ರೇಷನ್ ಕಾರ್ಡ್ ಇಲ್ಲ ಅಂದ್ರೆ ಈಗ ಗುರುಲಕ್ಷ್ಮೀಗೆ ಅಪ್ಲೈ ಮಾಡಬಹುದಾ? ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್ – ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Image 2023 09 21 at 7.09.26 AM

ಕೇಂದ್ರ ಸರ್ಕಾರದ ವತಿಯಿಂದ ಗೃಹ ಲಕ್ಷ್ಮಿ ಯೋಜನೆಯಲ್ಲಿ ಹೊಸ ಸುದ್ದಿ ಬಂದಿದೆ. ಏನಂದ್ರೆ ಯೋಜನೆಯಲ್ಲಿ ಮತ್ತೊಂದು ಹೊಸ ತಿದ್ದುಪಡಿಯನ್ನು ಮಾಡಲಾಗಿದೆ. ಮತ್ತು ಇದು ಸಾರ್ವಜನಿಕರಿಗೆ ಸಂತಸ ತಂದಿದೆ. ಏನಿದು ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಅಪ್ಲೈ ಮಾಡಲು ರೇಷನ್ ಕಾರ್ಡ್(ration card) ಕಡ್ಡಾಯನಾ? ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗದೆ ಇದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಖಾತೆಗೆ ಬರುತ್ತಾ? ಗೃಹಿಣಿ ಯಜಮಾನಿ ಆಗದೆ ಇದ್ದರೂ ಹಣ ಬರುತ್ತಾ? ಇಂಥಹ ಹಲವಾರು ಪ್ರಶ್ನೆಗಳು ನಿಮ್ಮ ಕಾಡುತ್ತಿದ್ದರೆ, ಅದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.

WhatsApp Image 2023 09 21 at 6.52.49 AM

ನಿಮ್ಮ ಗೊಂದಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ :

ಮೊದಲನೆಯದಾಗಿ ರೇಷನ್ ಕಾರ್ಡ್ ಇಲ್ಲದೆ ಅಪ್ಲೈ ಮಾಡಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಗೃಹಲಕ್ಷ್ಮಿ ಯೋಜನೆಯ 2000ರೂ.ಗಳನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.

ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅವರು ಹೊಸ ರೇಷನ್ ಕಾರ್ಡ್ ಆಗುವವರೆಗೆ ಕಾದು ಹೊಸ ರೇಷನ್ ಕಾರ್ಡ್ ಪಡೆದು ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸದ್ಯದಲ್ಲಿಯೇ ಈಗಾಗಲೇ ಅರ್ಜಿ ತೆಗೆದುಕೊಂಡಿರುವ ರೇಷನ್ ಕಾರ್ಡ್ ಗಳನ್ನು ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇನ್ನು ಗೃಹಲಕ್ಷ್ಮಿ ಯೋಜನೆಗೆ ಅಂತಿಮ ದಿನಾಂಕ ಕೂಡ ಘೋಷಣೆಯಾಗಿಲ್ಲ, ವರ್ಷ ಪೂರ್ತಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ರೇಷನ್ ಕಾರ್ಡ್ ಇಲ್ಲದವರು ರೇಷನ್ ಕಾರ್ಡ್ ಪಡೆದು ನಂತರ ಅರ್ಜಿ ಸಲ್ಲಿಸಬಹುದು.

2,000ರೂ. ಹಣ ಪಡೆದುಕೊಳ್ಳಲು ಆಧಾರ್ ಸೀಡಿಂಗ್ ಕಡ್ಡಾಯ :

ಬ್ಯಾಂಕ್ ಅಕೌಂಟ್ (bank account) ಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತದೆಯೇ ಎಂಬ ಪ್ರಶ್ನೆ ಇದೆ ಅಲ್ಲವೇ?, ಖಂಡಿತವಾಗಿಯೂ ಇಲ್ಲ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ನೀವು ಪಡೆದುಕೊಳ್ಳಬೇಕೆಂದರೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ (Bank Account) ಜೊತೆಗೆ ಲಿಂಕ್ ಆಗಿರಲೇಬೇಕು.

ಒಂದು ವೇಳೆ ಆಧಾರ್ ಸೀಡಿಂಗ್ ಆಗದೇ ಇದ್ದಲ್ಲಿ ಸರ್ಕಾರದಿಂದ ನಿಮ್ಮ ಖಾತೆಗೆ ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಸೀಡಿಂಗ್, NPCI ಕಡ್ಡಾಯವಾಗಿದೆ.

