Gold Rate Today : ಚಿನ್ನದ ಬೆಲೆ ಮತ್ತೇ ಭಾರಿ ಇಳಿಕೆ..! ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟು.? ಇಲ್ಲಿದೆ ವಿವರ

IMG 20250513 WA0001

WhatsApp Group Telegram Group

ಮಾರುಕಟ್ಟೆಯಲ್ಲಿ ತಾತ್ಕಾಲಿಕ ನೆಮ್ಮದಿ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಗ್ರಾಹಕರಿಗೆ ಸಂತೋಷ

ಚಿನ್ನದ ಮಾರುಕಟ್ಟೆಯಲ್ಲಿ (Gold market) ಗ್ರಾಹಕರಿಗೆ ನೆಮ್ಮದಿ ನೀಡುವಂತಹ ಬೆಳವಣಿಗೆಯೊಂದು ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ತೀವ್ರ ಏರಿಕೆಯಿಂದ ತೀವ್ರ ಚರ್ಚೆಗೆ ಒಳಪಟ್ಟಿದ್ದ ಚಿನ್ನದ ಬೆಲೆ ಇಂದಿನಿಂದ ಕೊಂಚ ಇಳಿಕೆಯಾಗಿದ್ದು, ಪರಿಶುದ್ಧ ಚಿನ್ನವು ಲಕ್ಷದ ಗಡಿಯೊಳಗೆ ಮರಳಿ ದೊರೆಯುತ್ತಿದೆ. ಭಾರತದಲ್ಲಿ ಚಿನ್ನವು ತಾತ್ಕಾಲಿಕ ಆಭರಣ ಮಾತ್ರವಲ್ಲದೇ, ಹೂಡಿಕೆಗೆ (For investment) ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಚಿನ್ನದ ದರದಲ್ಲಿ ಆಗುವ ಯಾವುದೇ ಬದಲಾವಣೆಗಳು ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಪ್ರಭಾವ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆ, ಅಮೆರಿಕದ ಬಡ್ಡಿದರಗಳು ಮತ್ತು ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು (Political situations) ಚಿನ್ನದ ಬೆಲೆಯಲ್ಲಿನ ತೀವ್ರ ಏರಿಳಿತಕ್ಕೆ ಕಾರಣವಾಗಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 13, 2025: Gold Price Today

ಸತತವಾಗಿ ಏರಿಕೆಯನ್ನು ಕಾಣುತ್ತಿರುವಂತಹ ಚಿನ್ನದ ದರ ಯಾವಾಗ ಇಳಿಕೆಯಾಗುತ್ತದೆ ಎಂದು ಕಾದು ಕುಳಿತಿದ್ದಂತಹ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಹೌದು ನಿನ್ನೆ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದ್ದು ಗ್ರಾಹಕರಲ್ಲಿ ಕೊಂಚ ಸಂತೋಷವನ್ನು ತಂದುಕೊಟ್ಟಿದೆ. ಇನ್ನು ಚಿನ್ನದ ದರ ಇಳಿಕೆಯಿಂದ ಗ್ರಾಹಕರು ಪುನಃ ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ. ಮದುವೆ ಸಮಾರಂಭಗಳು ಹಬ್ಬ ಹರಿದಿನಗಳಿಗಾಗಿ ಚಿನ್ನ ಖರೀದಿಸಲು ಮುಂದಾಗುವ ಗ್ರಾಹಕರು ಪ್ರತಿದಿನವೂ ಚಿನ್ನದ ದರದ ವ್ಯತ್ಯಾಸವನ್ನು ಗಮನಿಸುತ್ತಿರುತ್ತಾರೆ. ಹಾಗಿದ್ದರೆ, ಮೇ 13, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,879 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,687 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,625 ಆಗಿದೆ. ಒಟ್ಟಾರೆಯಾಗಿ, 165 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 97,800 ರೂ. ನಷ್ಟಿದ್ದು. ಒಟ್ಟಾರೆಯಾಗಿ 1100 ರೂ. ನಷ್ಟು ಇಳಿಕೆಯನ್ನು ಕಂಡಿದೆ.

ಮೇ 12, 2025ರಂದು ಚಿನ್ನದ ದರದ ಯಾವರೀತಿಯಿತ್ತು:

ಕಳೆದ ಎರಡು ದಿನಗಳಿಂದ 99.9% ಪರಿಶುದ್ಧತೆಯ ಚಿನ್ನದ ಬೆಲೆ ರೂ. 1,00,730ಕ್ಕೇರಿತ್ತು. ಆದರೆ ನಿನ್ನೆ ಬೆಲೆ ರೂ. 930 ಇಳಿಕೆಯಾಗಿದ್ದು, ರೂ. 99,800ಕ್ಕೆ ತಲುಪಿದೆ. ಈ ಇಳಿಕೆಯಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ನೀರಾಳತೆ ಸಿಕ್ಕಂತಾಗಿದೆ. ಆದರೆ ಇನ್ನು ಹೆಚ್ಚಿನ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ತಜ್ಞರು (Specialist) ತಿಳಿಸಿದ್ದಾರೆ.

ಇತರೆ ಕ್ಯಾರೆಟ್ ಚಿನ್ನದ ದರಗಳ ಇಳಿಕೆ:

22 ಕ್ಯಾರೆಟ್ ಚಿನ್ನ: ಇಂದಿನ ದರ ಪ್ರತಿ ಗ್ರಾಂಗೆ ರೂ. 165 ಇಳಿಕೆಯಿಂದ ರೂ. 8,880ಕ್ಕೆ ತಲುಪಿದೆ.
24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ರೂ. 180 ಇಳಿಕೆಯಾಗಿದ್ದು, ದರ ರೂ. 9,668.ಕ್ಕೆ ತಲುಪಿದೆ.
18 ಕ್ಯಾರೆಟ್ ಚಿನ್ನ: ರೂ. 135 ಇಳಿಕೆಯೊಂದಿಗೆ ರೂ. 7,266.ಕ್ಕೆ ತಲುಪಿದೆ.

ಬೆಳ್ಳಿ ದರದ (Silver rate) ಸ್ಥಿತಿಗತಿ ಯಾವರೀತಿಯಿದೆ?:

ಬೆಳ್ಳಿಯ ದರದ ಕೂಡ ಇಳಿಕೆಯತ್ತ ಸಾಗುತ್ತಿದೆ. ಮೊನ್ನೆ ಬೆಳ್ಳಿ ದರ ಭಾರೀ ಏರಿಕೆಯಾದ ಬಳಿಕ ನಿನ್ನೆ ಯಥಾಸ್ಥಿತಿಗೆ ಬಂದು ನಿಂತಿತ್ತು. ಆದರೆ ನಿನ್ನೆ ಸಂಜೆಯಷ್ಟರಲ್ಲಿ ಪ್ರತಿ ಕೆ.ಜಿ ಬೆಳ್ಳಿಯ ದರ ರೂ. 2,000 ಇಳಿಕೆಯಾಗಿದ್ದು, ಇಂದಿನ ದರ ರೂ. 1,09,000 ಆಗಿದೆ.

ಮಾರುಕಟ್ಟೆ ತಜ್ಞರ (Market Specialist) ಅಭಿಪ್ರಾಯ:

ಜಾಗತಿಕ ಧಾತು ಮಾರುಕಟ್ಟೆಯ ಪ್ರಭಾವ, ರೂಪಾಯಿ ಮೌಲ್ಯದ ಸ್ಥಿತಿ ಮತ್ತು ಅಂತಾರಾಷ್ಟ್ರೀಯ (International) ರಾಜಕೀಯ ಬೆಳವಣಿಗೆಗಳು ಇಂತಹ ಬೆಲೆ ಬದಲಾವಣೆಗೆ ಕಾರಣವಾಗುತ್ತವೆ. ಚಿನ್ನದಲ್ಲಿ ಹೂಡಿಕೆ ಮಾಡುವ ಮುನ್ನ ಗ್ರಾಹಕರು ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.

ಇಂದಿನ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಕಂಡುಬಂದಿರುವ ಇಳಿಕೆಯಿಂದ ಗ್ರಾಹಕರಿಗೆ ಸ್ವಲ್ಪ ತಾತ್ಕಾಲಿಕ ನಿರಾಳತೆಯಂತಿದೆ. ಮುಂದಿನ ದಿನಗಳಲ್ಲಿ ದರ ಏರಿಕೆ (Rate Increasement) ಅಥವಾ ಇಳಿಕೆಗೆ ಮಾರುಕಟ್ಟೆಯ ಸ್ಥಿತಿಗತಿಗಳ ಪ್ರಭಾವವೇ ನಿರ್ಣಾಯಕವಾಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!