Gruhalakshmi- ಗೃಹಲಕ್ಷ್ಮಿ ₹2000 ಹಣ ನಿಮಗೆ ಇನ್ನೂ ಬಂದಿಲ್ವಾ. .? ಇಲ್ಲಿದೆ ಕಾರಣ, ಮೊಬೈಲ್ ನಲ್ಲೆ ಹೀಗೆ ಮಾಡಿ ಹಣ ಬರುತ್ತೆ..!

WhatsApp Image 2023 09 07 at 4.38.07 PM

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೇ ಇರುವ ಬಗ್ಗೆ ಮಾಹಿತಿ ನೀಡಲಾಗುತ್ತದೆ, ರಾಜ್ಯ ಸರ್ಕಾರದ  ಗೃಹಲಕ್ಷ್ಮೀ (Gruhalakshmi Scheme) ಯೋಜನೆಯ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡುವ ಈ ಯೋಜನೆಗೆ ರಾಜ್ಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಯೋಜನೆ ಜಾರಿಯಾಗಿ ಒಂದು ವಾರ ಕಳೆದರೂ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ (‌Bank Account) ಹಣ ಬಂದಿಲ್ಲ. ಇಷ್ಟಕ್ಕೂ ಗೃಹಲಕ್ಷ್ಮೀ ಖಾತೆಗೆ ಹಣ ಬಾರದೇ ಇದ್ದ ಮಹಿಳೆಯರು ಏನು ಮಾಡ್ಬೇಕು ಎಂಬ ಆತಂಕಕ್ಕೆ ಇಲ್ಲಿದೆ ಉತ್ತರ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ನಿಮಗೆ ಗೃಹ ಲಕ್ಷ್ಮಿ ಹಣ ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು

1) ಮೊದಲು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಟೇಟಸ್ ಪರಿಶೀಲಿಸಿ.

ಈ ಕೆಳಗಿನಂತೆ ನಿಮಗೆ ಇದುವರೆಗೂ ಮೆಸೇಜ್ ಬಂದಿಲ್ಲವಾದರೆ, ಖಂಡಿತ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು, ಹೇಗೆಂದರೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಗೃಹಲಕ್ಷ್ಮಿ ಯೋಜನೆಯ ಈ ಸಂಖ್ಯೆಗೆ 8147500500 ಟೆಕ್ಸ್ಟ್ ಮೆಸೇಜ್ ಮಾಡಬೇಕು.

WhatsApp Image 2023 08 30 at 6.44.36 PM

WhatsApp Image 2023 08 11 at 6.26.01 AM

ನಂತರ ಈಗಾಗಲೇ ನೀವು ಅರ್ಜಿ ಸಲ್ಲಿಸಿದರೆ ಕೆಳಗಿನ ರೀತಿ ನಿಮಗೆ ಮರಳಿ ಸಂದೇಶ ಬರುತ್ತದೆ.

image 870x 64d121f175b36 1

ಒಂದು ವೇಳೆ ನೀವು ಅರ್ಜಿ ಸಲ್ಲಿಸದೆ ಇದ್ದಲ್ಲಿ ಅಥವಾ ಅರ್ಜಿ ಸಲ್ಲಿಕೆ ಆಗದೆ ಇದ್ದಲ್ಲಿ ಕೆಳಗಿನ ರೀತಿ ಮರು ಸಂದೇಶ ಬರುತ್ತದೆ. ಹೀಗೆ ಬಂದಾಗ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ

whatss

WhatsApp Image 2023 08 11 at 6.36.41 AM

2) ಅನ್ನಭಾಗ್ಯದ ಅಕ್ಕಿ ಹಣ ಬಂದಿದ್ದರೆ ಈ ಮೂಲಕ ಗೃಹಲಕ್ಷ್ಮಿ ಹಣ ಚೆಕ್ ಮಾಡಿಕೊಳ್ಳಬಹುದು.

