LPG Gas – ಈ ಮಹಿಳೆಯರಿಗೆ ಸಿಗಲಿದೆ ಉಚಿತ LPG ಗ್ಯಾಸ್ ಕನೆಕ್ಷನ್, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

free gas

ಇದೀಗ ಮಹಿಳೆಯರಿಗೆ ಗುಡ್ ನ್ಯೂಸ್. ಒಂದು ಕಡೆ ಹೊಸ ವರ್ಷದ ಸಂಭ್ರಮ (Happy New year) ಇನ್ನೊಂದು ಕಡೆ ಸರ್ಕಾರದಿಂದ ಹೊಸ ವರ್ಷಕ್ಕೆ ಹಲವಾರು ಬದಲಾವಣೆ ಮತ್ತು ಹೊಸ ಹೊಸ ಯೋಜನೆಗಳು (New Govt Rules) ಜಾರಿಯಾಗುತ್ತಿವೆ. ಇದೀಗ ಸರ್ಕಾರದಿಂದ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಅದರ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಅದೇನೆಂದು ತಿಳಿದು ಕೊಳ್ಳೋಣ ಬನ್ನಿ. 

ಸರ್ಕಾರದಿಂದ ಅದೆಷ್ಟೋ ಯೋಜನೆಗಳು ಜಾರಿಯಾಗುತ್ತಿವೆ. ಸಾಲ ಸೌಲಭ್ಯ , ಗ್ಯಾರಂಟಿ ಯೋಜನೆಗಳು ( Guarantee scheme ) ಹೀಗೆ ಹತ್ತು ಹಲವು ಯೋಜನೆಗಳು ಬಿಡುಗಡೆ ಯಾಗಿವೆ. ಮತ್ತು ಈಗಲೂ ಕೂಡ ಬಿಡುಗಡೆ ಯಾಗುತ್ತಿವೆ. ಅದರಲ್ಲೂ ಕೇಂದ್ರ ಸರ್ಕಾರ (Central government) ಬಡ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಿಂದ ಅವರ ಆರ್ಥಿಕ ಪರಿಸ್ಥಿತಿ ದೂರ ಮಾಡಿ ಅವರೇ ಸ್ವತಃ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಅದೆಷ್ಟೋ ಮಹಿಳೆಯರು ದಿನ ಕೂಲಿ ಮಾಡಿ ಮನೆಗೆ ಬಂದು ಕಷ್ಟಪಟ್ಟು, ಮನೆಯಲ್ಲಿ ಕಟ್ಟಿಗೆ ಒಲೆ ಉರಿಸಿ, ಬೆಂಕಿ ಹೊತ್ತಿಸಿ ಅಡುಗೆ ಮಾಡುವ ಮಹಿಳೆಯರು ಇದ್ದಾರೆ. ಅವರ ಈ ಎಲ್ಲ ಕಷ್ಟಗಳನ್ನು ದೂರ ಮಾಡಲು ಇದೀಗ ಕೇಂದ್ರ ಸರ್ಕಾರ ಉಚಿತ ಗ್ಯಾಸ್ ವಿತರಣಾ ಯೋಚನೆಯನ್ನು ( Free Gas Connection ) ಸರ್ಕಾರ ಜಾರಿಗೆ ತಂದಿದೆ. ಅದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ? ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬುದರ ಬಗ್ಗೆ ಮಾಹಿತಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ (Pradhanmantri Ujjwala Yojana) :

ಪ್ರಾಧಾನ ಮಂತ್ರಿ ಉಜ್ವಲ ಯೋಜನೆಯನ್ನು ಮುಖ್ಯವಾಗಿ ಬಡ ಕುಟುಂಬದಲ್ಲಿ ವಾಸಿಸುವ ಹೆಣ್ಣು ಮಕ್ಕಳಿಗಾಗಿಯೇ ಈ ಯೋಜನೆಯನ್ನು ತರಲಾಗಿದೆ. ಹಾಗಾಗಿ ಅವರು ಮೂರು ಹೊತ್ತು ಕೂಡ ನೆಮ್ಮದಿಯಿಂದ ಊಟ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಅವರಿಗೆ ಉಚಿತ ಗ್ಯಾಸ್ ಸ್ಟವ್, ಒಂದು ಸಿಲಿಂಡರ್ ಹಾಗೂ ಒಂದು ಲೈಟರ್ ಉಚಿತ ಗ್ಯಾಸ್ ಕನೆಕ್ಷನ್ ದೊರೆಯಲಿದೆ. ಇನ್ನು ವರ್ಷದಲ್ಲಿ 12 ಸಿಲೆಂಡರ್ ಪಡೆದುಕೊಂಡರೆ ಪ್ರತಿ ಸಿಲೆಂಡರ್ ಗೆ 300 ರೂಪಾಯಿಗಳ ಸಬ್ಸಿಡಿ (Gas subsidy) ಸಿಗುತ್ತದೆ. ಅಂದರೆ ಕೇವಲ 603 ರೂಪಾಯಿಗಳಿಗೆ ಸಿಲಿಂಡರ್ ಖರೀದಿ ಮಾಡಬಹುದು. ಇದೊಂದು ಖುಷಿಯ ವಿಚಾರ ಎನ್ನಬಹದು.

ಜನವರಿ 1, 2024 ರಿಂದ ಉಚಿತ ಗ್ಯಾಸ್ ಕನೆಕ್ಷನ್ :

ಉಚಿತ ಗ್ಯಾಸ್ ನೀಡುತ್ತಿರುವುದು ಮಹಿಳೆಯರಿಗೆ ವರದಾನವಾಗಿದೆ ಎನ್ನಬಹುದು. ಅವರ ಕಷ್ಟಕ್ಕೆ ಸ್ಪಂದಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ (below poverty line) ಕುಟುಂಬದ ಮಹಿಳೆಯರು ಇನ್ನು ಮುಂದೆ ಅಡುಗೆ ಮಾಡುವುದಕ್ಕೆ ಕಷ್ಟಪಡುವ ಅಗತ್ಯವಿಲ್ಲ. ಅವರಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಅನ್ನು ಸರ್ಕಾರ ನೀಡುತ್ತಿದೆ.

whatss

ಪ್ರಧಾನ ಮಂತ್ರಿ ಉಚಿತ ಗ್ಯಾಸ್ ಕನೆಕ್ಷನ್ ಗೆ ಯಾರು ಅರ್ಹರು ( Deserve ) :

– 18 ವರ್ಷ ಮೀರಿದವರು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.
– ಈಗಾಗಲೇ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇದ್ದರೆ ಅರ್ಜಿ ಸಲ್ಲಿಸುವಂತಿಲ್ಲ.
– ಮಹಿಳೆಯರ ಹೆಸರಿಗೆ ಮಾತ್ರ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.
– ಎಸ್ ಸಿ/ ಎಸ್ ಟಿ ವರ್ಗಕ್ಕೆ ಸೇರಿದವರು ಹಿಂದುಳಿದ ವರ್ಗದವರು ಬುಡಕಟ್ಟು ಜನಾಂಗ ಮೊದಲಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯ ಅರ್ಜಿ ಸಲ್ಲಿಸಬಹುದು.
– ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳ (Documents ) ವಿವರ :

– ಮಹಿಳೆಯರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
– ವಿಳಾಸ ಪುರಾವೆ
– ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ (BPL or APL Card)
– ಮೊಬೈಲ್ ಸಂಖ್ಯೆ
– ಪಾಸ್ ಪೋರ್ಟ್ ಅಳತೆಯ ಫೋಟೋ
– ಬ್ಯಾಂಕ್ ಖಾತೆಯ ವಿವರ (ಕೆ ವೈ ಸಿ ಮಾಡಿಸಿರುವುದು ಕಡ್ಡಾಯ)

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ (How to apply) :

ಹಂತ 1: https://www.pmuy.gov.in/ujjwala2.html ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಈ ಅಧಿಕೃತ ವೆಬ್ಸೈಟ್ ಹೋಗಿ.

jvan 1

ಹಂತ 2: ಉಜ್ವಲ 2.0 ಯೋಜನೆಯ ಮೇಲೆ ಕ್ಲಿಕ್ ಮಾಡಿ.

ಹಂತ 3: ಇಲ್ಲಿ ಯಾವ ಗೆ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.ಬಳಿಕ ಆಯಾ ಗ್ಯಾಸ್ ಏಜೆನ್ಸಿ ಲೋಗೋ ಮೇಲೆ ಕಾಣಿಸುವ click here to apply ಎಂದು ಆಯ್ಕೆ ಮಾಡಿ.

02

ಹಂತ 4: ಈಗ ಅರ್ಜಿ ಫಾರಂ ನಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.
ಅರ್ಜಿ ಪರಿಶೀಲನೆ ನಡೆಸಿ ನಂತರ ಗ್ಯಾಸ್ ಕನೆಕ್ಷನ್ ಕೊಡಲಾಗುವುದು.

tel share transformed

ವಿಶೇಷ ಸೂಚನೆ ( Important Notice ) :

ಈ ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಪಡೆಯಲು ಕೆ ವೈ ಸಿ (E-KYC) ಆಗಿರಲೇಬೇಕು. ಹಾಗೆಯೇ ಆಧಾರ್ ಕಾರ್ಡ್ ಲಿಂಕ್ ಅನ್ನು ಕೂಡ ಮಾಡಿಸಿರಬೇಕು.
ಹಾಗೆಯೇ ಈಗಾಗಲೇ ಗ್ಯಾಸ್ ಕನೆಕ್ಷನ್ ಇದ್ದವರು ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಅಂತವರ ಗ್ಯಾಸ್ ಕನೆಕ್ಷನ್ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!