ಜಾಗತಿಕ ಆರ್ಥಿಕ ಸ್ಥಿತಿಗತಿಗಳು: ಚಿನ್ನದ ದರದಲ್ಲಿ ಮುಂದುವರೆದ ಏರುಪೇರು
ಚಿನ್ನ ಮತ್ತು ಬೆಳ್ಳಿಯ (Gold and silver) ಬೆಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಏರುಪೇರಿನಿಂದಾಗಿ ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಆಶ್ಚರ್ಯ ಚಕಿತರಾಗಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ದಿನನಿತ್ಯ ಬದಲಾವಣೆಯಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಚಿನ್ನದ ದರದಲ್ಲಿ ಸ್ಥಿರತೆ ಕಾಣಿಸಿದ್ದರೂ, ಮಾರ್ಚ್ 12, 2025ರಂದು ಪ್ರಮುಖ ನಗರಗಳಲ್ಲಿ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಜಾಗತಿಕ ಮಾರುಕಟ್ಟೆಯ ಪ್ರಭಾವ, ರೂಪಾಯಿ-ಡಾಲರ್ ವಿನಿಮಯ ದರ (Rupee-dollar exchange rate), ಆರ್ಥಿಕ ತೊಡಕುಗಳು ಹಾಗೂ ಬಂಡವಾಳ ಹೂಡಿಕೆದಾರರ ಬೇಡಿಕೆಯಂತಹ ಹಲವು ಅಂಶಗಳು ಬೆಲೆಗಳನ್ನು ನಿರ್ಧರಿಸುತ್ತವೆ. ಈ ಹಿನ್ನೆಲೆಯಲ್ಲಿ, ಚಿನ್ನದ ಬೆಲೆಯಲ್ಲಿ ನಾವು ಏರಿಳಿತಗಳನ್ನು ಕಾಣುತ್ತಿದ್ದೇವೆ. ಹಾಗಿದ್ದರೆ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 13, 2025: Gold Price Today
ಚಿನ್ನದ ಬೆಲೆಯಲ್ಲಿ ಕೆಲವು ತಿಂಗಳಿನಿಂದ ಏರಿಳಿತಗಳು ಕಂಡುಬರುತ್ತಿವೆ. ಚಿನ್ನದ ದರದಲ್ಲಿ ಪ್ರತಿನಿತ್ಯವೂ ಪ್ರತಿಕ್ಷಣವೂ ಬದಲಾವಣೆಯಾಗುತ್ತಿರುವುದನ್ನು ನಾವು ಕಾಣಬಹುದು. ಇನ್ನು ಗ್ರಾಹಕರಿಗೆ ಚಿನ್ನದ ದರದಲ್ಲಿ ಯಾವಾಗ ಇಳಿಕೆಯಾಗುತ್ತದೆ ಯಾವಾಗ ಏರಿಕೆಯಾಗುತ್ತದೆ ಎಂಬ ಗೊಂದಲಗಳಲ್ಲಿ ಸಿಲುಕಿ ಚಿನ್ನ ಖರೀದಿಯನ್ನು (Buying gold) ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ದರ ಏರಿಕೆ ಆಗಿರುವುದು ಹಾಗೂ ಇಳಿಕೆ ಆಗಿರುವುದನ್ನು ನಾವು ಗಮನಿಸಿರುತ್ತೇವೆ. ನಿನ್ನೆ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯನ್ನು ಕಂಡಿದ್ದೆವು. ಹಾಗಿದ್ದರೆ, ಮಾರ್ಚ್ 13, 2025ರಂದು ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 066 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,799 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,600 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,100 ತಲುಪಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 47 ರೂ.ನಷ್ಟು ಏರಿಕೆ ಕಾಣಬಹುದು. ಹಾಗೆ ಒಂದೇ ದಿನದಲ್ಲಿ ಬೆಳ್ಳಿ ಬೆಲೆಯಲ್ಲಿ 2100 ರೂ.ನಷ್ಟು ಏರಿಕೆಯನ್ನು ನೋಡಬಹುದು.
