ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಹಲವಾರು ಮಹಿಳೆಯರು ಬರೋಬ್ಬರಿ 14,000ಗಳನ್ನ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪಡೆದುಕೊಂಡಿದ್ದು, ಹಲವಾರು ಕಡೆ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಅರ್ಜಿ ಸಲ್ಲಿಸಿ ಆರು ತಿಂಗಳಾದರೂ ಒಂದು ರೂಪಾಯಿ ಹಣ ನಮಗೆ ಬಂದೇ ಇಲ್ಲ ಎಂದು ಒಂದಿಷ್ಟು ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಕೇವಲ ನಮಗೆ ಎರಡು ಅಥವಾ ಮೂರು ಕಂತುಗಳು ಬಂದು ಇನ್ನುಳಿದ ಕಂತುಗಳು ಬಂದೇ ಇಲ್ಲ ಎನ್ನುವ ಮಹಿಳೆಯರು ಇದ್ದಾರೆ. ಹಾಗಾಗಿ ಹಣ ಬರದೇ ಇದ್ದವರ ಏನು ಮಾಡಬೇಕು, 8ನೇ ಕಂತಿನ ಹಣದ ಅಪ್ಡೇಟ್ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಣ ಬಂದಿಲ್ಲ ಅಂದ್ರೆ ಈ ಕೆಲಸ ತಪ್ಪದೇ ಮಾಡಿ :
ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಹಣ ಆಟೋಮೆಟಿಕ್ ಪ್ರೋಸೆಸ್ ಆಗಿದ್ದು , ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿರಬೇಕು, ಒಂದು ವೇಳೆ ಹೆಸರಿನಲ್ಲಿ ಮಿಸ್ ಮ್ಯಾಚ್ ಆದಲ್ಲಿ, ಅಥವಾ ಬ್ಯಾಂಕ್ ekyc ಆಗದೆ ಇದ್ದ ಪಕ್ಷದಲ್ಲಿ, ಹಣ ಬಿಡುಗಡೆ ಆಗಿದ್ದರೂ ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ. ಹಾಗಾಗಿ ಈ ಕೆಳಗಿನ ಕೆಲಸ ಮಾಡುವುದು ಕಡ್ಡಾಯ.
- ಬ್ಯಾಂಕ್ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೆ ಈ ಕೆವೈಸಿ ಕಡ್ಡಾಯವಾಗಿರುವುದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆವೈಸಿ ಅಪ್ಡೇಟ್ ತಪ್ಪದೇ ಮಾಡಿಸಿ.
- ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಸರ್ಕಾರ ಉಚಿತವಾಗಿ ಜೂನ್ 14, 2024 ರವರೆಗೆ ಮಾಡಿಸಿಕೊಳ್ಳಲು ಅವಕಾಶ ಕೊಟ್ಟಿದೆ. ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷದ ಹಿಂದಿನದಾಗಿದ್ದರೆ ಅಪ್ಡೇಟ್ ಮಾಡಿಸುವುದು ಕಡ್ಡಾಯ. ಬ್ಯಾಂಕ್ ಖಾತೆ ಅಪ್ಡೇಟ್ ಆಗದಿದ್ದರೆ ನಿಮ್ಮ ಕೆಲಸಗಳು ಯಾವುದು ಆಗುವುದಿಲ್ಲ.
- ekyc ಅಪ್ಡೇಟ್ ಮಾಡಿಸಿದರು ಕೂಡ ಹಣ ಬರದೆ ಇದ್ದವರು, ಬ್ಯಾಂಕಿಗೆ ಮತ್ತೊಮ್ಮೆ ಭೇಟಿ ನೀಡಿ NPCI ಮ್ಯಾಪಿಂಗ್ ಮಾಡಲು ಅರ್ಜಿ ನೀಡಿ.
- ಅದಲ್ಲದೆ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
ಅತ್ತೆ ಮರಣ ಹೊಂದಿದ್ದರೆ ಏನು ಮಾಡಬೇಕು ?
