ಕರ್ನಾಟಕ ಗೃಹ ಜ್ಯೋತಿ ಯೋಜನೆ ಬಗ್ಗೆ ಸಂಪೂರ್ಣ ವಿವರ..! ಷರತ್ತುಗಳೇನು?? ಈಗಲೇ ಓದಿ

Picsart 23 05 20 17 40 23 305 scaled

ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿ ‘ಗೃಹ ಜ್ಯೋತಿ’ ಯೋಜನೆ ( Karnataka Gruha jyoti Scheme) . ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ ಆದ್ದರಿಂದ ಕರ್ನಾಟಕ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲು ಬದ್ಧರಾಗಿದ್ದಾರೆ. ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಯಾವುದೇ ಬೆಲೆ ತೆತ್ತಾದರೂ ಭರವಸೆ ಈಡೇರಿಸುತ್ತೇವೆ – ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ 

ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿ, ಕರ್ನಾಟಕ ಸರ್ಕಾರವು ಕರ್ನಾಟಕದ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಅನ್ನು ಒದಗಿಸುತ್ತದೆ. ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಎಲ್ಲ ಐದು ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ. ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ತಿಂಗಳಿಗೆ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳು ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸುವುದಿಲ್ಲ. ಮನೆಯಲ್ಲಿ ಗೃಹ ವಿದ್ಯುತ್ ಸಂಪರ್ಕ ಹೊಂದಿರುವ ಕರ್ನಾಟಕದ ಖಾಯಂ ನಿವಾಸಿಗಳು ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆ ಲಾಭವನ್ನು ಪಡೆಯಲು ಅನ್ವಯಿಸಲಾಗದ ಷರತ್ತುಗಳು, ಬೇಕಾಗಿರುವ ಧಾಖಲೆಗಳು, ಹಾಗೂ ಯೋಜನೆಯ ಪ್ರಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿವೇ.

ಯಾರಿಗೆಲ್ಲ ಉಚಿತ ವಿದ್ಯುತ್?

🔹ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
🔹ಅರ್ಜಿದಾರರು ಮನೆಯ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.
🔹ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಸೀಮಿತವಾಗಿರದೆ ಎಲ್ಲರಿಗೂ ನೀಡಲಾಗುವುದು

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಯೋಜನೆಯ ಪ್ರಯೋಜನಗಳು :

ಕರ್ನಾಟಕ ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕದ ಅರ್ಹ ಕುಟುಂಬಕ್ಕೆ ಈ ಕೆಳಗಿನ ಪ್ರಯೋಜನಗಳನ್ನು ಒದಗಿಸಲಾಗುವುದು

  1. ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಕೆಗೆ ಉಚಿತ ವಿದ್ಯುತ್ ನೀಡಲಾಗುವುದು.
    ತಿಂಗಳಿಗೆ 200 ಕ್ಕಿಂತ ಕಡಿಮೆ ವಿದ್ಯುತ್ ಘಟಕಗಳನ್ನು ಬಳಸುವ ಮನೆಯಿಂದ ಯಾವುದೇ ಮೊತ್ತವನ್ನು ವಿಧಿಸಲಾಗುವುದಿಲ್ಲ
  2. 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಸಿದಲ್ಲಿ ಹೆಚ್ಚಿನ ಯೂನಿಟ್​ಗೆ ಮಾತ್ರ ದರ ವಿಧಿಸುತ್ತಾರೆಯೇ ಅಥವಾ 200ಕ್ಕಿಂತ ಕಡಿಮೆ ಬಳಸಿದವರಿಗೆ ಮಾತ್ರ ಉಚಿತ ಭರವಸೆ ಅನ್ವಯವಾಗುತ್ತದೆಯೇ ಎಂಬುದನ್ನು ಕಾಂಗ್ರೆಸ್ ಪಕ್ಷ ಇನ್ನೂ ಸ್ಪಷ್ಟಪಡಿಸಿಲ್ಲ.

ಅವಶ್ಯಕ ದಾಖಲೆಗಳು:

ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ:-

  1. ಕರ್ನಾಟಕದ ನಿವಾಸ ಪುರಾವೆ/ ನಿವಾಸ.
  2. ಆಧಾರ್ ಕಾರ್ಡ್.
  3. ವಿದ್ಯುತ್ ಸಂಪರ್ಕ.
  4. ಮೊಬೈಲ್ ನಂಬರ.

Untitled 1 scaled

“ಗೃಹ ಜ್ಯೋತಿ” ಯೋಜನೆಯ ಷರತ್ತುಗಳು:

ಮುಖ್ಯಮಂತ್ರಿ ” ಗೃಹ ಜ್ಯೋತಿ” ಯೋಜನೆಯ ಅಡಿಯಲ್ಲಿ ಕೆಲವೊಂದು ಹೊಸ ಷರತ್ತುಗಳನ್ನು ಜೋಡಿಸಲಾಗಿದೆ.ಇನ್ನು ಮೇಲೆ ವಿದ್ಯುತ್ ಬಿಲ್ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಖುಷಿಯಿಂದ ಇರುವ ಕರ್ನಾಟಕದ ಸಮಸ್ತ ಜನತೆಗೆ ಇದೊಂದು ಶಾಕಿಂಗ್ ಸುದ್ದಿಯಾಗಲಿದೆ.

