ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆ (Gruha jyoti Yojana), ರಾಜ್ಯದ ಜನತೆಗೆ ಉಚಿತ ವಿದ್ಯುತ್ ಸರಬರಾಜು ಮಾಡುವ ಮಹತ್ವದ ಕಾರ್ಯಕ್ರಮವಾಗಿದೆ. ಈ ಯೋಜನೆಯ ನಿಯಮಾವಳಿಯಲ್ಲಿ ಇತ್ತೀಚೆಗೆ ಒಂದು ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಹೌದು,
ಕರ್ನಾಟಕ ರಾಜ್ಯದ “ಗೃಹ ಜ್ಯೋತಿ” (Gruha jyoti) ಯೋಜನೆಯಿಂದ ರಾಜ್ಯದ ನಾಗರಿಕರು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು ಮನೆ ಬದಲಾಯಿಸಿದ ನಂತರ ಈ ಸೌಲಭ್ಯವನ್ನು ಪಡೆಯಲು ಡಿಜಿಟಲ್ ವ್ಯವಸ್ಥೆಯ (Digital Service) ಅವಶ್ಯಕತೆಯು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಇಂಧನ ಇಲಾಖೆ “ಗೃಹ ಜ್ಯೋತಿ” ಯೋಜನೆಯಡಿ ಡಿ- ಲಿಂಕ್ ಪ್ರಕ್ರಿಯೆಯನ್ನು(D-link) ಆನ್ಲೈನ್‌ನಲ್ಲಿ ಅನುಸರಿಸಲು ಅವಕಾಶ ಕಲ್ಪಿಸಿದೆ.
ಈ ಬದಲಾವಣೆಯ ಉದ್ದೇಶ, ಬಾಡಿಗೆ ಮನೆಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ ಹೆಚ್ಚಿನ ಸುಗಮತೆ ಕಲ್ಪಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಈ ಸೇವೆ ಏಕೆ?
ಅನೇಕ ಬಾಡಿಗೆದಾರರು ಮನೆ ಬದಲಾಯಿಸಿದಾಗ, ಅವರ ಹೊಸ ಮನೆಯಲ್ಲಿಯೂ ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಸೇವಾ ಸಿಂಧು ಪೋರ್ಟಲ್(Seva Sindhu Portal ) ಮೂಲಕ ಹಳೆಯ ಆರ್ ಆರ್(R R number) ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಹೊಸ ಆರ್ ಆರ್ ಸಂಖ್ಯೆಯನ್ನು ಲಿಂಕ್ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಗೃಹ ಜ್ಯೋತಿ D link – ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಆರ್ ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡುವ ವಿಧಾನ:
ಸೇವಾ ಸಿಂಧು ಪೋರ್ಟಲ್ ಪ್ರವೇಶ:
“ಗೃಹ ಜ್ಯೋತಿ” ಯೋಜನೆಯ ಡಿ-ಲಿಂಕ್ ಮತ್ತು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಮೊದಲಿಗೆ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಬೇಕು. https://sevasindhu.karnataka.gov.in/
ಆಧಾರ್ ಸಂಖ್ಯೆಯನ್ನು ನಮೂದಿಸಿ:
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ನೋಂದಾಯಿತ ಆದಾರ್ ಸಂಖ್ಯೆಯನ್ನು ಹಾಕಿ, “Get Details” ಬಟನ್ ಮೇಲೆ ಕ್ಲಿಕ್ ಮಾಡಿ.
ಇ-ಕೆವೈಸಿ ಸೇವೆ:(e -kyc service)
ಈ ಹಂತದಲ್ಲಿ, ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಮತ್ತೆ ಹಾಕಿ, ಓಟಿಪಿ ಪಡೆಯಲು “Generate OTP” ಬಟನ್ ಮೇಲೆ ಕ್ಲಿಕ್ ಮಾಡಿ. ಓಟಿಪಿ ಅನ್ನು ನಮೂದಿಸಿ, ದೃಢೀಕರಿಸಿ.
ಆರ್ ಆರ್ ಸಂಖ್ಯೆಯನ್ನು ಲಿಂಕ್ ಮಾಡುವುದು:
ಕೊನೆ ಹಂತದಲ್ಲಿ, ಹಳೆಯ ಆರ್ ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ(D-link the R R number), ಹೊಸ ಆರ್ ಆರ್ ಸಂಖ್ಯೆಯನ್ನು ಲಿಂಕ್ ಮಾಡಿ(Link new R R number)
ಈ ಸೇವೆಯ ಪ್ರಯೋಜನಗಳು:
ಈ ಡಿಜಿಟಲ್ ತಿದ್ದುಪಡಿ ಪ್ರಕ್ರಿಯೆ ನಿರ್ವಾಹಿಸುತ್ತಿದ್ದಂತೆ, ಬಾಡಿಗೆದಾರರು ತಮ್ಮ ಹೊಸ ಮನೆಗೆ ಸ್ಥಳಾಂತರಿಸಿದ ನಂತರವೂ, ಉಚಿತ ವಿದ್ಯುತ್ ಸೌಲಭ್ಯವನ್ನು ನಿರಂತರವಾಗಿ ಬಳಸಬಹುದಾಗಿದೆ. ಇದರಿಂದ ರಾಜ್ಯದ ಸುಮಾರು 1.65 ಕೋಟಿ ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದೊಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ, ಇದು ಸಾರ್ವಜನಿಕರ ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಹೊಸ ಸೌಲಭ್ಯವನ್ನು ಪ್ರಾರಂಭಿಸಿದ್ದಕ್ಕಾಗಿ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇದು ಸರ್ಕಾರದ ಜನಪರ ಕಾರ್ಯಪ್ರವೃತ್ತಿಯೊಂದಾಗಿದೆ, ಇದು ಸರ್ಕಾರದ ಮಾತು-ತತ್ವದ ಅನುಸರಣೆ ಎಂಬುದಕ್ಕೆ ಸಾಕ್ಷಿಯಾಗಿದೆ,
ಎಂದು ಇಂಧನ ಸಚಿವ ಕೆ .ಜೆ ಜಾರ್ಜ್ ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಯಡಿ, ಫಲಾನುಭವಿಗಳಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಲಭ್ಯವಿದೆ. ಇದು ಹಿಂದುಳಿದ ಹಾಗೂ ಬಡ ಜನರಿಗೆ ದೊಡ್ಡ ನೆರವಾಗಿದೆ.ಮತ್ತು “ಗೃಹ ಜ್ಯೋತಿ” ಯೋಜನೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ(Digital Flatform) ಶಿಫ್ಟ್ ಮಾಡುವುದು ರಾಜ್ಯದ ಇಂಧನ ಇಲಾಖೆಯ ಪ್ರಮುಖ ಹೆಜ್ಜೆಯಾಗಿದೆ. ಈ ಹೊಸ ಸೌಲಭ್ಯಗಳು ಬಾಡಿಗೆದಾರರಿಗೆ ಮನೆಯಲ್ಲಿ ಬದಲಾವಣೆಯ ನಂತರವೂ ನಿರಂತರ ವಿದ್ಯುತ್ ಸೌಲಭ್ಯವನ್ನು ಪಡೆಯಲು ಸಹಾಯ ಮಾಡುತ್ತದೆ, ಇದು ಸಾಮಾನ್ಯ ನಾಗರಿಕರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳಬಹುದು. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




