ಸರ್ಕಾರವು ಕೆಲವು ನಿರ್ದಿಷ್ಟ ಅರ್ಹತೆ ಹೊಂದಿರುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್(Free Laptop) ಗಳನ್ನು ವಿತರಣೆ ಮಾಡುವ ಯೋಜನೆಯನ್ನು ಮುಂದುವರಿಸಿದೆ. ಹಾಗಿದ್ರೆ, ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್ ಪಡೆಯುವ ಅವಕಾಶ ಯಾವ ವಿದ್ಯಾರ್ಥಿಗಳಿಗಿದೆ?, ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?, ಎಂಬುದರ ಕುರಿತು ಪ್ರಸ್ತುತ ವರದಿಯಲ್ಲಿ ತಿಳಿಸಿಕೊಡಲಾಗುತ್ತದೆ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉಚಿತ ಲ್ಯಾಪ್‌ಟಾಪ್ :
ಕರ್ನಾಟಕ ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಬದ್ಧವಾಗಿದೆ. ಈ ಉದ್ದೇಶದಿಂದ, ಸರ್ಕಾರವು ವಿವಿಧ ಸ್ಕಾಲರ್‌ಶಿಪ್(scholarship) ಯೋಜನೆಗಳನ್ನು ಜಾರಿಗೆ ತಂದಿದೆ, ಅದು ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್(Free Laptop)ಗಳನ್ನು ವಿತರಿಸುವ ಯೋಜನೆಯನ್ನು ಸಹ ಸರ್ಕಾರ ಮುಂದುವರಿಸಿದೆ. ಈ ಯೋಜನೆಯು ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸುವ ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಉಚಿತ ಲ್ಯಾಪ್‌ಟಾಪ್ ಪಡೆಯುವ ಅವಕಾಶ ಯಾರಿಗೆ?
ಕರ್ನಾಟಕ ಸರ್ಕಾರವು ಉತ್ತಮ ಶಿಕ್ಷಣಕ್ಕಾಗಿ ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಲ್ಯಾಪ್‌ಟಾಪ್ ಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
ರಾಜ್ಯದ ನಿವಾಸಿ: ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಶೈಕ್ಷಣಿಕ ಅರ್ಹತೆ:
ಐಟಿಐ(ITI)ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
ಎಂಜಿನಿಯರಿಂಗ್)Engineering) ಅಥವಾ ಬಿ.ಟೆಕ್(B.Tech). ನಂತಹ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು
ಕೌಶಲ್ಯ ಪರೀಕ್ಷೆ: ಕೆಲವು ಯೋಜನೆಗಳಲ್ಲಿ, ಅರ್ಜಿದಾರರು ಕಡ್ಡಾಯವಾಗಿ ಎ ಐ ಸಿ ಟಿ ಇ(AICTE) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಬೇಕಾಗಿರುವ ದಾಖಲೆಗಳು:
ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್ ಪಡೆಯುವುದು ಒಂದು ಅದ್ಭುತ ಅವಕಾಶ, ಈ ಅವಕಾಶವನ್ನು ಪಡೆಯಲು, ಕೆಲವು ಮುಖ್ಯ ದಾಖಲೆಗಳನ್ನು ನೀಡಬೇಕು ಅವುಗಳೆಂದರೆ:
ವಿದ್ಯಾರ್ಥಿಯ ಆಧಾರ್ ಕಾರ್ಡ್(Aadhar Card)
ಕಾಲೇಜ್ ಐಡಿ(ID)
ವಿದ್ಯಾರ್ಥಿಯ ಕಾಯಂ ನಿವಾಸ ಪ್ರಮಾಣ ಪತ್ರ
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
ಶೈಕ್ಷಣಿಕ ವಿವರ
ಮೊಬೈಲ್ ಸಂಖ್ಯೆ(Mobile Number)
ಜಿಮೇಲ್ ಅಡ್ರೆಸ್(Gmail address)
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಯೋಜನೆಯ ಅಧಿಕೃತ ವೆಬ್‌ಸೈಟ್ ಇನ್ನೂ ಲಭ್ಯವಿಲ್ಲ. ಲಿಂಕ್ ಲಭ್ಯವಾದ ನಂತರ, ನೀವು ವೆಬ್‌ಸೈಟ್ ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
ಅಧಿಕೃತ ವೆಬ್‌ಸೈಟ್ ಲಭ್ಯವಾದಾಗ ನೀವು ಏನು ಮಾಡಬೇಕು:
ಮುಂದಿನ ದಿನಗಳಲ್ಲಿ ಅಧಿಕೃತ ವೆಬ್‌ಸೈಟ್ ಅನ್ನು ಅಪ್ಡೇಟ್ ಮಾಡಲಾಗುವುದು ಆಗ ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ: https://dce.karnataka.gov.in/
ಅಗತ್ಯವಿರುವ ಮಾಹಿತಿಯನ್ನು ಒದಗಿಸಿ: ಫಾರ್ಮ್‌ನಲ್ಲಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಮೂದಿಸಿ.
ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ: ನಿಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಉಚಿತ ಲ್ಯಾಪ್ಟಾಪ್ ಅರ್ಜಿ : ಡೌನ್ಲೋಡ್
ಗಮನಿಸಿ : ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್‌ಗಳು ಕೆಲವು ಸಂದರ್ಭಗಳಲ್ಲಿ, ಸರ್ಕಾರವು ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜನಲ್ಲಿಯೇ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಾಲೇಜಿನ ಕ್ಲರ್ಕ್ ಅವರನ್ನು ಸಂಪರ್ಕಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




