EPFO: ಇಪಿಎಫ್ ಖಾತೆಗೆ ಇದ್ದವರಿಗೆ ಗುಡ್ ನ್ಯೂಸ್ ; ಈ ಸಣ್ಣ ಕೆಲಸ ಮಾಡಿ ₹50,000 ಪಡೆಯಿರಿ

PF new rule

ಇಪಿಎಫ್‌ಒ ನ (EPFO) ಕೆಲವೊಂದು ನಿಯಮಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಹಾಗಿದಲ್ಲಿ ರೂ 50,000 ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಜ್ವಾಕೆ!.

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಇದನ್ನು ಸಾಮಾನ್ಯವಾಗಿ ಪಿಎಫ್(PF) ಪ್ರಾವಿಡೆಂಟ್ ಫಂಡ್ ( EPF provident fund ) ಎಂದು ಕರೆಯಲಾಗುತ್ತದೆ. ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ  ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಮತ್ತು ನಿವೃತ್ತಿ ಯೋಜನೆ ಇದಾಗಿದೆ. ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿರುವ EPFO, ಗ್ರಾಹಕರ ಹಣಕಾಸು ವಹಿವಾಟಿನ (money transaction) ಪ್ರಮಾಣದಲ್ಲಿ ತನ್ನ ಸದಸ್ಯರಿಗೆ ಸಂಬಂಧಿಸಿದಂತೆ 27.74 ಕೋಟಿ ಖಾತೆಗಳನ್ನು ನಿರ್ವಹಿಸುತ್ತಿದೆ(2021-22 ನೇ ವರದಿ ಪ್ರಕಾರ). EPFO ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿದೆ.

ನಾವು ಕೆಲವೊಮ್ಮೆ ಸರ್ಕಾರಿ ಯೋಜನೆಗಳು (government schemes) ಅಥವಾ ಸಂಸ್ಥೆಗಳು ನಿಯಮಗಳನ್ನು ನಿರ್ಲಕ್ಷ್ಯ ಮಾಡಿರುತ್ತೇವೆ. ಆದರೆ ಸಂಸ್ಥೆಗಳ ಅಥವಾ ಯೋಜನೆಗಳ ಒಳಿತಿಗಾಗಿ ಹಾಗೂ ಗ್ರಾಹಕರ ವಿಶ್ವಾಸಾರ್ಹತೆಗಾಗಿ ಕೆಲವೊಂದು ನಿಯಮಗಳನ್ನು ಉಲ್ಲೇಖಿಸಿರುತ್ತಾರೆ. ಆದರೆ ಆ ನಿಯಮಗಳ ಬಗ್ಗೆ ನಾವು ಹೆಚ್ಚು ಆಸಕ್ತಿಯನ್ನು ಅಥವಾ ಓಲವನ್ನು ತೋರಿಸಿರುವುದಿಲ್ಲ. ಆದ್ದರಿಂದ ನಮಗೆ ಕೆಲವೊಂದಷ್ಟು ಲಾಭದಾಯಕ ವಿಷಯಗಳು ಕೂಡ ನಮ್ಮ ಅರಿವಿಗೆ ಬಂದಿರುವುದಿಲ್ಲ. ಅದೇ ರೀತಿಯಾಗಿ ಇಪಿಎಫ್ಓ ನ ನಿಯಮಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದ ಕಾರಣ ಇಪಿಎಫ್ ನ ಕೆಲವೊಂದು ಒಂದಷ್ಟು ಪ್ರಯೋಜನಗಳು ಗ್ರಾಹಕರ ಕೈತಪ್ಪಿ ಹೋಗುವಂತಹ ಸಂದರ್ಭಗಳು ಅಥವಾ ಸನ್ನಿವೇಶಗಳು ಎದುರಾಗುತ್ತವೆ. ಇಪಿಎಫ್‌ಒ ನಿಂದ ಆಗುವ ಪ್ರಯೋಜನಗಳು, ಲಾಭ, ನೀತಿ ನಿಯಮಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಲಾಯಲ್ಟಿ ಕಮ್ ಲೈಫ್ ಬೆನಿಫಿಟ್‌’ (loyalty come life benefit) ಸೌಲಭ್ಯ :

