ಶಿವರಾತ್ರಿಗೆ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ಖರೀದಿದಾರರಿಗೆ ಆಘಾತ
ಭಾರತದಲ್ಲಿ ಚಿನ್ನದ (Gold) ಖರೀದಿ ಒಂದು ಸಾಂಪ್ರದಾಯಿಕ ಹಾಗೂ ಆರ್ಥಿಕವಾಗಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಹಬ್ಬ ಹರಿದಿನಗಳ ವೇಳೆ ಚಿನ್ನದ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಸದ್ಯ ದೇಶದಲ್ಲಿ ಮದುವೆ ಸೀಸನ್ ಆರಂಭವಾಗಿದ್ದು, ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಶಿವರಾತ್ರಿಯ (Shivarathri) ಮೊದಲು ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರೀ ಏರಿಕೆ ಕಂಡಿದ್ದು, ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರು ಆತಂಕಗೊಂಡಿದ್ದಾರೆ. ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನೂತನ ಆರ್ಥಿಕ ವರ್ಷವು ಸಮೀಪಿಸುತ್ತಿರುವುದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಬಂಗಾರದ ದರದಲ್ಲಿರುವ ಏರುಪೇರು ಮತ್ತು ದೇಶೀಯ ಬೇಡಿಕೆ ಇವೆಲ್ಲವೂ ಬೆಲೆ ಏರಿಕೆಗೆ ಕಾರಣಗಳಾಗಿವೆ. ಹಬ್ಬಗಳ ಸಂದರ್ಭದಲ್ಲಿ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರ ಏರಿಕೆಯಾಗುತ್ತಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, 19, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 14, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದಾವೆ. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,971 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,696ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6522 ಆಗಿದೆ. 1 ಕೆಜಿ ಬೆಳ್ಳಿ ಬೆಲೆ: 1,00,400 ತಲುಪಿದೆ. ಆದರೆ ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ ಮತ್ತೆ ಏರಿಕೆಯಾಗಿದೆ.
ಫೆಬ್ರವರಿ 18 ರ ಚಿನ್ನ-ಬೆಳ್ಳಿ ದರ ವಿವರ:
ಸೋಮವಾರ (ಫೆ. 17) ಚಿನ್ನದ ದರ 5,500 ರೂಪಾಯಿಯಷ್ಟು ಏರಿಕೆ ಕಂಡು ಬಂದಿತ್ತು, ಆದರೆ ಈ ಏರಿಕೆ ಸದ್ದಿಲ್ಲದೆ ಮುಂದುವರೆದಿದ್ದು,, ಮಂಗಳವಾರ (ಫೆ. 18) ಮತ್ತಷ್ಟು ಅಂದರೆ 3,300 ರೂಪಾಯಿಯಷ್ಟು ಹೆಚ್ಚಾಗಿದೆ. ಈ ಕಾರಣದಿಂದಾಗಿ, ಚಿನ್ನ ಖರೀದಿಸುವ ಮೊದಲು ಗ್ರಾಹಕರು (Buyers) ಹಲವು ಬಾರಿ ಯೋಚನೆ ಮಾಡಬೇಕಾದ ಅನಿವಾರ್ಯತೆ ಎದುರುಗಾಗಿದೆ.
22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರ(ಫೆ. 18):
22 ಕ್ಯಾರಟ್ (10 ಗ್ರಾಂ):
ಹಿಂದಿನ ಬೆಲೆ: ₹79,300
ಇಂದಿನ ಬೆಲೆ: ₹79,700
ವ್ಯತ್ಯಾಸ: ₹400 ಹೆಚ್ಚಳ
22 ಕ್ಯಾರಟ್ (100 ಗ್ರಾಂ):
ಹಿಂದಿನ ಬೆಲೆ: ₹7,94,000
ಇಂದಿನ ಬೆಲೆ: ₹7,97,000
ವ್ಯತ್ಯಾಸ: ₹3,000 ಹೆಚ್ಚಳ
24 ಕ್ಯಾರಟ್ (10 ಗ್ರಾಂ):
ಹಿಂದಿನ ಬೆಲೆ: ₹86,620
ಇಂದಿನ ಬೆಲೆ: ₹86,950
ವ್ಯತ್ಯಾಸ: ₹3,300 ಹೆಚ್ಚಳ
24 ಕ್ಯಾರಟ್ (100 ಗ್ರಾಂ):
ಹಿಂದಿನ ಬೆಲೆ: ₹7,66,500
ಇಂದಿನ ಬೆಲೆ: ₹7,69,000
ವ್ಯತ್ಯಾಸ: ₹3,300 ಹೆಚ್ಚಳ
ಚಿನ್ನದ ದರದಲ್ಲಿ ಭಾರೀ ಏರಿಕೆ ದಾಖಲಾಗಿದ್ದರೂ, ಬೆಳ್ಳಿಯ (Silver) ಬೆಲೆಯಲ್ಲಿ ಯಾವುದೇ ಪ್ರಭಾವ ಕಾಣಿಸುತ್ತಿಲ್ಲ. ಆದರೆ ಇತ್ತೀಚಿಗೆ ಸ್ವಲ್ಪ ಮಟ್ಟಿಗೆ ಬೆಳ್ಳಿಯೂ ಏರಿಕೆಯಾಗಿತ್ತು, ಆದರೆ ಬೆಳ್ಳಿಯಲ್ಲಿ ಹೆಚ್ಚಿನ ಏರಿಕೆ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿ ₹10,050 ಕ್ಕೆ ಲಭ್ಯವಿದ್ದು, 1 ಕೆ.ಜಿ. ಬೆಳ್ಳಿ ₹1,00,500 ದರದಲ್ಲಿ ವಹಿವಾಟು ಕಾಣುತ್ತಿದೆ.
