$2.8 ಬಿಲಿಯನ್ ಹೂಡಿಕೆಯಿಂದ ಫಾಕ್ಸ್ಕಾನ್ ತಯಾರಿಕಾ ಘಟಕ – ಆಪಲ್ ಉತ್ಪಾದನಾ ಸಾಮರ್ಥ್ಯ ಭಾರತದಲ್ಲಿ ದ್ವಿಗುಣ
ತಂತ್ರಜ್ಞಾನ(Technology) ಜಗತ್ತಿನಲ್ಲಿ ಭಾರತ ತನ್ನ ಸ್ಥಾನವನ್ನು ವೇಗವಾಗಿ ಗಟ್ಟಿಗೊಳಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಭಾರತವನ್ನು ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಆಪಲ್ನ ಯೋಜನೆಗೆ ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್ಕಾನ್ (Foxconn) ಮಹತ್ತರ ಪಾತ್ರವಹಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತವನ್ನು “ಮೇಡ್ ಇನ್ ಇಂಡಿಯಾ” (Made In India) ಉತ್ಪಾದನಾ ಹಬ್ ಆಗಿ ಬೆಳೆಸುವ ದಾರಿಯಲ್ಲಿ ಆಪಲ್ ನಿರಂತರ ಹೂಡಿಕೆ ಮಾಡುತ್ತಿದ್ದು, ಅದರ ಹೊಸ ಹಂತವೆಂದರೆ ಐಫೋನ್ 17 ಉತ್ಪಾದನೆ. ಇದರೊಂದಿಗೆ ಬೆಂಗಳೂರು ಜಾಗತಿಕ ಉತ್ಪಾದನಾ ನಕ್ಷೆಯಲ್ಲಿ ಮತ್ತೊಂದು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
ಫಾಕ್ಸ್ಕಾನ್ ತನ್ನ ಬೆಂಗಳೂರಿನ ದೇವನಹಳ್ಳಿಯ ಬಳಿಯ ಕಾರ್ಖಾನೆಯಲ್ಲಿ, $2.8 ಬಿಲಿಯನ್ (ಸುಮಾರು ರೂ. 25,000 ಕೋಟಿ) ಹೂಡಿಕೆಯಿಂದ ನಿರ್ಮಿಸಿದ ಸೌಲಭ್ಯದಲ್ಲಿ ಐಫೋನ್ 17 ಉತ್ಪಾದನೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಇದು ಫಾಕ್ಸ್ಕಾನ್ನ ಚೀನಾದ (China) ಹೊರಗಿನ ಎರಡನೇ ಅತಿದೊಡ್ಡ ತಯಾರಿಕಾ ಘಟಕವಾಗಿದ್ದು, ಭಾರತದಲ್ಲಿ ಆಪಲ್ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಭಾರೀ ಮಟ್ಟದಲ್ಲಿ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಮೂಲಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, “ಫಾಕ್ಸ್ಕಾನ್ ಬೆಂಗಳೂರು ಘಟಕ ಐಫೋನ್ 17 (IPhone 17) ಉತ್ಪಾದನೆಯೊಂದಿಗೆ ಕಾರ್ಯಾರಂಭ ಮಾಡಿದೆ. ಇದು ಚೆನ್ನೈ ಘಟಕದಲ್ಲಿ ನಡೆಯುತ್ತಿರುವ ಉತ್ಪಾದನೆಗೆ ಸೇರ್ಪಡೆಯಾಗಿದೆ.” ಎಂದು ತಿಳಿದುಬಂದಿದೆ. ಆದರೆ, ಪಿಟಿಐ (PTI) ಕಳುಹಿಸಿದ ಪ್ರಶ್ನೆಗಳಿಗೆ ಆಪಲ್ ಅಥವಾ ಫಾಕ್ಸ್ಕಾನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಆರಂಭಿಕ ಹಂತದಲ್ಲಿ ಸವಾಲುಗಳು ಹೇಗಿರುತ್ತವೆ?:
ನೂರಾರು ಚೀನೀ ಎಂಜಿನಿಯರ್ಗಳು ಹಠಾತ್ತನೆ ಹಿಂದಿರುಗಿದ ಕಾರಣ ಆರಂಭಿಕ ಹಂತದಲ್ಲಿ ಉತ್ಪಾದನೆಗೆ ಕೆಲವು ಅಡಚಣೆಗಳು ಎದುರಾದವು. ಆದಾಗ್ಯೂ, ಫಾಕ್ಸ್ಕಾನ್ ತೈವಾನ್ (Foxconn Thaivan) ಸೇರಿದಂತೆ ವಿವಿಧ ಸ್ಥಳಗಳಿಂದ ತಜ್ಞರನ್ನು ಕರೆಸಿ ಆ ತೊಂದರೆಯನ್ನು ಶೀಘ್ರವಾಗಿ ನಿವಾರಣೆ ಮಾಡಿದೆ.
