ರಾಜ್ಯದ ಮಹಿಳೆಯರಿಗೆ ಸರ್ಕಾರದ “ಗೃಹಲಕ್ಷ್ಮಿ” ಯೋಜನೆಯಡಿಯಲ್ಲಿ ಮತ್ತೊಂದು ಸಿಹಿಸುದ್ದಿ ಬಂದಿದೆ. ಶ್ರಾವಣ ಮಾಸದ ಶುಕ್ರವಾರದಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬದ ಸಮಯಕ್ಕೆ ಸರಿಯಾಗಿ, ಯೋಜನೆಯ ಅರ್ಹ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣವನ್ನು ಜಮಾ ಮಾಡಲಾಗುವುದು. 2025-26 ಆರ್ಥಿಕ ವರ್ಷದ ಈ ಕಂತಿನಲ್ಲಿ ಪ್ರತಿ ಮಹಿಳೆಗೆ ₹2,000 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಣ ಪಾವತಿಯ ಪ್ರಕ್ರಿಯೆ:
ರಾಜ್ಯದ ಸುಮಾರು 1.24 ಕೋಟಿ ಮಹಿಳೆಯರಿಗೆ 21 ನೇ ಕಂತಿನ ಹಣವು ನಾಳೆಗೆ ಖಾತೆಗೆ ಜಮೆಯಾಗಲಿದೆ. ಸರ್ಕಾರದ ಆದೇಶದ ಪ್ರಕಾರ, ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ (TPEO) ಖಾತೆಗೆ ನಾಳೆ ಹಣವನ್ನು ವರ್ಗಾಯಿಸಲಾಗುತ್ತದೆ. ನಂತರ, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ವ್ಯವಸ್ಥೆಯ ಮೂಲಕ ತಾಲೂಕು ಶಿಶು ಅಭಿವೃದ್ಧಿ ಯೋಜನೆ (ICDS) ಅಧಿಕಾರಿಗಳು ಈ ಹಣವನ್ನು ಆಯಾ ತಾಲೂಕಿನ ಫಲಾನುಭವಿಗಳ ಖಾತೆಗೆ ನಾಳೆಯೇ ನೇರವಾಗಿ ಜಮಾ ಮಾಡಲಿದ್ದಾರೆ.
ಹಾಗೆಯೇ ಇನ್ನುಳಿದ 22ನೇ ಕಂತಿನ ಬಾಕಿ ₹2000ಹಣ ಇದೇ ತಿಂಗಳ ಕೊನೆಯ ವಾರದಲ್ಲಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.
ಕಂತು | ಸಂಬಂಧಿಸಿದ ತಿಂಗಳು | ಸ್ಥಿತಿ | ಬಿಡುಗಡೆ ದಿನಾಂಕ |
---|---|---|---|
24ನೇ ಕಂತು | ಜುಲೈ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
23ನೇ ಕಂತು | ಜೂನ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
22ನೇ ಕಂತು | ಮೇ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
21ನೇ ಕಂತು | ಏಪ್ರಿಲ್ 2025 | ಬಾಕಿ ಉಳಿದಿದೆ | 08-08-2025 ಬಿಡುಗಡೆ ದಿನಾಂಕ |
20ನೇ ಕಂತು | ಮಾರ್ಚ್ 2025 | ಪೂರ್ಣಗೊಂಡಿದೆ | 05-06-2025 |
19ನೇ ಕಂತು | ಫೆಬ್ರವರಿ 2025 | ಪೂರ್ಣಗೊಂಡಿದೆ | 17-05-2025 |
18ನೇ ಕಂತು | ಜನವರಿ 2025 | ಪೂರ್ಣಗೊಂಡಿದೆ | 30-03-2025 |
17ನೇ ಕಂತು | ಡಿಸೆಂಬರ್ 2024 | ಪೂರ್ಣಗೊಂಡಿದೆ | 11-03-2025 |
16ನೇ ಕಂತು | ನವೆಂಬರ್ 2024 | ಪೂರ್ಣಗೊಂಡಿದೆ | 26-02-2025 |
ಯೋಜನೆಯ ಇತರ ಬಾಕಿ ಕಂತುಗಳು:
ಈಗಾಗಲೇ ಮಹಿಳೆಯರು ಮೊದಲ ಮತ್ತು ಎರಡನೇ ಕಂತುಗಳನ್ನು ಪಡೆದಿದ್ದಾರೆ. ಮೂರನೇ ಕಂತಿನ ನಂತರ, ನಾಲ್ಕು ಮತ್ತು ಐದನೇ ಕಂತುಗಳು ಬಾಕಿ ಉಳಿದಿವೆ. ಸರ್ಕಾರವು ಈ ಯೋಜನೆಯಡಿಯಲ್ಲಿ ಪ್ರತಿ ಮಹಿಳೆಗೆ ವಾರ್ಷಿಕವಾಗಿ ₹10,000 ರೂಪಾಯಿಗಳನ್ನು ಐದು ಕಂತುಗಳಲ್ಲಿ ನೀಡುತ್ತಿದೆ.

ಹಬ್ಬದ ಸಂಭ್ರಮಕ್ಕೆ ಹಣದ ಸಹಾಯ:
ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಈ ಹಣವು ಮಹಿಳೆಯರಿಗೆ ಹೆಚ್ಚಿನ ಸಹಾಯವಾಗಲಿದೆ. ಹಬ್ಬದ ಸಿದ್ಧತೆಗಳು, ಹೊಸ ಬಟ್ಟೆ, ಸಾಮಗ್ರಿಗಳ ಖರೀದಿ ಮತ್ತು ಇತರ ಅಗತ್ಯಗಳಿಗೆ ಈ ಹಣವು ಉಪಯುಕ್ತವಾಗುವುದು. ರಾಜ್ಯ ಸರ್ಕಾರದ ಈ ಕ್ರಮವು ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.
ಈ ಕಾರ್ಯಕ್ರಮದ ನಿಮಿತ್ತ ರಾಜ್ಯದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ನಾಳೆಯಿಂದ ನಿಯಮಿತವಾಗಿ ಪರಿಶೀಲಿಸುವಂತೆ ಸರ್ಕಾರವು ಸೂಚಿಸಿದೆ. ಹಣ ಪಾವತಿಯಲ್ಲಿ ಯಾವುದೇ ತೊಂದರೆ ಕಂಡುಬಂದರೆ, ಸಂಬಂಧಿತ ತಾಲೂಕು ಕಚೇರಿ ಅಥವಾ ಗ್ರಾಮೀಣ ಬ್ಯಾಂಕ್ ಶಾಖೆಗಳಿಗೆ ಸಂಪರ್ಕಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.