Gruhalakshmi – ಮೊಬೈಲ್ ನಲ್ಲೆ ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣದ ಜಮಾ ಸ್ಟೇಟಸ್ ಚೆಕ್ ಮಾಡಿ

gruhalakshmi 7

ರಾಜ್ಯದಲ್ಲಿ ಇದೀಗ ಗೃಹಲಕ್ಷ್ಮಿ ಯೋಜನೆಯ ಆರಂಭವಾಗಿದ್ದು, ಅನೇಕ ಮಹಿಳೆಯರಿಗೆ ಈಗಾಗಲೇ ಹಣ ಸಹಿತ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತಿದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಈ ಯೋಜನೆ ಕಾಂಗ್ರೆಸ್ ನೀಡಿದ್ದ 5 ಗ್ಯಾರೆಂಟಿಗಳ ಭಾಗವಾಗಿತ್ತು.ಈ ಯೋಜನೆಗೆ ನೊಂದಾಯಿಸಿಕೊಳ್ಳಲು ಈಗಲೂ ಸಹಿತ ತುಂಬಾ ಮಹಿಳೆಯರು ಪ್ರಯತ್ನ ಪಡುತ್ತಿದ್ದಾರೆ. ಬ್ಯಾಂಕುಗಳು ಮತ್ತು ಆಧಾರ್ ಕೇಂದ್ರಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋದಾಯಿಸಿಕೊಂಡು ಹಣ ಪಡೆಯುತ್ತಿರುವ ಮಹಿಳೆಯರು ತಿಳಿಯಲೇಬೇಕಾದ ಅತ್ಯಗತ್ಯ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸ್ಟೇಟಸ್ ಚೆಕ್ ಮಾಡಲು ಹೊಸ ವೆಬ್ ಲಿಂಕ್ ( Gruhalakshmi Status link ) ಬಿಡುಗಡೆ :

ಇದೀಗ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ರೇಷನ್ ಕಾರ್ಡ್ ನಂಬರ್ ( Ration Card Number ) ಬಳಸಿ ಚೆಕ್ ( Status Check ) ಮಾಡಬಹುದು. ಅದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ

ರಾಜ್ಯ ಸರಕಾರದ ವತಿಯಿಂದ ಚಾಲ್ತಿಯಲ್ಲಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ರೂಲ್ಸ್ ( New Rules ) ಮತ್ತು ಹಲವು ಬದಲಾವಣೆ ಮಾಡಲಾಗಿದೆ. ಹಾಗಾಗಿ ಮಾಹಿತಿ ಕಣಜ ತಂತ್ರಾಂಶ ವಿಭಾಗದಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ( Application Information ) ಮತ್ತು ಪ್ರತಿ ತಿಂಗಳ ಹಣ ವರ್ಗಾವಣೆ ವಿವರವನ್ನು ತಿಳಿಯಲು ಹೊಸ ವೆಬ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಅದರ ಮೂಲಕ ನಿಮ್ಮ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮೀ ಹಣ ಜಮಾ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂ ಅನ್ನು ಪಡೆಯುತ್ತಿದ್ದಾರೆ. ಹಾಗೆಯೇ ಅವರು ಪಡೆದ ಅಥವಾ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಅವರಿಗೆ ತಿಳಿಯುದಿಲ್ಲ. ಇದೀಗ ರಾಜ್ಯ ಸರ್ಕಾರ ಆ ಒಂದು ಸಮಸ್ಯೆಯನ್ನು ಪರಿಹರಿಸಿದೆ. ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ನಂಬರ್ ( Ration Card Number ) ಬಳಸಿ ಹಣ ಜಮಾ ಅಥವಾ ಅರ್ಜಿ ಸಲ್ಲಿಸಿದ ವಿವರ ತಿಳಿಯಬಹುದು.

ರೇಷನ್ ಕಾರ್ಡ್ ನಂಬ‌ರ್ ಬಳಸಿ ಗೃಹಲಕ್ಷ್ಮಿ ಹಣ ಜಮಾ ಮಾಹಿತಿ ತಿಳಿಯುವ ವಿಧಾನ ( Steps for Checking Application Status ) :

ಹಂತ 1: ಈ ಕೆಳಗೆ ಕೊಟ್ಟಿರುವ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/Service/Service/3136

ಹಂತ 2 : ರಾಜ್ಯ ಸರಕಾರದ ಅಧಿಕೃತ ಇ- ಆಡಳಿತ ವಿಭಾಗದ ಮಾಹಿತಿ ಕಣಜ ಜಾಲತಾಣದ ಈ ಪುಟದಲ್ಲಿ ಕಾಣುವ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

whatss

G001

ಹಂತ 3 : ಅದಾದ ನಂತರ ಅರ್ಜಿದಾರರ 12 ಅಂಕಿಯ ರೇಷನ್ ಕಾರ್ಡ್ ನಂಬ‌ರ್ ಅನ್ನು ಸರಿಯಾಗಿ ನಮೂದಿಸಿ ಪಕ್ಕದಲ್ಲೇ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

G002

ಹಂತ 4 : ಈ ರೀತಿ ಕ್ಲಿಕ್ ಮಾಡಿದ ನಂತರ ಈ ಪುಟದಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ (Applied date), ನಿಮ್ಮ ಅರ್ಜಿ ಸ್ಥಿತಿ (Status), ಅರ್ಜಿ ಅನುಮೋದನೆಯಾದ ದಿನಾಂಕ (Approved date) ಮತ್ತು ಕೊನೆಯಲ್ಲಿ ಹಣ ವರ್ಗಾವಣೆ ವಿವರ (Payment date and amount) ಎಂದು ತೋರಿಸುತ್ತದೆ ಬಳಿಕ ಇಲ್ಲಿ “Details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

G003

ಹಂತ 6 : ಆ ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳುವಾರು ಯಾವ ಯಾವ ದಿನದಂದು 2000 ರೂ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ಆ ಪೇಜ್ ನಲ್ಲಿ  ತೋರಿಸುತ್ತದೆ.

ಫಲಾನುಭವಿಗಳ ಗಮನಕ್ಕೆ ( Important Notice ) :

ಈ ಮೇಲಿನ ಹಂತಗಳನ್ನು ಬಳಸಿಕೊಂಡು ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ ಅರ್ಜಿ ಮಾಹಿತಿ ಮತ್ತು ಹಣ ಜಮಾ ವಿವರ ಚೆಕ್ ಮಾಡುವಾಗ ಯಾವುದೇ ವಿವರ ತೋರಿಸದಿದ್ದರೆ ಅದರ ಅರ್ಥ ನಿಮಗೆ ಈ ಯೋಜನೆಯಡಿ ಹಣ ಜಮಾ ಅಗಿರುವುದಿಲ್ಲ. ಅರ್ಜಿದಾರರು ಗೊಂದಲಕ್ಕೆ ಒಳಗಾಗದೆ ಒಮ್ಮೆ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (CDPO) ಕಚೇರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿ ಕುರಿತು ವಿಚಾರಿಸಬಹುದು. ಅಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!