ಈ ನಿಯಮಗಳಲ್ಲಿ ಒಂದು ಲಾಯಲ್ಟಿ-ಕಮ್-ಲೈಫ್ ಪ್ರಯೋಜನಗಳು. ಇದರಲ್ಲಿ ಉದ್ಯೋಗಿ ಸತತವಾಗಿ 20 ವರ್ಷಗಳ ಕಾಲ ನಿಯಮಿತವಾಗಿ ಒಂದೇ ಖಾತೆಗೆ ಕೊಡುಗೆ ನೀಡಿದ್ದರೆ ಮಾತ್ರ 50,000 ರೂ.ವರೆಗೆ ನೇರ ಲಾಭವನ್ನು ಪಡೆಯುತ್ತಾನೆ. ಅಂದರೆ ಹೆಚ್ಚು ವರ್ಷಗಳ ಕಾಲ ಒಂದೇ ಖಾತೆಗೆ ಕೊಡುಗೆ ನೀಡಿದವರಿಗೆ ಬಹುಮಾನದ ರೀತಿಯಲ್ಲಿ ಈ 50,000ಗಳನ್ನು ನೀಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಬೇಕಾದರೆ ಗ್ರಾಹಕರು ಇದರ ನಿಯಮಗಳನ್ನು ಕೂಡ ಅರಿತಿರಬೇಕಾಗುತ್ತದೆ ಆಗ ಮಾತ್ರ ಈ ಸೌಲಭ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಈ ಪ್ರಯೋಜನವನ್ನು ಯಾವಾಗ ಪಡೆಯಬಹುದು ?

ಪಿಎಫ್ ಖಾತೆದಾರರು ಉದ್ಯೋಗಗಳನ್ನು ಬದಲಾಯಿಸಿದ ನಂತರವೂ ಅದೇ ಇಪಿಎಫ್ ಖಾತೆಗೆ ಕೊಡುಗೆ ನೀಡುವುದನ್ನು ಮುಂದುವರಿಸಲು ಸಲಹೆ ನೀಡಲಾಗುತ್ತದೆ. ಆದರೆ ಲಾಯಲ್ಟಿ ಕಮ್ ಲೈಫ್ ಬೆನಿಫಿಟ್‌’ ಸೌಲಭ್ಯ ಪಡೆಯಲು ಖಾತೆದಾರರು  ಸತತ 20 ವರ್ಷಗಳ ಕಾಲ ಅದೇ ಖಾತೆಗೆ ಕೊಡುಗೆ ನೀಡಿರಬೇಕು. ಆಗ ಮಾತ್ರ ಈ ಪ್ರಯೋಜನವನ್ನು ಪಡೆಯಲು ಅವರು ಅರ್ಹರಾಗಿರುತ್ತಾರೆ. ಇಲ್ಲವಾದಲ್ಲಿ ರೂ 50,000 ಅವರಿಗೆ ಲಭಿಸುವುದಿಲ್ಲ.

ಲಾಭ ಪಡೆಯಲು ಯಾರೆಲ್ಲ ಅರ್ಹರು ?

ಇಪಿಎಫ್‌ಒ ಸಂಸ್ಥೆಯ ಲಾಯಲ್ಟಿ-ಕಮ್-ಲೈಫ್ ಪ್ರಯೋಜನದ ಅಡಿಯಲ್ಲಿ, ಪ್ರತಿಯೊಬ್ಬ ರೂ 5,000 ವರೆಗಿನ ಮೂಲ ವೇತನ ಹೊಂದಿರುವವರು ರೂ 30,000 ಲಾಭವನ್ನು ಪಡೆಯುತ್ತಾರೆ. ಹಾಗೆಯೇ ಮೂಲ ವೇತನ 5,001 ರಿಂದ 10,000 ರೂ.ಗಳ ನಡುವೆ ಇರುವವರು 40,000 ರೂ.ಗಳ ಲಾಭವನ್ನು ಪಡೆಯುತ್ತಾರೆ. ಮತ್ತು ಅವರ ಮೂಲ ವೇತನವು 10,000 ರೂ.ಗಿಂತ ಹೆಚ್ಚಿದ್ದರೆ, ಅವರು 50,000 ರೂ ಗಳ ಪ್ರಯೋಜನವನ್ನು ಪಡೆಯುತ್ತಾರೆ. ಇದು ಒಂದು ಖುಷಿಯ ವಿಚಾರ ಎನ್ನಬಹುದು.

ಲಾಭ ಪಡೆಯಲು ಏನು ಮಾಡಬೇಕು ?

ನಿವೃತ್ತಿಯ ಸಮಯದಲ್ಲಿ 50,000 ರೂಗಳ ಪ್ರಯೋಜನವನ್ನು ಪಡೆಯಬೇಕು ಎಂದಲ್ಲಿ EPFO ಚಂದಾದಾರರು ಮಾಡಬೇಕಾದ ಉತ್ತಮ ಕಾರ್ಯವೆಂದರೆ ಉದ್ಯೋಗಗಳನ್ನು ಬದಲಾಯಿಸುವಾಗ ಅದೇ EPF ಖಾತೆಯನ್ನು ಮುಂದುವರಿಸುವುದು. ಹಾಗೂ ಹಳೆಯ ಉದ್ಯೋಗದಾತ ಮತ್ತು ಪ್ರಸ್ತುತ ಉದ್ಯೋಗದಾತರಿಗೆ ಮಾಹಿತಿಯನ್ನು ನೀಡುವುದು. ಹೀಗೆ ಮಾಡುವ ಮುಖಾಂತರ  ನಿವೃತ್ತ ಸಮಯದಲ್ಲಿ (after retired) ಬರುವ ರೂ 50,000 ಗಳ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!