ಆಪಲ್ನ ಉತ್ಪಾದನಾ ಗುರಿ:
ಮೂಲಗಳ ಪ್ರಕಾರ, ಆಪಲ್ 2024-25ರ ಅವಧಿಯಲ್ಲಿ 35-40 ಮಿಲಿಯನ್ ಯುನಿಟ್ಗಳಿಂದ ಉತ್ಪಾದನೆಯನ್ನು 60 ಮಿಲಿಯನ್ ಯುನಿಟ್ಗಳಿಗೆ (Million units) ಏರಿಸುವ ಗುರಿ ಹೊಂದಿದೆ. ಇದರೊಂದಿಗೆ ಭಾರತ ಜಾಗತಿಕ ಮಾರುಕಟ್ಟೆಗೆ ಪ್ರಮುಖ ಸರಬರಾಜುದಾರರಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
ಭಾರತದ ಉತ್ಪಾದನಾ ಸಾಧನೆ:
ಮಾರ್ಚ್ 31, 2025ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವರದಿ ಪ್ರಕಾರ, ಆಪಲ್ ಭಾರತದಲ್ಲಿ ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ಗಳನ್ನು (Billion Dollar value iPhones) ಜೋಡಿಸಿದೆ. ಇದು ಹಿಂದಿನ ವರ್ಷಗಳಿಗಿಂತ ಶೇಕಡಾ 60 ರಷ್ಟು ಹೆಚ್ಚಳವಾಗಿದೆ. ಜೂನ್ 2025ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾರಾಟವಾದ ಹೆಚ್ಚಿನ ಐಫೋನ್ಗಳು ಭಾರತದಲ್ಲಿ ತಯಾರಿಸಲ್ಪಟ್ಟವು ಎಂದು ಜುಲೈ 31ರಂದು ಆರ್ಥಿಕ ಫಲಿತಾಂಶಗಳನ್ನು ಘೋಷಿಸಿದ ನಂತರ ಆಪಲ್ ಸಿಇಒ ಟಿಮ್ ಕುಕ್ ಹೇಳಿದ್ದಾರೆ.
ಒಟ್ಟಾರೆಯಾಗಿ, ಈ ಬೆಳವಣಿಗೆ ಭಾರತಕ್ಕೆ ತಂತ್ರಜ್ಞಾನ ಹೂಡಿಕೆಗಳನ್ನು (Technology Investment) ಆಕರ್ಷಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಾಧ್ಯತೆಯನ್ನೂ ತಂದುಕೊಟ್ಟಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಭಾರತದ ವಿವಿಧ ನಗರಗಳು ಆಪಲ್ ಉತ್ಪಾದನೆಗೆ ಪ್ರಮುಖ ತಾಣಗಳಾಗಿ ಪರಿಣಮಿಸುತ್ತಿರುವುದು ದೇಶದ ಮೇಕ್ ಇನ್ ಇಂಡಿಯಾ ದೃಷ್ಟಿಯನ್ನೂ ಬಲಪಡಿಸುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




