Gruhalakshmi: ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಮಹಿಳೆಯರ ಖಾತೆಗೆ ಮಾತ್ರ ಜಮಾ, ಈಗಲೇ ಚೆಕ್ ಮಾಡಿಕೊಳ್ಳಿ

2000 money

ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನಗೆ ಕೂಡ ಜಾರಿ ಮಾಡಿ 5 ಕಂತಿನ ಹಣವನ್ನು ನೀಡಲಾಗಿದೆ. ಈವರೆಗೆ ಅರ್ಜಿಸಲ್ಲಿಸಿ ಹಣ ಬರದೇ ಇರುವ ಸಾಕಷ್ಟು ಮಹಿಳೆಯರಿಗೆ ಜನವರಿ ತಿಂಗಳ ಕೊನೆಯಲ್ಲಿ ಒಟ್ಟಿಗೆ 10 ಸಾವಿರ ರೂಪಾಯಿ ಬಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ ತಿಂಗಳಲ್ಲಿ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ NPCI ಮ್ಯಾಪಿಂಗ್ ಮಾಡಿಸಿಕೊಂಡ ನಂತರ ಹಲವಾರು ಮಹಿಳೆಯರಿಗೆ ಇದೇ ತಿಂಗಳು 23 24 ಮತ್ತು 25ನೇ ತಾರೀಕಿನಂದು ಸತತವಾಗಿ 2 ಸಾವಿರ ರೂಪಾಯಿಗಳಂತೆ ಒಟ್ಟು ಹತ್ತು ಸಾವಿರ ರೂಪಾಯಿಗಳನ್ನ ರಾಜ್ಯ ಸರ್ಕಾರದಿಂದ ಜಮಾ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಮಹಿಳೆಯೊಬ್ಬರಿಗೆ ಹಣ ಜಮಾ ಆಗಿರುವ ಡಿಬಿಟಿ ಸ್ಟೇಟಸ್ ಕೆಳಗೆ ನೀವು ನೋಡಬಹುದು.

sct

ಜನವರಿ ತಿಂಗಳ ಅಂತ್ಯದಲ್ಲಿ ಅಂದರೆ 23, 24 ಮತ್ತು 25ನೇ ದಿನಾಂಕದಂದು ಸಾಕಷ್ಟು ಮಹಿಳೆಯರ ಖಾತೆಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ಸತತವಾಗಿ ಹಣ ಬಂದು ತಲುಪಿದೆ. ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣವನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಸರ್ಕಾರ DBT ಮೂಲಕ ತಿಂಗಳ 2ನೇ ವಾರದಂದು ಜಮಾ ಮಾಡುತ್ತಿದೆ.ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ಕಾರದ ನಿಯಮ ಪಾಲಿಸಿದ ಎಲ್ಲಾ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನ ಒಟ್ಟಿಗೆ ಪಡೆದುಕೊಂಡಿದ್ದಾರೆ.

6ನೇ ಕಂತಿನ ಹಣ ಬೇಗಾ ಪಡೆಯಲು ಈ ಕೆಲಸ ಮಾಡಿ !

ಈಗಾಗಲೇ ಸರ್ಕಾರ 6ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಕೆಲವು ಜಿಲ್ಲೆಗಳ ಕೆಲವು ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ ಆಗಿದೆ ಎಂದು ತಿಳಿದುಬಂದಿದೆ. ಫೆಬ್ರವರಿ ತಿಂಗಳು ಮುಗಿಯುವುದರ ಒಳಗೆ 6ನೇ ಕಂತಿನ ಹಣ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಬಹುದು.

ಡಿಬಿಟಿ ಹಣ ವರ್ಗಾವಣೆ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ಕೆಲವೊಮ್ಮೆ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ದೋಷ (technical issues) ಗಳಿಂದಾಗಿ ಮಹಿಳೆಯರ ಖಾತೆಗೆ ತಲುಪಲು ಸಾಧ್ಯವಾಗದೆ ಇರಬಹುದು. ಸರ್ಕಾರ ಈಗಾಗಲೇ ತಿಳಿಸಿರುವಂತೆ, ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಈ ಕೆವೈಸಿ (EKYC)ಪರಿಶೀಲನೆ ಮಾಡಿಕೊಳ್ಳಿ ಇದರ ಜೊತೆಗೆ, ಎನ್‌ಪಿಸಿಐ ಮ್ಯಾಪಿಂಗ್ (NPCI mapping) ಕೂಡ ಮಾಡಿಸಬೇಕು. ಒಂದು ವೇಳೆ ನಿಮಗೆ 5 ಕಂತಿನವರೆಗೆ ಹಣ ಬಂದಿದ್ದರೆ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಆದರೆ ಇಲ್ಲಿಯವರೆಗೆ ಹಣ ಸಂದಾಯ ಆಗದೇ ಇದ್ದರೆ ಮಾತ್ರ ತಕ್ಷಣ ಹೋಗಿ ಬ್ಯಾಂಕ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿ ಒದಗಿಸಿ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!