Finance Loan : ಮೀಟರ್ ಬಡ್ಡಿ, ಮೈಕ್ರೋ ಫೈನಾನ್ಸ್ ಗಳಿಗೆ  ಹೊಸ ಕಾಯ್ದೆ ಜಾರಿ, ಇಲ್ಲಿದೆ ವಿವರ 

Picsart 25 01 23 08 10 36 599

WhatsApp Group Telegram Group

ಮೀಟರ್ ಬಡ್ಡಿ ಮತ್ತು ಮೈಕ್ರೋ ಫೈನಾನ್ಸ್ ದಂಧೆಗಳಿಗೆ ಕಡಿವಾಣ: ಹೊಸ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro finance) ಸಂಸ್ಥೆಗಳ ದುರುಪಯೋಗ ಮತ್ತು ಮೀಟರ್ ಬಡ್ಡಿ ಮಾಫಿಯಾದ ಪ್ರಭಾವದಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಕರ್ನಾಟಕ ಸರ್ಕಾರ (Karnataka government) ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್‌ ಅವರ ಹೇಳಿಕೆಯಪ್ರಕಾರ, ಈ ದಂಧೆಗಳನ್ನು ತಡೆಯಲು ಹೊಸ ಕಾಯ್ದೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್‌ (Law Minister H.K. Patil) ಹೊಸ ಕಾಯ್ದೆ ಯ ಬಗ್ಗೆ ಯಾವೆಲ್ಲ ಅಂಶಗಳನ್ನು ಹೇಳಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಮಾಜದ ಹಿತ ಕಾಪಾಡುವ ಉದ್ದೇಶದಿಂದ, ಮುಂದಿನ ವಿಧಾನಸಭಾ ಅಧಿವೇಶನದಲ್ಲಿಯೇ ಈ ಕುರಿತು ಹೊಸ ವಿಧೇಯಕವನ್ನು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದು ಬಡವರ ಮತ್ತು ಮಧ್ಯಮ ವರ್ಗದ ಹಕ್ಕುಗಳ ರಕ್ಷಣೆಗೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ :

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ನಿಗದಿತ ಮಿತಿಯನ್ನು ಮೀರಿ ಬಡ್ಡಿ (Interest) ವಿಧಿಸುತ್ತಿರುವುದು, ಸಾಲ ವಸೂಲಿಗೆ ಹಲವು ಕ್ರಮಗಳನ್ನು ಅನುಸರಿಸುತ್ತಿರುವುದು, ಹಾಗೂ ಸಾಲಗಾರನ ಜೀವನಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ (Government) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

govt
ಹೊಸ ಕಾಯ್ದೆಯ ಮಹತ್ವ ಮತ್ತು ವೈಶಿಷ್ಟ್ಯತೆಗಳೇನು (features) ?

ಹೊಸ ಕಾನೂನಿನಲ್ಲಿ ಮಹತ್ವದ ನಿಯಮಾವಳಿಗಳನ್ನು ಜಾರಿಗೆ ತರುವ ಉದ್ದೇಶವಿದ್ದು ಅದರ ಮಹತ್ವ ಮತ್ತು ವೈಶಿಷ್ಟ್ಯತೆಗಳು ಹೀಗಿವೆ :

1. ಬಡ್ಡಿ ದರಗಳ ಮಿತಿಗೆ ನಿಯಂತ್ರಣ (Regulation of Limitation of Interest Rates): ನಿಗದಿತ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಲು ಸಂಪೂರ್ಣ ನಿರ್ಬಂಧ ಹೇರಲಾಗುವುದು.
2. ಕಠಿಣ ಶಿಕ್ಷಾ ಕ್ರಮ (Harsh punishment) : ಸಾಲ ವಸೂಲಿಗೆ ಕಿರುಕುಳ ನೀಡಿದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ (10 years jail punishment) ಮತ್ತು ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗುವುದು.
3. ನೀತಿ ಸಂಹಿತೆ (Code of Conduct) : ಖಾಸಗಿ ಹಣಕಾಸು ಸಂಸ್ಥೆಗಳ ಕಾರ್ಯವಿಧಾನಕ್ಕೆ ಶಿಸ್ತು ತರಲು ವಿಶೇಷ ನಿಬಂಧನೆಗಳನ್ನು ಹೇರಲಾಗುವುದು.

ಈ ಕುರಿತು ಸರ್ಕಾರದ ದೃಷ್ಟಿಕೋನವೇನು?:

ಈ ಹೊಸ ಕಾನೂನಿನ ಮೂಲಕ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನ್ಯಾಯ ಒದಗಿಸುವ, ಭವಿಷ್ಯದ ದುರಾಡಳಿತ ತಡೆಯುವ, ಮತ್ತು ಹಣಕಾಸು ದಂಧೆಗಳಿಗೆ (For financial transactions) ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. “ಬಡವರ ಹಿತ ಕಾಯುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ” ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಈ ಹೊಸ ಕಾನೂನು (new rules) ಜಾರಿಗೆ ಬಂತು ಎಂದರೆ, ರಾಜ್ಯದಲ್ಲಿ ಹಣಕಾಸು ದಂಧೆಗಳ ವಿರುದ್ಧ ಧ್ವನಿ ಎತ್ತಿದಂತಾಗುತ್ತದೆ ಹಾಗೂ ಬಡ ಮತ್ತು ಮಧ್ಯಮ ಜನರಿಗೆ ಅನುಕೂಲ ನೀಡಿದಂತಾಗುತ್ತದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!