Picsart 25 11 16 22 38 59 440 scaled

ಪ್ರತಿದಿನ ನಿಂಬೆ ತಿಂದರೆ ಹೃದಯಾಘಾತ–ಕ್ಯಾನ್ಸರ್ ಅಪಾಯ ಕಡಿಮೆ! ಆರೋಗ್ಯಕ್ಕೆ ನಿಂಬೆಯ ಅಚ್ಚರಿ ಲಾಭಗಳು

Categories: ,
WhatsApp Group Telegram Group

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಸಮಸ್ಯೆಗಳು ಏಕಾಏಕಿ ಬಂದು ನಮ್ಮ ಜೀವನವನ್ನು ತಲೆಕೆಳಗಾಗಿಸಿಬಿಡುತ್ತವೆ. ಆಹಾರ ಪದ್ಧತಿ, ಒತ್ತಡ, ಮಾಲಿನ್ಯ, ನಿದ್ರೆ ಕೊರತೆ ಇವುಗಳ ಪರಿಣಾಮವಾಗಿ ಹೃದಯಾಘಾತ, ಸ್ಟೋಕ್, ಕ್ಯಾನ್ಸರ್‌ ನಂತಹ ಗಂಭೀರ ಕಾಯಿಲೆಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದಿದ್ದರೂ, ಕಾಯಿಲೆ ಬರುವ ಮೊದಲು ಅದನ್ನು ತಡೆಯುವುದು ನಮ್ಮ ಕೈಯಲ್ಲಿರುವ ಅತ್ಯಂತ ದೊಡ್ಡ ಆಯುಧ. ಹೆಚ್ಚಿನ ಬೆಲೆ ಇಲ್ಲದ ಸಿಂಪಲ್ ಅರೋಗ್ಯ ಟಿಪ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯವಾಗಿ ಮನೆಮದ್ದು ಎಂದೇ ಪರಿಗಣಿಸುವ ನಿಂಬೆ, ಆರೋಗ್ಯ ಸಂರಕ್ಷಣೆಯಲ್ಲಿ ಅಚ್ಚರಿಯ ಕಾರ್ಯಗಳನ್ನು ಮಾಡುತ್ತದೆ. ಕೇವಲ ರುಚಿಗಾಗಿ ಅಲ್ಲ, ನಿಂಬೆಯಲ್ಲಿರುವ ವಿಟಮಿನ್ C, ಫ್ಲೇವನಾಯ್ಡ್‌ಗಳು, ಆಂಟಿಆಕ್ಸಿಡೆಂಟ್‌ಗಳು, ಲಿಮೋನಾಯ್ಡ್‌ಗಳು ನಮ್ಮ ದೇಹಕ್ಕೆ ದಿನನಿತ್ಯದ ಕವಚವಾಗಿ ಕೆಲಸ ಮಾಡುತ್ತವೆ. ಹಾಗಿದ್ದರೆ ಪ್ರತಿದಿನ ನಿಂಬೆ ತಿಂದರೆ ಏನು ಬದಲಾವಣೆ ಆಗುತ್ತದೆ? ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೃದಯಾಘಾತ ಮತ್ತು ಸ್ಟೋಕ್‌ ಅಪಾಯವನ್ನು ಕಡಿಮೆ ಮಾಡುವುದು:

2012ರಲ್ಲಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ 14 ವರ್ಷಗಳ ಕಾಲ 70,000 ಮಹಿಳೆಯರ ಮೇಲೆ ನಡೆಸಿದ ಅಧ್ಯಯನದಲ್ಲಿ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಸಿಟ್ರಸ್ ಹಣ್ಣುಗಳನ್ನು ಪ್ರತಿದಿನ ಸೇವಿಸುವವರಲ್ಲಿ ಇಸ್ಕೆಮಿಕ್‌ ಸ್ಟೋಕ್‌ ಅಪಾಯ 19% ಕಡಿಮೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.

ನಿಂಬೆಯಲ್ಲಿರುವ ಹೆಸ್ಪೆರಿಡಿನ್ ಮತ್ತು ನೇರಿಂಜಿನ್ ಪ್ಲೇವನಾಯ್ಡ್ಗಳು ರಕ್ತನಾಳ ಬಲಪಡಿಸುತ್ತವೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ, ಕೆಟ್ಟ ಕೊಲೆಸ್ಟ್ರಾಲ್‌ (LDL)ತಗ್ಗಿಸುತ್ತವೆ ಹೀಗಾಗಿ ನಿಂಬೆ ರಕ್ತನಾಳಗಳ ರಕ್ಷಣಾಧಿಕಾರಿಯಂತೆ ಕೆಲಸ ಮಾಡುತ್ತದೆ.

ಕ್ಯಾನ್ಸರ್‌ ವಿರುದ್ಧ ಜೀವಕೋಶಗಳ ರಕ್ಷಣಾ ಶಕ್ತಿ:

ನಿಂಬೆ ಎಂದರೆ ಕೇವಲ ವಿಟಮಿನ್ C ಅಲ್ಲ, ಅದರಲ್ಲಿರುವ ಲಿಮೋನಾಯ್ಡ್‌ ಆಂಟಿಆಕ್ಸಿಡೆಂಟ್‌ಗಳು ದೇಹದ DNA ಹಾನಿಯನ್ನು ತಡೆಯುತ್ತವೆ. ಇದರಿಂದ ಸ್ತನ, ಜಠರ, ಶ್ವಾಸಕೋಶ ಈ ತರಹದ ಪ್ರಮುಖ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ.