ಈಗಾಗಲೇ ನಿಮಗೆ ಅನ್ನ ಭಾಗ್ಯದ ಹಣ ಬಂದು ತಲುಪಿದ್ದರೆ ಅದೇ ಖಾತೆಗೆ ಗೃಹಲಕ್ಷ್ಮಿ ಹಣ ಬರುತ್ತದೆ. ( ಒಂದು ವೇಳೆ ನೀವು ಗೃಹಲಕ್ಷ್ಮಿ ಅರ್ಜಿ ಹಾಕುವಾಗ ಬೇರೆ ಅಕೌಂಟ್ ಡೀಟೇಲ್ಸ್ ಅನ್ನು ಕೊಡದೆ ಇದ್ದ ಪಕ್ಷದಲ್ಲಿ ).

ಇದುವರೆಗೂ ನಿಮಗೆ ಅನ್ನ ಭಾಗ್ಯದ ಹಣವು ಬಂದಿಲ್ಲ ಗೃಹಲಕ್ಷ್ಮಿಯ ಹಣವು ಬಂದಿಲ್ಲ ಎಂದರೆ. ಅದು ಈ ಕೆಳಗಿನ ಎರಡು ಕಾರಣಗಳಿಂದ ಇರಬಹುದು.

ಕಾರಣ 1 – NPCI MAPPING FAILED

ಕಾರಣ 2 -Aadhaar authentication failed

DBT ಸ್ಟೇಟಸ್ ನಲ್ಲಿ ಹೀಗೆ ಇದ್ದರೆ ಹಣ ಬರುವುದಿಲ್ಲ :

WhatsApp Image 2023 08 19 at 5.14.33 PM 1

ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಬಂದಿಲ್ಲದಿದ್ದರೆ ಹೇಗೆ ಚೆಕ್ ಮಾಡುವುದು ಎಂಬುದನ್ನು ನೋಡುವ ವಿಧಾನವನ್ನು ಕೆಳಗೆ ನೀಡಲಾಗಿದೆ. ಅದಕ್ಕೂ ಮುಂಚೆ DBT ಸ್ಟೇಟಸ್ ನಲ್ಲಿ ಹೇಗೆ ಇದ್ದರೆ ಹಣ ಜಮಾ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಒಂದು ವೇಳೆ ನೀನು ಡಿ ಬಿಬಿಟಿ ಸ್ಟೇಟಸ್ ಚೆಕ್ ಮಾಡಿದಾಗ, Aadhaar authentication check failed ಇಂದು ಬಂದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ ಎಂದರ್ಥ.   ನೀವು ಆಧಾರ್ ಕಾರ್ಡನ್ನು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡದಿದ್ದರೆ ಈ ಮೆಸೇಜ್ ಬರುತ್ತದೆ. ಹಾಗಾಗಿ ನೀವು ಬ್ಯಾಂಕಿಗೆ ತೇರಳಿ, ಬ್ಯಾಂಕಿನ NPCI ಲಿಂಕ್ ಅನ್ನು ಆಧಾರ್ ಕಾರ್ಡಿನೊಂದಿಗೆ ಮಾಡಿಸಿದರೆ ಮುಂದಿನ ತಿಂಗಳ ಹಣ ಹಾಗೂ ಇನ್ನಿತರ ಯೋಜನೆಗಳ ಉಪಯೋಗವನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ನೊಂದಿಗೆ  ಡಿಬಿಟಿ ಲಿಂಕ್ ಮಾಡಿ :

ಡಿಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಇದರಿಂದಾಗಿ ಮಹಿಳೆಯರ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಗೃಹಲಕ್ಷ್ಮೀ ಯೋಜನೆಯ ₹2,000 ಮತ್ತು ಅನ್ನಭಾಗ್ಯದ ₹170 ರೂಪಾಯಿ ಜಮಾ ಆಗುತ್ತದೆ.  ಸರ್ಕಾರದ ಎಲ್ಲಾ ಸೌಲಭ್ಯ ಪಡೆಯಲು , ನೇರವಾಗಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.ಹಾಗಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಡಿಬಿಟಿ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಿ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ನಿಮ್ಮ ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಆಗಿದೆ ಎಂಬುದನ್ನು ಹೇಗೆ ನೋಡುವುದು?:

ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. https://resident.uidai.gov.in/bank-mapper

ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಹಾಗೆ ಕ್ಯಾಪ್ಚರ್ ಅನ್ನು ಎಂಟರ್ ಮಾಡಿ.

aa11

ಹಂತ 3: ನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್OTP ಬರುತ್ತೆ ಅದನ್ನು ನಮೂದಿಸಿ, ನಂತರ Submit ಮೇಲೆ ಕ್ಲಿಕ್ ಮಾಡಿ

aa12

ಹಂತ 4: ನಂತರ ಅದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೋರಿಸುತ್ತದೆ.

aa13

ಹಂತ 5: ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಶಾಖೆಗೆ ತೆರಲಿ ಲಿಂಕ್ ಮಾಡಿಸಬೇಕು.

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ATM ಗಳ ಮೂಲಕ ಕೂಡ ಮಾಡಿಸಬಹುದು, ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್ ಗಳಲ್ಲಿ ಆಯಾ ಬ್ಯಾಂಕ್ ಆಪ್ ಗಳನ್ನು ಬಳಸಿ ಮಾಡಬಹುದು. ಅಥವಾ ಬ್ಯಾಂಕ್ ಶಾಖೆಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವ ಮೂಲಕ ಕೂಡ ಮಾಡಿಸಬಹುದು.

tel share transformed

ಏಳರಿಂದ ಎಂಟು ಲಕ್ಷ ಫಲಾನುಭವಿಗಳ ಖಾತೆಗೆ ಹಣವನ್ನು ಏಕೆ ಹಾಕಲು ಆಗುತ್ತಿಲ್ಲ?:

ಈಗಾಗಲೇ 59 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗಿದ್ದು, ಏಳರಿಂದ ಎಂಟು ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಯ ಅಕೌಂಟ್ ಎರರ್ ತೋರಿಸುತ್ತದೆ. ಈ 8 ಲಕ್ಷ ಫಲಾನುಭವಿಗಳಿಗೆ ಹಣ ಏಕೆ ವರ್ಗಾವಣೆ ಆಗುತ್ತಿಲ್ಲ ಎಂದರೆ, ಅವರು ಹಲವಾರು ವರ್ಷಗಳಿಂದ ಆ ಖಾತೆಯನ್ನು ಬಳಕೆ ಮಾಡದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಅನೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಾಗ ನೀಡಿದ ಖಾತೆಯಲ್ಲಿ ಯಾವುದೇ ರೀತಿಯ ವಹಿವಾಟುಗಳು ಇಲ್ಲದೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇಂತವರ ಖಾತೆಯ ಫಲಾನುಭವಿಗಳ ಹೆಸರುಗಳನ್ನು ಪಟ್ಟಿ ಮಾಡಿ ಆಯಾ ಗ್ರಾಮದ ಆಶಾ ಕಾರ್ಯಕರ್ತರಿಗೆ ಪಟ್ಟಿಯನ್ನು ನೀಡಲಾಗುತ್ತದೆ. ಆಶಾ ಕಾರ್ಯಕರ್ತೆಯರು  ಆ ಜನರಿಗೆ ವಿಷಯವನ್ನು ಮುಟ್ಟಿಸಿ, ಖಾತೆಯನ್ನು ಸರಿ ಮಾಡಿಸಿಕೊಳ್ಳುವಂತೆ ಸೂಚಿಸುತ್ತಾರೆ. ನಂತರ ಆ ಏಳರಿಂದ ಎಂಟು ಫಲಾನುಭವಿಗಳಿಗೆ ಗೃಹಲಕ್ಷ್ಮಿಯ ಹಣ ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

whatss

ಇನ್ನು ಉಳಿದ ಫಲಾನುಭವಿಗಳಿಗೆ ಶನಿವಾರದ ಒಳಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಜಮಾ ಆಗುತ್ತದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

One thought on “Gruhalakshmi- ಗೃಹಲಕ್ಷ್ಮಿ ₹2000 ಹಣ ನಿಮಗೆ ಇನ್ನೂ ಬಂದಿಲ್ವಾ. .? ಇಲ್ಲಿದೆ ಕಾರಣ, ಮೊಬೈಲ್ ನಲ್ಲೆ ಹೀಗೆ ಮಾಡಿ ಹಣ ಬರುತ್ತೆ..!

Leave a Reply

Your email address will not be published. Required fields are marked *