ಈ ಯೋಜನೆಯಲ್ಲಿ ಕೆಲವೊಂದು ಆಸ್ಪಷ್ಟತೆ ಹಾಗೂ ಪ್ರಶ್ನೆ ಗಳು ಕಂಡುಬಂದಿದೆ. ಏಕೆಂದರೆ ಸರ್ಕಾರ 200 Unit ವಿದ್ಯುತ್ ಉಚಿತ ಘೋಷಣೆಯನ್ನು ಮಾಡಿದೆ ಆದರೆ ವಿದ್ಯುತ್ ಪಾವತಿಯಲ್ಲಿ ಎರಡು ಶುಲ್ಕಗಳು ಬರುತ್ತದೆ, ನಿಗದಿತ ಶುಲ್ಕ ಮತ್ತು ಬಳಕೆ ಶುಲ್ಕಗಳು. ಅದರಲ್ಲಿ ನಿಗದಿತ ಶುಲ್ಕ ಪಾವತಿ ಮಾಡಬೇಕಾ ಬೇಡ್ವಾ ಎನ್ನುದರ ಬಗ್ಗೆ ಸ್ಪಷ್ಟನೆಯನ್ನು ಜನತೆಯಲ್ಲಿ ಕಂಡುಬಂದಿಲ್ಲ. ನಿಗದಿತ ಶುಲ್ಕ ಕನಿಷ್ಠ ರೂ 110 ರಿಂದ ರೂ 210 ರೂಪಾಯಿವರೆಗೆ ಇರುತ್ತದೆ. ವಿದ್ಯುತ್ ಬಳಕೆ ಶುಲ್ಕ ಉಚಿತವಾದರೂ ನಿಗದಿತ ಶುಲ್ಕ ನೀವು ಪಾವತಿ ಮಾಡಬೇಕಾಗುತ್ತದೆ. ಇದರ ಕುರಿತು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ನಡೆಯುವ ಮೊದಲನೆಯ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟಿಕರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಇನ್ನೊಂದು ಪ್ರಶ್ನೆ ಜನರಲ್ಲಿ ಇದೀಗ ಮೂಡಿ ಬಂದಿದೆ. ಅದೇನೆಂದರೆ ರಾಜ್ಯ ಸರ್ಕಾರದ ಪ್ರಕಾರ 200 unit ಉಚಿತ ವಿದ್ಯುತ ನೀಡಲಾಗುತ್ತದೆ ಆದರೆ ಒಂದು ವೇಳೆ 200 ಯೂನಿಟ್ಸ್ ಗಿಂತ ಅಧಿಕ ವಿದ್ಯುತ ಬಳಕೆ ಆದರೆ ಸಂಪೂರ್ಣ ಪಾವತಿ ಮಾಡಬೇಕೇ?ಉಧಾಹರಣೆಗಾಗಿ, ಒಂದು ವೇಳೆ 220 Unit ವಿದ್ಯುತ್ ಬಳಕೆ ಆದರೆ 20 ಯೂನಿಟ ಗೆ ಮಾತ್ರ ಪಾವತಿ ಮಾಡಿಬೇಕೇ ? ಅಥವಾ ಸಂಪೂರ್ಣ ಪವತಿಮಾಡಬೇಕೇ ಎನ್ನುವ ಪ್ರಶ್ನೆ ಜನಸಾಮನ್ಯರಲ್ಲಿ ಮೂಡಿಬಂದಿದೆ.

ಒಟ್ಟಿನಲ್ಲಿ ಬಳಕೆ ಶುಲ್ಕದ ಜೊತೆಗೆ ನಿಗದಿತ ಶುಲ್ಕ ಕೂಡ ಉಚಿತವಾಗಲಿದೆಯಾ? 200 Unit ಕಿಂತ ಅಧಿಕ ವಿದ್ಯುತ್ ಬಳಕೆ ಆದರೆ ಹಿಚ್ಚಳ ಯುನಿಟ್ ಗೆ ಮಾತ್ರ ಪಾವತಿ ಮಾಡಬಹುದಾ? ಎಂಬ ಈ ಎಲ್ಲಾ ಪ್ರಶ್ನೆಗಗಳಿಗೆ ಕರ್ನಾಟಕದ ರಾಜ್ಯ ಸರ್ಕಾರ ಕಡೆಯಿಂದ ಜನರು ಉತ್ತರವನ್ನು ಅಪೇಕ್ಷಿಸುತ್ತಾರೆ.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Leave a Reply

Your email address will not be published. Required fields are marked *