ನಗರವಾರು 22 ಕ್ಯಾರಟ್ ಚಿನ್ನದ 10 ಗ್ರಾಂ ದರ (ಫೆ. 18, 2025):
ಬೆಂಗಳೂರು: 79,700 ರೂಪಾಯಿ
ದೆಹಲಿ: 79,850 ರೂಪಾಯಿ
ಕೇರಳ: 79,700 ರೂಪಾಯಿ
ಭುವನೇಶ್ವರ್: 79,700 ರೂಪಾಯಿ
ಅಹ್ಮದಾಬಾದ್: 79,750 ರೂಪಾಯಿರೂ
ಚೆನ್ನೈ: 79,700 ರೂಪಾಯಿ
ಕೋಲ್ಕತ್ತಾ: 79,700 ರೂಪಾಯಿ
ಜೈಪುರ್: 79,850 ರೂಪಾಯಿ
ಮುಂಬೈ: 79,700 ರೂಪಾಯಿ
ಚಿನ್ನದ ದರ ಏರಿಕೆಗೆ ಕಾರಣಗಳೇನು (Causes) ?
ಭಾರತದಲ್ಲಿ ಮದುವೆ ಸೀಸನ್ (Marriage Season) ಪ್ರಾರಂಭವಾಗಿರುವುದರಿಂದ ಚಿನ್ನದ ಖರೀದಿಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ಜಾಗತಿಕ ಚಿನ್ನದ ದರವು ಅಮೆರಿಕಾ ಮತ್ತು ಚೀನಾ ಆರ್ಥಿಕ ನೀತಿಗಳಿಗನುಗುಣವಾಗಿ ಬದಲಾಯಿಸುತ್ತಿದ್ದು, ಭಾರತದಲ್ಲೂ ಇದರ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಚಿನ್ನದ ದರ ತಕ್ಕಮಟ್ಟಿಗೆ ಹೆಚ್ಚಳ ಕಾಣುತ್ತಿದೆ. ಹೂಡಿಕೆದಾರರ ಹೆಚ್ಚಿನ ಒಲವು ಚಿನ್ನದ ಏರಿಳಿತಕ್ಕೆ ಕಾರಣ.
ಚಿನ್ನದ ಬೆಲೆಯಲ್ಲಿ ಇನ್ನು ಮುಂದೆ ಏರಿಕೆ ಅಥವಾ ಇಳಿಕೆ ಸ್ಥಿತಿಯ ಕುರಿತು ನಿಖರವಾಗಿ ಊಹಿಸುವುದು ಕಷ್ಟ. ಆದರೆ ಹಬ್ಬಗಳ ಹಿನ್ನಲೆಯಲ್ಲಿ ಹಾಗೂ ಮದುವೆ ಕಾಲದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಬಹುದು ಎಂಬ ನಿರೀಕ್ಷೆ ಜನರಲ್ಲಿ ಕಾಡುತ್ತಿದೆ.
ಚಿನ್ನ ಖರೀದಿಸುವ ಮುನ್ನ ದರ ಪರಿಷೀಲಿಸಿ, ಜಾಗತಿಕ ಮಾರುಕಟ್ಟೆಯ (Global Market) ಬೆಳವಣಿಗೆಗಳನ್ನು ಗಮನಿಸಿದ ನಂತರ ಚಿನ್ನ ಖರೀದಿ ಮಾಡುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.