Hero Bike: ಕಡಿಮೆ ಬೆಲೆಯಲ್ಲಿ ಜನಪ್ರಿಯ ಹೀರೋ ಪ್ಯಾಶನ್ ಪ್ಲಸ್ ಬಿಡುಗಡೆ, ಸ್ಟೈಲಿಶ್ ಲುಕ್ ಸಖತ್ ಮೈಲೇಜ್

Picsart 23 06 16 19 01 10 913

ಎಲ್ಲರಿಗೂ ನಮಸ್ಕಾರ, ಇಂದು ಈ ಲೇಖನನದಲ್ಲಿ ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೀರೋ ಮೋಟೋಕಾರ್ಪ್ ಬೈಕ್ ತಯಾರಿಕಾ ಕಂಪನಿಯು ಕೈಗೆಟುಕುವ ದ್ವಿಚಕ್ರ ವಾಹನಗಳಲ್ಲಿ ಒಂದಾದ Hero Passion Plus ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ನ ಅಧಿಕೃತ ಬೆಲೆ ಹಾಗೂ ವಿನ್ಯಸಗಳಿಗೆ ಸೇರಿದಂತೆ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್ 2023:

2023 hero passion plus

ಪ್ರಪಂಚದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ Hero MotoCorp ಅನೇಕ ದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ಮನೆಮಾತಾಗಿ ಹೊರಹೊಮ್ಮಿದೆ. ಮಧ್ಯಮ ವರ್ಗದ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸುವ ಸಾಮರ್ಥ್ಯ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಬೈಕುಗಳನ್ನು ನೀಡುವುದು, ಅದರ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಈ ನಮ್ಮ ಭಾರತ ದೇಶದಲ್ಲಿ ಮಧ್ಯಮ ವರ್ಗದ ಕುಟುಂಬಗಳ ಜನಸಂಖ್ಯೆ ಹೆಚ್ಚಿದ್ದು , ಕಂಪನಿಯ ಬೈಕ್‌ಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರಿಂದ ತಮ್ಮ ಆಯ್ಕೆಯಾಗಿ ಇವುಗಳನ್ನು ಖರೀದಿಸುತ್ತಾರೆ. ಇತ್ತೀಚಿಗೆ Hero Motocorp ಹೀರೋ ಪ್ಯಾಶನ್ ಪ್ಲಸ್( Hero Passion plus) ಬೈಕ್ ಅನ್ನು ಬಿಡುಗಡೆ ಮಾಡಿದೆ.

Untitled 1 scaled

ಹೀರೋ ಪ್ಯಾಶನ್ ಪ್ಲಸ್, ಇದು ಯುವ ಜನರಿಗೆ ಚಿರಪರಿಚಿತವಾಗಿರುವ ಬೈಕ್ ಆಗಿದೆ. ಈ ಹಿಂದೆಯೇ ಭಾರತಾದ್ಯಂತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, April 2020 ರಂದು ಕೆಲವು ಕಾರಣಗಳಿಂದ ಈ ಬೈಕ್ ಮಾರಾಟವನ್ನು ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಹೀರೋ ಪ್ಯಾಶನ್ ಪ್ಲಸ್ ಮತ್ತೆ ಮಾರುಕಟ್ಟೆಯಲ್ಲಿ ರಿ-ಲಾಂಚ್ ಮಾಡಲಾಗಿದ್ದು, ಜನರಲ್ಲಿ ಖುಷಿಯನ್ನು ಮೂಡಿಸುವ ಸುದ್ದಿಯಾಗಿದೆ. ಈ ಬಾರಿ ಹೀರೋ ಪ್ಯಾಶನ್ ಪ್ಲಸ್ ತನ್ನ ನವೀಕರಣಗಳೊಂದಿಗೆ ಮಾರ್ಕೆಟ್ ನಲ್ಲಿ ಬರಲು ಸಿದ್ಧವಾಗಿದೆ.