ಮಾರ್ಚ್ 12, 2025ರಂದು ಚಿನ್ನ ಹಾಗೂ ಬೆಳ್ಳಿಯ ದರ ಏರಿಕೆ :
ಸೋಮವಾರ ಸ್ವಲ್ಪ ಕುಸಿತ ಕಂಡಿದ್ದ ಚಿನ್ನದ ಬೆಲೆ ನಿನ್ನೆ ಮರಳಿ ಏರಿಕೆಯಾಗಿತ್ತು. ಜಾಗತಿಕ ಹೂಡಿಕೆದಾರರ (Global investors) ತೊಡಕು, ಆರ್ಥಿಕ ಪ್ರಭಾವ ಮತ್ತು ಅಮೆರಿಕಾದ ಬಂಡವಾಳ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮವಾಗಿ, ಚಿನ್ನದ ಮೌಲ್ಯ ಜಾಸ್ತಿಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹80,650 ತಲುಪಿದರೆ, 24 ಕ್ಯಾರಟ್ ಅಪರಂಜಿ ಚಿನ್ನದ ದರ ₹87,980 ತಲುಪಿದೆ. 18 ಕ್ಯಾರಟ್ ಚಿನ್ನವೂ ₹65,990ರೂ ನಷ್ಟಿದೆ. ಬೆಳ್ಳಿಯ ದರದಲ್ಲಿಯೂ ಬೆಳವಣಿಗೆ ಕಂಡುಬಂದಿದ್ದು, 10 ಗ್ರಾಂ ಬೆಳ್ಳಿ ₹1,000 ರೂ. ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿನ ಮಾರ್ಚ್ 12, 2025ರ 10 ಗ್ರಾಂ 22 ಕ್ಯಾರಟ್ ಚಿನ್ನದ ದರ :
ಬೆಂಗಳೂರು – ₹80,650
ಮುಂಬೈ – ₹80,650
ಚೆನ್ನೈ – ₹80,650
ದೆಹಲಿ – ₹80,800
ಕೋಲ್ಕತಾ – ₹80,650
ಕೇರಳ – ₹80,650
ಅಹ್ಮದಾಬಾದ್ – ₹80,700
ಜೈಪುರ್ – ₹80,800
ಲಕ್ನೋ – ₹80,800
ಭುವನೇಶ್ವರ್ – ₹80,650
24 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂ):
ಭಾರತ: ₹87,980
ಬೆಂಗಳೂರು: ₹87,980
ಬೆಳ್ಳಿ ಬೆಲೆ (10 ಗ್ರಾಂ):
ಭಾರತ: ₹1,000
ಬೆಂಗಳೂರು: ₹1,000
ಇತ್ತೀಚಿನ ದಿನಗಳಲ್ಲಿ ಅಮೇರಿಕಾ ಮತ್ತು ಚೀನಾ ನಡುವಿನ ಆರ್ಥಿಕ ವ್ಯವಹಾರಗಳು, ಡಾಲರ್ ಮೌಲ್ಯದ ಚಲನೆ, ಭೌಗೋಳಿಕ ಅಸ್ಥಿರತೆ ಮತ್ತು ಬಂಡವಾಳ ಹೂಡಿಕೆದಾರರ (Geographical instability and investor sentiment) ಹೂಡಿಕೆಯಿಂದ ಚಿನ್ನದ ಮೌಲ್ಯ ಹೆಚ್ಚಾಗಿದ್ದು, ಈ ಬೆಳವಣಿಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಹೊಸ ದಾಖಲೆಗಳನ್ನು ಮುಟ್ಟುವ ಸಾಧ್ಯತೆ ಇದೆ.
ಬೆಲೆ ಏರಿಕೆಗೆ ಕಾರಣಗಳೇನು(Causes) ?
ಜಾಗತಿಕ ಆರ್ಥಿಕ ಅನಿಶ್ಚಿತತೆ:
ಜಾಗತಿಕ ಮಾರುಕಟ್ಟೆಯಲ್ಲಿ ಷೇರುಗಳ ಅಸ್ಥಿರತೆ, ಡಾಲರ್ ಮೌಲ್ಯದ ಅಸ್ಥಿರತೆ ಮತ್ತು ಬಂಡವಾಳ ಹೂಡಿಕೆದಾರರ ಭರವಸೆ ಕುಸಿತ ಚಿನ್ನದ ಮೇಲಿನ ಬೇಡಿಕೆಯನ್ನು ಹೆಚ್ಚಿಸಿದೆ.
ಮಾಹಾಮಾರಿಯ ಪರಿಣಾಮಗಳು:
2024ರ ಪಾಂಡಮಿಕ್ ನಂತರ ಆರ್ಥಿಕ ಪುನಶ್ಚೇತನದ ಪ್ರಯತ್ನಗಳ ಭಾಗವಾಗಿ ಚಿನ್ನದ ಹೂಡಿಕೆ ನಿರೀಕ್ಷಿತ ಮಟ್ಟವನ್ನು ಮೀರಿದೆ.
ಹಬ್ಬ, ಸಮಾರಂಭಗಳ ಪರಿಣಾಮ :
ಭಾರತದಲ್ಲಿ ಹಬ್ಬ-ಹರಿದಿನದ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಬಂಗಾರದ ಮೇಲೆ ಹೆಚ್ಚಿನ ಹೂಡಿಕೆಗಳು ನಿರೀಕ್ಷಿಸಲಾಗುತ್ತಿದೆ.
ಕೇಂದ್ರ ಬ್ಯಾಂಕುಗಳ ನೀತಿ:
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಮತ್ತು ಇತರ ಕೇಂದ್ರ ಬ್ಯಾಂಕುಗಳ ಬಡ್ಡಿದರ ನೀತಿಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
ಹತ್ತಿರದ ಭವಿಷ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಸಾಧ್ಯವಿದೆ. ವಿಶ್ವ ಮಾರುಕಟ್ಟೆಯ ಸ್ಥಿರತೆ, ಕೇಂದ್ರ ಬ್ಯಾಂಕ್ಗಳ (Central banks) ನೀತಿ, ಹಾಗೂ ಹೂಡಿಕೆದಾರರ ವರ್ತನೆಗಳು ಮುಂದಿನ ಬೆಲೆಯನ್ನು ನಿರ್ಧರಿಸಲಿದೆ. ಹೀಗಾಗಿ, ಚಿನ್ನದ ಹೂಡಿಕೆ ಮಾಡುವವರು ಮಾರುಕಟ್ಟೆಯ ಚಲನೆಗಳ ಮೇಲೆ ನಿಗಾ ವಹಿಸಿಸುವುದು ಉತ್ತಮ.
ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಬೆಲೆಗಳಲ್ಲಿ ಪ್ರತಿ ಕ್ಷಣವೂ ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ, ಖರೀದಿ ಅಥವಾ ಹೂಡಿಕೆಯ (Buying and Investment) ಮೊದಲು ಅಧಿಕೃತ ವಹಿವಾಟುದಾರರೊಂದಿಗೆ ಪರಿಶೀಲನೆ ಮಾಡುವುದು ಒಳಿತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




