ಎಲ್ಲರಿಗೂ ನಮಸ್ಕಾರ, ಇಂದು ಈ ಪ್ರಸ್ತುತ ಲೇಖನದಲ್ಲಿ ಅತ್ಯಂತ ಹೈ – ಸ್ಪೀಡ್, ಒಳ್ಳೆಯ ಮೈಲೇಜ್ ಹಾಗೂ ಕೈಗುಟುಕುವ ಬೆಲೆಯಲ್ಲಿ ದೊರೆಯುವಂತಹ ಕೆಲವಂದು Electric Scooter ಗಳ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇತ್ತೀಚಿನ ದಿನಗಳಲ್ಲಿ electric scooter ಗಳು ಬೇಡಿಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಲೆ ಇವೆ. ಎಲೆಕ್ಟ್ರಿಕ್ ವಾಹನಗಳು ತಯಾರಿಸುವ ಕಂಪನಿಗಳು ಒಂದರ ಮೇಲೊಂದು ಭರ್ಜರಿ ಸ್ಕೂಟರ್ಸ್ ಲಾಂಚ್ ಮಾಡುತ್ತ ಜನರ ಆಕರ್ಷಣೆಗೊಳಪಡಿಸಿವೆ. ಕಾರುಗಳನ್ನೇ ಮೀರಿಸುವ, ಬಜೆಟ್- ಫ್ರೆಂಡ್ಲಿ, ಹಾಗೂ ಡ್ಯಾಶಿಂಗ್ ಫೀಚರ್ಸ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಬದಲಾಯಿಸಲ್ಪಡುವ ಬ್ಯಾಟರಿ ಲಭ್ಯವಿರುವ 5 ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾಹಿತಿಯನ್ನು ಈ ಲೇಖನದ ಮೂಲಕ ನೀಡಲಾಗುತ್ತದೆ. ನೀವೇನಾದರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಇಚ್ಛೆಸುತ್ತಿದ್ದರೆ ಈ 5 ಸ್ಕೂಟರ್ ಗಳು ಅತ್ಯಂತ ಒಳ್ಳೆಯ ಆಯ್ಕೆ ಎಂದು ಹೇಳಬಹುದು, ಒಮ್ಮೆ ಪರಿಶೀಲಿಸಿ.
Ather 450 X :

ಈ Ather 450 X ದ್ವಿ ಚಕ್ರ ವಾಹನದ Ex- ಶೋ ರೂಮ್ ಬೆಲೆಯು 1.28 ಲಕ್ಷ ದಿಂದ 1.45 ಲಕ್ಷದವರೆಗೂ ಇದೆ. ಇದು ಲೀಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನಿಂದ ಚಲಿತವಾಗಿದ್ದು, ಬ್ಯಾಟರಿ ಸಾಮರ್ಥ್ಯವು 3.7kWh ಆಗಿರುತ್ತದೆ. ಇದರ ಗರಿಷ್ಠ ವೇಗವು 90kmph ಆಗಿರುತ್ತದೆ. ಈ ಸ್ಕೂಟರ್ 4 ಗಂಟೆ 30 ನಿಮಿಷದಲ್ಲಿ 0- 80%ರಷ್ಟು ಚಾರ್ಜ್ ಆಗುತ್ತದೆ. ಇದರ ರೇಂಜ್ Range146 km/charge ಆಗಿರುತ್ತದೆ. ಮೂರು ವರ್ಷದ ಬ್ಯಾಟರಿ ವಾರೆಂಟಿ ಕೂಡ ಲಭ್ಯವಾಗುತ್ತದೆ.
TVS iQube Electric Scooter :

ಈ TVS iQube ದ್ವಿಚಕ್ರ ವಾಹನವು ನಿಮಗೆ ಅತ್ಯುತ್ತಮವಾದ ಸೌಕರ್ಯ, ಅನುಕೂಲತೆ ಮತ್ತು ಉತ್ತಮ ಸವಾರಿ ನೀಡಲು ವಿನ್ಯಾಸಗೊಳಿಸಲಾಗಿದೆ. ಈ iQube ಸ್ಕೂಟರ್ ನ Ex- ಶೋ ರೂಮ್ ಬೆಲೆಯು 1.22 ಲಕ್ಷ ದಿಂದ 1.38 ಲಕ್ಷದವರೆಗೂ ಇದೆ. ಈ ಸ್ಕೂಟರ್ ಅನ್ನು 5 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ 0-80% ಚಾರ್ಜ್ ಮಾಡಬಹುದು. ಇದರ ರೈಡಿಂಗ್ ರೇಂಜ್ 100 km ಹಾಗೂ ಗರಿಷ್ಠ ವೇಗ 78 ಕಿ.ಮೀ/ ಗಂಟೆ ಆಗಿರುತ್ತದೆ. iQube ಅನ್ನು ಶಕ್ತಿಯುತಗೊಳಿಸುವುದು ಮೂರು ಲಿಥಿಯಂ-ಐಯಾನ್ ಬ್ಯಾಟರಿಗಳು ಒಟ್ಟಾರೆಯಾಗಿ 2.25kWh ಪವರ್ ರೇಟಿಂಗ್ ಅನ್ನು ಹೊಂದಿವೆ.
Ola S1 pro :