ರೋಗನಿರೋಧಕ ಶಕ್ತಿ ಬಲಪಡಿಸುವುದು:

ಒಂದು ನಿಂಬೆ ಹಣ್ಣಿನಲ್ಲೇ 50–60% ದಿನನಿತ್ಯದ ವಿಟಮಿನ್ C ಅಗತ್ಯ ಇರುತ್ತದೆ. ಇದು, ವೈಟ್ ಬ್ಲಡ್‌ ಸೆಲ್‌ ಉತ್ಪಾದನೆ ಹೆಚ್ಚಿಸುತ್ತದೆ. ಜ್ವರ, ಕೆಮ್ಮು, ಸೀವಿ, ಇನ್ಫೆಕ್ಷನ್‌ಗಳಿಗೆ ವಿರುದ್ಧ ಹೋರಾಡುತ್ತದೆ. ದೇಹದ ರಕ್ಷಣಾ ವ್ಯವಸ್ಥೆಯನ್ನು ಚುರುಕು ಮಾಡುತ್ತದೆ. ಬೆಚ್ಚಗಿನ ನೀರು + ನಿಂಬೆ ರಸ + ಜೇನುತುಪ್ಪ  ಮನೆಮದ್ದಾಗಿ ಪ್ರಸಿದ್ಧವಾಗಿರುವುದೂ ಇದೇ ಕಾರಣಕ್ಕೆ.

ಚರ್ಮದ ಸೌಂದರ್ಯಕ್ಕೆ ಸಹಕಾರಿ:

ವಿಟಮಿನ್ C – ಕಾಲಜನ್‌ ಉತ್ಪಾದನೆ.
ಕಾಲಜನ್ – ಚರ್ಮದ ಗಟ್ಟಿ, ನಯವಾದ, ಮೃದುವಾದ ಬಣ್ಣ.
ನಿಂಬೆ,
ಚರ್ಮವನ್ನು ಪ್ರಕಾಶಮಾನವಾಗಿಸುತ್ತದೆ.
ಮೊಡವೆ, ಕಲೆ, ಕಪ್ಪು ಚಿಗುರುಗಳನ್ನು ಕಡಿಮೆ ಮಾಡುತ್ತದೆ.
ವಯೋವೃದ್ಧಿ ಚಿಹ್ನೆಗಳನ್ನು ತಡೆಗಟ್ಟುತ್ತದೆ.

ತೂಕ ನಿಯಂತ್ರಣ ಮತ್ತು ಚಯಾಪಚಯ ವೇಗಗೊಳಿಸುವುದು:

ಬೆಳಗ್ಗೆ ಖಾಲಿ ಹೊಟ್ಟೆಗೆ ಬಿಸಿನೀರು + ನಿಂಬೆ ರಸ ಕುಡಿಯುವುದು,
ಮೆಟಾಬೊಲಿಸಂ ಹೆಚ್ಚಿಸುತ್ತದೆ.
ಹಸಿವು ನಿಯಂತ್ರಿಸುತ್ತದೆ.
ಪೆಕ್ಟಿನ್ ಫೈಬರ್ ತೂಕ ಇಳಿಕೆಗೆ ಸಹಕಾರಿಸುತ್ತದೆ.
ದೇಹದ ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ.

ನಿಂಬೆ ಸೇವನೆ ಮಾಡುವ ಸರಿಯಾದ ವಿಧಾನ:ಬೆಳಗ್ಗೆ

1 ಚಮಚ ನಿಂಬೆ ರಸ, 1 ಗ್ಲಾಸ್ ಬೆಚ್ಚಗಿನ ನೀರು (ಅಗತ್ಯವಿದ್ದರೆ ಜೇನುತುಪ್ಪ ಸೇರಿಸಬಹುದು)
ಊಟದೊಂದಿಗೆ:
ಸಲಾಡ್, ಸೂಪ್, ದಾಲ್‌, ಚಹಾ ರೂಪದಲ್ಲಿ ನಿಂಬೆ ರಸ ಸೇರಿಸಬಹುದು.
ಪ್ರತಿದಿನ 1–2 ನಿಂಬೆ ಸಾಕು.

ಗಮನಿಸಿ:
ಹೆಚ್ಚಿನ ಆಮ್ಲತೆ, ಅಲ್ಸರ್‌, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಸೇವಿಸಬೇಕು.

ಒಟ್ಟಾರೆಯಾಗಿ, ನಿಂಬೆ ಆಗುವ ಪ್ರಯೋಜನಗಳು ಹೆಚ್ಚು.  ಮೂತ್ರಕೋಶದ ಕಲ್ಲು ತಡೆಯುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ, ಯಕೃತ್ತಿನ ಕಾರ್ಯ ಸುಧಾರಿಸುತ್ತದೆಝೆಡ್ ದೇಹದ ಆಮ್ಲತೆ ಕಡಿಮೆ ಮಾಡುತ್ತದೆ, ಉಸಿರಾಟ ಸುಗಮಗೊಳಿಸುತ್ತದೆ. ಆದ್ದರಿಂದ ಸರಿಯಾದ ರೀತಿಯಲ್ಲಿ ನಿಂಬೆಯನ್ನು ಬಳಸಿ ಅರೋಗ್ಯ ಕಾಪಾಡಿಕೊಳ್ಳಿ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories