Picsart 25 08 23 23 22 22 363 scaled

ಹಳೆಯ ವಾಹನಗಳ ಜೀವಿತಾವಧಿ ವಿಸ್ತರಣೆ ತಪ್ಪದೇ ತಿಳಿದುಕೊಳ್ಳಿ; ಕೇಂದ್ರ ಸರ್ಕಾರದ ಹೊಸ ನಿಯಮ

Categories:
WhatsApp Group Telegram Group

ಭಾರತದಲ್ಲಿ ವಾಹನಗಳ ಸಂಖ್ಯೆ (Vehicles Numbers) ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ನಗರ ಪ್ರದೇಶಗಳಲ್ಲಿ ವಾಹನ ದಟ್ಟಣೆ, ಇಂಧನ ಬಳಕೆ ಹಾಗೂ ವಾಯುಮಾಲಿನ್ಯ ನಿಯಂತ್ರಣವು ಸರ್ಕಾರದ ಮುಂದೆ ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ಹಳೆಯ ವಾಹನಗಳ ಬಳಕೆಯಿಂದ (Uses old vehicles) ಉಂಟಾಗುವ ಧೂಮ್ರೋತ್ಪತ್ತಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ರೂ, ಇನ್ನೊಂದು ಕಡೆ ವಾಹನ ಮಾಲೀಕರಿಗೆ ಮರು ನೋಂದಣಿ ಹಾಗೂ ತೆರಿಗೆ ಬಾಧ್ಯತೆಗಳು ತಲೆನೋವಾಗಿ ಪರಿಣಮಿಸುತ್ತವೆ. ಈ ನಡುವೆ ವಾಹನ ಸವಾರರಿಗೆ ಸ್ವಲ್ಪ ನೆಮ್ಮದಿಯ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮೋಟಾರು ವಾಹನ ಕಾಯ್ದೆಯಡಿ (Motor Vehicles Act) ನಿಯಮಗಳನ್ನು ಬದಲಾಯಿಸಿ, ಹಳೆಯ ವಾಹನಗಳ ಜೀವಿತಾವಧಿ 15 ವರ್ಷದಿಂದ 20 ವರ್ಷಗಳಿಗೆ ಹೆಚ್ಚಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ನಿಯಮದ ಸಂಪೂರ್ಣ ಮಾಹಿತಿ ಹೀಗಿದೆ:

ಜೀವಿತಾವಧಿ ವಿಸ್ತರಣೆ:
ಇದುವರೆಗೆ 15 ವರ್ಷಗಳ ವಯಸ್ಸಿನವರೆಗೆ ಮಾತ್ರ ವಾಹನಗಳ ಮರು ನೋಂದಣಿ (Re registration) ಮಾಡಲು ಅವಕಾಶ ಇತ್ತು. ಆದರೆ ಈಗಿನಿಂದ 20 ವರ್ಷಗಳ ವಯಸ್ಸಿನವರೆಗೂ ವಾಹನಗಳನ್ನು ಕಾನೂನುಬದ್ಧವಾಗಿ (legally) ಬಳಸಬಹುದು. ಅಂದರೆ, ವಾಹನವನ್ನು ಖರೀದಿಸಿದ ದಿನಾಂಕದಿಂದ ಗರಿಷ್ಠ 20 ವರ್ಷಗಳವರೆಗೆ ಅದನ್ನು ಓಡಿಸಲು ಅನುಮತಿ ಸಿಗಲಿದೆ.

ಮರು ನೋಂದಣಿ ಪ್ರಕ್ರಿಯೆ(Re registration process) :

20 ವರ್ಷಗಳು ಪೂರ್ಣಗೊಂಡ ಬಳಿಕ, ವಾಹನವನ್ನು ಮರು ನೋಂದಣಿ ಮಾಡಬೇಕು.
ಮರು ನೋಂದಣಿ ಮಾಡಿದ ಬಳಿಕ, ಪ್ರತಿ 5 ವರ್ಷಕ್ಕೊಮ್ಮೆ ನೋಂದಣಿ ನವೀಕರಿಸಬೇಕು.
ಇದಕ್ಕಾಗಿ ಹಳೆಯ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಅಗತ್ಯವಾಗುತ್ತದೆ.

