Gruhalakshmi – ತಗ್ಗಿದ ಸರ್ವರ್ ಸಮಸ್ಯೆ, ಮೆಸೇಜ್ ಗಾಗಿ ಕಾಯಬೇಡಿ ಇಲ್ಲಿದೆ ಪರಿಹಾರ – ಈ ಕೆಲಸ ಮಾಡಿ

needs of public gruha

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಯ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿಸಿಕೊಡಲಾಗುತ್ತದೆ.ಗೃಹ ಲಕ್ಷ್ಮೀ ಯೋಜನೆಗೆ ಎದುರಾಗಿದ್ದ ಸರ್ವರ್‌ ಸಮಸ್ಯೆ ಹಲವೆಡೆ ದೂರಾಗಿದೆ. ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ವೇಗ ಪಡೆದುಕೊಂಡಿದೆ. ಈವರೆಗೂ ಆರು ದಿನಗಳಲ್ಲಿ ಹೆಚ್ಚು ಕಡಿಮೆ ಭರ್ಜರಿಅರ್ಧಕೋಟಿಯಷ್ಟು ಮನೆ ಯಜಮಾನಿಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಮೆಸೇಜ್ ಮಾಡುವ ಪ್ರತಿ ಹಂತವನ್ನು ಹಾಗೂ ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಎಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

ಮನೆ ಯಜಮಾನಿಗೆ 2,000 ರೂಪಾಯಿ ನೆರವು ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಎರಡನೇ ದಿನವಾದ ಶುಕ್ರವಾರ ಬರೊಬ್ಬರಿ 50 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಗೃಹಲಕ್ಷ್ಮಿ ಅರ್ಜಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್‌ – ಲಕ್ಷ್ಮಿ ಹೆಬ್ಬಾಳಕರ

ರಾಜ್ಯದ ಹಲವು ಕಡೆ ಗೃಹ ಲಕ್ಷ್ಮಿ ಯೋಜನೆಯ ನೊಂದಣಿ ಪ್ರಕ್ರಿಯೆ ಹಣ ಪಡೆಯುತ್ತಿದ್ದ ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೂರು ಕೇಂದ್ರಗಳ ಲಾಗಿನ ಐಡಿ ರದ್ದು ಪಡಿಸಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸೋಮವಾರ ಸುದ್ಧಿಗಾರರಿಗೆ ವಿಷಯ ಸ್ಪಷ್ಟಪಡಿಸಿದರು.

‘ಗೃಹಲಕ್ಷ್ಮಿ ಯೋಜನೆ ನೋಂದಣಿ ಕಾರ್ಯವನ್ನು ನಾವು ಉಚಿತವಾಗಿ ಮಾಡಿಸಿಕೊಳ್ಳುತ್ತಿಲ್ಲ. ಪ್ರತಿ ಅರ್ಜಿ ಅಪ್‌ಲೋಡ್‌ ಮಾಡುವವರಿಗೆ ಸರ್ಕಾರದಿಂದಲೇ ₹12 ಕೊಡುತ್ತಿದ್ದೇವೆ. ಹಾಗಾಗಿ ಜನರು ಯಾರಿಗೂ ಹಣ ಕೊಡಬೇಕಿಲ್ಲ’ ಎಂದು ಹೇಳಿದರು.

ತಗ್ಗಿದ ಸರ್ವರ್‌ ಸಮಸ್ಯೆ

ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿ ನಿಮ್ಮ ಹತ್ತಿರದ ಗ್ರಾಮಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಗೆ ಭೇಟಿ ನೀಡಬೇಕು. ಮೊದಲ ದಿನ ಗುರುವಾರ ಹೆಚ್ಚು ಸೇವಾಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆಯಾಗಿದ್ದ ಹಿನ್ನೆಲೆ ಇ ಆಡಳಿತ ಇಲಾಖೆಯು ಅಗತ್ಯ ಕ್ರಮ ಕೈಗೊಂಡಿತ್ತು. ಆದರೆ, ಸೋಮವಾರ ಮತ್ತು ಮಂಗಳವಾರ ಬಹುತೇಕ ಕಡೆ ಸುಸೂತ್ರವಾಗಿ ಅರ್ಜಿ ಸಲ್ಲಿಕೆಯಾಗುತ್ತಿದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸ ನಂಬರ್ ನಿಂದ ರಿಪ್ಲೈ ಬರುತ್ತಿದೆ

ರೇಷನ್ ಕಾರ್ಡಿಗೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಂದ ನೀವು ಮೆಸೇಜನ್ನು ಮಾಡಬೇಕು. ಸರ್ಕಾರದ ಮೊಬೈಲ್ ಸಂಖ್ಯೆಯಾದ 8277000500 ಅನ್ನು ಹಾಕಿ. ನಂತರ ಟೆಕ್ಸ್ಟ್ ಮೆಸೇಜ್(text message) ನಲ್ಲಿ ನಿಮ್ಮ ಪಡಿತರ ಚೀಟಿಯ(Ration card) 12 ಡಿಜಿಟ್ ಗಳ ಸಂಖ್ಯೆಯನ್ನು ನೊಂದಣಿ ಮಾಡಿ ಮತ್ತು ಮೆಸೇಜನ್ನು ಸೆಂಡ್ ಮಾಡಿ.

ಎಸ್ಎಂಎಸ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮಗೆ VM-SEVSIN ದಿಂದ ಒಂದು ಮೆಸೇಜ್ ಬರುತ್ತದೆ ಅದರಲ್ಲಿ, ಯಾವ ಸ್ಥಳದಲ್ಲಿ ಯಾವ ದಿನಾಂಕಕ್ಕೆ ಎಷ್ಟು ಗಂಟೆಗೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕು ಎಂಬುವ ಮಾಹಿತಿ ಇರುತ್ತದೆ.

WhatsApp Image 2023 07 24 at 5.41.46 AM

ಮೆಸೇಜ್ ಕಳುಹಿಸಿದ್ರು ರಿಪ್ಲೈ ಬರುತ್ತಿಲ್ಲವಾ.? ಇಲ್ಲಿದೆ ಪರಿಹಾರ

ನಿಮ್ಮ ಮೆಸೇಜ್ ಗೆ ರಿಪ್ಲೈ ಬಂದಿಲ್ಲ ಎಂದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು.

ಈಗ ಮೆಸೇಜ್ ಇಲ್ಲದೇ ಕೂಡ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಬಹುದು :

SMS ಇಲ್ಲದೆ ಅರ್ಜಿ ಸಲ್ಲಿಸಿ ಪಡೆದ ಮಂಜೂರಾತಿ ಪತ್ರ

manjurati

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಅನೇಕ ಜನರಿಗೆ ಗೊತ್ತಿರುವಂತೆ ಮೆಸೇಜ್ ಮಾಡಿದ ನಂತರವೇ ಸರ್ಕಾರದಿಂದ ಕಳುಹಿಸಲಾದ ದಿನಾಂಕ ಹಾಗೂ ಸ್ಥಳಕ್ಕೆ ತೆರಳಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿಗೆ ಗ್ರಾಮವನ್ ಸರ್ಕಾರಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸುವವರು ತಿಳಿಸಿರುವಂತೆ ಮೆಸೇಜ್ ಮಾಡದಿದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಗ್ರಾಮವನ್ ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ರೀತಿಯ ಘೋಷಣೆಯು ಹೊರಡದಿದ್ದರು ಕೂಡ, ಗ್ರಾಮ ಒನ್ ನವರು ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ಅವರು ಅನೇಕ ಅರ್ಜಿಗಳನ್ನು ಮೆಸೇಜ್ ಇಲ್ಲದೆ ಸಲ್ಲಿಸಿದ್ದಾರೆ. ನಿಮಗೆ ಏನಾದರೂ ಮೆಸೇಜ್ ಮಾಡಲು ಬಾರದಿದ್ದಲ್ಲಿ ಅಥವಾ ಮೆಸೇಜ್ ಮಾಡಿಯೂ ಕೂಡ ಸರ್ಕಾರದಿಂದ ಸ್ಥಳ ಮತ್ತು ದಿನಾಂಕದ ವೇಳಾಪಟ್ಟಿ ಬರದಿದ್ದರೆ ನೀವು ಗ್ರಾಮವನ್ಗೆ ಒಮ್ಮೆ ತೆರಳಿ, ಗೃಹಲಕ್ಷ್ಮಿ ಯೋಜನೆಯ ನೋಂದಣಿಯನ್ನು ಮಾಡಿಸಿಕೊಂಡು ಅರ್ಜಿಯನ್ನು ಸಲ್ಲಿಸುವ  ಅವಕಾಶವಿದೆ.

ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಮಿತಿ ರದ್ದು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಶುರು ಮಾಡಿದ ಪ್ರಾರಂಭದ ದಿನಗಳಲ್ಲಿ, ದಿನಕ್ಕೆ ಒಂದು ಸರ್ಕಾರಿ ಕೇಂದ್ರದಲ್ಲಿ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂಬ ಮಿತಿ ಇತ್ತು. ಒಂದು ಅರ್ಜಿಗಳಿಗಿಂತ ಜಾಸ್ತಿ ಅರ್ಜಿಗಳನ್ನು ಒಂದು ಸರ್ಕಾರಿ ಕೇಂದ್ರಗಳಲ್ಲಿ ಸ್ವೀಕರಿಸಿದರೆ, ಗೃಹಲಕ್ಷ್ಮಿ ಯೋಜನೆಯ ನೋಂದಣಿಯ ಸಿಬ್ಬಂದಿಗಳಿಗೆ ಹೊರೆ ಹೆಚ್ಚಾಗುತ್ತದೆ ಎಂದು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಒಂದು ಸರ್ಕಾರಿ ಕೇಂದ್ರದಲ್ಲಿ 60 ಕ್ಕಿಂತಲೂ ಹೆಚ್ಚಿನ ಮಹಿಳೆಯರು ಕ್ಯೂ ನಿಲ್ಲುತ್ತಿದ್ದರು. ಆದಕಾರಣ ಸರ್ಕಾರವು ಈ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂಬ ಮಿತಿಯನ್ನು ರದ್ದುಗೊಳಿಸಿದೆ. ಈಗ ಒಂದು ಸರ್ಕಾರಿ ಕೇಂದ್ರದಲ್ಲಿ ಎಷ್ಟು ಅರ್ಜಿಯನ್ನು ಬೇಕಾದರೂ ಸಲ್ಲಿಸುವ ಅವಕಾಶವಿದೆ. ಅದಕ್ಕೆ ಮಿತಿ ಇಲ್ಲ.

ಗೃಹಲಕ್ಷ್ಮಿ ಯೋಜನೆ ನೊಂದಣಿ ವೇಳಾಪಟ್ಟಿಯನ್ನು ನೋಡುವ ವಿಧಾನ :

ಹಂತ 1: ಮೊದಲಿಗೆ ಗೃಹಲಕ್ಷ್ಮಿ ಯೋಜನೆಯ ಸೇವಾ ಸಿಂಧುವಿನ ಅಧಿಕೃತ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ. 

https://sevasindhugs1.karnataka.gov.in/gl-stat-sns/

rr1

ಹಂತ 2: ನಂತರ ನಿಮ್ಮ ಪಡಿತರ ಚೀಟಿ(Ration card)ಯ 12 ಸಂಖ್ಯೆಗಳನ್ನು ನಮೂದಿಸಬೇಕು. ಕ್ಲಿಯರ್ ಮಾಡಲು ಹಳದಿ ಕಲರ್ ಲೈನ್ ಅನ್ನು ಹಸಿರು ಲೈನಿನ್ ಮದ್ಯ ಭಾಗಕ್ಕೆ ತಂದು ನಿಲ್ಲಿಸಬೇಕು ನಂತರ Captcha ಕ್ಲಿಯರ್ ಆಗುತ್ತೆ.  ನಂತರ fetch RC details ಮೇಲೆ ಕ್ಲಿಕ್ ಮಾಡಿ

rr2

ಹಂತ 4: ನಂತರ ಪುಟದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳಲು ಸ್ಥಳ, ದಿನಾಂಕ ಹಾಗೂ ಸಮಯವನ್ನು ನೀಡಲಾಗಿರುತ್ತದೆ.

rr3

ಈ ಸ್ಥಳ, ದಿನಾಂಕ ಹಾಗೂ ಸಮಯವನ್ನು ನೋಡಿಕೊಂಡು, ನೀವು ಬೇಕಾದ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ತಿಳಿಸಲಾದ ಸರ್ಕಾರಿ ಕೇಂದ್ರಕ್ಕೆ ತೆರಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಕೂಡ ಹಣವು ಜಮಾ ಆಗಲಿದೆ.  ಹೀಗೆ ನೀವು ಮೇಲಿನ ಹಂತಗಳನ್ನು ಪರಿಶೀಲಿಸಿಕೊಂಡು ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿಯ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.

ಅನ್ನ ಭಾಗ್ಯದ ಹಣ ಬ್ಯಾಂಕ್ ಖಾತೆಗೆ ಬಂತಾ ಚೆಕ್ ಮಾಡಿ..! ಇಲ್ಲಿದೆ ಡೈರೆಕ್ಟ್ ಲಿಂಕ್ | Anna bhagya Payment DBT status

Picsart 23 07 16 14 24 41 584 transformed 1

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!