ಗೃಹಲಕ್ಷ್ಮಿ ಮುಂದಿನ 2000/- ಹಣ ಪಡೆಯಲು ಈ ಕೆಲಸ ಕಡ್ಡಾಯ, ತಪ್ಪದೇ ತಿಳಿದುಕೊಳ್ಳಿ

gruhalakshmi scheme

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು(Congress party) ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ(Gruhalakshmi scheme) ಪ್ರಾರಂಭಿಸುವುದಾಗಿ ಘೋಷಿಸಿತು. ಅದರಂತೆಯೇ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವು ಬಂದ ಮೇಲೆ ತನ್ನ ಗ್ಯಾರೆಂಟಿ ಯೋಜನೆಯನ್ನು ಆಡಳಿತಕ್ಕೆ ತಂದಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಆಗಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಈಗಾಗಲೇ ನಮಗೆಲ್ಲಾ ತಿಳಿದೇ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ಸರಿ ಇದ್ರೂ ಗೃಹಲಕ್ಷ್ಮಿ ಹಣ ಬಂದಿಲ್ವಾ :

ಲಕ್ಷಾಂತರ ಮಹಿಳೆಯರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಮಾಡಲು ಸರ್ಕಾರ ಪ್ರತಿ ತಿಂಗಳು 2000 ರೂಪಾಯಿ ಬಿಡುಗಡೆ ಮಾಡುತ್ತಿದೆ. ಆದರೆ ಇಷ್ಟೆಲ್ಲ ಮಾಡಿದರೂ ಗೃಹಲಕ್ಷ್ಮಿ ಯೋಜನೆಯ ಹಣ ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ ಸೇರುತ್ತಿಲ್ಲ. ಇದರಿಂದ ಮಹಿಳಾ ಫಲಾನುಭವಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಇಷ್ಟೇ ಅಲ್ಲ, ಕಾರಣಾಂತರಗಳಿಂದ ಇಂತಹ ಫಲಾನುಭವಿ ಮಹಿಳೆಯರ ಖಾತೆಗೆ (ಹಣ ಠೇವಣಿ) ಹಣ ವರ್ಗಾವಣೆಯಾಗುತ್ತಿಲ್ಲ ಎಂಬ ಆತಂಕವೂ ಸರಕಾರಕ್ಕಿದೆ

ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣವನ್ನು ಅರ್ಹ ಮತ್ತು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಬೇಕು ಎಂಬ ಕಾರಣಕ್ಕೆ ಸರ್ಕಾರ ವಿಭಿನ್ನ ಉಪಕ್ರಮಗಳನ್ನು ಕೈಗೊಂಡಿರುವುದು ಸುಳ್ಳಲ್ಲ. ಆದರೆ ನಿಮ್ಮ ಬ್ಯಾಂಕ್ ಖಾತೆ(Bank account)ಗೆ ಆಧಾರ್ ಸೀಡ್(Aadhar seed) ಆಗಿದ್ದರೆ, ನಿಮ್ಮ ಪಡಿತರ ಚೀಟಿ(Ration card) ಇ-ಕೆವೈಸಿ ಆಗಿದ್ದರೆ ಯಾವುದೇ ಮಿಸ್ ಇಲ್ಲದೆ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಈ ಕೆಲಸ ಮಾಡಿಯೂ ಕೂಡಾ ಮಹಿಳೆಯರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ.

ಇದಕ್ಕಾಗಿ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹ ಲಕ್ಷ್ಮೀ ಅದಾಲತ್ (ಗೃಹ ಲಕ್ಷ್ಮೀ ಅದಾಲತ್) ಗೃಹ ಲಕ್ಷ್ಮಿ ಶಿಬಿರ (ಕ್ಯಾಂಪ್) ನಡೆಸಿತ್ತು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹಣ ಜಮಾ ಆಗದಿರುವ ಫಲಾನುಭವಿ ಮಹಿಳೆಯರನ್ನು ಗುರುತಿಸಿ ಅವರ ಖಾತೆಗೆ ಇರುವ ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು. ಇಷ್ಟೆಲ್ಲ ಮಾಡಿದರೂ ಬೇರೆ ಹಲವಾರು ಕಾರಣಗಳಿಂದ ಮಹಿಳೆಯರ ಖಾತೆಗೆ ಹಣ ಬಂದಿಲ್ಲ.

