ಮಳೆಗಾಲ ಅಥವಾ ಚಳಿಗಾಲ ಬಂದಾಗ ಬಿಸಿಬಿಸಿ ಸ್ನಾನ ಮಾಡುವ ಆನಂದಕ್ಕೇ ಸಾಟಿಯೇ ಇಲ್ಲ. ಇಂದಿನ ಕಾಲದಲ್ಲಿ ವಿದ್ಯುತ್ ಗೀಜರ್(Electric geyser) ಜೊತೆಗೆ ಗ್ಯಾಸ್ ಗೀಜರ್(Gas geyser) ಬಳಕೆಯೂ ಹೆಚ್ಚಾಗಿದೆ. ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ನೀರನ್ನು ಬಿಸಿ ಮಾಡುವ ಸಾಮರ್ಥ್ಯದಿಂದಾಗಿ, ಗ್ಯಾಸ್ ಗೀಜರ್‌ಗಳು ಮನೆಮಾತಾಗಿವೆ. ಆದರೆ ನಿಮಗೆ ಗೊತ್ತೇ? ಇದೇ ಗ್ಯಾಸ್ ಗೀಜರ್‌ಗಳು, ನಿಮ್ಮ ಪ್ರಾಣ ಕಳೆಯುವ ಸಾಧನವಾಗಬಹುದು? ಹಾಗಿದ್ದರೆ ಗ್ಯಾಸ್ ಗೀಜರ್‌ಗಳಿಂದ ಯಾವೆಲ್ಲ ಅಪಾಯಗಳು ಸಂಭವಿಸುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಇತ್ತೀಚಿನ ವರ್ಷಗಳಲ್ಲಿ ಗ್ಯಾಸ್ ಗೀಜರ್‌ನಿಂದ ಉಂಟಾದ ಕಾರ್ಬನ್ ಮಾನಾಕ್ಸೈಡ್(Carbon monoxide) ವಿಷಪೂರಿತದಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಸ್ನಾನ ಮಾಡುವಾಗ ಉಸಿರು ಕಟ್ಟಿಕೊಂಡು ಬಾತ್‌ರೂಮ್‌ನಲ್ಲಿಯೇ ಕುಸಿದು ಬಿದ್ದ ಘಟನೆಗಳು ಮತ್ತೆ ಮತ್ತೆ ವರದಿಯಾಗುತ್ತಿವೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರೆ, ನಿಮ್ಮ ಮನೆಯಲ್ಲಿ ಬಿಸಿನೀರಿನ ವ್ಯವಸ್ಥೆಯೇ ಜೀವಾಪಾಯದ ಮೂಲವಾಗಬಹುದು.
ಗ್ಯಾಸ್ ಗೀಜರ್ ಏಕೆ ಅಪಾಯಕಾರಿಯಾಗಿದೆ?:
ಗ್ಯಾಸ್ ಗೀಜರ್ ಬಳಸಿದಾಗ, ಅದರೊಳಗೆ ಗ್ಯಾಸ್ ಸುಡುವಾಗ ಕಾರ್ಬನ್ ಮಾನಾಕ್ಸೈಡ್ (Carbon Monoxide – CO) ಎಂಬ ವಿಷಕಾರಿ ಅನಿಲ ಹೊರಬಿಡುತ್ತದೆ.
ಈ ಅನಿಲಕ್ಕೆ ವಾಸನೆ ಇಲ್ಲ, ಬಣ್ಣ ಇಲ್ಲ.
ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಉಸಿರಾಡಿದರೆ ತಲೆ ಸುತ್ತು, ವಾಂತಿ, ಉಸಿರಾಟದ ತೊಂದರೆ ಉಂಟಾಗುತ್ತದೆ.
ಕೆಲವೇ ನಿಮಿಷಗಳಲ್ಲಿ ಪ್ರಾಣಾಪಾಯ ಉಂಟಾಗಬಹುದು.
ಮುಖ್ಯವಾಗಿ ಮುಚ್ಚಿದ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಜರ್ ಬಳಸಿದಾಗ, ಅನಿಲ ಹೊರಗೆ ಹೋಗದೆ ಒಳಗೇ ಸುತ್ತಾಡುತ್ತದೆ. ಇದರಿಂದ, ಸ್ನಾನ ಮಾಡುವಾಗ ತಿಳಿಯದಂತೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚುತ್ತದೆ.
ವೈದ್ಯರಿಂದ ಮುಖ್ಯ ಸಲಹೆಗಳು ಹೀಗಿವೆ:
ವೈದ್ಯೆ ಡಾ. ರಿಚಾ ತಿವಾರಿ ಗ್ಯಾಸ್ ಗೀಜರ್ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಅವು ಈ ಕಳಗಿನಂತೆ ಇವೆ
1. ಸಾಕಷ್ಟು ವಾತಾವರಣ ಇರಲಿ:
ಗೀಜರ್ ಇಡುವ ಬಾತ್‌ರೂಮ್ ಅಥವಾ ಕೋಣೆಯಲ್ಲಿ ಕಿಟಕಿ ಅಥವಾ ವೆಂಟಿಲೇಟರ್ ಇರಲೇಬೇಕು.
