ಗೃಹಲಕ್ಷ್ಮೀ ಯೋಜನೆ – ಎರಡನೇ ಕಂತಿನ ಹಣ ಇನ್ನೇನು 2 ದಿನದಲ್ಲಿ ಬಿಡುಗಡೆ, ಈ ಮಹಿಳೆಯರಿಗೆ ಮಾತ್ರ ಇಲ್ಲಿದೆ ವಿವರ

2nd installment gruhalakshmi money

ರಾಜ್ಯದ ಕಾಂಗ್ರೆಸ್ ಸರಕಾರ(congress government )ದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ(Gruhalakshmi scheme)ಯೂ ಒಂದಾಗಿದೆ. ಈಗಾಗಲೇ ಗೃಹಲಕ್ಷಿ ಯೋಜನೆಯ 1ನೇ ಕಂತಿನ ಮತ್ತು 2ನೇ ಕಂತಿನ ಹಣವನ್ನು ಹಲವಾರು ಮಹಿಳೆಯರು ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ತಡವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ತಡವಾಗಿ ನೊಂದಣಿ ಆದವರಿಗೂ 2ನೇ ಕಂತಿನ ಹಣ ಬರಲಿದೆ. ನೋಂದಣಿ ತಡವಾಗಲು ಕಾರಣ ಮತ್ತು ಸಮಸ್ಯೆ ಏನೆಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆಗೆ ತಡವಾಗಿ ಅರ್ಜಿ ಸಲ್ಲಿಸಿದರು ಹಣ ಬೇಗ ಬರಲಿದೆ :

ಈ ಯೋಜನೆಯಲ್ಲಿ ಮಹಿಳೆಯರಿಗೆ ನಾನಾ ಅಡೆತಡೆ ಎದುರಾಗಿವೆ. ಆದ್ದರಿಂದ ಸ್ವಲ್ಪ ಜನ ಮಹಿಳೆಯರು ತಡವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯ ಮುಖ್ಯ ಉದ್ದೇಶ, ಕುಟುಂಬದ ಒಡತಿಗೆ ಮಾಸಿಕ ಎರಡು ಸಾವಿರ ರೂ. ಆರ್ಥಿಕ ಸಹಾಯ ನೀಡುವುದಾಗಿದೆ. ಪಡಿತರ ಚೀಟಿಗಳ ಮಾಹಿತಿ ಆಧಾರದ ಮೂಲಕ ಯೋಜನೆ ಅನುಷ್ಠಾನವಾಗುತ್ತಿದೆ.

ಗೃಹಲಕ್ಷ್ಮಿ 2 ನೇ ಕಂತಿನ ಹಣ ಎಲ್ಲ ಮಹಿಳೆಯರ ಖಾತೆಗೆ ಆದಷ್ಟು ಬೇಗ ಬರಲಿದೆ. ತಡವಾಗಿ ನೊಂದಣಿ ಆದವರಿಗೆ ಹಣ ಬಿಡುಗಡೆಯಾಗಲಿದೆ. ಆದರೆ ಇನ್ನೂ ಹಲವು ಫಲಾನುಭವಿ ಮಹಿಳೆಯರು ತಮ್ಮ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಹಣ ಬಿಡುಗಡೆಯಾದ ತಕ್ಷಣ ಎರಡೂ ಕಂತುಗಳನ್ನು ಸೇರಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಗೃಹ ಲಕ್ಷ್ಮಿ ಯೋಜನೆ ರೂ 2000 ನಿಮ್ಮ ಖಾತೆಗೆ ಜಮಾ ಮಾಡಬೇಕು ಮತ್ತು ಆಧಾರ್ ಸೀಡಿಂಗ್ ಜೊತೆಗೆ ಬ್ಯಾಂಕ್ ಖಾತೆ EKYC ಅಥವಾ NPCI ಕಡ್ಡಾಯವಾಗಿರಬೇಕು. ಆದರೆ, ಹಲವು ಮಹಿಳೆಯರ ಖಾತೆಗಳಿಗೆ ಆಧಾರ್ ಲಿಂಕ್ ಆಗದ ಕಾರಣ ಅವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ.

ಪಡಿತರ ಚೀಟಿಯಲ್ಲಿ ಮೊದಲ ಸದಸ್ಯೆಯಾಗಿ ಗೃಹಿಣಿ ಹೆಸರು ಬದಲಾವಣೆ ಮಾಡಬೇಕಿತ್ತು, ತಿದ್ದುಪಡಿಗೆ ಸರಕಾರ ಅನುಮತಿ ನೀಡಿದ್ದು, ಬದಲಾವಣೆ ಮಾಡಿದ್ದರೆ ಸರ್ಕಾರಿ ಡೇಟಾಬೇಸ್ ನಲ್ಲಿ ಅಪ್ ಡೇಟ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು.

