ಬರೋಬ್ಬರಿ 165 ಕಿ.ಮೀ ಮೈಲೇಜ್ ಇರುವ ಹೀರೋ ವಿಡಾ ವಿ1 ಇ ಸ್ಕೂಟರ್ ಮೇಲೆ ಭರ್ಜರಿ ಆಫರ್..!

vida v1 pro

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು  ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Vida V1 ಎಲೆಕ್ಟ್ರಿಕ್ ಸ್ಕೂಟರ್‌:

vidaa

ಆದರೆ ಇದೀಗ Vida V1 ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ Hero MotoCorp ರೂ 31,000 ಮೌಲ್ಯದ ಪ್ರಯೋಜನಗಳನ್ನು ಘೋಷಿಸಿದೆ. ಹೌದು, ಹೀರೋ ಮೋಟೊಕಾರ್ಪ್ ಸಬ್ ಬ್ರಾಂಡ್ ವಿಡಾ (Vida) ತನ್ನ ಹೊಸ ವಿ1 (V1) ಇವಿ ಸ್ಕೂಟರ್ ಖರೀದಿ ಮೇಲೆ ಆಕರ್ಷಕ ವರ್ಷಾಂತ್ಯದ ಆಫರ್ ಘೋಷಣೆಯನ್ನು ಮಾಡಿದೆ. ಈ ಹೀರೋ ಮೋಟೊಕಾರ್ಪ್ ಘೋಷಣೆ ಮಾಡಿರುವ ರೂ. 31 ಸಾವಿರ ಡಿಸ್ಕೌಂಟ್ ನಲ್ಲಿ ರೂ. 6,500 ಮೌಲ್ಯದ ಸ್ಟಿಕ್ಕರ್ ಪ್ರೈಸ್ ಡಿಸ್ಕೌಂಟ್(Sticker price discount), ರೂ. 5 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಬೋನಸ್(Exchange bonous), ರೂ. 8,259 ಮೌಲ್ಯದ ಬ್ಯಾಟರಿ ವಾರಂಟಿ (Battery waranty)ಅವಧಿ ವಿಸ್ತರಣೆ, ರೂ.7,500 ಮೌಲ್ಯದ ಲಾಯಲ್ಟಿ ಬೋನಸ್(Loyality bonous), ರೂ. 2,500 ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್ (Corporate discount)ಮತ್ತು ರೂ.1, 125 ಮೌಲ್ಯದ ಚಂದಾದಾರಿಕೆ ಯೋಜನೆಯ ಡಿಸ್ಕೌಂಟ್ (Subscription discount) ನೀಡಲಾಗುತ್ತಿದೆ. Vida V1 ಇವಿ ಸ್ಕೂಟರ್ ಖರೀದಿಯ ದಿನದಿಂದ 6 ತಿಂಗಳವರೆಗೆ ವೇಗದ ಚಾರ್ಜರ್‌ಗಳು ಮತ್ತು ಸಂಪರ್ಕಿತ ವೈಶಿಷ್ಟ್ಯಗಳಿಗೆ ಅನಿಯಮಿತ ಪ್ರವೇಶವನ್ನು ನೀಡುತ್ತದೆ.

tel share transformed

5.99% ಬಡ್ಡಿ, ಶೂನ್ಯ ಸಂಸ್ಕರಣಾ ಶುಲ್ಕ ಮತ್ತು ರೂ 2,429 ರ ಮಾಸಿಕ EMI ಗಳಲ್ಲಿ ಹಣಕಾಸು ಆಯ್ಕೆಗಳನ್ನು ನೀಡಲು Vida IDFC, Ecofy ಮತ್ತು Hero FinCorp ನೊಂದಿಗೆ ಪಾಲುದಾರಿಕೆ ಹೊಂದಿದೆ. ಸದ್ಯ ಇದು ಬೆಂಗಳೂರಿನಲ್ಲಿ ಎಕ್ಸ್ ಶೋರೂಂ (Ex showroom) ಪ್ರಕಾರ ರೂ. 1.60 ಲಕ್ಷ ಬೆಲೆ ಹೊಂದಿದೆ ಎಂದು ತಿಳಿದು ಬಂದಿದೆ.

ವಿ1 ಇವಿ ಸ್ಕೂಟರ್ ವೈಶಿಷ್ಟಗಳು :

ವಿ1 ಇವಿ ಸ್ಕೂಟರ್ (V 1 ev scooter)ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ವಿ1 ಪ್ಲಸ್ (V 1 plus) ಮತ್ತು ವಿ1 ಪ್ರೊ (V1 pro) ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇವು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 3.44 kWh ಬ್ಯಾಟರಿ ಪ್ಯಾಕ್(Battery pack) ಮತ್ತು 3.94 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿವೆ. ಈ ಮೂಲಕ ವಿಡಾ ವಿ1 ಪ್ಲಸ್ (Vida V1 plus) ವೆರಿಯೆಂಟ್ ಪ್ರತಿ ಚಾರ್ಜ್ ಗೆ ಗರಿಷ್ಠ 143 ಕಿ.ಮೀ ಮೈಲೇಜ್(Milage) ನೀಡುತ್ತದೆ.
ವಿ1 ಪ್ರೊ (V 1 pro)165 ಕಿ.ಮೀ ಮೈಲೇಜ್ (milage) ಅನ್ನು ನೀಡಿ ಪ್ರದರ್ಶಿಸುತ್ತದೆ.

v1 right c

ವಿಡಾ ವಿ1 ಪ್ಲಸ್(Vida V1 )ಮತ್ತು ವಿ1 ಪ್ರೊ (Vida V1 pro) ಈ ಎರಡು ಇವಿ ಸ್ಕೂಟರ್ ಗಳು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ಟಾಪ್ ಸ್ಪೀಡ್ (top speed) ಅನ್ನು ಗ್ರಾಹಕರಿಗೆ ನೀಡುತ್ತದೆ.3.2 ಸೆಕೆಂಡ್ ಗಳಲ್ಲಿ 0 – 40 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಹಾಗೆಯೇ ಹೊಸ ಇವಿ ಸ್ಕೂಟರ್ ಗಳಲ್ಲಿ ಕಂಪನಿಯು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿರಲಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.

ನೀವು ಏನಾದರೂ Vida V 1 ev scooter ಪ್ರಿಯರಗಿದ್ದರೆ ತಕ್ಷಣ ನೀವು ಹೋಗಿ ನಿಮ್ಮ ನೆಚ್ಚಿನ Vida V 1 ev scooter  ಅನ್ನು ಮುಂಗಡ ಬುಕ್ಕಿಂಗ್ ಮಾಡಿಕೊಂಡುಈ ಉತ್ತಮ ev ಸ್ಕೂಟರ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಕುರಿತು ಸುದ್ದಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!