ಈಗಾಗಲೇ ಮನೆ ಯಜಮಾನಿ ಅತ್ತೆಯಾಗಿದ್ದು ಒಂದು ವೇಳೆ ಅವರು ಮರಣ ಹೊಂದಿದ್ದರೆ ಆ ಹಣ ಮನೆಯ ಹಿರಿಯ ಸೊಸೆ ಖಾತೆಗೆ ಬರುತ್ತದೆ. ಯೋಜನೆ ಆರಂಭವಾದ ಹೊಸದರಲ್ಲಿ ಅರ್ಜಿ ಸಲ್ಲಿಸಿದ ಸಾಕಷ್ಟು ಹಿರಿಯ ಮಹಿಳೆಯರು ಮರಣ ಹೊಂದಿದ್ದಾರೆ, ಆ ಖಾತೆಗೆ ಜಮಾ ಆಗಬೇಕಿದ್ದ ಹಣ ಯಾವ ಖಾತೆಗೆ ಹೋಗುತ್ತದೆ ಎನ್ನುವುದು ಹಲವಾರು ಜನರಲ್ಲಿ ಗೊಂದಲ ಇತ್ತು. ಇದಕ್ಕೆ ಸರ್ಕಾರ ಪರಿಹಾರ ಕೊಟ್ಟಿದ್ದು ಕುಟುಂಬದಲ್ಲಿ ಅತ್ತೆ ಇಲ್ಲದೇ ಇದ್ದರೆ ಅಥವಾ ಮರಣ ಹೊಂದಿದ್ದರೆ ಹಿರಿಯ ಸೊಸೆ ತನ್ನ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದೆಂದು ಸರ್ಕಾರ ಮಾಹಿತಿ ನೀಡಿದೆ.
ದಾಖಲಾತಿ ಸರಿಯಿದ್ದರು ಹಣ ಬಂದೇ ಇಲ್ಲ
ಎಲ್ಲ ದಾಖಲಾತಿ ಸರಿಯಿದ್ದರು ನನಗೆ ಹಣ ಬಂದೇ ಇಲ್ಲ ಎನ್ನುವ ಸಾಕಷ್ಟು ಜನರಿದ್ದಾರೆ, ಆದರೆ ಹಣ ಬರೆದಿರುವುದಕ್ಕೆ ಏನಾದರೂ ಒಂದು ಕಾರಣ ಇದ್ದೇ ಇರುತ್ತದೆ ಆದ್ದರಿಂದ ಈ ಕಾರಣಗಳನ್ನು ತಿಳಿಯಲು ನೀವು ಹತ್ತಿರದ ಸಿಡಿಪಿಓ (CDPO) ಕಚೇರಿಗೆ ಭೇಟಿ ನೀಡಿ ಅಲ್ಲಿರುವ ಅಧಿಕಾರಿಗಳಲ್ಲಿ ಎಲ್ಲಾ ಮಾಹಿತಿಗಳನ್ನು ಕೇಳಿ ತಿಳಿದುಕೊಂಡು ಅವರ ಮಾರ್ಗದರ್ಶನದಂತೆ ಎಲ್ಲಾ ಬದಲಾವಣೆಗಳನ್ನು ಮಾಡಿ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಿ.
ಎಂಟನೇ ಕಂತಿನ ಹಣ ಬಿಡುಗಡೆಗೆ ಸಿದ್ಧತೆ.
ಈಗಾಗಲೇ 7ನೇ ಕಂತಿನ ಫೆಬ್ರವರಿ ತಿಂಗಳ ಹಣ ಸಾಕಷ್ಟು ಮಹಿಳೆಯರಿಗೆ ಮಾರ್ಚ್ ಕೊನೆಯ ವಾರದಲ್ಲಿ ಬಂದು ತಲುಪಿರುವ ಡಿಬಿಟಿ ಸ್ಟೇಟಸ್ ನೀವು ಕೆಳಗೆ ನೋಡಬಹುದು. ಮತ್ತು 8ನೇ ಕಂತಿನ ಹಣ ಸಹಿತ ಇನ್ನೇನು ಸದ್ಯದಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದ್ದು, ಏಪ್ರಿಲ್ ಮೊದಲ ಅಥವಾ ಎರಡನೇ ವಾರದಲ್ಲಿ ಎಲ್ಲರ ಖಾತೆಗೆ ಜಮಾ ಆಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- SSC 968 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ, ಇಲ್ಲಿದೆ ವಿವರ
- ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ, New Ration Card Status Karnataka 2024 @ahara.kar.nic.in
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