ಈ Ola S1 pro ಸ್ಕೂಟರ್ ನ Ex- ಶೋ ರೂಮ್ ಬೆಲೆಯು 1.30 ಲಕ್ಷ ದಿಂದ 1.40 ಲಕ್ಷದವರೆಗೂ ಇದೆ. ಈ ಸ್ಕೂಟರ್ 12 ಅದ್ಭುತ ಬಣ್ಣಗಳೊಂದಿಗೆ ಅತ್ಯುತ್ತಮ ಸವಾರಿಯನ್ನು ಹೊಂದಿರುತ್ತದೆ. Ola S1 ರೇಂಜ್ 181 ಕಿಮೀ/ಚಾರ್ಜ್ ಆಗಿರುತ್ತದೆ. ಇದರ ಬ್ಯಾಟರಿ ಸಾಮರ್ಥ್ಯವು 4kWh ಆಗಿರುತ್ತದೆ. ಹಾಗೂ ಗರಿಷ್ಠ ವೇಗ 116 ಕಿ.ಮೀ ಆಗಿರುತ್ತದೆ.
Bajaj ಚೇತಕ್

Bajaj chetak ಇದು bajaj ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಅಗಿದೆ. ಈ Bajaj chetak ಸ್ಕೂಟರ್ ನ Ex- ಶೋ ರೂಮ್ ಬೆಲೆಯು 1.44 ಲಕ್ಷ ಇರುತ್ತದೆ. ಇದು 3kWh ಲಿಥಿಯಂ ಐಯಾನ್ ದೊಂದಿಗೆ 50.4V/ 60.4 Ah ಬ್ಯಾಟರಿ ಸಾಮರ್ಥ್ಯವುಳ್ಳವಾಗಿದೆ. ಇದು ಕೇವಲ 2.75 ಗಂಟೆಗಳಲ್ಲಿ 0-80% ಚಾರ್ಜ್ ಆಗುತ್ತದೆ. ಈ 90km/ಚಾರ್ಜ್ ರೈಡಿಂಗ್ ಶ್ರೇಣಿಯನ್ನು ಹೊಂದಿರುವದಾಗಿದೆ. ಹಾಗೂ ಇದರ ಗರಿಷ್ಠ ವೇಗವು 63 kmph ಆಗಿರುತ್ತದೆ.
Hero Vida V1 pro :

ಈ Hero Vida V1 pro ಸ್ಕೂಟರ್ ನ Ex- ಶೋ ರೂಮ್ ಬೆಲೆಯು 1.26 ಲಕ್ಷ ಇರುತ್ತದೆ. ಈ Vida V1 3.94 kWh ಬ್ಯಾಟರಿ ಪ್ಯಾಕ್ ಹೊಂದಿರುವುದಗುದೆ. ಹಾಗೂ 5 ಘಂಟೆ 55 ನಿಮಿಷ ದಲ್ಲಿ 0-80% ಚಾರ್ಜ್ ಆಗಿತ್ತದೆ. ಮತ್ತು ಇದರ ಗರಿಷ್ಠ ವೇಗವು 80kmph ಆಗಿರುತ್ತದೆ.
ಈ ಮೇಲೆ ನೀಡಿರುವ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮವಾದ ಸೌಕರ್ಯ, ಅನುಕೂಲತೆ ಮತ್ತು ಉತ್ತಮ ಸವಾರಿ ನೀಡಲು ವಿನ್ಯಾಸಗೊಳಿಸಲಾಗಿದೆ ಹಾಗೂ ಬಜೆಟ್ ಫ್ರೆಂಡ್ಲಿಯಾಗಿಯೂ ಇದೆ. ಹಾಗಾಗಿ ನೀವೇನಾದರೂ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಯೋಚನೆ ಮಾಡುತ್ತಿದ್ದಾರೆ ಈ ಮೇಲಿನ ಮಾಹಿತಿಯು ನಿಮಗೆ ಸಹಾಯ ಮಾಡುತ್ತದೆ.
ಹಾಗೆಯೇ ಇಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
| ಪ್ರಮುಖ ಲಿಂಕುಗಳು |
| ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ |
Download App |
| ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







