Gruhalakshmi- ಇನ್ನುಳಿದ ಎಲ್ಲ ಮಹಿಳೆಯರಿಗೆ ₹2000/- ಗೃಹಲಕ್ಷ್ಮಿ ಹಣ ಜಮಾ, ಯಾರಿಗೆಲ್ಲ ಬಂದಿಲ್ಲ ಮೊಬೈಲಲ್ಲಿ ಈ ರೀತಿ ಮಾಡಿ.

WhatsApp Image 2023 09 09 at 6.58.19 AM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿಯ ಹಣವು ಇನ್ನೂ  ಅನೇಕ ಮಹಿಳೆಯರಿಗೆ ಏಕೆ ಬಂದಿಲ್ಲ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿನ್ನೆ ಸುದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಯಾವ ಕಾರಣಕ್ಕಾಗಿ ಇನ್ನೂ ಹಣ ಜಮಾ ಆಗಿಲ್ಲ?, ಮತ್ತು ಯಾವಾಗ ಹಣ ಬರುತ್ತದೆ?, ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿಯ ಹಣ ಇನ್ನು ಕೆಲವರಿಗೆ ಯಾಕೆ ಬಂದಿಲ್ಲ?:

Screenshot 2023 08 31 12 41 48 20 0ce57feeccaa51fb7deed04b4dbda235

ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಈಗಾಗಲೇ ಇಲಾಖೆಯ ವತಿಯಿಂದ ಹಣ ಬಿಡುಗಡೆಯಾಗಿದೆ, ಇಲಾಖೆಯಿಂದ ಬಿಡುಗಡೆಯಾದ ಹಣವು ಬ್ಯಾಂಕುಗಳಿಗೆ ವರ್ಗಾವಣೆಯಾಗುತ್ತದೆ, ನಂತರ ಬ್ಯಾಂಕ್ ಸಿಬ್ಬಂದಿಗಳು ಆಯಾ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡುತ್ತಾರೆ. ಬ್ಯಾಂಕಿನಲ್ಲಿ ಒಂದು ದಿನಕ್ಕೆ ಇಂತಿಷ್ಟು ಹಣವನ್ನು ಜಮಾ ಮಾಡಬೇಕು ಎಂಬ ನಿಯಮವಿರುತ್ತದೆ ಹಾಗಾಗಿ ಎಲ್ಲಾ ಫಲಾನುಭವಿಗಳಿಗೆ ಒಂದೇ ದಿನದಲ್ಲಿ ಹಣವನ್ನು ಖಾತೆಗೆ ವರ್ಗಾವಣೆ ಮಾಡಲು ಆಗುವುದಿಲ್ಲ. ಆದ್ದರಿಂದ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಇನ್ನೇನು ಎರಡು ಅಥವಾ ಮೂರು ದಿನಗಳಲ್ಲಿ ಅಂದರೆ ಶನಿವಾರದ ಒಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಜಮಾವಾಗುತ್ತದೆ ಎಂದು ಸುದ್ದಿಗೋಷ್ಠಿಯ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. 65 ಲಕ್ಷ ಫಲಾನುಭವಿಗಳಿಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ.

ಏಳರಿಂದ ಎಂಟು ಲಕ್ಷ ಫಲಾನುಭವಿಗಳ ಖಾತೆಗೆ ಹಣವನ್ನು ಏಕೆ ಹಾಕಲು ಆಗುತ್ತಿಲ್ಲ?:

ವಿಡಿಯೋ ಕೃಪೆ – ದಿಗ್ವಿಜಯ ನ್ಯೂಸ್ ಕನ್ನಡ

ಈಗಾಗಲೇ 65 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗಿದ್ದು, ಏಳರಿಂದ ಎಂಟು ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಯ ಅಕೌಂಟ್ ಎರರ್ ತೋರಿಸುತ್ತದೆ. ಈ 8 ಲಕ್ಷ ಫಲಾನುಭವಿಗಳಿಗೆ ಹಣ ಏಕೆ ವರ್ಗಾವಣೆ ಆಗುತ್ತಿಲ್ಲ ಎಂದರೆ, ಅವರು ಹಲವಾರು ವರ್ಷಗಳಿಂದ ಆ ಖಾತೆಯನ್ನು ಬಳಕೆ ಮಾಡದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಅನೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀಡಿದ ಖಾತೆಯಲ್ಲಿ ಯಾವುದೇ ರೀತಿಯ ವಹಿವಾಟುಗಳು ಇಲ್ಲದೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇಂತವರ ಖಾತೆಯ ಫಲಾನುಭವಿಗಳ ಹೆಸರುಗಳನ್ನು ಪಟ್ಟಿ ಮಾಡಿ ಆಯಾ ಗ್ರಾಮದ ಆಶಾ ಕಾರ್ಯಕರ್ತರಿಗೆ ಪಟ್ಟಿಯನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು  ಆ ಜನರಿಗೆ ವಿಷಯವನ್ನು ಮುಟ್ಟಿಸಿ, ಖಾತೆಯನ್ನು ಸರಿ ಮಾಡಿಸಿಕೊಳ್ಳುವಂತೆ ಸೂಚಿಸುತ್ತಾರೆ. ನಂತರ ಆ ಏಳರಿಂದ ಎಂಟು ಫಲಾನುಭವಿಗಳಿಗೆ ಗೃಹಲಕ್ಷ್ಮಿಯ ಹಣ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