ಯಜಮಾನಿ ಇಲ್ದೆ ಇದ್ರೆ ಹಣ ಸಿಗುತ್ತಾ?:

ಇನ್ನು ಮೂರನೆಯದಾಗಿ ಮನೆಯ ಯಜಮಾನಿ ಇಲ್ಲದೆ ಇದ್ರೆ ಏನು ಮಾಡೋದು? ಒಂದು ವೇಳೆ ಮನೆ ಯಜಮಾನಿ ಇಲ್ಲದೆ ಇದ್ದಲ್ಲಿ ಯಜಮಾನ, ಸೊಸೆ ಅಥವಾ ಆ ಮನೆಯ ಎರಡನೇ ಹಿರಿಯ ಮಹಿಳೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾಗಿ ಮನೆಯಲ್ಲಿ ಯಜಮಾನಿ ಇಲ್ಲದೆ ಇದ್ದಲ್ಲಿ ತಕ್ಷಣವೇ ರೇಷನ್ ಕಾರ್ಡ್ ನಿಂದ ಅವರ ಹೆಸರನ್ನು ತೆಗೆಸಬೇಕು ಜೊತೆಗೆ ಹೊಸ ಯಜಮಾನಿ ಹೆಸರನ್ನು ಮುಖ್ಯ ಸದಸ್ಯರಾಗಿ ಸೇರ್ಪಡೆ ಮಾಡಬೇಕು. ಸದ್ಯ ರೇಷನ್ ಕಾರ್ಡ್ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಸ್ಥಗಿತಗೊಳಿಸಲಾಗಿದ್ದು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಡುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗುತ್ತದೆ.

ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ವಾ?,  ಹೀಗೆ ಮಾಡಿ :

ಇನ್ನು ಗ್ರಹಲಕ್ಷ್ಮಿ ಯೋಜನೆಯ 2000 ಗಳನ್ನು ಪಡೆದುಕೊಳ್ಳಲು ಬೇಕಾಗಿರುವ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೂ ಕೂಡ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂಬುದಾದರೆ, ಸರ್ಕಾರ ಈಗಾಗಲೇ ತಿಳಿಸಿರುವ ಹಾಗೆ ದಿನಕ್ಕೆ 6 ರಿಂದ 7 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ ಹಾಗಾಗಿ ಉಳಿದವರ ಖಾತೆಗೆ ಹತ್ತರಿಂದ ಹನ್ನೆರಡು ದಿನಗಳ ಒಳಗೆ ಮೊದಲ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆ ಗೆ ವರ್ಗಾವಣೆ ಆಗುತ್ತದೆ.

ನಿಮ್ಮ ಖಾತೆಗೆ (Bank Account) ಹಣ ಬಂದಿಲ್ಲ ಎಂಬುದಾದರೆ ನೀವು ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯನ್ನು ಸಂಪರ್ಕಿಸಿ ನಿಮ್ಮ ಅರ್ಜಿ ಸಲ್ಲಿಸುವಿಕೆ ಅಥವಾ ದಾಖಲೆಯಲ್ಲಿ ಯಾವುದಾದರೂ ಸಮಸ್ಯೆ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಒಟ್ಟಿನಲ್ಲಿ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ಸೆಪ್ಟೆಂಬರ್ ಅಂತ್ಯದ ಒಳಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಈ ಒಂದು ಹೊಸ ಬದಲಾವಣೆ ಸಾರ್ವಜನಿಕರಲ್ಲಿ ಸಂತಸ ತಂದಿದೆ. ಮತ್ತು ಇದರ ಸಂಪೂರ್ಣ ಅವಕಾಶವನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ ಹಣದ ಜಮೆ ಬಗ್ಗೆ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

tel share transformed

WhatsApp Group Join Now
Telegram Group Join Now

Related Posts

2 thoughts on “ರೇಷನ್ ಕಾರ್ಡ್ ಇಲ್ಲ ಅಂದ್ರೆ ಈಗ ಗುರುಲಕ್ಷ್ಮೀಗೆ ಅಪ್ಲೈ ಮಾಡಬಹುದಾ? ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್ – ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply

Your email address will not be published. Required fields are marked *

error: Content is protected !!