ಆಧಾರ್ ಕಾರ್ಡ್ ಹೆಸರು, ವಿಳಾಸ, ಬ್ಯಾಂಕ್ ಖಾತೆ ಮತ್ತು ಪಡಿತರ ಚೀಟಿ ಸರಿಯಾಗಿ ಹೊಂದಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಿ. ಸರ್ಕಾರವು ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಹಣ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ, ಗೃಹ ಲಕ್ಷ್ಮಿ ಹಣ ಮಾತ್ರ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ, ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಇನ್ನೂ ಹಲವಾರು ಮಹಿಳೆಯರಿಗೆ ಕಂತುಗಳು ಬರಬೇಕಿದೆ.

ಹಣ ಸಿಗದಿರುವವರ ಖಾತೆಗೆ ಎರಡನೇ ಕಂತಿನ ಜತೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಫಲಾನುಭವಿಯ ಖಾತೆಗೆ 4000 ರೂ ಜಮೆ ಆಗಲಿದೆ.
ಇದರ ಬಗ್ಗೆ ಯಾವುದೇ ಗೊಂದಲವಿದ್ದರೆ, ನೀವು ಹತ್ತಿರದ ಸೇವಾ ಸಿಂಧು ಕೇಂದ್ರದಿಂದ ಮಾಹಿತಿಯನ್ನು ಪಡೆಯಬಹುದು ಅಥವಾ ಈ ಸಂಖ್ಯೆಗಳಿಗೆ 8147500500 ಮತ್ತು 1902 ಗೆ ಕರೆ ಮಾಡಬಹುದು ಅಥವಾ ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಅರ್ಜಿಯ ಬಗ್ಗೆ ತಿಳಿಯಲು ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಹಾಕಬಹುದು.

ಯಾವೆಲ್ಲ ಸಮಸ್ಯೆಗಳು ಎದುರಾಗಿವೆ :

ಇ-ಕೆವೈಸಿ ಸಮಸ್ಯೆ:

ಇನ್ನು ನೋಡುವುದಾದರೆ ಉಳಿದ ಮಹಿಳೆಯರ ಪಡಿತರ ಚೀಟಿಯಲ್ಲಿ ಹೆಸರು ವ್ಯತ್ಯಾಸ, ಆಧಾರ್‌ ಕಾರ್ಡ್‌ನಲ್ಲಿ ಹೆಸರಿನ ಗೊಂದಲ, ಇ-ಕೆವೈಸಿಯಾಗದಿರುವುದು ಸೇರಿ ನಾನಾ ಕಾರಣದಿಂದ ಅರ್ಜಿ ಸ್ವೀಕೃತವಾಗಿಲ್ಲ.

ಎರಡನೇ ತಿಂಗಳ ಮಾಸಿಕ 2 ಸಾವಿರ ರೂ.ಅನುದಾನ ನೋಂದಣಿಯಾದ ಫಲಾನುಭವಿಗಳಿಗೆ ವಾರದೊಳಗೆ ಬಿಡುಗಡೆಯಾಗಲಿದೆ. ಈಗ ಹಲವಾರು ಫಲಾನುಭವಿಗಳ ಡಿಬಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಮಹಿಳೆಯರ ಖಾತೆಗೆ ಹಣ ಜಮೆಯಾಗಲಿದೆ. ಉಳಿದವರ ಡಿಬಿಟಿ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಎರಡನೇ ತಿಂಗಳ ಹಣ ಮಹಿಳೆಯರ ಖಾತೆಗೆ ಪೂರ್ಣವಾಗಿ ಜಮೆಯಾಗಲಿದೆ.

ಇನ್ನು ಹಲವು ತೊಂದರೆಗಳು ಕಾಡುತ್ತಿವೆ. ಪಡಿತರ ಚೀಟಿಯಲ್ಲಿ ಹೆಸರು ಕೈ ತಪ್ಪಿ ಹೋಗಿರುವ ಕಾರಣ ನೋಂದಣಿ ಸಾಧ್ಯವಾಗಿಲ್ಲ. ಕೆಲವರ ಹೆಸರು ಪಡಿತರ ಚೀಟಿಯಲ್ಲಿ ಹೆಸರಿದ್ದರೂ ನೊಂದಣಿ ಆಗಿಲ್ಲ. ಇಂತಹ ಸಮಸ್ಯೆಯಿಂದ ನೋಂದಣಿಗೆ ವಿಳಂಬವಾಗಿದೆ. ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಸರಿ ಪಡಿಸಿಕೊಂಡರೆ ಬೇಗ ಹಣ ಖಾತೆಗೆ ಬರಲಿದೆ ಎಂದು ಸರಕಾರ ತಿಳಿಸಿದೆ.

ಹಾಗಾಗಿ ಎರಡನೇ ಕಂತಿನ ಹಾಗೂ ತಡವಾಗಿ ಅರ್ಜಿ ಸಲ್ಲಿಸಿದವರಿಗೆ ಗೃಹಲಕ್ಷ್ಮಿ ಹಣ ಇನ್ನೇನು ಎರಡೇ ದಿನಗಳಲ್ಲಿ ಬರಲಿದೆ. ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!