ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ, ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ವಿವರವಾಗಿ ನೋಡೋಣ, ಈ ಯೋಜನೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆ ಏನು, ದಾಖಲಾತಿಗಳೇನು, ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಗೃಹ ಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು.
ಗೃಹ ಲಕ್ಷ್ಮೀ ಯೋಜನೆ ಕರ್ನಾಟಕ 2023
ಗೃಹ ಲಕ್ಷ್ಮಿ ಯೋಜನೆ ಕರ್ನಾಟಕ 2023 ಇಂದಿನ ಸುದ್ದಿ
ಗೃಹ ಲಕ್ಷ್ಮಿ ಯೋಜನೆ. ಗೃಹ ಲಕ್ಷ್ಮೀ ಯೋಜನೆ (Gruha Lakshmi Scheme) ಜಾರಿಗೆ ತರಲು ಕರ್ನಾಟಕ ಸರ್ಕಾರದಿಂದ ಆದೇಶ ಹೊರಬಿದ್ದಿದೆ. ಆ ಮೂಲಕ ಕರ್ನಾಟಕ ರಾಜ್ಯದ ಪ್ರತಿ ಮನೆಯ ಯಜಮಾನಿಯ ಬ್ಯಾಂಗ್ ಖಾತೆಗೆ ಪ್ರತಿ ತಿಂಗಳು ಸರ್ಕಾರದಿಂದ 2 ಸಾವಿರ ರೂಪಾಯಿ ಬೀಳುವುದು ಗ್ಯಾರಂಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಕಾಂಗ್ರೆಸ್ ನೀಡಿದ್ದ ಐದು ಭರವಸೆಗಳಿಗೆ ಅನುಮೋದನೆ ದೊರಕಿದೆ. ಈ ಪೈಕಿ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲು ಆದೇಶ ಹೊರಡಿಸಿದ್ದಾರೆ.
ಅರ್ಹತಾ ಮಾನದಂಡ:
ಗೃಹ ಲಕ್ಷ್ಮೀ ಇದನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಬ್ಯಾಂಕ್ ಅಕೌಂಟ್ಸ್, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಯಾರು ಮನೆಯ ಯಜಮಾನಿ ಎಂಬುದು ತೀರ್ಮಾನಿಸಬೇಕಾಗಿದೆ. ನಾವು ಹೇಳಿರುವಂತದ್ದು ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ ಎಂದಿದ್ದೆವು. ಆದ್ದರಿಂದ ಅಕೌಂಟ್ ಮಾಹಿತಿ, ಆಧಾರ್ ಕಾರ್ಡ್, ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15ರ ಒಳಗಾಗಿ ಮನೆ ಒಡತಿಯ ಮಾಹಿತಿ ನೀಡಬೇಕು. ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಇದು ಆದಮೇಲೆ ಜುಲೈ 15ರಿಂದ ಆಗಸ್ಟ್ 15ರ ಒಳಗಡೆ ಪ್ರೋಸಸ್ ಮಾಡಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಮನೆಯ ಯಜಮಾನಿ ಖಾತೆಗೆ 2000 ರೂ ಜಮಾ ಮಾಡುತ್ತೇವೆ ಎಂದರು.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರ ಮನೆಯ ಒಡತಿಯ ಖಾತೆಗೆ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗುತ್ತದೆ. ಮನೆಯ ಯಜಮಾನಿ ಯಾರು ಎನ್ನುವ ಬಗ್ಗೆ ಕುಟುಂಬಸ್ಥರೇ ಮಾಹಿತಿಯನ್ನು ನೀಡಬೇಕು. ಆ ಮಾಹಿತಿ ಆಧಾರದ ಮೇಲೆ ಪ್ರತಿ ತಿಂಗಳು 2000 ರೂ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ದಾಖಲೆಗಳು ಏನು ಬೇಕು ?
- ಗುರುತಿನ ಪುರಾವೆ:- ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಅಥವಾ ಯಾವುದೇ ಸರ್ಕಾರ ನೀಡಿದ ಐಡಿ ಪುರಾವೆ.
- ವಿಳಾಸ ಪುರಾವೆ:- ಪಡಿತರ ಚೀಟಿ, ವಿದ್ಯುತ್ ಬಿಲ್, ನೀರಿನ ಬಿಲ್ ಅಥವಾ ಯಾವುದೇ ಸರ್ಕಾರ ನೀಡಿದ ವಿಳಾಸ ಪುರಾವೆ.
- ಬ್ಯಾಂಕ್ ಪಾಸ್ ಬುಕ್ :- ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಮತ್ತು ಪಾಸ್ ಬುಕ್ ನಕಲು.
ಗೃಹ ಲಕ್ಷ್ಮಿ ಯೋಜನೆ ಕರ್ನಾಟಕಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸರಳ ಮತ್ತು ನೇರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅರ್ಜಿ ಪ್ರಕ್ರಿಯೆಯ ವಿವರಗಳನ್ನು ಸರ್ಕಾರವು ಶೀಘ್ರದಲ್ಲೇ ಪ್ರಕಟಿಸಲಿದೆ. ಅರ್ಜಿದಾರರು ತಮ್ಮ ಹೆಸರು, ವಯಸ್ಸು, ವಿಳಾಸ ಮತ್ತು ಆದಾಯ ಸೇರಿದಂತೆ ತಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಬೇಕಾಗುತ್ತದೆ.
ಕರ್ನಾಟಕ ಗೃಹ ಜ್ಯೋತಿ ಯೋಜನೆ ಬಗ್ಗೆ ಸಂಪೂರ್ಣ ವಿವರ..! ಷರತ್ತುಗಳೇನು?? ಈಗಲೇ ಓದಿ
ಅರ್ಜಿ ಪ್ರಾರಂಭವಾದ ನಂತರ ಅರ್ಜಿ ಸಲ್ಲಿಸುವ ಸಂಪೂರ್ಣವಾದ ಮಾಹಿತಿಯನ್ನು ಅರ್ಜಿ ಸಲ್ಲಿಸುವ ಲೈವ್ ವಿಡಿಯೋವನ್ನು ನಾವು ಇಲ್ಲಿ ಪ್ರಕಟಿಸುತ್ತೇವೆ. ಆದಕಾರಣ ಮುಂದಿನ ಎಲ್ಲಾ ಅಪ್ಡೇಟ್ ಗಳಿಗೆ ನಮ್ಮ ವಾಟ್ಸಪ್ & ಟೆಲಿಗ್ರಾಂ ಸೇರಿಕೊಳ್ಳಿ.
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ ? ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
| ಪ್ರಮುಖ ಲಿಂಕುಗಳು |
| ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ |
Download App |
| ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







