ಗೃಹಜ್ಯೋತಿ ಯೋಜನೆಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿವೆ ಉತ್ತರ; ಯಾರಿಗೆ ಸಿಗುತ್ತೆ ಫ್ರೀ ವಿದ್ಯುತ್ !

Picsart 23 06 24 06 56 33 515

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೃಹಜ್ಯೋತಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು.  ಈ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕು?, ಷರತ್ತುಗಳು ಏನಿದೆ?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ನೀಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗೃಹ ಲಕ್ಷ್ಮಿ ಯೋಜನೆ 2023

ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯ 200 ಯೂನಿಟ್‌ ಉಚಿತ ವಿದ್ಯುತ್ ಯೋಜನೆ ಜುಲೈ 2023 ರಿಂದ ಜಾರಿಯಾಗಲಿದೆ. ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಾಗಲು ಏನೇನು ಮಾನದಂಡಗಳನ್ನು ಅನುಸರಿಸಬೇಕು? ಯಾರು ಅರ್ಹರು? ಅರ್ಹತೆ ಪಡೆಯಲು ಏನೆಲ್ಲಾ ಮಾಡಬೇಕು? ಯಾವ ದಾಖಲೆಗಳನ್ನು ನೀಡಬೇಕು? ಅರ್ಜಿ ಸಲ್ಲಿಕೆ ಹೇಗೆ ? ಎಲ್ಲ ಮಾಹಿತಿಯನ್ನು ಪ್ರಶ್ನೋತ್ತರಗಳ ಮೂಲಕ ಬೆಸ್ಕಾಂ (BESCOM) ನೀಡಿದೆ. ಈ ಕುರಿತು ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.


Untitled 1 scaled

ಗೃಹ ಜ್ಯೋತಿ – ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. ನಾನು ಈ ಯೋಜನೆಗೆ ಅರ್ಹನೇ?

ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

2. ಗೃಹ ಜ್ಯೋತಿ ಯೋಜನೆ ಎಂದರೇನು?

“ಗೃಹ ಜ್ಯೋತಿ” ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.

3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು? 

ಈ ಯೋಜನೆಯನ್ನು ಸೇವಾ ಸಿಂಧು ವೆಬ್‌ಸೈಟ್ ನಲ್ಲಿ (https://sevasindhugs.karnataka.gov.in) (ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್) ನೋಂದಾಯಿಸಿಕೊಳ್ಳಬೇಕು. ನೋಂದಣಿಯು ಜೂನ್-18, 2023 ರಿಂದ ಪ್ರಾರಂಭವಾಗಿದೆ.

4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?

ಜುಲೈ, 2023 ರಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು ಆಗಸ್ಟ್ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

5. ಈ ಯೋಜನೆಯನ್ನು ನಾನು ಎಲ್ಲಿ ಸಲ್ಲಿಸಬಹುದು?

ಈ ಯೋಜನೆಯನ್ನು ಸೇವಾ ಸಿಂಧು ವೆಬ್‌ಸೈಟ್ ನಲ್ಲಿ (https://sevasindhugs.karnataka.gov.in) (ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್) ನೋಂದಾಯಿಸಿಕೊಳ್ಳಬೇಕು, ನೋಂದಣಿಯು ಜೂನ್-18, 2023 ರಿಂದ ಪ್ರಾರಂಭ.

6. ಈ ಯೋಜನೆಯನ್ನು ಆಫ್ಘನ್ (Offline) ಮೂಲಕ ನಾನು ಪಡೆಯಬಹುದೇ?

ಹೌದು. ಎಲ್ಲಾ ಗೃಹಬಳಕೆ ಗ್ರಾಹಕರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್‌ ಮತ್ತು ನಾಡಕಛೇರಿ ಹಾಗೂ ವಿದ್ಯುತ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

7. ಈ ಯೋಜನೆ ಪಡೆಯಲು ಯಾವುದೆಲ್ಲಾ ಮಾಹಿತಿ ಸಲ್ಲಿಸಬೇಕು? 

ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಸಲ್ಲಿಸಬೇಕು.

8. ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?

ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಪಾವತಿಸಬೇಕಾಗಿರುವುದಿಲ್ಲ.

9. ನಾನು ಜೂನ್ ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿಸಬೇಕೆ? 

ಹೌದು. ಆಗಸ್ಟ್ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ (ಜುಲೈ 2023 ರಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು) ಯೋಜನೆಯನ್ನು ಜಾರಿಗೊಳಿಸಲಾಗುವುದು.

10. ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ, ನಾನು ಎಲ್ಲಾ ಮಾಪಕಗಳಿಗೆ ಅರ್ಹನಿರುವೇನೆ? 

ಇಲ್ಲ. ಈ ಯೋಜನೆಯಡಿ ಪ್ರತಿ ಮನೆಯ ಒಂದು ಮೀಟರ್ ಗೆ ಮಾತ್ರ ಅರ್ಹರಾಗಿರುತ್ತಾರೆ.

11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ? 

ಹೌದು, ನೋಂದಣಿ ಸಮಯದಲ್ಲಿ ಸ್ವೀಕೃತಿ ಪತ್ರವನ್ನು ಗ್ರಾಹಕರಿಗೆ ನೀಡಲಾಗುತ್ತದೆ.

12. ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ, ಯೋಜನೆಯ ಲಾಭವು ಯಾವಾಗ ನನ್ನ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ?

ಜುಲೈ 2023 ರಲ್ಲಿ ನೀಡಲಾದ ಬಿಲ್‌ ಅನ್ನು ಪೂರ್ಣವಾಗಿ ಪಾವತಿಸಬೇಕಾಗುತ್ತದೆ.ಯೋಜನೆಯ ಪ್ರಯೋಜನಗಳು ಆಗಸ್ಟ್ 1, 2023 ರಿಂದ ಅನ್ವಯಿಸುತ್ತದೆ (ಜುಲೈ-2023 ರ ವಿದ್ಯುತ್ ಬಳಕೆಗಾಗಿ).

13. ನಾನು ಅಪಾರ್ಟೆಂಟ್ (ವಸತಿ ಸಮುಚ್ಛಯ) ಮಾಲೀಕನಾಗಿದ್ದೇನೆ, ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ?

ಹೌದು, ಪ್ರತ್ಯೇಕ ವಿದ್ಯುತ್‌ ಮೀಟರ್‌ಗಳು ಲಭ್ಯವಿದ್ದರೆ/ಸ್ಥಾಪಿಸಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

14. ನಾನು ಬಾಡಿಗೆದಾರ; ಬಿಲ್ ಮಾಲೀಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ?

ಹೌದು. ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.

15. ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ?

ಹೌದು, ಯೋಜನೆಯ ಲಾಭವನ್ನು ಪಡೆಯಬಹುದು.

16. ನಾನು ಅಂಗಡಿಯ ಮಾಲೀಕರಾಗಿದ್ದೇನೆ, ನಾನು ಸಹ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದೇ?

ಇಲ್ಲ, ಗೃಹಬಳಕೆದಾರರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

17. ನಾನು ಎಷ್ಟು ಉಚಿತ ಯೂನಿಟ್‌ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯೂನಿಟ್ ಗಳಿಗೆ ನಾನು ಅರ್ಹನೇ?

2022-23 ರ ಸರಾಸರಿ ವಿದ್ಯುತ್ ಬಳಕೆ + ಶೇಕಡ 10% ಹೆಚ್ಚಳ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕೀಕರಿಸಲಾಗುತ್ತದೆ.

18. ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು? 

ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಲಭ್ಯವಿರುತ್ತದೆ.

19. ಈ ಯೋಜನೆಯನ್ನು ಪಡೆಯಲು ಖಾತೆ ಸಂಖ್ಯೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವೇ?

ಹೌದು, ಗ್ರಾಹಕರ ಖಾತೆ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

20. ನನ್ನ ಆಧಾರ್ ಕರ್ನಾಟಕ ರಾಜ್ಯದ ಹೊರಗೆ ನೋಂದಾಯಿಸಲ್ಪಟ್ಟಿದೆ. ನಾನು ಈ ಯೋಜನೆ ಪಡೆಯಲು ಅರ್ಹನಾಗುತ್ತೇನೆಯೇ?

ಹೌದು, ನೀವು ಕರ್ನಾಟಕದಲ್ಲಿ ಎಲ್ಲಿಯಾದರೂ ವಾಸಿಸುತ್ತಿದ್ದರೆ, ನೀವು ಈ ಯೋಜನೆಗೆ ಅರ್ಹರಾಗಿದ್ದೀರಿ.

21. ನಾನು ವಿದ್ಯುತ್ ಬಿಲ್ ಬಾಕಿಯನ್ನು ಉಳಿಸಿಕೊಂಡಿದ್ದರೆ, ನಾನು ಈ ಯೋಜನೆಗೆ ಅರ್ಹನೇ? 

ಹೌದು. ಆದರೆ, ಜೂನ್ 30 ರವರೆಗಿನ ವಿದ್ಯುತ್ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು. ಪಾವತಿಸಲು ವಿಫಲವಾದ್ದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

22. ಒಂದು ವೇಳೆ ನಾನು ಈ ಯೋಜನೆಯ ಫಲಾನುಭವಿಯಾಗಿ, ನನಗೆ ನಿಗದಿ ಪಡಿಸಿರುವ ಉಚಿತ ವಿದ್ಯುತ್ ಗಿಂತ ಜಾಸ್ತಿ ಯೂನಿಟ್ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್ ಗಳಿಗೆ ಪಾವತಿಸಬೇಕಾಗುತ್ತದೆ. ಆ ಹೆಚ್ಚಿನ ಯೂನಿಟ್ ಬಳಕೆಯ ಬಿಲ್ಲನ್ನು ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ?

ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ನಂತರ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.

23. ವಿದ್ಯುತ್ ಬಿಲ್ ನನ್ನ ದಿವಂಗತ ತಂದೆಯ ಹೆಸರಿನಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು?

ವಿದ್ಯುತ್ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು ಮತ್ತು ತದ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲಾ ಉಪ ವಿಭಾಗಗಳಲ್ಲಿನ ಜನ ಸ್ನೇಹಿ ವಿದ್ಯುತ್ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.

24. ನನ್ನ ಮಾಸಿಕ ಬಳಕೆಯು 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ, ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕೇ?

ಹೌದು. ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

25. ನನ್ನ ವಿದ್ಯುತ್ ಬಳಕೆಯು ಉಚಿತ ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ, ಬಿಲ್ ಮೊತ್ತ ಏನಾಗುತ್ತದೆ? ವಿ

ದ್ಯುತ್ ಬಳಕೆಯು ಅರ್ಹ ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ ನೀವು ‘ಶೂನ್ಯ ಬಿಲ್’ ಪಡೆಯುತ್ತೀರಿ.

26. ಸರ್ಕಾರದ ಆದೇಶದ ನಂತರ ಹೊಸದಾಗಿ ಗೃಹಬಳಕೆಗಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೆ / ಬಳಕೆದಾರರಿಗೆ ಈ ಯೋಜನೆಯು ಅನ್ವಯಿಸುತ್ತದೆಯೇ?

ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರ ಸರಾಸರಿ ಬಳಕೆಯು ಮಾಸಿಕ 53 ಯೂನಿಟ್ ಗಳಾಗಿರುವುದರಿಂದ 53 ಯೂನಿಟ್ ಗಳನ್ನೇ ನಿರ್ಧರಿಸಿ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು.

27, 2022-23 ರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಬಳಕೆ ದಾಖಲಾಗಿದ್ದಲ್ಲಿ, ಅಂತಹ ಮನೆಗಳ ಕಡಿಮೆ ಅವಧಿಯ ಸರಾಸರಿ ಪರಿಗಣಿಸುವ ವಿಧಾನ ಹೇಗೆ? (Shifted Houses)

ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹಬಳಕೆದಾರರಿಗೆ ಸರಾಸರಿ ಬಳಕೆಯು ಮಾಸಿಕ 53 ಯೂನಿಟ್ ಗಳಾಗಿರುವುದರಿಂದ 53 ಯೂನಿಟ್ ಗಳನ್ನೇ ನಿರ್ಧರಿಸಿ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವುದು.

ನಮ್ಮ ವಿಡಿಯೋ ನೋಡುವ ಮೂಲಕ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಆನ್ಲೈನ್ ಮೂಲಕ ನೊಂದಣಿ ಮಾಡಿಕೊಂಡಿದ್ದಾರೆ. ನಮ್ಮ ಎಲ್ಲಾ ವೀಕ್ಷಕರಿಗೂ ತುಂಬಾ ಧನ್ಯವಾದಗಳು ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಹೀಗೆ ಇರಲಿ. ನಮ್ಮ Android ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳೋ ಮೂಲಕ ನಿಖರವಾದ ಮತ್ತು ಸ್ಪಷ್ಟ ಸುದ್ದಿಗಳನ್ನು ನೀವು ಪ್ರತಿದಿನ ಓದಬಹುದು.

app download

 

ಗೃಹಜ್ಯೋತಿ ಯೋಜನೆ ಆನ್ಲೈನ್ ಅರ್ಜಿ:

ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವ ಫಲಾನುಭವಿಗಳು  ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಿರುವ https://sevasindhugs.karnataka.gov.in/ ವಿಳಾಸದಲ್ಲಿ ಲಾಗಿನ್ ಆಗಿ ನೋಂದಾಯಿಸಬೇಕು.

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ : https://sevasindhugs.karnataka.gov.in/

 

ನಿಮಗೆ ಮೊಬೈಲ್ ನಲ್ಲಿ ಅಪ್ಲಿಕೇಶನ್ ಹಾಕುವಾಗ ಏನಾದ್ರು ಸಮಸ್ಯೆ ಆದರೆ ಹತ್ತಿರದ ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು

ಸೂಚನೆ: ಇಂದು ಬಹಳ ಜನ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಹಾಗಾಗಿ ತಾಂತ್ರಿಕ ಕಾರಣಗಳಿಂದ ವೆಬ್ಸೈಟ್ ತೆರೆಯದಿದ್ದರೆ ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ, ಅರ್ಜಿ ಸಲ್ಲಿಸಿ

ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಮಹಿಳೆಯರಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

6 thoughts on “ಗೃಹಜ್ಯೋತಿ ಯೋಜನೆಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿವೆ ಉತ್ತರ; ಯಾರಿಗೆ ಸಿಗುತ್ತೆ ಫ್ರೀ ವಿದ್ಯುತ್ !

  1. SHIVAKUMAR D R SON OF PATEL REVANNA.SHIVANILAYA NEW EXTENSION 60 FEET DEVARAYAPATTNA WARD NO 35 TUMKUR OUR COSTUMER ID.NO K Y. A 1602..OUR PHONE. NUMBER 9844155462. .99160 16963. KYTHSANDRA K.E B OFFICE UNDER TUMKUR

    1. I have entered all the information In Graha jyoti free electrivt bill scheme.. I got successful entered ..but failed to get printout next steppl guide.

Leave a Reply

Your email address will not be published. Required fields are marked *

error: Content is protected !!