ಮೇ.31 ರಿಂದ ಶಾಲೆಗಳು ಪ್ರಾರಂಭ , ಸಮವಸ್ತ್ರದಲ್ಲಿ ಕೆಲವು ಬದಲಾವಣೆ! ಇಲ್ಲಿದೆ ಮಾಹಿತಿ!

changes in uniform

ಶಾಲಾ (school) ಆರಂಭದ ದಿನದಿಂದಲೇ ಮಕ್ಕಳಿಗೆ ಸಿಗಲಿದೆ ಎರಡು ಜೊತೆ ಸಮವಸ್ತ್ರ. 6,7 ನೇ ತರಗತಿಯ ವಿದ್ಯಾರ್ಥಿನಿಯರಿಗೂ (girl’s) ಚೂಡಿದಾರ್ (chudidar) ತಂದ ಸರ್ಕಾರ.

ಶಾಲಾ ಮಕ್ಕಳಿಗೆ ನೀಡಿದ್ದ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. 2024-2025 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಮೇ 31 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಬೇಸಿಗೆ ರಜೆ ಮುಗಿದವೇಳೆಯ ಶುರುವಿನಲ್ಲಿ ಶಾಲೆಗಳಿಗೆ ಬರಲು ಮಕ್ಕಳು ಹಿಂದೆ ಮುಂದೆ ನೋಡುತ್ತಾರೆ. ಏಕೆಂದರೆ ಇಷ್ಟು ದಿನ ಬೇಸಿಗೆ ರಜೆಯಲ್ಲಿ (Summer Holidays) ಆಟಗಳನ್ನು ಆಡುತ್ತಾ, ಕುಣಿದು ಕುಪ್ಪಳಿಸುತ್ತಾ ಬೇಸಿಗೆ ರಜೆಯನ್ನು ಕಳೆದಿರುತ್ತಾರೆ. ಆದ್ದರಿಂದ ಶಾಲೆ ಪ್ರಾರಂಭವಾದ ದಿನದಿಂದಲೇ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಉದ್ದೇಶದಿಂದ ಸರ್ಕಾರ ಹೊಸ ಹೊಸ ಸೌಲಭ್ಯಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ 2024- 25 ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದ 2 ದಿನಗಳಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡುತ್ತಿದೆ. ಈ ವರ್ಷದ ವಿಶೇಷತೆ ಏನೆಂದರೆ  ಸಮವಸ್ತ್ರದಲ್ಲಿ ಸ್ವಲ್ಪ ಬದಲಾವಣೆಯನ್ನು ಸರ್ಕಾರ ತಂದಿದೆ. ಈ ವರ್ಷ ಯಾವ ಬದಲಾವಣೆ ತಂದಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾ ವಿಕಾಸ (Vidhya Vikas) ಯೋಜನೆಯಡಿ ಸರ್ಕಾರಿ ಶಾಲೆಗಳ ಎಲ್ಲಾ ಮಕ್ಕಳಿಗೂ ಉಚಿತ ಸಮವಸ್ತ್ರಗಳನ್ನು (free uniform) ವಿತರಿಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ಪ್ರತಿ ತರಗತಿಗಳಿಗೂ ಕೂಡ ವಿವಿಧ ಅಳತೆಗಳ ಸಮವಸ್ತ್ರಗಳನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ 2024-25 ನೇ ಸಾಲಿನ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಇಲಾಖೆಯೂ ಈಗಾಗಲೇ ಶಾಲೆಗಳಿಗೆ ತಲುಪಿಸಿದೆ. ಮೇ 29 ರಿಂದಲೇ  ಅಂದರೆ ಇಂದಿನಿಂದಲೇ ಸಮವಸ್ತ್ರವನ್ನು ನೀಡಲು ಸರ್ಕಾರ ಆದೇಶಿಸಿದೆ. ಜಿಲ್ಲೆಗಳಿಗೆ ಶೇಕಡ.70 ರಷ್ಟು ಪಠ್ಯಪುಸ್ತಕ ರವಾನೆ ಮಾಡಲಾಗಿದೆ.

ಮೇ 31 ರಿಂದ ಅಧಿಕೃತವಾಗಿ ಶಾಲೆಗಳು ಆರಂಭ  :

ಬೇಸಿಗೆ ರಜೆಯಲ್ಲಿ ಮಕ್ಕಳು ಶಾಲೆಗಳಿಗೆ ಹೋಗಿರುವುದಿಲ್ಲ,  ಶಾಲೆಯ ಸ್ವಚ್ಛತಾ  ಕಾರ್ಯಗಳು ಆಗಿಲ್ಲದ ಕಾರಣ, ಮರಗಳ ಎಲೆಗಳು ಹಾಗೂ ದೂಳು ಈ ರೀತಿಯಾಗಿ  ಶಾಲೆಯ ಸುತ್ತಮುತ್ತ ಕಸ ಕಡ್ಡಿಗಳು  ಬಿದ್ದಿರುತ್ತವೆ. ಆದ್ದರಿಂದ ಬೇಸಿಗೆ ರಜೆಯನ್ನು ಮುಗಿಸಿಕೊಂಡ ಮಕ್ಕಳ ಜೊತೆಗೂಡಿ ಶಿಕ್ಷಕರು ಶಾಲೆಯನ್ನು ಸ್ವಚ್ಛ ಮಾಡಬೇಕಾಗಿರುತ್ತದೆ. ಸರ್ಕಾರದ ಆದೇಶದಂತೆ ಈ ವರ್ಷ ಶಾಲೆಗಳನ್ನು ತೆರೆದ ಮೊದಲ ಎರಡು ದಿನಗಳಲ್ಲಿ ಅಗತ್ಯ ಸ್ವಚ್ಛತಾ ಕಾರ್ಯಗಳನ್ನು (cleaning work) ಮುಗಿಸಬೇಕು. ಹಾಗೂ 2024-25 ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 31 ರಿಂದ ಆರಂಭವಾಗುತ್ತಿದ್ದು, ಆ ದಿನ ಶಾಲಾ ಮಕ್ಕಳಿಗೆ ಸಿಹಿ ನೀಡಿ ‘ಶಾಲಾ ಪ್ರಾರಂಭೋತ್ಸವ’ ನಡೆಸುವಂತೆ ತಿಳಿಸಿದೆ.

6, 7 ನೇ ತರಗತಿಯ ಸಮವಸ್ತ್ರದಲ್ಲಿ ಬದಲಾವಣೆ (changes in uniform) :

ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಹಾಜರಾತಿಯನ್ನು (attendance) ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಬದಲಾವಣೆಯನ್ನು 2024 ಮತ್ತು 25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತಂದಿದೆ. ಈ ನಿಟ್ಟಿನಲ್ಲಿ  ಶೈಕ್ಷಣಿಕ ವರ್ಷದ ಆರಂಭದ ದಿನಗಳಲ್ಲಿಯೇ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲು ಸರ್ಕಾರ ನಿರ್ಧಾರ ಮಾಡಿದೆ. ಬಹಳ ಮುಖ್ಯವಾಗಿ  6 ಮತ್ತು 7ನೇ ತರಗತಿಯವರಿಗೆ ಸಮವಸ್ತ್ರದಲ್ಲಿ ಕೊಂಚ ಬದಲಾವಣೆಯನ್ನು ಸಹ ಮಾಡಲಾಗಿದೆ. ಈವರೆಗೂ 8,9, ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ/ ವಿದ್ಯಾರ್ಥಿನಿಯರಿಗೆ ಪ್ಯಾಂಟ್ (pant) ಮತ್ತು ಚೂಡಿದಾರ್ (chudidar) ವ್ಯವಸ್ಥೆ ಇತ್ತು. ಆದರೆ ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯರಿಗೂ ಕೂಡ ಪ್ಯಾಂಟ್ ಮತ್ತು ಚೂಡಿದಾರ್ ವ್ಯವಸ್ಥೆಯನ್ನು ಮಾಡಲಾಗಿದೆ.

6,7 ನೇ ತರಗತಿಯವರಿಗೆ ಪ್ಯಾಂಟ್ ಮತ್ತು ಚೂಡಿದಾರ್ ವ್ಯವಸ್ಥೆಯನ್ನು ಮಾಡಲು ಕಾರಣ  :

6 ಮತ್ತು 7ನೇ ತರಗತಿಯವರಿಗೆ ಪ್ಯಾಂಟ್ ಮತ್ತು ಚೂಡಿದಾರ್ ವ್ಯವಸ್ಥೆಯನ್ನು ಮಾಡಲು ಕಾರಣ ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ದೊಡ್ಡವರಾಗಿರುತ್ತಾರೆ. ಶಾಲೆಗಳಿಗೆ ಬರುವಾಗ ವಿದ್ಯಾರ್ಥಿನಿಯರು ಮುಜುಗರದ ಸನ್ನಿವೇಶಗಳನ್ನು ಎದುರಿಸಬಾರದು ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಶಾಲೆಗಳು ಆರಂಭವಾದ ದಿನದಿಂದಲೇ ಎರಡು ಜೊತೆ ಸಮವಸ್ತ್ರವನ್ನು (2 set uniform) ಸರ್ಕಾರ ನೀಡುತ್ತಿದೆ. ಒಂದೇ ಜೊತೆ ಸಮವಸ್ತ್ರವನ್ನು ವಿತರಣೆ ಮಾಡಲಾಗಿತ್ತು. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಬಾರಿ ಎರಡು ಜೊತೆಯ ಸಮವಸ್ತ್ರವನ್ನು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ತಿಳಿ ನೀಲಿ ಬಣ್ಣದ ಟಾಪ್‌ (light bule top) ಮತ್ತು ಕಡು ನೀಲಿ ಬಣ್ಣದ ದುಪ್ಪಟವನ್ನು (dark blue duppatta) ವಿತರಣೆ ಮಾಡಲಾಗತ್ತಿದ್ದು, 1 ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ ಮತ್ತು ಅಂಗಿ, 6ನೇ ತರಗತಿ ಮೇಲ್ಪಟ್ಟವರಿಗೆ ಪ್ಯಾಂಟ್ ಸಮವಸ್ತ್ರ ನೀಡಲಾಗುತ್ತಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!