ಈ ಬೈಕಿನ ವೈಶಿಷ್ಟ್ಯಗಳು :

plus

ಹೀರೋ ಪ್ಯಾಶನ್ ಪ್ಲಸ್ ಹೊಸದಾಗಿ ವೈಶಿಷ್ಟ್ಯತೆ ಗಳನ್ನು ನವೀಕರಿಸಲಾಗಿದೆ ಲಾಕ್ ಮಾಡಬಹುದಾದ ಯುಟಿಲಿಟಿ ಬಾಕ್ಸ್, ಟ್ರಿಪ್‌ಮೀಟರ್ ಮತ್ತು ಓಡೋಮೀಟರ್‌ನೊಂದಿಗೆ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಸೈಡ್-ಸ್ಟ್ಯಾಂಡ್ ಇಂಡಿಕೇಟರ್‌ನಂತಹ ವೈಶಿಷ್ಟ್ಯಗಳನ್ನು ಬಳಕೆದಾರರು ಆನಂದಿಸಬಹುದು. ಹೀರೋನ ಪೇಟೆಂಟ್ ಪಡೆದ i3s (ಐಡಲ್ ಸ್ಟಾಪ್ ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಅಳವಡಿಸಲಾಗಿದೆ , ಇದು ಬೈಕ್ ಹೆಚ್ಚು ಸಮಯ ನಿಷ್ಕ್ರಿಯವಾದಾಗ ಎಂಜಿನ್ ಅನ್ನು ಆಫ್ ಮಾಡುತ್ತದೆ ಮತ್ತು ತುಂಬಾ ಕಾಲ ನಗರ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ಇಂಧನವನ್ನು ಸಂರಕ್ಷಿಸಲು ಇದು ತುಂಬಾ ಉಪಯುಕ್ತವಾಗಿದೆ.

ಇನ್ನು ಹೀರೋ ಪ್ಯಾಶನ್ ನ ಎಂಜಿನ್ ಮತ್ತು ಬ್ರೆಕ್ ಬಗ್ಗೆ ನೋಡುವುದಾದರೇ, ಇದು
8PS ಮತ್ತು 8.05Nm ಅನ್ನು ಉತ್ಪಾದಿಸುವ 97.2cc ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಲಿತವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ 130 mm ಡ್ರಮ್ ಬ್ರೇಕ್‌ಗಳನ್ನು ಪಡೆಯುತ್ತದೆ. ಹಾಗೆಯೇ ಈ ಬೈಕ್ 11 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಮತ್ತು 115 ಕೆಜಿ ಕರ್ಬ್ ತೂಕವನ್ನು ಹೊಂದಿದೆ.

telee

ಹೀರೋ ಪ್ಯಾಶನ್ ಪ್ಲಸ ನ ಬೆಲೆ(price):

ಪ್ಯಾಶನ್ ಪ್ಲಸ್ – 2023 ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ ಮತ್ತು ಇದರ ಅಧಿಕೃತ ಎಕ್ಸ್ – ಶೋರೂಮ್(ದೆಹಲಿ) ಬೆಲೆ ಯು ರೂ. 76,301 ಆಗಿರುತ್ತದೆ. ಸ್ಪೋರ್ಟ್ಸ್ ರೆಡ್, ಬ್ಲ್ಯಾಕ್ ನೆಕ್ಸಸ್ ಬ್ಲೂ ಮತ್ತು ಬ್ಲ್ಯಾಕ್ ಹೆವಿ ಗ್ರೇ ಮೂರು ಬಣ್ಣಗಳ ಆಯ್ಕೆಯನ್ನು ಕಾಣಬಹುದಾಗಿದೆ. ಹಾಗೆ ಯುವ ಜನರಿಗೆ ಹೀರೋ ಪ್ಯಾಶನ್ ಪ್ಲಸ್ ಒಂದು ಉತ್ತಮ ಆಯ್ಕೆಯ ಬೈಕ್ ಎಂದು ಹೇಳಲು ತಪ್ಪಾಗುವುದಿಲ್ಲ.

ನೀವೇನಾದರೂ ಮಧ್ಯಮ ಬೆಲೆಯ ಒಂದು ಉತ್ತಮವಾದ ಬೈಕನ್ನು ಹುಡುಕುತ್ತಿದ್ದರೆ ಇದು ಒಳ್ಳೆಯ ಆಯ್ಕೆ ಎನ್ನಬಹುದಾಗಿದೆ. ಹಾಗೆಯೇ ಇಂತಹ ಉತ್ತಮ ಬೈಕ್ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!