ವಾತಾವರಣ ಇಲ್ಲದಿದ್ದರೆ, ಗ್ಯಾಸ್ ಅನಿಲ ತುಂಬಿ ಪ್ರಾಣಾಪಾಯ ಉಂಟಾಗಬಹುದು.
2. ಗೀಜರ್ ಆನ್ ಇಟ್ಟು ಸ್ನಾನ ಮಾಡಬೇಡಿ:
ಮೊದಲು ಬೇಕಾದಷ್ಟು ನೀರು ಬಿಸಿ ಮಾಡಿ, ನಂತರ ಗ್ಯಾಸ್ ಆಫ್ ಮಾಡಿ ಸ್ನಾನ ಆರಂಭಿಸಿ.
ದೀರ್ಘಕಾಲ ಗೀಜರ್ ಆನ್ ಇಟ್ಟರೆ ಅನಿಲದ ಪ್ರಮಾಣ ಹೆಚ್ಚಾಗುತ್ತದೆ.
3. ಎಕ್ಸಾಸ್ಟ್ ಫ್ಯಾನ್ ಬಳಸಿ:
ಬಾತ್‌ರೂಮ್‌ನಲ್ಲಿ ಎಕ್ಸಾಸ್ಟ್ ಫ್ಯಾನ್(Exhaust fan) ಇದ್ದರೆ, ಸ್ನಾನ ಮಾಡುವ ಮೊದಲು ಅದನ್ನು ಆನ್ ಮಾಡಿ.
4. ಅಸಾಮಾನ್ಯ ವಾಸನೆ ಅಥವಾ ಲಕ್ಷಣಗಳು ಕಂಡರೆ ಎಚ್ಚರಿಕೆ:
ಗೀಜರ್‌ನಿಂದ ಗ್ಯಾಸಿನ ವಾಸನೆ ಬಂದರೆ, ಅದನ್ನು ಬಳಸಬೇಡಿ.
ಸ್ನಾನ ಮಾಡುವಾಗ ತಲೆ ಸುತ್ತು, ಕೆಮ್ಮು ಅಥವಾ ಉಸಿರುಗಟ್ಟಿದಂತಾಗುತ್ತಿದ್ದರೆ ಕೂಡಲೇ ಬಾಗಿಲು ತೆರೆದು ಹೊರಬನ್ನಿ.
5. ಸುರಕ್ಷತಾ ಅಂತರ ಪಾಲಿಸಿ:
ಮನೆಯ ಹಲವರು ಒಟ್ಟಿಗೆ ಸ್ನಾನ ಮಾಡುವಾಗ, ಒಬ್ಬರ ನಂತರ ಇನ್ನೊಬ್ಬರು ಸ್ವಲ್ಪ ಸಮಯ ಬಿಡುವು ನೀಡಿ ಸ್ನಾನ ಮಾಡಬೇಕು.
ಜೀವ ಉಳಿಸುವ ಕೊನೆಯ ಸಲಹೆ:
ಬಾತ್‌ರೂಮ್‌ನಲ್ಲಿ ಪ್ರಾಣ ಉಳಿಸಿಕೊಳ್ಳುವುದೇ ಮೊದಲ ಆದ್ಯತೆ. ಮರ್ಯಾದೆಗೆ ಅಂಜಿ ಹೊರಬರದೆ ಇದ್ದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಲಕ್ಷಣ ಕಂಡ ಕೂಡಲೇ ಬಾಗಿಲು ತೆರೆದು ಹೊರಬನ್ನಿ, ನಂತರವೇ ಇತರ ವಿಚಾರಗಳನ್ನು ಯೋಚಿಸಿ.
ನಿಮ್ಮ ಮನೆಯಲ್ಲೂ ಗ್ಯಾಸ್ ಗೀಜರ್ ಇದ್ದರೆ, ಈ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.
ಒಂದು ಸಣ್ಣ ಎಚ್ಚರಿಕೆ ನಿಮ್ಮ ಜೀವವನ್ನು ಉಳಿಸಬಲ್ಲದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಹಿರಿಯ ನಾಗರಿಕರ ಕಾರ್ಡ್: 60 ವರ್ಷವಾದ ಕೂಡಲೇ ನೀವು ಪಡೆಯಬಹುದಾದ ಪ್ರಮುಖವಾದ ಸೌಲಭ್ಯಗಳಿವು.!
- ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ ಖಾತಾ ಎ ಖಾತಾಗೆ ಪರಿವರ್ತನೆ, ವಿದ್ಯುತ್ ಸಂಪರ್ಕ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ.!
- ರಾಜ್ಯ ಸರ್ಕಾರದ ಹೊಸ ಉದ್ಯೋಗ ಪ್ರೋತ್ಸಾಹ ಯೋಜನೆ:ಪರಿಶಿಷ್ಟ ಪಂಗಡದವರಿಗೆ 1 ಲಕ್ಷ ರೂ ಉದ್ಯೋಗ ಸಹಾಯಧನ.! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.