ಮರು ನೋಂದಣಿ ಶುಲ್ಕ (20 ವರ್ಷಕ್ಕಿಂತ ಹಳೆಯ ವಾಹನಗಳಿಗೆ) (Re registration fee):

ಕೇಂದ್ರ ಮೋಟಾರು ವಾಹನ ನಿಯಮಗಳು 2025ರಡಿ, 20 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಕೆಳಗಿನಂತೆ ಮರು ನೋಂದಣಿ ಶುಲ್ಕ ನಿಗದಿಯಾಗಿದೆ (ಜಿಎಸ್‌ಟಿ ಹೊರತುಪಡಿಸಿ):
ಇನ್ ವ್ಯಾಲಿಡ್ ಕ್ಯಾರೇಜ್ (ಅಂಗವಿಕಲರ ವಾಹನ) – ₹100
ಮೋಟಾರ್ ಸೈಕಲ್ – ₹2,000
ತ್ರಿಚಕ್ರ ವಾಹನ / ಕ್ವಾಡ್ರಿ ಸೈಕಲ್ – ₹5,000
ಲಘು ಮೋಟಾರು ವಾಹನ (ಕಾರು ಇತ್ಯಾದಿ) – ₹10,000
ಆಮದು ಮಾಡಿದ ಮೋಟಾರ್ ಸೈಕಲ್ / ತ್ರಿಚಕ್ರ – ₹20,000
ಆಮದು ಮಾಡಿದ ಕಾರು (4 ಅಥವಾ ಹೆಚ್ಚಿನ ಚಕ್ರ) – ₹80,000
ಇತರ ವಾಹನಗಳು – ₹12,000
ಈ ಶುಲ್ಕಗಳಿಗೆ ಹೆಚ್ಚುವರಿಯಾಗಿ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ದೆಹಲಿ-ಎನ್ಸಿಆರ್‌ನಲ್ಲಿ ನಿಯಮ (Dehli NCR rules) ಜಾರಿಗೆ ಬಾರದ ಕಾರಣ ಏನು?:

ದೇಶದಾದ್ಯಂತ ಹೊಸ ನಿಯಮ ತಕ್ಷಣ ಜಾರಿಯಾಗುತ್ತಿದ್ದರೂ, ದೆಹಲಿ ಹಾಗೂ ಎನ್ಸಿಆರ್‌ನಲ್ಲಿ ಮಾತ್ರ ಇದು ಅನ್ವಯವಾಗುವುದಿಲ್ಲ. ಕಾರಣ, ಅಲ್ಲಿ ಈಗಾಗಲೇ ಮಾಲಿನ್ಯ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕಾನೂನುಗಳಿವೆ,
10 ವರ್ಷ ಹಳೆಯ ಡೀಸೆಲ್ ವಾಹನಗಳು ಸಂಪೂರ್ಣ ನಿಷೇಧ.
15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ನಿಷೇಧ.
ಇದರಿಂದಾಗಿ ಕೇಂದ್ರ ಸರ್ಕಾರ ಈ ಪ್ರದೇಶಗಳಲ್ಲಿ ಹೊಸ ನಿಯಮವನ್ನು ಜಾರಿಗೆ ತರದಿರಲು ನಿರ್ಧರಿಸಿದೆ.

ಒಟ್ಟಾರೆಯಾಗಿ, ಹಳೆಯ ವಾಹನಗಳ ಜೀವಿತಾವಧಿ 15 ವರ್ಷದಿಂದ 20 ವರ್ಷಗಳಿಗೆ ವಿಸ್ತರಣೆ ಮಾಡಿರುವುದು ದೇಶದ ಲಕ್ಷಾಂತರ ವಾಹನ ಸವಾರರಿಗೆ ತಾತ್ಕಾಲಿಕ ನೆಮ್ಮದಿಯ ಸುದ್ದಿ. ಆದರೆ, ಪರಿಸರ ಮಾಲಿನ್ಯ ನಿಯಂತ್ರಣದ ಹೊಣೆಗಾರಿಕೆಯನ್ನು (Responsibility for environmental pollution control) ಸರ್ಕಾರ ಮಾತ್ರವಲ್ಲ, ಪ್ರತಿ ವಾಹನ ಮಾಲೀಕರು ಸಹ ನಿಭಾಯಿಸಬೇಕಾಗಿದೆ. ಹಳೆಯ ವಾಹನಗಳ ನಿರ್ವಹಣೆ, ಮಾಲಿನ್ಯ ಪ್ರಮಾಣ ಪರೀಕ್ಷೆ (PUC) ಹಾಗೂ ನಿಯಮಿತ ಸೇವೆಗಳನ್ನು ತಪ್ಪದೇ ಪಾಲಿಸಿದರೆ ಮಾತ್ರ ಈ ಸೌಲಭ್ಯದ ನಿಜವಾದ ಅರ್ಥ ಸಾರ್ಥಕವಾಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories