hescom scaled

HESCOM Recruitment 2026: ಐಟಿಐ ಪಾಸಾದವರಿಗೆ ಬಂಪರ್ ಅವಕಾಶ! ಪ್ರತಿ ತಿಂಗಳು ಸಿಗಲಿದೆ ₹9,600 ಸ್ಟೈಫಂಡ್. ಇಲ್ಲಿದೆ ಡೀಟೇಲ್ಸ್.

Categories:
WhatsApp Group Telegram Group

ಹೆಸ್ಕಾಂ ನೇಮಕಾತಿ (HESCOM) ಮುಖ್ಯಾಂಶಗಳು

  • ಹುದ್ದೆಯ ಹೆಸರು: ಐಟಿಐ ಎಲೆಕ್ಟ್ರಿಷಿಯನ್ (ಶಿಶುಕ್ಷು / Apprentice)
  • ವಿದ್ಯಾರ್ಹತೆ: ಐಟಿಐ ಎಲೆಕ್ಟ್ರಿಷಿಯನ್ (ITI Electrician) ಪಾಸ್ ಆಗಿರಬೇಕು.
  • ಮಾಸಿಕ ಸ್ಟೈಫಂಡ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹9,600 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಮಾರ್ಚ್ 2026

ಹುಬ್ಬಳ್ಳಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಐಟಿಐ (ITI) ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್. ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ಲಿಮಿಟೆಡ್‌ (HESCOM) ವತಿಯಿಂದ 2026-27ನೇ ಸಾಲಿನ ಅವಧಿಗೆ ‘ಐಟಿಐ ಎಲೆಕ್ಟ್ರಿಷಿಯನ್’ ವೃತ್ತಿ ತರಬೇತಿಗಾಗಿ (ಶಿಶುಕ್ಷು/Apprentice) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ತರಬೇತಿ ಅವಧಿ ಮತ್ತು ಸ್ಟೈಫಂಡ್ (Stipend)

ಈ ಅಪ್ರೆಂಟಿಸ್ ತರಬೇತಿಯ ಅವಧಿಯು 1 ವರ್ಷದ್ದಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಗರಿಷ್ಠ ₹9,600 ವರೆಗೆ ಸ್ಟೈಫಂಡ್ (ಶಿಷ್ಯವೇತನ) ನೀಡಲಾಗುತ್ತದೆ.

ಅರ್ಹತೆಗಳು (Eligibility Criteria)

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 2 ವರ್ಷದ ‘ಐ.ಟಿ.ಐ ಎಲೆಕ್ಟ್ರಿಷಿಯನ್’ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು ಮತ್ತು NCVT/SCVT ಯಿಂದ ನೀಡಲಾದ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರವನ್ನು ಹೊಂದಿರಬೇಕು.
  • ಎಸ್.ಎಸ್.ಎಲ್.ಸಿ. (SSLC) ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಿರಬೇಕು ಹಾಗೂ ಕನ್ನಡದಲ್ಲಿ ಓದಲು-ಬರೆಯಲು ತಿಳಿದಿರಬೇಕು.
  • ಸೂಚನೆ: ಈಗಾಗಲೇ ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿದ ಅಥವಾ ಪ್ರಸ್ತುತ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ವಯೋಮಿತಿ (Age Limit)

(09-03-2026 ರ ಅನ್ವಯ)

  • ಕನಿಷ್ಠ ವಯೋಮಿತಿ: 25 ವರ್ಷಗಳು
  • ಗರಿಷ್ಠ ವಯೋಮಿತಿ: 30 ವರ್ಷಗಳು

ಅರ್ಜಿ ಶುಲ್ಕ (Application Fee)

ಸಾಮಾನ್ಯ ಅಭ್ಯರ್ಥಿಗಳು ₹100 ರೂ. ಮತ್ತು ಪ.ಜಾತಿ/ಪ.ಪಂಗಡದ (SC/ST) ಅಭ್ಯರ್ಥಿಗಳು ₹50 ರೂ. ಮೊತ್ತದ ಇಂಡಿಯನ್ ಪೊಸ್ಟಲ್ ಆರ್ಡರನ್ನು (Indian Postal Order) “ಆರ್ಥಿಕ ಸಲಹೆಗಾರರು, ಹುವಿಸಕಂನಿ, ಹುಬ್ಬಳ್ಳಿ” ಇವರ ಹೆಸರಿನಲ್ಲಿ ಖರೀದಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (How to Apply)

  1. ಮೊದಲಿಗೆ ಅಭ್ಯರ್ಥಿಗಳು ಅಪ್ರೆಂಟಿಸ್‌ ಅಧಿಕೃತ ಜಾಲತಾಣವಾದ https://www.apprenticeshipindia.gov.in/ ಗೆ ಭೇಟಿ ನೀಡಿ ನೋಂದಣಿ (Registration) ಮಾಡಿಕೊಳ್ಳಬೇಕು.
  2. “ಜಾಹೀರಾತು ಮಾಡಿದ ಖಾಲಿ ಹುದ್ದೆಗಳ ವಿರುದ್ಧ ಅರ್ಜಿ ಸಲ್ಲಿಸಿ” ವಿಭಾಗದಲ್ಲಿ “ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ” (HESCOM) ಎಂದು ಹುಡುಕಿ, “ಹೆಸ್ಕಾಂ ಅಪ್ರೆಂಟಿಸ್ ತರಬೇತಿ 2026” ಗೆ ಅನ್ವಯಿಸು (Apply) ಕ್ಲಿಕ್ ಮಾಡಿ.
  3. ಆನ್‌ಲೈನ್ ಪ್ರಕ್ರಿಯೆ ಮುಗಿದ ಬಳಿಕ, ಹೆಸ್ಕಾಂನ ಅಧಿಕೃತ ಅರ್ಜಿ ನಮೂನೆಯನ್ನು (Application Form) ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
  4. ಅರ್ಜಿಯಲ್ಲಿ ಕೇಳಲಾಗಿರುವ ಸ್ವವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳ ಜೆರಾಕ್ಸ್ ಪ್ರತಿಗಳು ಹಾಗೂ ಪೋಸ್ಟಲ್ ಆರ್ಡರ್ ಅನ್ನು ಲಗತ್ತಿಸಿ.
  5. ಲಕೋಟೆಯ ಮೇಲೆ “ಎಲೆಕ್ಟ್ರಿಷಿಯನ್ ವೃತ್ತಿಯ ಶಿಶುಕ್ಷು ತರಬೇತಿಗಾಗಿ ಅರ್ಜಿ” ಎಂದು ಕಡ್ಡಾಯವಾಗಿ ನಮೂದಿಸಿ.
  6. ಈ ಲಕೋಟೆಯನ್ನು ಮಾರ್ಚ್ 09ರೊಳಗೆ ಖುದ್ದಾಗಿ ಅಥವಾ ಅಂಚೆ (Post) ಮೂಲಕ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ:

ಕಾರ್ಯನಿರ್ವಾಹಕ ಇಂಜಿನಿಯರರು(ವಿ), ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಸಿ),

ಹೆಸ್ಕಾಂ, ವಿದ್ಯುತ್ ನಗರ, ಕಾರವಾರ ರಸ್ತೆ, ಹುಬ್ಬಳ್ಳಿ – 580024

🗓️ ಪ್ರಮುಖ ಘಟನೆಗಳು
(Important Events)
ದಿನಾಂಕ
(Dates)
🟢 ಅರ್ಜಿ ಸಲ್ಲಿಕೆ ಆರಂಭ ದಿನಾಂಕ 11 ಫೆಬ್ರವರಿ 2026
🟠 ಆನ್‌ಲೈನ್ (Apprenticeship Portal) ನೋಂದಣಿಗೆ ಕೊನೆಯ ದಿನಾಂಕ 02 ಮಾರ್ಚ್ 2026
🔴 ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 09 ಮಾರ್ಚ್ 2026
ಪ್ರಮುಖ ಲಿಂಕ್‌ಗಳು (Important Links) ಡೌನ್‌ಲೋಡ್ / ಭೇಟಿ ನೀಡಿ
📄 ಅಧಿಕೃತ ಅಧಿಸೂಚನೆ ಪಿಡಿಎಫ್
(Official Notification PDF)
Download PDF
📝 ಆಫ್‌ಲೈನ್ ಅರ್ಜಿ ನಮೂನೆ
(Application Form PDF)
Download Form
🌐 ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್
(Online Application Portal)
Apply Online
🏢 ಹೆಸ್ಕಾಂ ಅಧಿಕೃತ ವೆಬ್‌ಸೈಟ್
(HESCOM Official Website)
Visit Website

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories