾದಲ್ಲಿ (China) ಬಿಡುಗಡೆ ಆಗಲಿವೆ ಈ ಸ್ಮಾರ್ಟ್ ಫೋನ್ ಗಳು :

ಹಾನರ್ ಕಂಪನಿಯು ಬಿಡುಗಡೆ ಮಾಡಲಿರುವ ಹೊಸ ಸ್ಮಾರ್ಟ್ ಫೋನ್ ಗಳಾದ Honor 200 ಮತ್ತು 200 Pro ಗಳನ್ನು ಮೊದಲು ಚೀನಾದಲ್ಲಿ ಬಿಡುಗಡೆ ಆಗುತ್ತವೆ ಎಂದು ತಿಳಿದು ಬಂದಿದೆ. ಬ್ರ್ಯಾಂಡ್ ಈಗಾಗಲೇ ಎರಡೂ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಬಹಿರಂಗಪಡಿಸಿದೆ ಆದರೆ ಅವುಗಳ ಫಿಚರ್ಸ್ ಗಳ (Features) ಬಗ್ಗೆ ಇನ್ನೂ ಮಾಹಿತಿ ಬಹಿರಂಗ ಪಡಿಸಿಲ್ಲ. ಚೀನೀ ಟಿಪ್‌ಸ್ಟರ್‌ನ ಹೊಸ ಸೋರಿಕೆಯು ಹಾನರ್ 200 ಜೋಡಿಗೆ ಶಕ್ತಿ ತುಂಬುವ ಚಿಪ್‌ಸೆಟ್‌ಗಳನ್ನು ಬಹಿರಂಗಪಡಿಸಿದೆ.
Honor 200 ಮತ್ತು 200 Pro ಸ್ಮಾರ್ಟ್ ಫೋನ್ ಗಳ ಫಿಚರ್ಸ್ ಗಳು (features) :
ಎರಡೂ ಸಾಧನಗಳು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ (operating system) ಹಾಗೂ ಕ್ವಾಡ್-ಕರ್ವ್ಡ್ OLED ಪ್ಯಾನೆಲ್‌ಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ.
ಪ್ರೊಸೆಸರ್ (processor) : Honor 200 ನಲ್ಲಿ Snapdragon 8S Gen 3 ಚಿಪ್‌ಸೆಟ್ ಅನ್ನು ನೀಡಲಾಗಿದ್ದು, ಅದೇ ರೀತಿ 200 Pro ನಲ್ಲಿ Snapdragon 8 Gen 3 ಚಿಪ್‌ಸೆಟ್ ಅನ್ನು ನಿರೀಕ್ಷಿಸಲಾಗಿದೆ.
ಕ್ಯಾಮರಾ (camera) : Honor 200 ಸರಣಿಯು 1/1.3-ಇಂಚಿನ OmniVision OV50H ಕ್ಯಾಮೆರಾ ಸಂವೇದಕ, f/1.9 ಅಪರ್ಚರ್ ಮತ್ತು OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಫೋನ್ 50x ಡಿಜಿಟಲ್ ಜೂಮ್‌ನೊಂದಿಗೆ ಟೆಲಿಫೋಟೋ ಕ್ಯಾಮೆರಾವನ್ನು ಕೂಡ ಹೊಂದಿದೆ.
ಹಾಗೆಯೇ ಸೆಲ್ಫಿಗಳಿಗಾಗಿ (selfie), ಹಾನರ್ 200 ನಲ್ಲಿ ಸಿಂಗಲ್ ಸೆಲ್ಫಿ ಕ್ಯಾಮೆರಾ ಸೆಟಪ್ ಅನ್ನು ನೀಡಬಹುದು ಮತ್ತು 200 ಪ್ರೊನಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ (dual selfie camera) ಸೆಟಪ್ ಅನ್ನು ನೀಡಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್ (battery and charging) : Honor 200 ಮತ್ತು Honor 200 Pro ಸಾಧನಗಳು 100W ವೇಗದ ಚಾರ್ಜಿಂಗ್ ಸೆಟ್ ಅಪ್ ಅನ್ನು ಹೊಂದಿದೆ. ಎರಡೂ ಫೋನ್‌ಗಳಿಗೆ 5,200mAh ಬ್ಯಾಟರಿಯನ್ನು ಹೊಂದಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




