WhatsApp Image 2025 11 19 at 1.20.31 PM

BIG NEWS : ರಾಜ್ಯದಲ್ಲಿ `ಶಾಲಾ ಶೈಕ್ಷಣಿಕ ಪ್ರವಾಸ’ಕ್ಕೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

WhatsApp Group Telegram Group

ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ( Primary and High School Students ) ಶೈಕ್ಷಣಿಕ ಪ್ರವಾಸವನ್ನು ( Educational Tour ) ಕೈಗೊಳ್ಳಲು ಶಿಕ್ಷಣ ಇಲಾಖೆ ( Education Department ) ಇದೀಗ ಮಹತ್ವದ ಮಾರ್ಗಸೂಚಿಯನ್ನು ಪ್ರಕಟಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……..

ಶೈಕ್ಷಣಿಕ ಪ್ರವಾಸಕ್ಕೆ ಹೋಗುನ ಶಾಲೆಯವರು ಇಲಾಖೆಯ ಅನುಮತಿಗಾಗಿ ಸಲ್ಲಿಸಬೇಕಾದ ದಾಖಲೆಗಳು ಹೀಗಿವೆ

1) ಮುಖ್ಯ ಗುರುಗಳ ಮನವಿ

2) ಶೈಕ್ಷಣಿಕ ಪ್ರವಾಸದ ಸ್ಥಳಗಳನ್ನು ಒಳಗೊಂಡ ವೇಳಾಪಟ್ಟಿ

3) ಪ್ರವಾಸಕ್ಕೆ ಹೋಗುವ ವಿದ್ಯಾರ್ಥಿಗಳ ಪಟ್ಟಿ

4) ಪ್ರವಾಸಕ್ಕೆ ಹೋಗುವ ಶಿಕ್ಷಕರ ಪಟ್ಟಿ

5) ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆ ಪತ್ರ

6) ವಾಹನದ ನೋಂದಣಿ ಪ್ರತಿ

7) ವಾಹನದ ಪರವಾನಗಿ ಪತ್ರ

8) ವಾಹನದ ವಿಮೆ(ಇತ್ತೀಚಿನದು)

9) ಚಾಲಕನ ಪರವಾನಗಿ ಪತ್ರ(ಬ್ಯಾಡ್ಜ್)

10) ಆಡಳಿತ ಮಂಡಳಿಯ ಅನುಮತಿಯ ಪತ್ರ(ಖಾಸಗಿ ಶಾಲೆಗೆ)

11) ಎಸ್.ಡಿ.ಎಂ.ಸಿ ನಡಾವಳಿ ಪತ್ರ(ಸರ್ಕಾರಿ ಶಾಲೆಗೆ ಮಾತ್ರ)

12) ಮಕ್ಕಳ ಸುರಕ್ಷತೆ ಬಗ್ಗೆ ದೃಢೀಕರಣ

13) ರಾಜ್ಯದೊಳಗೆ ಪ್ರವಾಸ ಕೈಗೊಳ್ಳುವ ಬಗ್ಗೆ ದೃಢೀಕರಣ

14) ಪ್ರವಾಸ ದಿನಗಳನ್ನು ರಜಾ ಅವಧಿಗಳಲ್ಲಿ ಸರಿದೂಗಿಸುವ ಬಗ್ಗೆ ದೃಢೀಕರಣ ಪತ್ರ

15) ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಪ್ರವಾಸಕ್ಕೆ ಕೊಂಡೊಯ್ಯುವ ಬಗ್ಗೆ ದೃಢೀಕರಣ ಪತ್ರ

ಷರತ್ತುಗಳು

1) ಪ್ರತಿ ವರ್ಷ ಡಿಸೆಂಬರ ಮಾಹೆಯ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು.

2) ಯಾವುದೇ ಕಾರಣಕ್ಕೂ ಡಿಸೆಂಬರ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡುವುದು.

3) ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಇಲಾಖಾ ಅನುಮತಿಯನ್ನು ತಪ್ಪದೇ ಪಡೆದಿರಬೇಕು.

4) ಶೈಕ್ಷಣಿಕ ಪ್ರವಾಸಕ್ಕೆ ತೆರಳಲಿರುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಪಡೆಯಬೇಕು.

5) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು.

6) ಯಾವುದೇ ಕಾರಣಕ್ಕೂ ಖಾಸಗಿ ಹಾಗೂ ಮಿನಿ ಬಸ್ಸಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.

7) ಈ ರೀತಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆಥವಾ ಕರ್ನಾಟಕ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲಿ ಪ್ರವಾಸವನ್ನು ಕೈಗೊಳ್ಳುವಾಗ ನಿಗದಿಪಡಿಸಿದ ಸ್ಥಳಾವಕಾಶ ಮೀರದಂತೆ ಎಚ್ಚರವಹಿಸುವುದು.

8) ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳತಕ್ಕದ್ದು

WhatsApp Image 2025 11 19 at 12.56.36 PM 130371a2 4190 4502 beb5 481dd091a006 1
WhatsApp Image 2025 11 19 at 12.56.36 PM 1 7737127b 1875 4ec0 832a 8234847d25c7
WhatsApp Image 2025 11 19 at 12.56.37 PM 2b457ca9 3891 4e1d b372 6f0628dc1962 1
WhatsApp Image 2025 11 19 at 12.56.38 PM
WhatsApp Image 2025 11 19 at 12.56.38 PM 1
WhatsApp Image 2025 11 19 at 12.56.40 PM
WhatsApp Image 2025 11 19 at 12.56.40 PM 1
WhatsApp Image 2025 11 19 at 12.56.41 PM
WhatsApp Image 2025 11 19 at 12.56.41 PM 1
This image has an empty alt attribute; its file name is WhatsApp-Image-2025-09-05-at-10.22.29-AM-3-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories