ಚಿನ್ನದ ಬೆಲೆಯಲ್ಲಿ ಸತತ ಏರಿಕೆ: ಮೇ 9ರಂದು 24K ಬಂಗಾರ ₹9,961ಕ್ಕೆ ಏರಿಕೆ, ಹೂಡಿಕೆದಾರರಲ್ಲಿ ಗೊಂದಲ
ಅಂತರರಾಷ್ಟ್ರೀಯ ಆರ್ಥಿಕ ಬಿಕ್ಕಟ್ಟುಗಳು, ಜಿಯೋಪಾಲಿಟಿಕಲ್ (Jiopolitical) ಗೊಂದಲಗಳು ಮತ್ತು ರೂಪಾಯಿಯ ಮೌಲ್ಯ ಕುಸಿತದ ನಡುವೆಯೂ, ಚಿನ್ನದ ಬೆಲೆ ಭಾರತದಲ್ಲಿ ಏರಿಕೆಯನ್ನು ಕಾಣುತ್ತಿದೆ. ಚಿನ್ನವು ದಶಕಗಳಿಂದಲೂ ಭಾರತೀಯರ ಪಾಲಿಗೆ ಭದ್ರ ಹೂಡಿಕೆ (Safety Investment) ಆಯ್ಕೆಯಾಗಿ ಪರಿಗಣಿಸಲ್ಪಡುತ್ತದೆ. ಮದುವೆ, ನಾಮಕರಣ, ಮಂಗಳ ಕಾರ್ಯಗಳು ಮುಂತಾದ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಯು ಆರ್ಥಿಕ ಹಾಗೂ ಸಂಸ್ಕೃತಿಯ ಭಾಗವಾಗಿರುವುದರಿಂದ, ಚಿನ್ನದ ದರ ಏರಿಕೆಯು ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ವಾರದ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬಂದಿದ್ದು, ಮೇ 8ರಂದು ಈ ಧಾಟಿ ತನ್ನ ಗರಿಷ್ಠ ಮಟ್ಟ ತಲುಪಿದೆ. ಕಳೆದ ವಾರದಲ್ಲೇ ಕೆಲವು ಇಳಿಕೆ ಕಾಣಿಸಿಕೊಂಡಿದ್ದರೂ, ಈ ವಾರದ ಏರಿಕೆ ಹೂಡಿಕೆದಾರರು ಮತ್ತು ಗ್ರಾಹಕರ ನಡುವೆ ಗೊಂದಲವನ್ನು ಉಂಟುಮಾಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 9, 2025: Gold Price Today
ಇದೀಗ ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬರುತ್ತಿರುವುದು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ (Global level) ಗಮನ ಸೆಳೆದಿರುವ ಪ್ರಮುಖ ಆರ್ಥಿಕ ಬೆಳವಣಿಗೆಯಾಗಿದೆ. ಹೂಡಿಕೆದಾರರಿಂದ ಹಿಡಿದು, ಸಾಮಾನ್ಯ ಗ್ರಾಹಕರವರೆಗೆ ಈ ಬೆಳವಣಿಗೆಯು ನೇರವಾಗಿ ಪ್ರಭಾವ ಬೀರುತ್ತಿದೆ. ಆದ್ದರಿಂದ ಗ್ರಾಹಕರು ಪ್ರತಿ ದಿನ ಚಿನ್ನದ ದರವನ್ನು ಗಮನಿಸುತ್ತಿರುತ್ತಾರೆ. ಹಾಗಿದ್ದರೆ, ಮೇ 9, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 131 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,961 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,471 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98,900 ರೂ. ನಷ್ಟಿದ್ದು.
ಮೇ 8, 2025 ರ ಚಿನ್ನದ ದರದ ವಿವರಗಳು ಹೀಗುವೆ:
22 ಕ್ಯಾರಟ್ ಚಿನ್ನ (ಪ್ಯೂರಿಟಿ 91.6%):
1 ಗ್ರಾಂ: ₹9,130
10 ಗ್ರಾಂ: ₹91,300
100 ಗ್ರಾಂ: ₹9,13,000
(ಹೆಚ್ಚಳ: ₹55/ಗ್ರಾಂ; ₹550/10 ಗ್ರಾಂ; ₹5,500/100 ಗ್ರಾಂ)
24 ಕ್ಯಾರಟ್ ಚಿನ್ನ (ಪ್ಯೂರಿಟಿ 99.9%):
1 ಗ್ರಾಂ: ₹9,960
10 ಗ್ರಾಂ: ₹99,600
100 ಗ್ರಾಂ: ₹9,96,000
(ಹೆಚ್ಚಳ: ₹60/ಗ್ರಾಂ; ₹600/10 ಗ್ರಾಂ; ₹6,000/100 ಗ್ರಾಂ)
18 ಕ್ಯಾರಟ್ ಚಿನ್ನ (ಪ್ಯೂರಿಟಿ 75%):
1 ಗ್ರಾಂ: ₹7,470
10 ಗ್ರಾಂ: ₹74,700
100 ಗ್ರಾಂ: ₹7,47,000
(ಹೆಚ್ಚಳ: ₹45/ಗ್ರಾಂ; ₹450/10 ಗ್ರಾಂ; ₹4,500/100 ಗ್ರಾಂ)
ಪ್ರಮುಖ ನಗರಗಳಲ್ಲಿ 1 ಗ್ರಾಂನ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಪುಣೆ: ₹9,130 (22K), ₹9,960 (24K), ₹7,470 (18K)
ಮುಂಬೈ: ₹9,130 (22K), ₹9,960 (24K), ₹7,470 (18K)
ದೆಹಲಿ: ₹9,145 (22K), ₹9,975 (24K), ₹7,483 (18K)
ಅಹಮದಾಬಾದ್: ₹9,030 (22K), ₹9,851 (24K), ₹7,389 (18K)
ಬರೋಡಾ: ₹9,135 (22K), ₹9,965 (24K), ₹7,474 (18K)
ಬೆಳ್ಳಿ ಬೆಲೆಯ (Silver rate) ಸ್ಥಿತಿಗತಿ ಯಾವರೀತಿಯಿದೆ:
ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವಾಗ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
1 ಗ್ರಾಂ: ₹99
10 ಗ್ರಾಂ: ₹990
100 ಗ್ರಾಂ: ₹9,900
1 ಕೆಜಿ: ₹99,000
ಸ್ಪಾಟ್ ಗೋಲ್ಡ್ ವ್ಯಾಪಾರ ಸ್ಥಿತಿ (ಅಂತಾರಾಷ್ಟ್ರೀಯ ಮಾರುಕಟ್ಟೆ):
ಮೇ 8ರಂದು ಬೆಳಗ್ಗೆ 4:16 (GMT) ವೇಳೆಗೆ ಸ್ಪಾಟ್ ಗೋಲ್ಡ್ ಬೆಲೆ 0.9% ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,392.90 ಆಗಿದೆ. ಇದೇ ಸಮಯದಲ್ಲಿ ಯುಎಸ್ ಫ್ಯೂಚರ್ಸ್ ಗೋಲ್ಡ್ 0.2% ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,399.80 ಆಗಿದೆ.
ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳು (Causes) ಹೀಗಿವೆ:
ಚಿನ್ನದ ಬೆಲೆಯಲ್ಲಿ ಏರಿಕೆಗೆ ಹಲವು ಆರ್ಥಿಕ ಮತ್ತು ರಾಜಕೀಯ ಅಂಶಗಳು ಕಾರಣವಾಗಿವೆ,
ಅಂತರರಾಷ್ಟ್ರೀಯ ಮಾರುಕಟ್ಟೆಯ (International market) ಅನಿಶ್ಚಿತತೆಗಳು.
ಜಿಯೋಪಾಲಿಟಿಕಲ್ ಗೊಂದಲಗಳು (ಯುದ್ಧ, ರಾಜಕೀಯ ಅಶಾಂತಿ).
ರೂಪಾಯಿಯ ಮೌಲ್ಯ ಕುಸಿತ.
ಇನ್‌ಫ್ಲೇಶನ್ ಅಥವಾ ದ್ರವ್ಯೊತ್ಪತ್ತಿಯ ದರ ಏರಿಕೆ.
ಬಡ್ಡಿದರಗಳ ಬದಲಾವಣೆ (RBI ಅಥವಾ ಫೆಡ್ ನಿರ್ಧಾರ).
ಚಿನ್ನದ ಉತ್ಪಾದನೆ ಮತ್ತು ಜಾಗತಿಕ ಬೇಡಿಕೆ.
ಚಿನ್ನದ ಬೆಲೆ ಇನ್ನೂ ಏರಬಹುದು ಎಂಬ ನಿರೀಕ್ಷೆಯಿಂದ ಕೆಲವರು ಈಗಲೇ ಹೂಡಿಕೆಗೆ (Investment) ಮುಂದಾಗುತ್ತಿದ್ದಾರೆ. ಆದರೆ ಮತ್ತೆ ಇಳಿಮುಖವಾದರೆ ನಷ್ಟವಾಗಬಹುದು ಎಂಬ ಭೀತಿ ಕೆಲವರನ್ನು ಹಿಂದೆ ಸರಿಸುತ್ತಿದೆ. ಇದು ಸ್ಪಷ್ಟ ಹೂಡಿಕೆ ತೀರ್ಮಾನ ತೆಗೆದುಕೊಳ್ಳುವುದು ಕಷ್ಟವಾಗುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ.
ಇಂತಹ ಸಮಯದಲ್ಲಿ, ಚಿನ್ನದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವವರು ಎಚ್ಚರಿಕೆಯಿಂದ ಹೂಡಿಕೆ ತೀರ್ಮಾನಗಳನ್ನು (Judgement) ತೆಗೆದುಕೊಳ್ಳುವುದು ಉತ್ತಮ. ಮಧ್ಯಮ ಅವಧಿಯ ಪ್ರವೃತ್ತಿಗಳನ್ನು ಗಮನಿಸಿ, ಆರ್ಥಿಕ ಸಲಹೆಗಾರರ ಸಲಹೆ ಪಡೆದು ಮುಂದುವರೆಯುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.