whatss

ಇನ್ನು ಉಳಿದ ಫಲಾನುಭವಿಗಳಿಗೆ ಶನಿವಾರದ ಒಳಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯೇ ಎಂದು ಹೇಗೆ ಚೆಕ್ ಮಾಡುವುದು?:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನೀಡಿರುತ್ತೀರಿ, ಆದ್ದರಿಂದ ನಿಮ್ಮ ಫೋನಿಗೆ ಎಸ್ಎಂಎಸ್ ಬರುತ್ತದೆ. ಅದನ್ನು ನೀವು ಚೆಕ್ ಮಾಡಿ ನೋಡಿ. ಒಂದು ವೇಳೆ ಎಸ್ಎಂಎಸ್ ಬರದಿದ್ದಲ್ಲಿ, ಆನ್ಲೈನ್ ಬ್ಯಾಂಕಿಂಗ್ ಮೂಲಕ ನೀವು ಚೆಕ್ ಮಾಡಬಹುದು. ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಿತಿ ಪರಿಶೀಲನೆ ಮಾಡುವ ಮೂಲಕ ಇಂದು ನಿಮ್ಮ ಬ್ಯಾಂಕ್‌ ಖಾತೆಗೆ 2 ಸಾವಿರ ರೂಪಾಯಿ ಜಮಾ ಆಗುವುದೇ ಎಂದು ಖಚಿತಪಡಿಸಿಕೊಳ್ಳಬಹುದು. ಎಲ್ಲಾದರೂ ಅರ್ಜಿ ಸಲ್ಲಿಕೆ ತಪ್ಪಾಗಿದ್ದಲ್ಲಿ ಅಥವಾ ಇನ್ನೂ ಪ್ರಕ್ರಿಯೆ ಆಗದೆ ಇದ್ದರೆ ಇಂದು ನಿಮ್ಮ ಖಾತೆಗೆ 2 ಸಾವಿರ ರೂಪಾಯಿ ಬರುವುದಿಲ್ಲ. ಇಂದು 50 ಲಕ್ಷ ಜನರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಆಗುವ ಪ್ರಕ್ರಿಯೆ ಪ್ರಾರಂಭವಾಗಿದೆ.

Screenshot 2023 08 31 12 41 48 20 0ce57feeccaa51fb7deed04b4dbda235

ಆಧಾರ್ ಕಾರ್ಡ್ ನೊಂದಿಗೆ  ಡಿಬಿಟಿ ಲಿಂಕ್ ಮಾಡಿ :

ಡಿಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಇದರಿಂದಾಗಿ ಮಹಿಳೆಯರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಯೋಜನೆಯ ₹2,000 ಮತ್ತು ಅನ್ನಭಾಗ್ಯದ ₹170 ರೂಪಾಯಿ ಜಮಾ ಆಗುತ್ತದೆ.  ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು , ನೇರವಾಗಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.ಹಾಗಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಡಿಬಿಟಿ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಿ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ನಿಮ್ಮ ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಆಗಿದೆ ಎಂಬುದನ್ನು ಹೇಗೆ ನೋಡುವುದು?:

ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. https://resident.uidai.gov.in/bank-mapper

ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಹಾಗೆ ಕ್ಯಾಪ್ಚರ್ ಅನ್ನು ಎಂಟರ್ ಮಾಡಿ.

aa11

ಹಂತ 3: ನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್OTP ಬರುತ್ತೆ ಅದನ್ನು ನಮೂದಿಸಿ, ನಂತರ Submit ಮೇಲೆ ಕ್ಲಿಕ್ ಮಾಡಿ

aa12

ಹಂತ 4: ನಂತರ ಅದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತದೆ.

aa13

ಹಂತ 5: ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಶಾಖೆಗೆ ತೆರಲಿ ಲಿಂಕ್ ಮಾಡಿಸಬೇಕು.

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ATM ಗಳ ಮೂಲಕ ಕೂಡ ಮಾಡಿಸಬಹುದು, ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್ ಗಳಲ್ಲಿ ಆಯಾ ಬ್ಯಾಂಕ್ ಆಪ್ ಗಳನ್ನು ಬಳಸಿ ಮಾಡಬಹುದು. ಅಥವಾ ಬ್ಯಾಂಕ್ ಶಾಖೆಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವ ಮೂಲಕ ಕೂಡ ಮಾಡಿಸಬಹುದು.

ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮೊಬೈಲ್ ನಲ್ಲಿ ಚೆಕ್ ಮಾಡುವ ಡೈರೆಕ್ಟ ಲಿಂಕ್ ಇಲ್ಲಿದೆ

whatss

ಗೃಹಲಕ್ಷ್ಮಿ ಯೋಜನೆಯ ಹಣದ ಜಮೆ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

tel share transformed

Leave a Reply

Your email address will not be published. Required fields are marked *