whatss

 

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಜಮಾ ಆಗಿಲ್ಲ ಅಂದ್ರೆ ಹೀಗೆ ಮಾಡಿ :

ಯಾಕೆ ಜಮಾ ಆಗಿಲ್ಲ ಗೃಹಲಕ್ಷ್ಮಿ ಹಣ ಎಂದು ತಿಳಿಯಬೇಕಾದರೆ, ಮೊದಲಿಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದಲ್ಲಿ ಹಣ ಬರುವುದು ತಡವಾಗುತ್ತದೆ. ರೇಷನ್ ಕಾರ್ಡ್ ಅಪ್ಡೇಟ್ ಆಗಿಲ್ಲ ಎಂದರೆ ಹಣ ಬರುವುದು ತಡವಾಗುತ್ತದೆ. NPCI ಆಗಿಲ್ಲ ಮತ್ತು ತಾಂತ್ರಿಕ ದೋಷಗಳು ಕಾರಣದಿಂದ ಹಣ ಬರುವುದು ತಡವಾಗುತ್ತದೆ.

ಈ ಎಲ್ಲಾ ಸಮಸ್ಯೆಗಳಿಗೂ ಮೊದಲಿಗೆ ನೀವು ಬ್ಯಾಂಕಿಗೆ ಹೋಗಿ ಎನ್ ಪಿ ಸಿ ಲಿಂಕ್ (NPC link) ಮಾಡಿಸಿಕೊಳ್ಳಬಹುದು .ಅದೇ ರೀತಿ ಆದಾಯ ತೆರಿಗೆ(income tax) ಪಾವತಿದಾರರಲ್ಲದೆ ಇದ್ದು, ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ತಕ್ಷಣ ಅದನ್ನ ಶಿಶು ಅಭಿವೃದ್ಧಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ ನಿಮ್ಮ ಹೆಸರನ್ನು ತೆಗೆಸಬಹುದು.

ಇದೆಲ್ಲವುಗಳನ್ನು ಹೊರತುಪಡಿಸಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಗಾಗಿ ಸಲ್ಲಿಸಿದ ಅರ್ಜಿ ಪುರಾವೆ ಆಧಾರ್ ಕಾರ್ಡ್ (Adhar card) ಮತ್ತು ರೇಷನ್ ಕಾರ್ಡ್ (ration card) ತೆಗೆದುಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ(woman and child welfare department) ಸ್ಥಳೀಯ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಖಾತೆಗೆ ಯಾಕೆ ಹಣ ಜಮಾ ಆಗಿಲ್ಲ ಎನ್ನುವ ಮಾಹಿತಿಯನ್ನು ಚೆಕ್ ಮಾಡಿಸಿ ತಿಳಿದುಕೊಳ್ಳಿ. ನಂತರ ಸುಲಭವಾಗಿ ಅದಕ್ಕೆ ಪರಿಹಾರ ಕಂಡು ಹಿಡಿಯಬಹುದು. ಆದರಿಂದ ಮೊದಲು ಈ ಕೆಲಸ ಮಾಡಿ ನಂತರ ನಿಮ್ಮ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಆಗೇ ಆಗುತ್ತೆ. ಆರನೇ ಕಂತಿನ ಹಣವು ಕೂಡ ಬಿಡುಗಡೆ ಆಗಲಿದ್ದು ಬೇಗ ನೀವು ನಿಮ್ಮ ಖಾತೆಯಲ್ಲಿರುವ ಸಮಸ್ಯೆ ಪರಿಹರಿಸಿಕೊಂಡರೆ ಮಿಸ್ಸಾಗದೆ ನಿಮ್ಮ ಖಾತೆಗೆ ಹಣ ಬಂದು ಸೇರಲಿದೆ.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!